ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

NVS Recruitment 2022: Apply Online For 2200 Various Posts ನವೋದಯ ವಿದ್ಯಾಲಯ ಸಮಿತಿಯಲ್ಲಿವೆ 2200 ವಿವಿಧ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ

NVS Recruitment 2022: Apply Online For 2200 Various Posts ನವೋದಯ ವಿದ್ಯಾಲಯ ಸಮಿತಿಯಲ್ಲಿವೆ 2200 ವಿವಿಧ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ


NVS Recruitment 2022: ನವೋದಯ ವಿದ್ಯಾಲಯ ಸಮಿತಿಯು ಪ್ರಾಂಶುಪಾಲರು, ಮ್ಯೂಸಿಕ್ ಟೀಚರ್, ಪ್ರೋಸ್ಟ್‌ ಗ್ರಾಜುಯೇಟ್‌ ಟೀಚರ್, ಟ್ರೈನ್ಡ್‌ ಗ್ರಾಜುಯೇಟ್ ಟೀಚರ್, ಇತರೆ ಹಲವು ಗ್ರೂಪ್‌ ಬಿ ಬೋಧಕ ಹುದ್ದೆಗಳನ್ನು ನೇಮಕ ಮಾಡಲು 2022-23ನೇ ಸಾಲಿನ ನೇರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು, ಅರ್ಜಿ ಹಾಕಿರಿ. ಹುದ್ದೆಗಳ ವಿವರ ಈ ಕೆಳಗಿನಂತೆ ನೀಡಲಾಗಿದೆ.


NVS Recruitment 2022: Details of Vacancies: ಭರ್ತಿ ಮಾಡುವ ಹುದ್ದೆಗಳ ವಿವರ
ಪ್ರಾಂಶುಪಾಲರು 12
ಪೋಸ್ಟ್‌ ಗ್ರಾಜುಯೇಟ್‌ ಟೀಚರ್ 397
ಟ್ರೈನ್ಡ್‌ ಗ್ರಾಜುಯೇಟ್ ಟೀಚರ್ 683
ಟಿಜಿಟಿ (ತೃತೀಯ ಭಾಷೆ) 343
ಮ್ಯೂಸಿಕ್ ಟೀಚರ್ 33
ಚಿತ್ರಕಲಾ ಶಿಕ್ಷಕರು 43
ದೈಹಿಕ ಶಿಕ್ಷಕರು (ಪುರುಷ) 21
ದೈಹಿಕ ಶಿಕ್ಷಕರು (ಮಹಿಳೆ) 31
ಗ್ರಂಥಾಪಾಲಕರು: 53
ಎನ್‌ಇ ರೀಜನ್ 584
ಒಟ್ಟು 2200

NVS Recruitment 2022 ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಎಂಎ, ಎಂ.ಇಡಿ / ಬಿಎ, ಬಿ.ಇಡಿ / ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ/ ಬಿಪಿ.ಇಡಿ / ಪದವಿ ಉತ್ತೀರ್ಣ.

NVS Recruitment 2022: ವೇತನ ಮಾಹಿತಿ / ಇತರೆ ಅರ್ಹತೆ

  • ಪ್ರಾಂಶುಪಾಲರು : ಪೇ ಲೆವೆಲ್ 12 ರಂತೆ ರೂ.78,800- 2,09,200 ವರೆಗೆ. (50 ವರ್ಷ ಮೀರಿರಬಾರದು.)
  • ಪೋಸ್ಟ್‌ ಗ್ರಾಜುಯೇಟ್ ಟೀಚರ್ : ಪೇ ಲೆವೆಲ್ 8 ರಂತೆ ರೂ.47,600-1,51,100 ವರೆಗೆ. (40 ವರ್ಷ ಮೀರಿರಬಾರದು.)
  • ಟ್ರೈನ್ಡ್‌ ಗ್ರಾಜುಯೇಟ್‌: ಪೇ ಲೆವೆಲ್ 7 ರಂತೆ ರೂ.44,900-1,42,400 ವರೆಗೆ. (35 ವರ್ಷ ಮೀರಿರಬಾರದು).
  • ಮ್ಯೂಸಿಕ್, ಚಿತ್ರಕಲಾ, ಪಿಇಟಿ, ಲೈಬ್ರೆರಿಯನ್ : ಪೇ ಲೆವೆಲ್ 7 ರಂತೆ ರೂ.44,900 - 1,42,400 ವರೆಗೆ. (35 ವರ್ಷ ಮೀರಿರಬಾರದು)


ಪ್ರತಿ ಹುದ್ದೆಗೆ ಮೇಲೆ ತಿಳಿಸಿದ ಗರಿಷ್ಠ ವಯೋಮಿತಿಗಳು ಅನ್ವಯವಾಗಲಿವೆ. ಹಾಗೆಯೇ ಸರ್ಕಾರಿ ನಿಯಮದ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ಒಬಿಸಿ -3, ಎಸ್‌ಸಿ / ಎಸ್‌ಟಿ / ಪ್ರವರ್ಗ-1 - 5 ವರ್ಷ, PWD ಅಭ್ಯರ್ಥಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.


NVS Recruitment 2022: ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ / ವೈಯಕ್ತಿಕ ಸಂದರ್ಶನ ನಡೆಸಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ನಡೆಸಲಾಗುತ್ತದೆ.

NVS Recruitment 2022: ಅಪ್ಲಿಕೇಶನ್‌ ಶುಲ್ಕ ಎಷ್ಟು?

  • ಪ್ರಾಂಶುಪಾಲರು ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.2000.
  • ಪೋಸ್ಟ್‌ ಗ್ರಾಜಯೇಟ್‌ ಟೀಚರ್ ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.1800.
  • ಪಿಇಟಿ, ಸಂಗೀತ ಟೀಚರ್, ಲೈಬ್ರೆರಿಯನ್ ಹುದ್ದೆಗೆ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.1500.
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಹುದ್ದೆಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
  • ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.


NVS Recruitment 2022: ಅರ್ಜಿ ಸಲ್ಲಿಕೆ ಹೇಗೆ?

  • ನವೋದಯ ವಿದ್ಯಾಲಯ ಸಮಿತಿ ವೆಬ್‌ ವಿಳಾಸ https://cbseitms.nic.in/nvsrecuritment ಕ್ಕೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನ ಬಲಭಾಗದಲ್ಲಿ 'Direct Recruitment Drive- 2022-23' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಓಪನ್ ಆಗುವ ಪೇಜ್‌ನಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
  • ಶುಲ್ಕ ಪಾವತಿಸಿ, ಅರ್ಜಿ ಪೂರ್ಣಗೊಳಿಸಿದ ನಂತರ, ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
  • ಅರ್ಜಿ ಸಲ್ಲಿಸಲು ಡೈರೆಕ್ಟ್‌ ಲಿಂಕ್‌ ಅನ್ನು ಕೆಳಗಿನಂತೆಯೂ ನೀಡಲಾಗಿದೆ.


Click Here to Apply Online: Apply Online


Click Here to Download Official Notification PDF

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area