ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಇ) ಅಕ್ಕಮಹಾದೇವಿಯವರ ವಚನಗಳು ಸಂಪೂರ್ಣ ನೋಟ್ಸ್
Karnataka 1st PUC C) Akkamahadeviyavara Vachanagalu Complete Notes in Kannada
ವಚನ - ವಚನಕಾರ್ತಿ: ಅಕ್ಕಮಹಾದೇವಿ ಯವರ ಪರಿಚಯ (1160) |
---|
ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಈಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿ (ಉಡುಗಣ)ಯವಳು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ. |
ಅಕ್ಕಮಹಾದೇವಿಯ ವಚನಗಳ ಆಶಯ |
---|
ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತನಿಗೆ ಮುಕ್ತಿಯಿಲ್ಲ. ಆತ್ಮ ಪರಮಾತ್ಮನಲ್ಲಿ ಒಂದಾದಾಗ ಅಂತಹ ಭಕ್ತನಿಗೆ ಭವವಿಲ್ಲ, ಶರಣರ ಸಂಗದಿಂದ ಬದುಕು ಸಾರ್ಥಕ ಇಲ್ಲದಿದ್ದರೆ ನಿರರ್ಥಕವೆಂಬ ಆಶಯಗಳನ್ನು ಪ್ರಸ್ತುತ ವಚನಗಳು ವ್ಯಕ್ತಪಡಿಸುತ್ತವೆ. |
ಅಕ್ಕಮಹಾದೇವಿಯ ವಚನಗಳಲ್ಲಿನ ಹೊಸ ಪದಗಳ ಅರ್ಥ : ಪದಕೋಶ: |
---|
ಸಂಕೋಲೆ-ಬೇಡಿ, ಬಂಧನ; |
ತೊಡರು-ತೊಂದರೆ; |
ಚೇಷ್ಟೆ-ಚಟುವಟಿಕೆ; |
ಕರಣ-ತ್ರಿಕರಣಗಳು(ಕಾಯಾ, ವಾಚಾ, ಮನಸಾ); |
ಭವ-ಹುಟ್ಟು; |
ಶೃಂಗಾರ-ಅಲಂಕಾರ, ಭೂಷಣ; |
ಗಣ-ಶಿವಗಣ; |
ಮೇಳಾಪ-ಸಮೂಹ; |
ಬಾತೆ-ಪ್ರಯೋಜನ. |
ಅಕ್ಕಮಹಾದೇವಿಯವರ ವಚನಗಳ ಸಾರಾಂಶ |
---|
ಅಕ್ಕಮಹಾದೇವಿಯವರ ವಚನಗಳು: ಅವುಗಳ ಸಾರಾಂಶವನ್ನು ಪ್ರತಿಯೊಂದು ವಚನಗಳನ್ನು ನೀಡಿ ಅವುಗಳ ಕೆಳಗೆ ಸಂಪೂರ್ಣ ಸಾರಾಂಶವನ್ನು ನೀಡಿದೆ. |
ರತ್ನದ ಸಂಕೋಲೆಯಾದಡೆ ತೊಡರಲ್ಲವೆ? ಮುತ್ತಿನ ಬಲೆಯಾದಡೆ ಬಂಧನವಲ್ಲವೆ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ? || ೧ || |
---|
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವವೇ? ಕೇವಲ ಬಾಹ್ಯ ಆಚಾರ, ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ. ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ-ಮರಣಗಳು ಬಿಡುವುದಿಲ್ಲ ಅಲ್ಲವೇ ಎಂದು ಶಿವನಿಗೆ ಹೇಳಿದ್ದಾಳೆ. ಮುಕ್ತಿಯನ್ನು ಪಡೆಯುವತ್ತ ಜೀವಾತ್ಮ ಚಿಂತಿಸಬೇಕು ಎಂದು ಅಕ್ಕಮಹಾದೇವಿ ಆಶಿಸುತ್ತಾಳೆ. |
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ ಎನಗುಳ್ಳದೊಂದು ಮನ ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ? || ೨ || |
---|
ಲೋಕದ ವ್ಯವಹಾರಗಳಿಗೆ ರವಿ (ಸೂರ್ಯ) ಬೀಜವಾದಂತೆ, ಇಂದ್ರೀಯಗಳ ಚಟುವಟಿಕೆಗೆ ಮನಸ್ಸು ಮೂಲ. ಲೋಕದ ಚಟುವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವ್ಯಾಪಾರ ಆರಂಭವಾಗುತ್ತದೆ. ಅಂತೆಯೇ ಇಂದೀಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ನನಗಿರುವ ಒಂದು ಮನವು ನಿಮಗೆ ಅರ್ಪಿತವಾದ ಮೇಲೆ ನನಗೆ ಮತ್ತೆ ಹುಟ್ಟು-ಸಾವುಗಳೆಂಬವು ಇರುವುದಿಲ್ಲ ಅಲ್ಲವೇ ಎಂದು ಶಿವನಲ್ಲಿ ಕೇಳುತ್ತಾಳೆ. |
ಕಥೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸಂಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ? || ೩ || |
---|
ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ, ಶಿವಭಕ್ತರ ಸಮೂಹವು ಸಂಭಾಷೆಣೆಗೆ ಅಲಂಕಾರ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ, ಶಿವಶರಣರ ಸಮೂಹದೊಡನೆ ಜೀವಿಸುವುದು ಜೀವನಕ್ಕೆ ಅಲಂಕಾರವಾಗುವುದು. ಹಿರಿಯರನ್ನು ಪ್ರೀತಿಯಿಂದ ಕಾಣದ ಕಣ್ಣು, ಪುರಾತನರ (ಶಿವಶರಣರ) ಸಂಗೀತಗಳನ್ನು ಕೇಳದ ಕಿವಿ, ಸತ್ಯವನ್ನು ನುಡಿಯದ ನಾಲಿಗೆ, ಶಿವಶರಣರ ಸಮೂಹದೊಂದಿಗೆ ಮಾಡದ ಸಂಭಾಷಣೆ, ಶಿವಶರಣರ ಸಮೂಹದಲ್ಲಿ ಬಾಳದ ಬಾಳು, ಸತ್ಪಾತ್ರರಿಗೆ ದಾನ ನೀಡಿದ ಕೈ, ಇವೆಲ್ಲ ವ್ಯರ್ಥ.ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು. ಇಂತಹ ಜೀವನ ಏತಕ್ಕಾಗಿ ಎಂದು ಶಿವನಲ್ಲಿ ಕೇಳುತ್ತಾಳೆ. |
ಕರ್ನಾಟಕ ಪ್ರಥಮ ಪಿಯುಸಿ ಇ) ಅಕ್ಕಮಹಾದೇವಿಯವರ ವಚನಗಳು ಸಂಪೂರ್ಣ ನೋಟ್ಸ್
ಕರ್ನಾಟಕ ಪ್ರಥಮ ಪಿಯುಸಿ ಇ) ಅಕ್ಕಮಹಾದೇವಿಯವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭದೊಡನೆ ವಿವರಿಸಿ:
ಉತ್ತರ:
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ : ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಕುರಿತು ಹೇಳುವ ವಚನದ ಸಾಲಿದು.
ವಿವರಣೆ : ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆದರೆ ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ-ಮರಣಗಳು ಬಿಡುವುದಿಲ್ಲ ಅಲ್ಲವೇ ಎಂದು ಅಕ್ಕಮಹಾದೇವಿ ಶಿವನಲ್ಲಿ ನಿವೇದಿಸುತ್ತಾ ಹೇಳುತ್ತಾಳೆ.
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ : ಮನಸ್ಸು ಪರಮಾತ್ಮನಲ್ಲಿ ಲೀನವಾದರೆ ಭವ-ಬಂಧನವಿಲ್ಲವೆನ್ನುವುದನ್ನು ಹೇಳುವ ಸಾಲಿದು.
ವಿವರಣೆ : ಲೋಕದ ಜನ ಲೌಕಿಕ ವಿಚಾರಗಳಲ್ಲಿ ಮನವನ್ನಿಟ್ಟು ಜನನ-ಮರಣ ಚಕ್ರದ ಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ನನಗಿರುವ ಒಂದು ಮನವು ನಿಮಗೆ ಅರ್ಪಿತವಾದ ಮೇಲೆ ನನಗೆ ಮತ್ತೆ ಹುಟ್ಟು-ಸಾವುಗಳೆಂಬುದು ಇರುವುದಿಲ್ಲ ಅಲ್ಲವೇ ಎನ್ನುತ್ತಾ ಶಿವನಲ್ಲಿ ಈ ಮೇಲಿನಂತೆ ಅಕ್ಕ ಪ್ರಶ್ನಿಸುತ್ತಾಳೆ.
ಉತ್ತರ:
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ಸಾರ್ಥಕ ಬದುಕಿನ ಪರಿಯನ್ನು ಕುರಿತು ಅಕ್ಕಮಹಾದೇವಿ ಹೇಳುವ ವಚನ ಸಾಲಿದು.
ವಿವರಣೆ : ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ, ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ, ಸದ್ಭಕ್ತರ ನುಡಿರಾಶಿ ಸಂವಾದಕ್ಕೆ ಭೂಷಣ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ, ಎಂದು ಅಕ್ಕಮಹಾದೇವಿ ಹೇಳುತ್ತಾಳೆ.
ಕರ್ನಾಟಕ ಪ್ರಥಮ ಪಿಯುಸಿ ಇ) ಅಕ್ಕಮಹಾದೇವಿಯವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ
ಉತ್ತರ: ರತ್ನದ ಸಂಕೋಲೆಯು ಅಕ್ಕನು ಹೇಳುವ ತೊಡರು.
ಉತ್ತರ: ಲೋಕದ ಚೇಷ್ಟೆಗೆ ರವಿಯು ಬೀಜವಾಗಿದ್ದಾನೆ.
ಉತ್ತರ: ಪರಮಾತ್ಮನಾದ ಚೆನ್ನಮಲ್ಲಿಕಾರ್ಜುನನಲ್ಲಿ ಮನ ಸಿಲುಕಿದಾಗ ಭವಕೆಡುವುದು.
ಉತ್ತರ: ಸತ್ಯವ ನುಡಿವುದು ವಚನದ ಶೃಂಗಾರ.
ಉತ್ತರ: ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ.
ಕರ್ನಾಟಕ ಪ್ರಥಮ ಪಿಯುಸಿ ಇ) ಅಕ್ಕಮಹಾದೇವಿಯವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :
ಉತ್ತರ: ರತ್ನವು ಸಂಕೋಲೆಯಾದರೆ ತೊಡರನ್ನು ಸೂಚಿಸುತ್ತದೆ. ಮುತ್ತು ಬಲೆಯಾದರೆ ಬಂಧನವನ್ನು ಸೂಚಿಸುತ್ತದೆ.
ಉತ್ತರ: ಲೋಕದ ಚೇಷ್ಟೆಗೆ ಬೆಳಕಿನ ಆಕರವಾದ ಸೂರ್ಯನೇ ಬೀಜ, ಕರಣಗಳ ಚೇಷ್ಟೆಗೆ ಮನವೇ ಬೀಜ.
ಉತ್ತರ: ಗುರುಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರ. ಕಿವಿಗೆ ಅಥವಾ ಕರ್ಣಕ್ಕೆ ಪುರಾತನದ ಸಂಗೀತಗಳನ್ನು ಕೇಳುವುದೇ ಶೃಂಗಾರವಾಗಿದೆ.
ಕರ್ನಾಟಕ ಪ್ರಥಮ ಪಿಯುಸಿ ಇ) ಅಕ್ಕಮಹಾದೇವಿಯವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ
ಉತ್ತರ: ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವವೇ? ಕೇವಲ ಬಾಹ್ಯ ಆಚಾರ, ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತಹ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರು ಜನನ ಮರಣ ಎಂಬ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಕ್ತಿಯನ್ನು ಪಡೆಯುವತ್ತ ಜೀವಾತ್ಮ ಚಿಂತಿಸಬೇಕು ಎಂಬುದು ಅಕ್ಕಮಹಾದೇವಿಯ ಬಯಕೆ.
ಉತ್ತರ: ಲೋಕದ ಚಟಿವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವಿವಿಧ ಜೀವಿಗಳಲ್ಲಿ ವ್ಯಾಪಾರ ಆರಂಭವಾಗುತ್ತದೆ. ಅಂತೆಯೇ ಇಂದೀಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ಹಾಗಾಗಿ ಮನಸ್ಸನ್ನು ಶಿವನಲ್ಲಿ ಇಟ್ಟ ಮೇಲೆ ಮತ್ತೆ ಹುಟ್ಟು-ಸಾವುಗಳೆಂಬ ಬಂಧನ ಇರುವುದಿಲ್ಲ. ಇಂದ್ರೀಯ ಚಟುವಟಿಕೆಗಳತ್ತ ಗಮನಹರಿಸಿದರೆ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆಯೇ ಸಿಗುವುದಿಲ್ಲ. ಆತ್ಮ ಪರಮಾತ್ಮನಲ್ಲಿ ಒಂದಾಗಲು ಸದಾ ಶ್ರಮಿಸುತ್ತಿರಬೇಕು. ಮನಸ್ಸು ಪರಮಾತ್ಮನಲ್ಲಿ ಲೀನವಾದರೆ ಭವ-ಬಂಧನವಿಲ್ಲವೆನ್ನುವುದಿಲ್ಲ. ಅಂತಹ ಆತ್ಮ ಅಜರಾಮರತ್ವವನ್ನು ಪಡೆದುಕೊಳ್ಳುತ್ತದೆ.
ಉತ್ತರ: ಬದುಕು ಸಾರ್ಥಕವಾಗಬೇಕಾದರೆ ಗುರುಹಿರಿಯರನ್ನು ಪ್ರೀತಿಯಿಂದ ಕಾಣುವ ಕಣ್ಣು, ಪುರಾತನರ ಸಂಗೀತಗಳನ್ನು ಕೇಳುವ ಕಿವಿ, ಸತ್ಯವನ್ನು ನುಡಿಯುವ ಮಾತು, ಶಿವಭಕ್ತರ ಸಮೂಹದಲ್ಲಿ ಸಂಭಾಷಣೆ, ಅರ್ಹರಾದವರಿಗೆ ದಾನ ನೀಡುವ ಕೈ, ಶಿವಶರಣರ ಸಮೂಹದೊಡನೆ ಜೀವಿಸುವಂತ ಅವಕಾಶಗಳಿದ್ದರೆ ಸಾಕು ಇಲ್ಲದಿರೆ ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು. ಇಂತಹ ಜೀವನ ಏತಕ್ಕಾಗಿ ಬೇಕು ಎಂದು ಅಕ್ಕಮಹಾದೇವಿ ಹೇಳುತ್ತಾಳೆ.
No comments:
Post a Comment
If you have any doubts please let me know