Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 24 July 2022

ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಆ) ಘಟ್ಟಿವಾಳಯ್ಯನ ವಚನಗಳು ಸಂಪೂರ್ಣ ನೋಟ್ಸ್ Karnataka 1st PUC B) Ghattivalayyana Vachanagalu Complete Notes in Kannada

ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಆ) ಘಟ್ಟಿವಾಳಯ್ಯನ ವಚನಗಳು ಸಂಪೂರ್ಣ ನೋಟ್ಸ್

Karnataka 1st PUC B) Ghattivalayyana Vachanagalu Complete Notes in Kannada





ಕವಿ ಪರಿಚಯ: ಘಟ್ಟಿವಾಳಯ್ಯನ ಪರಿಚಯ (1160)
ಘಟ್ಟಿವಾಳಯ್ಯ ಹನ್ನೆರಡನೆ ಶತಮಾನದ ವಚನಕಾರ. ಮುದ್ದಣ್ಣ ಎಂಬುದು ಇವನ ಪೂರ್ವನಾಮ. ಶಿವಾನುಭವವನ್ನು ನರ್ತನದ ಮೂಲಕ ಸಾರುವ ಕಾಯಕವನ್ನು ಮಾಡುತ್ತಿದ್ದು, ಕಪಟಿಗಳು ಇವನ ಸದಾಚಾರದ ಪ್ರಭಾವದಿಂದ ನಿಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಒಮ್ಮೆ ಬಸವಣ್ಣನವರ ಮಹಾಮನೆಗೆ ಊಟಕ್ಕೆ ಹೋಗುತ್ತಿದ್ದ ಜಂಗಮರನ್ನು ಕಂಡು ಘಟ್ಟಿವಾಳಯ್ಯನು 'ಬಸವಣ್ಣನ ಮನೆಯ ಮುಸುರೆ ಗಡಿಗೆಗೆ ಇವರೇ ಮಕ್ಷಿಕಗಳು' ಎನ್ನಲು ಅವರು ಕೋಪದಿಂದ ಇವನ ಇಷ್ಟಲಿಂಗವನ್ನು ಕಿತ್ತುಕೊಂಡರು. ಆತನು ಅದನ್ನು ಕೊಡುವಂತೆ ಬೇಡಲು ಅವರು ಕುಹಕದಿಂದ ತಮ್ಮ ಮುಂದಿದ್ದ ಕಲ್ಲುಗುಂಡೊಂದನ್ನು ತೋರಿ ಅದೋ ಅಲ್ಲಿದೆ ನಿನ್ನ ಇಷ್ಟಲಿಂಗ ಎಂದು ಹಾಸ್ಯ ಮಾಡಿದರು. ಆತನು ಅದನ್ನೇ ಇಷ್ಟಲಿಂಗವೆಂದು ಕೊರಳಲ್ಲಿ ಕಟ್ಟಿಕೊಂಡು ಬಸವಣ್ಣನ ಮಹಾಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಬಿಟ್ಟನು. ಸುದ್ದಿ ತಿಳಿದ ಬಸವಣ್ಣನು ಪ್ರಭುದೇವ, ಚನ್ನಬಸವಣ್ಣ ಮೊದಲಾದವರೊಂದಿಗೆ ಅಲ್ಲಿಗೆ ಬಂದು ಆ ಜಂಗಮರಿಗೆ ಆತನ ಇಷ್ಟಲಿಂಗವನ್ನು ನೀಡುವಂತೆ ಹೇಳಿದನು. ಆಗ ಅವರು 'ಘಟ್ಟಿವಾಳಯ್ಯಗಳೇ ನಿಮಗೆ ಗುರುಕೊಟ್ಟ ಲಿಂಗ ಮತ್ತು ಬೆಟ್ಟದ ಈ ಗುಂಡು ಹೀಗೆ ಎರಡು ಲಿಂಗಗಳೇ? ನಿಮಗೆ ಇಬ್ಬರು ಗಂಡರೇ?' ಎಂದು ವ್ಯಂಗ್ಯವಾಡಿದರು. ಆಗ ಘಟ್ಟಿವಾಳಯ್ಯ ಇಷ್ಟಲಿಂಗದೊಳೆಗೆ ಕಲ್ಲುಗುಂಡನ್ನು ಸೇರಿಸಿಕೊಳ್ಳುತ್ತಾನೆ. ಇದನ್ನು ಕಂಡ ಅಲ್ಲಮ ಮೊದಲಾದವರು ಘಟ್ಟಿವಾಳಯ್ಯನದು ನಿಜವಾದ ನಡೆಯೆಂದು ಆತನನ್ನು ಸ್ತುತಿಸಿದರು. ಅಲ್ಲಮ, ಬಸವ, ಸಿದ್ಧರಾಮ, ಆದಯ್ಯ ಮೊದಲಾದ ಶರಣರು ಘಟ್ಟಿವಾಳಯ್ಯನ ಗಟ್ಟಿತನವನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಸಿದ್ಧರಾಮನು ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ” ಎಂದಿದ್ದಾನೆ. ಬಸವಣ್ಣನವರು “ಕಾಯಕವಂಚಕನಲ್ಲ, ಜೀವ ವಂಚಕನಲ್ಲ, ನಿರಂತರ ಅಸಹಜ ನೋಡಯ್ಯಾ ಶಂಕೆಯಿಲ್ಲದ ಮಹಾಮಹಿಮನು ಕೂಡಲ ಸಂಗನ ಶರಣನುಪಮಾತೀತ ನೋಡಯ್ಯಾ”ಎಂದು ಹೊಗಳಿದರೆ, “ಆಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ, ಕಾಲದಗಂಡ, ಕರ್ಮದಗಂಡ, ಲಿಂಗವಿಡಿದು ಸಾವ ಹಿರಿಯರ ಗಂಡ, ಗುಹೇಶ್ವರ” ಎಂದು ಅಲ್ಲಮ ಹೊಗಳಿದ್ದಾನೆ. ಇಂತಹ ಘಟ್ಟಿವಾಳಯ್ಯ ನರ್ತನ ಮಾಡುತ್ತಿರುವಾಗಲೇ ಲಿಂಗೈಕ್ಯನಾದನು.
ಘಟ್ಟಿವಾಳಯ್ಯನ ವಚನಗಳ ಆಶಯ
ಘಟ್ಟಿವಾಳಯ್ಯನು ತನ್ನ ವಚನಗಳಲ್ಲಿ ಡಾಂಭಿಕ ಭಕ್ತರ ನಡವಳಿಕೆಗಳೆಲ್ಲಾ ವ್ಯರ್ಥವೆನ್ನುತ್ತಾನೆ. ವೇಷಧಾರಿಗಳೆಲ್ಲರು ಭಕ್ತರಾಗಲು ಸಾಧ್ಯವಿಲ್ಲ. ಶರಣರ ಗುಂಪಿನಲ್ಲಿ ಅವರು ಸೇರಲು ಅರ್ಹರಲ್ಲವೆಂದು ಹೇಳುತ್ತಾನೆ. ಗುರು ಲಿಂಗ ಜಂಗಮ ಕಲ್ಪನೆಗೆ ಹೊಸ ಆಯಾಮವನ್ನು ನೀಡುವ ಮತ್ತು ಹೊಸ ವ್ಯಾಖ್ಯಾನ ನೀಡುವ ಇವನ ಧೈರ್ಯ ಪ್ರಶಂಸನೀಯ.
: ಘಟ್ಟಿವಾಳಯ್ಯನ ವಚನಗಳ ಪದಕೋಶ :
ಇರಿ-ಕೊಲ್ಲು, ತಿವಿ, ಕತ್ತರಿಸು;
ಕೈದು-ಆಯುಧ;
ಮೊನೆ- ತುದಿ, ತೀಕ್ಷ್ಣತೆ, ಧೈರ್ಯ;
ದಾಡೆ-ಕೋರೆಹಲ್ಲು, ದವಡೆಹಲ್ಲು;
ಸುಧೆ- ಹಾಲು, ಅಮೃತ;
ಕೂಟ-ಬೆರೆಯುವುದು, ರಾಶಿ, ನೆತ್ತಿ, ಮೋಸ;
ಅಜಾತ - ಹುಟ್ಟಿಲ್ಲದವ, ಸ್ವಯಂಭು, ಶಿವ;
ತಗಹು- ಕಟ್ಟುಪಾಡು;
ಕಟ್ಟು-ನಿರ್ಬಂಧ;
ಭಾಷೆಹೀನ-ವಚನಭ್ರಷ್ಟ, ಮಾತಿಗೆ ತಪ್ಪಿದವನು;
ಸೂತಕ-ಜನನ ಮರಣದ ಸಂದರ್ಭದಲ್ಲಿ ಆಚರಿಸುವ ಮೈಲಿಗೆ
ಘಟ್ಟಿವಾಳಯ್ಯನ ವಚನಗಳ ಸಾರಾಂಶ
ಘಟ್ಟಿವಾಳಯ್ಯನ ವಚನಗಳು: ಅವುಗಳ ಸಾರಾಂಶವನ್ನು ಪ್ರತಿಯೊಂದು ವಚನಗಳನ್ನು ನೀಡಿ ಅವುಗಳ ಕೆಳಗೆ ಸಂಪೂರ್ಣ ಸಾರಾಂಶವನ್ನು ನೀಡಿದೆ.
ಇರಿವ ಕೈದಿಂಗೆ ದಯಧರ್ಮದ ಮೊನೆ ಉಂಟೆ?
ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ?
ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ?
ಎನಗೆ ನಿಮ್ಮೊಳಗಿನ್ನೇತರ ಮಾತು?
ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು
ಚಿಕ್ಕಯ್ಯಪ್ರಿಯ ಸಿದ್ದಲಿಂಗ ಇಲ್ಲ ಇಲ್ಲ ಎಂದೆ. ॥೧॥
ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತದ ರುಚಿ ಇರುತ್ತದೆಯೇ? ಹೊಟ್ಟೆ ಪಾಡಿಗೋಸ್ಕರ ಜಂಗಮರ ವೇಷ ಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ. ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.
ತಪವೆಂಬುದು ಬಂಧನ
ನೇಮವೆಂಬುದು ತಗಹು
ಶೀಲವೆಂಬುದು ಸೂತಕ
ಕಟ್ಟಿನ ವ್ರತದ ಭಾಷೆಯೆಂಬುದು ನಗೆಗೆಡೆಯಾಯಿತ್ತು ನೋಡಾ!
ನಗೆ ಹೊಗೆವಣ್ಣಿದಲ್ಲಿ ಹೊಗೆ ಜಗವಾದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು| ಮಾಣು| ॥೨॥
ತನ್ನ ದೇಹದ ಮೇಲಿನ ಮೋಹವನ್ನು ಬಿಡಬೇಕೆಂದು ಗುರುವನ್ನು ತೋರಿಸಲಾಗಿದೆ, ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಲಿಂಗವನ್ನು ತೋರಿ, ಧನದ ಮೇಲಿನ ಆಸೆಯನ್ನು ತೊರೆಯಬೇಕೆಂದು (ಹಣವನ್ನು ದಾನಮಾಡಲಿ ಎಂದು) ಜಂಗಮವನ್ನು ತೋರಿಸಿದರು, ಒಳ್ಳೆಯದನ್ನೆಲ್ಲ ಮರೆತು ಹೊಡೆದಾಡುವ ಭಾಷೆ ಹೀನರು (ಮಾತಿಗೆ ತಪ್ಪಿದವರನ್ನು ಕಂಡು ನಾಚಿಕೆಯಾಯಿತು. ಗುರು, ಲಿಂಗ, ಜಂಗಮವನ್ನು ಮರೆತು ಸುಖ ಭೋಗಗಳಿಗೆ ಹೊಡೆದಾಡುವ ಜನರನ್ನು ಕಂಡು ನಾಚುವ ಘಟ್ಟಿವಾಳಯ್ಯನು ಡಾಂಬಿಕ ಭಕ್ತರ ನಡವಳಿಕೆಗಳನ್ನು ಖಂಡಿಸುತ್ತಾನೆ. ಇಂತಹವರು ಶಿವಭಕ್ತರಾಗಲು, ಶಿವನನ್ನು ಕಾಣಲು ಸಾಧ್ಯವಿಲ್ಲ ಎಂಬುದು ಈತನ ಅಭಿಮತ.
ತನುವ ಮರೆಯಬೇಕೆಂದು ಗುರುವ ತೋರಿ,
ಮನವ ಮರೆಯಬೇಕೆಂದು ಲಿಂಗವ ತೋರಿ,
ಧನವ ಮರೆಯಬೇಕೆಂದು ಜಂಗಮವ ತೋರಿ,
ಲೇಸ ಮರೆತು ಕಷ್ಟಕ್ಕೆ ಕಡಿದಾಡುವ
ಭಾಷೆಹೀನರ ಕಂಡು ನಾಚಿಕೆಯಾಯಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ. ॥೩॥
ತನ್ನ ದೇಹದ ಮೇಲಿನ ಮೋಹವನ್ನು ಬಿಡಬೇಕೆಂದು ಗುರುವನ್ನು ತೋರಿಸಲಾಗಿದೆ, ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಲಿಂಗವನ್ನು ತೋರಿ, ಧನದ ಮೇಲಿನ ಆಸೆಯನ್ನು ತೊರೆಯಬೇಕೆಂದು (ಹಣವನ್ನು ದಾನಮಾಡಲಿ ಎಂದು) ಜಂಗಮವನ್ನು ತೋರಿಸಿದರು, ಒಳ್ಳೆಯದನ್ನೆಲ್ಲ ಮರೆತು ಹೊಡೆದಾಡುವ ಭಾಷೆ ಹೀನರು (ಮಾತಿಗೆ ತಪ್ಪಿದವರನ್ನು ಕಂಡು ನಾಚಿಕೆಯಾಯಿತು. ಗುರು, ಲಿಂಗ, ಜಂಗಮವನ್ನು ಮರೆತು ಸುಖ ಭೋಗಗಳಿಗೆ ಹೊಡೆದಾಡುವ ಜನರನ್ನು ಕಂಡು ನಾಚುವ ಘಟ್ಟಿವಾಳಯ್ಯನು ಡಾಂಬಿಕ ಭಕ್ತರ ನಡವಳಿಕೆಗಳನ್ನು ಖಂಡಿಸುತ್ತಾನೆ. ಇಂತಹವರು ಶಿವಭಕ್ತರಾಗಲು, ಶಿವನನ್ನು ಕಾಣಲು ಸಾಧ್ಯವಿಲ್ಲ ಎಂಬುದು ಈತನ ಅಭಿಮತ.

ಕರ್ನಾಟಕ ಪ್ರಥಮ ಪಿಯುಸಿ ಘಟ್ಟಿವಾಳಯ್ಯನ ವಚನಗಳು ಸಂಪೂರ್ಣ ನೋಟ್ಸ್

ಕರ್ನಾಟಕ ಪ್ರಥಮ ಪಿಯುಸಿ ಘಟ್ಟಿವಾಳಯ್ಯನ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭದೊಡನೆ ವಿವರಿಸಿ:

ಉತ್ತರ:

ಆಯ್ಕೆ : ಈ ವಚನದ ಸಾಲನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ಡಾಂಭಿಕ ಭಕ್ತರನ್ನು ಕುರಿತು ವಿವರಿಸುವ ಸಂದರ್ಭ ಇದಾಗಿದೆ.

ವಿವರಣೆ: ಹೊಟ್ಟೆಪಾಡಿಗೋಸ್ಕರವಾಗಿ ಜಂಗಮರ, ಶಿವಶರಣರ ವೇಷವನ್ನು ಧರಿಸುವ ಜನರನ್ನು ಕಂಡು ಅವರ ರೀತಿ ನೀತಿಗಳನ್ನು ಖಂಡಿಸುತ್ತಾ ಈ ಮಾತನ್ನು ಹೇಳುತ್ತಾನೆ. ಶಿವಶರಣರ ಗುಂಪಿನಲ್ಲಿ ಇವರು ಸೇರಲು ಅರ್ಹರಲ್ಲವೆನ್ನುವುದು ವಚನಕಾರನ ಅಭಿಮತ. ಹೀಗೆ ಹೇಳುವಾಗ ಈ ಮೇಲಿನ ಮಾತು ಬಂದಿದೆ.

ಉತ್ತರ:

ಆಯ್ಕೆ: ಈ ವಚನದ ಸಾಲನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ನಡೆತೆಯ ಕುರಿತು ಹೇಳುವ ಸಂದರ್ಭ ಇದಾಗಿದೆ.

ವಿವರಣೆ: ಧ್ಯಾನತಪಸ್ಸು, ಉಪವಾಸ, ವ್ರತ ಎಂಬವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ನಿರ್ಬಂಧಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ ಎಂಬುದು ಘಟ್ಟಿವಾಳಯ್ಯನ ಅಭಿಮತ.

ಉತ್ತರ:

ಆಯ್ಕೆ : ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ಕಷ್ಟಕ್ಕೆ ಕಡಿದಾಡುವ ಭಾಷೆಹೀನರನ್ನು ಗಮನಿಸಿ ಹೇಳುವ ಮಾತಿದು.

ವಿವರಣೆ : ತನು-ಮನ-ಧನವನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಿದ್ದರೂ ಒಳ್ಳೆಯದನ್ನು ಮರೆತು ಹೊಟ್ಟೆಯಪಾಡಿಗಾಗಿ ಮಾತಿಗೆ ತಪ್ಪಿ ಓಡಾಡುವ ಜನರನ್ನು ಕಂಡು ನಾಚಿಕೆಯಾಯಿತು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಕರ್ನಾಟಕ ಪ್ರಥಮ ಪಿಯುಸಿ ಘಟ್ಟಿವಾಳಯ್ಯನ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: ಇರಿವ ಆಯುಧಕ್ಕೆ ದಯೆ ಧರ್ಮದ ಮೊನೆ ಇರುವುದಿಲ್ಲ.

ಉತ್ತರ: ತಪವನ್ನು ಘಟ್ಟಿವಾಳಯ್ಯ ಬಂಧನವೆಂದು ಕರೆಯುತ್ತಾನೆ.

ಉತ್ತರ: ಕಟ್ಟಿನ ವ್ರತದ ಭಾಷೆಯು ನಗೆಗೆ ಈಡಾಗುವುದು.

ಉತ್ತರ: ಭಾಷೆ ಹೀನರ ಕಂಡಾಗ ನಾಚಿಕೆಯಾಯಿತು.

ಉತ್ತರ: ಘಟ್ಟಿವಾಳಯ್ಯನ ವಚನಗಳ ಅಂಕಿತ ಚಿಕ್ಕಯ್ಯಪ್ರಿಯ ಸಿದ್ಧಲಿಂಗ.

ಕರ್ನಾಟಕ ಪ್ರಥಮ ಪಿಯುಸಿ ಘಟ್ಟಿವಾಳಯ್ಯನ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ: ಇರಿವ ಕೈದು ಅಥವಾ ಆಯುಧಕ್ಕೆ ದಯೆ ಧರ್ಮದ ಮೊನೆ ಇರುವುದಿಲ್ಲ. ಕಾಲೋರಗಗಳಿಗೆ ಅವುಗಳ ಕೋರೆ ಹಲ್ಲಿನಲ್ಲಿ ಅಮೃತದ ಸುಧೆ ಇರುವುದಿಲ್ಲ.

ಉತ್ತರ: ಘಟ್ಟಿವಾಳಯ್ಯನ ಪ್ರಕಾರ ನೇಮವೆಂಬುದು ತಗಹು. ಶೀಲ ಅಥವಾ ಒಳ್ಳೆಯ ನಡತೆ ಎನ್ನುವುದು ಕೂಡಾ ಸೂತಕವಾಗಿದೆ.

ಉತ್ತರ: ತನುವನ್ನು ಮರೆಯಲು ಗುರುವನ್ನು, ಮನವನ್ನು ಮರೆಯಲು ಲಿಂಗವನ್ನು ಹಾಗೂ ಧನವನ್ನು ಮರೆಯಲು ಜಂಗಮವನ್ನು ತೋರುತ್ತಾರೆ.

ಕರ್ನಾಟಕ ಪ್ರಥಮ ಪಿಯುಸಿ ಘಟ್ಟಿವಾಳಯ್ಯನ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ

ಉತ್ತರ: ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದಿಲ್ಲ. ಉಗ್ರಸರ್ಪದ ಹಲ್ಲಿನೊಳಗೆ ವಿಷವಿರುವುದೇ ಹೊರತು ಅಮೃತವಿರಲು ಸಾಧ್ಯವಿಲ್ಲ. ಅಂತೆಯೇ ವೇಷಧಾರಿ ಭಕ್ತರು ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯಲು ಸಾಧ್ಯ ಎಂಬುದು ಈತನ ಪ್ರಶ್ನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾ ಇವರಿಗೆ ಚಿಕ್ಕಯ್ಯಪ್ರಿಯಸಿದ್ಧಲಿಂಗ ಒಲಿಯುವುದಿಲ್ಲ ಎನ್ನುತ್ತಾನೆ.

ಉತ್ತರ: ಧ್ಯಾನ, ತಪಸ್ಸು, ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ಕಟ್ಟುಪಾಡುಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲೇ ಇಲ್ಲದವನಾಗುತ್ತಾನೆ. ಧ್ಯಾನ-ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ ಹೊರತು ಬಲವಂತದಿಂದಲ್ಲ ಎಂದು ಹೇಳುತ್ತಾನೆ. ಈತ ಇಷ್ಟಲಿಂಗಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು.

ಉತ್ತರ: ಹೊಟ್ಟೆಯ ಪಾಡಿಗೋಸ್ಕರ ಜಂಗಮರಂತೆ, ಶಿವಶರಣರಂತೆ ವೇಷಧರಿಸಿದ ಜನರನ್ನು, ಮನಸ್ಸಿಲ್ಲದೆಯೇ ನೇಮ, ಧ್ಯಾನ, ತಪಸ್ಸು, ವ್ರತ, ಉಪವಾಸಗಳೇ ಮೊದಲಾದ. ಅನೇಕ ರೀತಿಯ ಕಟ್ಟುಪಾಡುಗಳನ್ನು ಹೊಂದಿದ್ದು ನಗೆಗೆ ಕಾರಣವಾಗುವ ಜನರನ್ನು ಖಂಡಿಸುತ್ತಾ ಡಾಂಭಿಕತನದಿಂದ, ಬಲವಂತದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರು ಶಿವಭಕ್ತರ ಗುಂಪಿನಿಂದಲೂ ಹೊರಗೆ ಎಂದಿದ್ದಾನೆ. ತನು ಮನ ಧನಗಳನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಲಾಗಿದೆ. ಗುರು-ಲಿಂಗ-ಜಂಗಮಗಳನ್ನು ಮರೆವ ಭಾಷಾಹೀನರನ್ನು ಕಂಡು ನಾಚುತ್ತೇನೆ ಎಂದು ಘಟ್ಟಿವಾಳಯ್ಯ ಹೇಳುತ್ತಾನೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads