ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Imoprtant History Question Answers asked about Karnataka History In Previous Competitve Exams

✍️  ಕರ್ನಾಟಕ ಇತಿಹಾಸದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು 👇



 

🌻 ಶಾತವಾಹನರು👇


1) ಶಾತವಾಹನರ ಕಾಲದಲ್ಲಿ ನಗರಾಡಳಿತವು ಯಾರ ಕೈಯಲ್ಲಿ?(KAS-2015)

🌿 ನಿಗಮಾ ಸಭಾ


2) ಗಾಥಾಸಪ್ತಸತಿ ಕೃತಿಯನ್ನು ಬರೆದವರು?(SDA-2019)

🌿 ಹಾಲ


3) ಶಾತವಾಹನರ ಕಾಲದಲ್ಲಿ ಬೌದ್ಧ ಸ್ತೂಪಗಳು ಮತ್ತು ಅಶೋಕನ ಶಿಲಾಶಾಸನಗಳು ಇಲ್ಲಿವೆ?(PC-2007/2008)

🌿 ಮಸ್ಕಿ


4) ತ್ರೈ ಸಮುದ್ರ ತೋಯ ಪಿತಾಮಹ ಬಿರುದನ್ನು ಹೊಂದಿದವರು?( ಜೈಲರ್=2011)

🌿 ಗೌತಮಿಪುತ್ರ ಶಾತಕರ್ಣಿ


====================


⚜️ ಕದಂಬರು ⚜


1) ಕನ್ನಡದ ಅತ್ಯಂತ ಪ್ರಾಚೀನ ಶಾಸನ?KAS-2005)

🍀  ಹಲ್ಮಿಡಿ


2) ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ ಎಂದು ಕರೆಯಲಾಗಿದೆ?(KAS-2010)

🍀 ಕಾಕುತ್ಸವರ್ಮ


3) ಹಲ್ಮಿಡಿ ಶಾಸನ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ?(PSI-2014)

🍀 ಹಾಸನ ಜಿಲ್ಲೆಯ ಬೇಲೂರು ತಾಲೂಕು


4) ಕದಂಬ ರಾಜವಂಶವು------ ನಿಂದ ಸ್ಥಾಪಿಸಲ್ಪಟ್ಟಿತು?(PC-2016)

🍀 ಮಯೂರವರ್ಮ


5) ಕರ್ನಾಟಕದ ಯಾವ ಪುರಾತನ ನಗರವು ಕದಂಬ ರಾಜವಂಶದಿಂದ ಆಳಲ್ಪಟ್ಟಿತು?(KSRP-2018)

🍀 ಬನವಾಸಿ


====================


 ⚜️ ತಲಕಾಡಿನ ಗಂಗರು ⚜


1) ಗಂಗರ ಮೊದಲ ರಾಜಧಾನಿ?(KAS-1999)

🍀  ಕೋಲಾರ


2) ತಲಕಾಡು ದೇವಾಲಯಗಳನ್ನು ರಚಿಸಿದವರು?(PSI-2002)

🍀  ಜಕನಾಚಾರಿ


3) ಶ್ರವಣಬೆಳಗೊಳದಲ್ಲಿ ಗುಮಟೇಶ್ವರ ಪ್ರತಿಮೆ ಸ್ಥಾಪಿಸಿದ ರಾಜರು?(SDA-2008)

🍀  ಗಂಗರು


4) ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳ?(PC-2002)

🍀 ಶ್ರವಣಬೆಳಗೊಳ


5) ಶ್ರವಣಬೆಳಗೊಳದ ವಿಗ್ರಹವನ್ನು ಕೆತ್ತಿಸಿದವರು?(PC-2004)

🍀 ಚಾವುಂಡರಾಯ


6) ದಕ್ಷಿಣ ಕರ್ನಾಟಕದಲ್ಲಿ ಅಳುತ್ತಿದ್ದ ಗಂಗರ ರಾಜಧಾನಿ?(PC-2008)

🍀 ಕೋಲಾರ


7) ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವು ----- ವರ್ಷಗಳಲ್ಲಿ ಒಂದು ಬಾರಿ ಜರುಗುತ್ತದೆ?(PC-2011)

🍀 12 ವರ್ಷ ಕೊಮ್ಮೆ


8) ಕರ್ನಾಟಕದ ಯಾವ ಸ್ಥಳವು ಜೈನರ ಯಾತ್ರಾಸ್ಥಳವಾಗಿದೆ?( ವಾರ್ಡರ್-2018)

🍀 ಶ್ರವಣಬೆಳಗೊಳ


9) ಕರ್ನಾಟಕದ ಯಾವ ಸ್ಥಳದಲ್ಲಿ ಬಾಹುಬಲಿ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ?( ವಾರ್ಡರ್-2018)

🍀 ಉಡುಪಿ

====================


 🌸 ಬಾದಾಮಿ ಚಲುಕ್ಯರು 🌸


1) ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?

🌿 ಐಹೊಳೆ ಶಾಸನ


2) ಹರ್ಷನಿಗಿಂತ ಎರಡನೇ ಪುಲಿಕೇಶಿ ಹೆಚ್ಚಿನ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿ ಯಾವುರಲ್ಲಿ ಸಿಗುತ್ತದೆ? 

🌿 ಐಹೊಳೆ ಶಾಸನ, ಹರ್ಷಚರಿತ, ಚೀನಿಯರ ವೃತ್ತಾಂತಗಳು


3) ಬಾದಾಮಿಯ ಪ್ರಸಿದ್ದ ಗುಹಾಂತರ ದೇವಾಲಯಗಳನ್ನು ಯಾರು ನಿರ್ಮಿಸಿದರು?(PSI-2002)

🌿 ಚಾಲುಕ್ಯರು


4) ಬಾದಾಮಿಯ ಹಿಂದಿನ ಹೆಸರು?(PSI-2015)

🌿 ವಾತಾಪಿ


5) ಬಾದಾಮಿ ಚಾಲುಕ್ಯರು ಅಭಿವೃದ್ಧಿಪಡಿಸಿದ ವಾಸ್ತುಶಿಲ್ಪದ ಶೈಲಿ?(PSI-2013)

🌿 ವೇಸರ ಶೈಲಿ


6) ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ಪುರಾತನ ರಾಜ?(PSI-2003)

🌿 2ನೇ ಪುಲಿಕೇಶಿ


7) ಇಮ್ಮಡಿ ಪುಲಕೇಶಿಯು ಯಾವಾಗ ರಾಜ್ಯ ಆಳುತ್ತಿದ್ದನು? (PSI-2000)

🌿 ಏಳನೇ ಶತಮಾನದ ಆರಂಭ


8) ಚಾಲುಕ್ಯ ವಿಕ್ರಮ-- ಶಕೆ ಪ್ರಾರಂಭ ವರ್ಷ?(FDA-1997)

🌿 ಕ್ರಿ.ಶ.1076


9) ಚಾಲುಕ್ಯರ ಸೈನ್ಯ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು?(SDA-2019)

🌿 ಕರ್ನಾಟ ಬಲ


10) ಬಾದಾಮಿ ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನಾದ ಯಾತ್ರಿಕ?(SDA-2008)

🌿 ಹುಯೆನ್ ತ್ಸಾಂಗ್


11) ಕನೌಜ ಹರ್ಷವರ್ಧನನನ್ನು ಸೋಲಿಸಿದ ಬಾದಾಮಿ ಚಾಲುಕ್ಯರ ದೊರೆ ಯಾರು?(SDA-2011)

🌿 2ನೇ ಪುಲಿಕೇಶಿ


12) ಚಾಲುಕ್ಯ ವಂಶದ ಸ್ಥಾಪಕ? (SDA-2019)

🌿 ಜಯಸಿಂಹ


13) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?(PC-2004)

🌿 ಬಾಗಲಕೋಟೆ


14) ಪೂರ್ವ ಚಾಲುಕ್ಯರ ರಾಜಧಾನಿ?(PUC Lecture-2012)

🌿 ವೆಂಗಿ


15) ಐಹೊಳೆ ಮತ್ತು ಪಟ್ಟದಕಲ್ಲು ಗಳಲ್ಲಿರುವ ಸುಂದರವಾದ ದೇವಾಲಯಗಳನ್ನು ಯಾರು ಕಟ್ಟಿಸಿದರು?

🌿 ಚಾಲುಕ್ಯರು


16) ಇಮ್ಮಡಿ ಪುಲಿಕೇಶಿ ಈತನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಎಲ್ಲಿ ಕಾಣುತ್ತದೆ?(KAS-1999)

🌿 ಅಜಂತ


17) ಚಾಲುಕ್ಯರ ರಾಜಧಾನಿ?(RSI/PSI-2016)

🌿 ವಾತಾಪಿ/ ಬದಾಮಿ

====================


 ⚜ ಮಾನ್ಯಖೇಟದ ರಾಷ್ಟ್ರಕೂಟರು ⚜


1) ಶಿಲೆಯನ್ನು ಕೊರೆದು ನಿರ್ಮಿಸಲಾಗಿರುವ ಎಲಿಫೆಂಟಾ ದ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದವರು?(KAS-2005)

🍀 ರಾಷ್ಟ್ರಕೂಟರು


2) ಕವಿರಾಜಮಾರ್ಗದ ಕರ್ತೃ?(PSI-2018)

🍀 ಅಮೋಘವರ್ಷ-1

( ಶ್ರೀವಿಜಯ)


3) ಕನ್ನಡದ ಪ್ರಪ್ರಥಮ ಗದ್ಯಕೃತಿ?(PSI-2006)

🍀 ವಡ್ಡಾರಾಧನೆ


4) ಕವಿರಾಜಮಾರ್ಗ ಬರೆದವರು?(PSI-2002)

🍀 ನೃಪತುಂಗ( ಅಮೋಘವರ್ಷ)


5) ಯಾವ ಕೃತಿಯೂ ಕರ್ನಾಟಕದ ಅನನ್ಯತೆಯನ್ನು ನಿರ್ಮಿಸಿದೆ?(FDA-2011)

🍀 ಕವಿರಾಜಮಾರ್ಗ


6) ಪ್ರಸಿದ್ಧ ಜೈನ ಪಂಡಿತನಾದ ಜೀನಸೇನನು ಯಾವ ದೊರೆಯ ಆಸ್ಥಾನದಲ್ಲಿದ್ದನು?

🍀 ಅಮೋಘವರ್ಷ


7) ರಾಷ್ಟ್ರಕೂಟರ ರಾಜಧಾನಿ ಯಾವುದು?(SDA-1998)

🍀 ಮಾನ್ಯಖೇಟ


8) ಅಮೋಘವರ್ಷ ನೃಪತುಂಗ ಯಾವ ರಾಜವಂಶಕ್ಕೆ ಸೇರಿದವರು?(SDA-1998)

🍀 ರಾಷ್ಟ್ರಕೂಟರು


9) ಎಲ್ಲೋರದ ಕೈಲಾಸನಾಥ ದೇವಾಲಯ ನಿರ್ಮಿಸಿದವರು?(SDA-2019)

🍀 ಒಂದನೇ ಕೃಷ್ಣ


10) ರಾಷ್ಟ್ರಕೂಟ ರಾಜವಂಶದ ಮೂಲಪುರುಷ?(PC-2018)

🍀 ದಂತಿದುರ್ಗ


11) ಯಾವ ದೊರೆ ಎರಡನೇ ಕೀರ್ತಿವರ್ಮನು ಸೋಲಿಸಿ ರಾಜಧಾನಿ ವಾತಾಪಿಯನ್ನು ಕಿತ್ತುಕೊಂಡನು?(PUC Lecture-2012)

🍀 ದಂತಿದುರ್ಗ


12) ಯಾವ ರಾಷ್ಟ್ರಕೂಟ ದೊರೆ ಕ್ರಿ.ಶ 785 ರಲ್ಲಿ ದೊ-ಅಬ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದನು?( PUC lecture-2012)

🍀 ಧ್ರುವ


13) ಯಾವ ರಾಷ್ಟ್ರಕೂಟ ದೊರೆ ಪ್ರತಿಹಾರ ರಾಜ ಮಹಿಪಾಲ ನನ್ನು ಸೋಲಿಸಿದನು?

🍀 ಮೂರನೇ ಇಂದ್ರ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area