ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಅ) ಅಲ್ಲಮಪ್ರಭು ರವರ ವಚನಗಳು ಸಂಪೂರ್ಣ ನೋಟ್ಸ್ Karnataka 1st PUC A) Allamaprabhu Vachanagalu Complete Notes in Kannada

 

ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಅ) ಅಲ್ಲಮಪ್ರಭು ರವರ ವಚನಗಳು ಸಂಪೂರ್ಣ ನೋಟ್ಸ್

Karnataka 1st PUC A) Allama Prabhu Vachanagalu Complete Notes in Kannada

ಕರ್ನಾಟಕ ಪ್ರಥಮ ಪಿಯುಸಿ ವಚನಗಳು: ಅ) ಅಲ್ಲಮಪ್ರಭು ರವರ ವಚನಗಳು ಸಂಪೂರ್ಣ ನೋಟ್ಸ್ Karnataka 1st PUC A) Allamaprabhu Vachanagalu Complete Notes in Kannada

ಪ್ರಿಯ ವಿದ್ಯಾರ್ಥಿಗಳೇ, ಕರ್ನಾಟಕ ಪ್ರಥಮ ಪಿಯುಸಿ ವರ್ಷದ ವಚನಗಳು ಪದ್ಯಭಾಗದ ಮೊದಲ ವಚನ ಅಲ್ಲಮಪ್ರಭು ರವಾರ ವಚನಗಳ ಸಂಪೂರ್ಣ ನೋಟ್ಸ್ ಹಾಗೂ ಪ್ರಶ್ನೋತ್ತರಗಳನ್ನು Edutube Kannada ತಂಡ ಸಂಗ್ರಹಿಸಿ ಇಲ್ಲಿ ನೀಡುತ್ತಿದೆ. 

ವಚನಗಳು ಪದ್ಯಭಾಗದ ಮೊದಲ ವಚನ ಅಲ್ಲಮಪ್ರಭು ರವರ ವಚನಗಳ ಸಂಪೂರ್ಣ ಹಾಗೂ ಸರಳ ಸಾರಾಂಶವನ್ನು ಇಲ್ಲಿ ನೀಡಲಾಗಿದ್ದು, ಇದು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೆರವಾಗಬಹುದು. ಇನ್ನು ಹೆಚ್ಚಿನ ಅಪ್ಡೇಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ಪ್ರತಿದಿನವೂ ಭೇಟಿ ನೀಡಿ.


ವಚನಕಾರ: ಅಲ್ಲಮಪ್ರಭು ಪರಿಚಯ (1160)
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಇವನ ಜನ್ಮಸ್ಥಳ, ಯೌವನದಲ್ಲಿಯೇ ವಿರಕ್ತಿಯತ್ತ ಮುಖ ಮಾಡಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಸೇವೆ ಮಾಡುತ್ತಿದ್ದನು. ಶಿವನ ಧ್ಯಾನದಲ್ಲಿ ಆಸಕ್ತನಾಗಿ, ಆಳವಾದ ಆತ್ಮಚಿಂತನೆ ನಡೆಸಿ, ತನ್ನ ಕಾಣೆಯನ್ನು ವಚನಗಳಲ್ಲಿ ಪ್ರಕಟಿಸಿದ್ದಾನೆ. ಅನುಭವ ಮಂಟಪದ ಅಧ್ಯಕ್ಷನಾಗಿದ್ದ. ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕನಾಗಿದ್ದನು.
ಅಲ್ಲಮಪ್ರಭುಗಳ ವಚನಗಳ ಆಶಯ
ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ, ವಿಚಾರಾತ್ಮಕ ಹಾಗೂ ವಿಮರ್ಶಾತ್ಮಕ ಅಂಶಗಳನ್ನೊಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕೊಂಡೊಯ್ಯುತ್ತವೆ. ಇಂತಹ ಸಂದರ್ಭದಲ್ಲಿ ಅವನ ವಾಕ್ಯಕ್ತಿ ಹಾಗೂ ಪದಪ್ರಯೋಗಗಳು ನೇರವಾಗಿರುತ್ತವೆ. ಹೇಳಲಿಚ್ಛಿಸಿದ್ದನ್ನು ಅಳುಕದೆ ಹೇಳುವುದು ಇವನ ವಚನಗಳ ವೈಶಿಷ್ಟ್ಯ ತಾನು ಪಡೆದ ಲೋಕಾನುಭವವನ್ನು ಇತರರಿಗೆ ಹಂಚುವ ಪ್ರಯತ್ನ ಮಾಡಿದ್ದಾನೆ. ದೇಹವನ್ನು ಬಂಡಿಗೆ ಹೋಲಿಸಿ ಅದನ್ನು ಆಳಲು ಪ್ರಯತ್ನ ಮಾಡುವ ಪಂಚೇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ. ಆಡಂಬರದ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸುವ ಮನೋಭಾವನೆಯ ಜೊತೆಗೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಖಂಡಿಸುವ ಪ್ರವೃತ್ತಿಯಿದೆ. ದೇವರನ್ನೇ ‌ಪ್ರಶ್ನಿಸುವ ಹಾಗೂ ನಾನೇ ದೇವರೆನ್ನುವ ಧೈರ್ಯ ಇವನ ವಚನಗಳಲ್ಲಿ ಕಂಡುಬರುತ್ತದೆ.
ಪದಕೋಶ
ಐವರು ಮಾನಿಸರು- ಪಂಚೇಂದ್ರಿಯಗಳು; ಅಚ್ಚು-ಆಧಾರ ಭಾಗ;
ಓಗರ-ಅನ್ನ;
ಸ್ವಾಯತ-ಧರಿಸುವಿಕೆ;
ಮೆಳೆ-ಪೊದೆ;
ಮೊಟ್ಟೆ-ಗಂಟು;
ಆರೈದು-ಹುಡುಕಾಡಿ;
ಕುಡಿತೆ-ಗುಟುಕು, ಬೊಗಸೆ.
ಅಲ್ಲಮಪ್ರಭುಗಳ ವಚನಗಳು ಮತ್ತು ಅವುಗಳ ಸಾರಾಂಶ
ಅಲ್ಲಮಪ್ರಭುಗಳ ವಚನಗಳು: ಅವುಗಳ ಸಾರಾಂಶವನ್ನು ಪ್ರತಿಯೊಂದು ವಚನಗಳನ್ನು ನೀಡಿ ಅವುಗಳ ಕೆಳಗೆ ಸಂಪೂರ್ಣ ಸಾರಾಂಶವನ್ನು ನೀಡಿದೆ.
ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಪೊಡೆವವರೈವರು ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದರಿಚ್ಚೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.
ಸಾರಾಂಶ: ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ‌ಚಾಲಕರು ಐದು ಜನ ಎಂದಿದ್ದಾನೆ. ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ, ಪಂಚೇಂದ್ರಿಯಗಳಾದ ಕಣ್ಣು‌ (ಸುಂದರವಾದುದನ್ನು ಕಾಣುವುದು), ಕಿವಿ (ನಮಗೆ ಹಿತವಾದುದನ್ನು ಕೇಳಲು ತವಕಿಸುವುದು), ಮೂಗು ‌(ಸುಗಂಧವನ್ನು ಆಘ್ರಾಣಿಸುವುದು), ನಾಲಿಗೆ (ರುಚಿಯಾದುದನ್ನು ಸವಿ ನೋಡುವುದು) ಮತ್ತು ಚರ್ಮ (ಹಿತವಾದುದನ್ನು ಸ್ಪರ್ಷಿಸುವುದು) ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎಂದಿದ್ದಾನೆ.
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೇ?
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು?
ಭಕ್ತನಾಗಬಲ್ಲನೇ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ, ಗುಹೇಶ್ವರಾ.
ಸಾರಾಂಶ: ಹೊಟ್ಟೆಯ ಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ‌ಧರಿಸಿದವ ಭಕ್ತನಾಗಬಲ್ಲನೆ? ಪೊದೆಯ ಮೇಲೆ ಇಟ್ಟ ಕಲ್ಲು ಲಿಂಗವಾಗಬಲ್ಲುದೆ? ಪೊದೆ ಭಕ್ತನಾಗಬಲ್ಲುದೇ, ಪೊದೆಯ ಮೇಲೆ ಕಲ್ಲು ಇಟ್ಟಾತ ಗುರುವಾಗಬಲ್ಲನೆ? ಈ ರೀತಿಯ ವೇಷಧಾರಿಗಳನ್ನು ಕಂಡು ನಾಚುವೆ ಎಂದು ಅಲ್ಲಮಪ್ರಭು ಹೇಳುತ್ತಾನೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ, ಗುಹೇಶ್ವರಾ.
ಸಾರಾಂಶ: ಯಾರು ಹಸಿದಾಗ ಅನ್ನವನ್ನು ಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವ ಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮ ಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.

ಕರ್ನಾಟಕ ಪ್ರಥಮ ಪಿಯುಸಿ ಅಲ್ಲಮ ಪ್ರಭುದೇವರ ವಚನಗಳು ಸಂಪೂರ್ಣ ನೋಟ್ಸ್

ಕರ್ನಾಟಕ ಪ್ರಥಮ ಪಿಯುಸಿ ಅಲ್ಲಮ ಪ್ರಭುದೇವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: ಗುಹೇಶ್ವರಾ ಎಂಬುದು ಅಲ್ಲಮ ಪ್ರಭುವಿನ ಅಂಕಿತವಾಗಿದೆ.

ಉತ್ತರ: ಕಾಲುಗಳನ್ನು ಗಾಲಿಗೆ ಹೋಲಿಸಲಾಗಿದೆ.

ಉತ್ತರ: ದೇಹವೆಂಬುದನ್ನು ತುಂಬಿದ ಬಂಡಿ ಎಂದು ಅಲ್ಲಮಪ್ರಭು ಕರೆದಿದ್ದಾನೆ.

ಉತ್ತರ: ಇಟ್ಟಕಲ್ಲು ಪೊದೆಯ ಮೇಲೆ ಸಿಕ್ಕರೆ ಲಿಂಗವೇ ಎಂದು ಕೇಳುತ್ತಾನೆ.

ಉತ್ತರ: ಹಸಿದಾಗ ಒಂದು ತುತ್ತು ಅನ್ನವನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ.

ಕರ್ನಾಟಕ ಪ್ರಥಮ ಪಿಯುಸಿ ಅಲ್ಲಮ ಪ್ರಭುದೇವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ: ಕಾಲುಗಳನ್ನು ಗಾಲಿಗೂ, ದೇಹವನ್ನು ತುಂಬಿದ ‌ಬಂಡಿಗೂ ಹೋಲಿಸಲಾಗಿದೆ. ಈ ಬಂಡಿಯನ್ನು ನಡೆಸುವವರು ಐದು ಜನ ಇಲ್ಲಿ ದೇಹದ ಪಂಚೇಂದ್ರಿಯಗಳೇ ಚಾಲಕರಾಗಿದ್ದಾರೆ. ಅವರ ಇಚ್ಛೆಯನ್ನು ಅರಿತು ಮುನ್ನಡೆದರೆ ಬಂಡಿಯ ಅಚ್ಚು ಮುರಿಯುತ್ತದೆ ಎಂದಿದ್ದಾನೆ.

ಉತ್ತರ: ಶಿವನ ಪ್ರತೀಕವಾದ ಲಿಂಗವನ್ನು ಧರಿಸಿ ದೃಢಭಕ್ತಿ ಇಲ್ಲದೆ ಆಡಂಬರದ ಭಕ್ತಿಯನ್ನು ತೋರಿಸುವ ಭಕ್ತನನ್ನು ಮತ್ತು ಅಲ್ಪಜ್ಞಾನದ ಗುರುವನ್ನು ಕಂಡರೆ ನಾಚುವೆನೆಂದು ಅಲ್ಲಮ ಹೇಳುವನು.

ಉತ್ತರ: ಹಸಿದಾಗ ಅನ್ನವನ್ನು ನೀಡುವ, ಬಾಯಾರಿದಾಗ‌ ನೀರನ್ನು ಕೊಡುವ ನಾನೇ ದೇವನು, ನೀನು ದೇವನೇ ಆಗಿದ್ದರೆ ನನ್ನನ್ನು ಏತಕ್ಕೆ ಸಲಹುತ್ತಿಲ್ಲ ಎಂದು ಅಲ್ಲಮಪ್ರಭು ದೇವರನ್ನೇ ಪ್ರಶ್ನಿಸುವ ಧೈರ್ಯ ತೋರಿದ್ದಾನೆ.

ಕರ್ನಾಟಕ ಪ್ರಥಮ ಪಿಯುಸಿ ಅಲ್ಲಮ ಪ್ರಭುದೇವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭದೊಡನೆ ವಿವರಿಸಿ:

ಉತ್ತರ:

ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ವಚನಕಾರ ಪಂಚೇಂದ್ರಿಯಗಳ ಕುರಿತಾಗಿ ವಿವರಿಸುವ ಸಂದರ್ಭ ಇದಾಗಿದೆ.

ವಿವರಣೆ : ಅಲ್ಲಮನು ಪಂಚೇಂದ್ರಿಯಗಳನ್ನೇ ದೇಹವೆಂಬ ಬಂಡಿಯ ಚಾಲಕರು ಎಂದು ಕರೆದಿದ್ದಾನೆ. ಪಂಚೇಂದ್ರಿಯಗಳು ತಮ್ಮ ಕಾರ್ಯಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ : ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂದು ವಿವರಿಸುವ ಸಂದರ್ಭ ಇದಾಗಿದೆ.

ವಿವರಣೆ: ಹಸಿವಾದಾಗ ಅನ್ನತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆಯ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ? ಎಂದೂ, ಲಿಂಗದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ? ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.

ಸಂದರ್ಭ: ವಚನಕಾರ ದೇವರನ್ನು ಪ್ರಶ್ನಿಸುವ ಸಂದರ್ಭ ಇದಾಗಿದೆ.

ವಿವರಣೆ : ಯಾರು ಹಸಿದಾಗ ಅನ್ನವನ್ನು ಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ‌ ಅವರು ದೈವಸಮಾನರು ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ, ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ? ಎಂದು ದೇವರನ್ನೇ ಕೇಳುತ್ತಾನೆ.

ಕರ್ನಾಟಕ ಪ್ರಥಮ ಪಿಯುಸಿ ಅಲ್ಲಮ ಪ್ರಭುದೇವರ ವಚನಗಳು : ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ

ಉತ್ತರ: ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾರೆ. ಈ ಐದು ಜನ ಯಾರೆಂದರೆ ನಾವು ಹೊಂದಿರುವ ಪಂಚೇಂದ್ರಿಯಗಳು. ಇವುಗಳಲ್ಲಿ ಕಣ್ಣು ಕಾಣುವ ಕಾಯಕವನ್ನು, ಕಿವಿ ಕೇಳುವ‌ ಗುಣವನ್ನು, ಮೂಗು ಸುಗಂಧವನ್ನು ಆಘ್ರಾಣಿಸುವ, ನಾಲಿಗೆ ಸವಿ ನೋಡುವ ಮತ್ತು ಚರ್ಮ ಹಿತವಾದುದನ್ನು ಸ್ಪರ್ಷಿಸುವ ಕಾರ್ಯಮಾಡುತ್ತವೆ. ಆದರೆ ಇವುಗಳನ್ನು ಅವಷ್ಟಕ್ಕೆ ಬಿಟ್ಟರೆ ನಮ್ಮ ದೇಹವೆಂಬ ಬಂಡಿಯ ಅಚ್ಚು ಮುರಿದು ಹೋಗುತ್ತದೆ. ಹಾಗಾಗಿ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸ ಬೇಕು, ಜೊತೆಗೆ ಭಗವಂತನ ಕೃಪೆಗೆ ಪಾತ್ರವಾಗಬೇಕು ಎಂದಿದ್ದಾರೆ.

ಉತ್ತರ: ಹಸಿವಾದಾಗ ಅನ್ನ ಅಲ್ಲಮಪ್ರಭು ವೇಷಧಾರಿಗಳನ್ನು ಕಂಡೊಡೆ ನಾಚುವೆ ಎಂದು ಹೇಳುತ್ತಾನೆ. ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗ ದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬುದು ಅಲ್ಲಮನ ಮನೋಭಾವ.

ಉತ್ತರ:

ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾರೆ. ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ, ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎಂದಿದ್ದಾರೆ.

ಹೊಟ್ಟೆಯ ಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯ ಮೇಲೆ ಇಟ್ಟಕಲ್ಲು ಲಿಂಗವಾಗಬಲ್ಲುದೆ? ಪೊದೆ ಭಕ್ತನಾಗಬಲ್ಲುದೇ, ಪೊದೆಯ ಮೇಲೆ ಕಲ್ಲು ಇಟ್ಟಾತ ಗುರುವಾಗಬಲ್ಲನೆ? ಈ ರೀತಿಯ ವೇಷಧಾರಿಗಳನ್ನು ಕಂಡು ನಾಚುವೆ ಎಂದು ಅಲ್ಲಮಪ್ರಭು ಹೇಳುತ್ತಾನೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗ ದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ. ಯಾರು ಹಸಿದಾಗ ಅನ್ನವನ್ನು ಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮ ಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area