ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕರ್ತವ್ಯ ನಿರತ ಸ್ಥಳದಲ್ಲಿ ಸಂತೋಷದ ಬದುಕಿನ ದಶ ಸೂತ್ರಗಳು ಹೀಗಿವೆ

🔯 ಕರ್ತವ್ಯ ನಿರತ ಸ್ಥಳದಲ್ಲಿ ಸಂತೋಷದ ಬದುಕಿನ ದಶ ಸೂತ್ರಗಳು 🔯
1. ಎಲ್ಲರನ್ನೂ ಗೌರವಿಸಿ ಆದರೆ
    ಯಾರನ್ನೋ  ನಂಬಿ ಕರ್ತವ್ಯ
    ನಿರ್ವಹಿಸಬೇಡಿ.
2. ಕಚೇರಿಯ ವಿಷಯಗಳನ್ನು ಮನೆಗೆ
    ತರಬೇಡಿ ಹಾಗೆಯೇ ಮನೆಯ
    ವಿಷಯಗಳನ್ನೂ ಕೂಡ ಕಚೇರಿಗೆ
     ತೆಗೆದು ಕೊಂಡು ಹೋಗಬೇಡಿ. 
3. ಕೆಲಸದ ಸ್ಥಳಕ್ಕೆ ಸಮಯಕ್ಕೆ
    ಸರಿಯಾಗಿ ಹೋಗಿ,ಹಾಗೆಯೇ
    ಕೆಲಸದ ಸಮಯ ಮುಗಿದ
    ಮೇಲೆಯೇ ಹೊರಡಿ.
4. ಕರ್ತವ್ಯ ನಿರತ ಸ್ಥಳದಲ್ಲಿ ಯಾವತ್ತೂ
    ಸಂಬಂಧಗಳನ್ನು  ಬೆಳಸಬೇಡಿ ಇದು
   ಯಾವತ್ತಿಗೂ ಬೆನ್ನ ಹಿಂದಿನ ಬೆ0ಕಿ
   (BACK FIRE) 🌶
5. ಯಾರಿಂದಲೂ ಏನನ್ನೂ
   ನಿರೀಕ್ಷಿಸಬೇಡಿ. ಒಂದು ವೇಳೆ
   ಕಚೇರಿಯಲ್ಲಿ ಯಾರಾದರೂ
   ಸಹಾಯ ಮಾಡಿದರೆ ಧನ್ಯವಾದ
   ಹೇಳಿ, ಇಲ್ಲದಿದ್ದರೆ ನನಗೆ ಕಲಿಯಲು
   ಅವಕಾಶ ಸಿಕ್ಕಿದೆ ಎಂದು ಭಾವಿಸಿ.
6. ಸ್ಥಾನ, ಮಾನ ಮತ್ತು ಬಡ್ತಿಗಾಗಿ
   ಎಂದೂ ಅವಸರ ಮಾಡ್ಬೇಡಿ, ನಿಮಗೆ
   ಬಡ್ತಿಯಾದರೆ ಸಂತೋಷಪಡಿ.
   ಇಲ್ಲವಾದಲ್ಲಿ ಚಿಂತೆಯಿಲ್ಲ   ನಿಮ್ಮ
   ಜ್ಞಾನ, ಕೌಶಲ್ಯ, ವಿನಯವಂತಿಕೆ
   ಹಾಗೂ ನೀವು ಹೊಂದಿರುವ
   ಹುದ್ದೆಯನ್ನು ಸಮಾಜ ಗೌರವಿಸುತ್ತದೆ
   ಹಾಗೂ ನೆನಪಿಸಿಕೊಳ್ಳುತ್ತದೆ.
7. ಕಚೇರಿಯ ವಿದ್ಯಮಾನಗಳ ಬಗ್ಗೆ ತಲೆ
   ಕೆಡಿಸಿಕೊಳ್ಳಬೇಡಿ. ನಿಮಗೆ ನಿಮ್ಮ
   ಜೀವನದಲ್ಲಿ ಮಾಡಬೇಕಾದ ಇನ್ನೂ
   ಅದೆಷ್ಟೋ ಕೆಲಸಗಳಿವೆ.
8. ನಿಮ್ಮ ಸ್ಥಾನ, ಮಾನ ಮತ್ತು
    ವೇತನದ ಬಗ್ಗೆ ಅಹಂಕಾರ
    ಪಡಬೇಡಿ. ನೀವು ವೇತನ ಪಡೆದು
    ಸೇವೆ ಸಲ್ಲಿಸುವವರು. ನಿಮ್ಮ
    ಸ್ವಂತದ್ದನ್ನು  ಖರ್ಚುಮಾಡಿ 
    ಸಂತೋಷಪಡಿ.
9.  ಜನರು ನಿಮ್ಮನ್ನು ಹೇಗೆ
    ಗೌರವಿಸುತ್ತಾರೆ ಎಂಬುದರ ಬಗ್ಗೆ ತಲೆ
    ಕೆಡಿಸಿಕೊಳ್ಳಬೇಡಿ, 
    ವಿನಯವಂತರಾಗಿರಿ.ನೀವು
    ಎಂದಿಗೂ, ಯಾರಿಗೂ
     ಅನಿವಾರ್ಯವಲ್ಲ  ಎಂಬುದನ್ನು
     ನೆನಪಿಡಿ.
10.ಕೊನೆಯದಾಗಿ ನಮಗೆ
    ಬೇಕಿರುವುದು ಕುಟುಂಬ,
    ಸ್ನೇಹಿತರು, ಮನೆ ಹಾಗೂ
    ಮನಶಾಂತಿ ಮಾತ್ರ.
WORLD MENTAL HEALTH DAY THEME
BY, W H O
In The interest of employees  
ಸಂಗ್ರಹ : EduTube Kannada Blog

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area