ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

✴ ಟಿಇಟಿ ಗೆ ಸಂಬಂಧಿಂಸಿದಂತೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಮುಖ 50 ಪ್ರಶ್ನೆಗಳು ಮತ್ತು ಉತ್ತರಗಳು ✴

🌺 ಪ್ರಿಯ ಮಿತ್ರರೇ, 💐🙏

✴ ಟಿಇಟಿ ಗೆ ಸಂಬಂಧಿಂಸಿದಂತೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಮುಖ 50 ಪ್ರಶ್ನೆಗಳು ಮತ್ತು ಉತ್ತರಗಳು ✴

#ಶೇರ್_ಮಾಡಿ

ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?
A. ಪಾರ್ವತಿ
B. ಭಾವನಾ
C. ಚಂದನಾ
D. ಭಾರತಿ
D✅

ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?
A. ಅ.ನ.ಕೃ
B. ಜೆ.ಪಿ.ರಾಜರತ್ನಂ
C. ಬಿ.ಜಿ.ಎಲ್.ಸ್ವಾಮಿ
D. ರಾಶಿ
B✅
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ
A. ಕೆ.ಎಸ್.ನರಸಿಂಹಸ್ವಾಮಿ
B. ಚನ್ನವೀರ ಕಣವಿಯವರ
C. ತ.ರಾ.ಸು
D. ಡಿ.ವಿ.ಜಿ
D✅
ರನ್ನನ ಕುಲಕಸಬು ಯಾವುದು?
A. ಕಲ್ಲು ಒಡೆಯುವುದು
B. ವ್ಯಾಪಾರ ಮಾಡುವುದು
C. ಬಳೆ ಮಾರುವುದು
D. ಹಣ್ಣು ಮಾರುವುದು
C✅
ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದ ಕವಿ ಯಾರು ?
A. ಡಾ.ಡಿ.ಎಸ್.ಕರ್ಕಿ
B. ಈಶ್ವರ ಸಣಕಲ್ಲ
C. ಬಸವರಾಜ ಕಟ್ಟೀಮನಿ
D. ಬಸವರಾಜ ಬೆಟಗೇರಿ
B✅
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದ ದಾಸರು
A. ಕನಕದಾಸರು
B. ವ್ಯಾಸರಾಯರು
C. ತುಳಸಿದಾಸರು
D. ಪುರಂದರದಾಸರು
D✅
ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ
A. ರನ್ನ
B. ಕುವೆಂಪು
C. ತೀ.ನಂ.ಶ್ರೀ
D. ಕನಕದಾಸರು
C✅
ಹಸಿವಾದೊಡೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು?
A. ಅಕ್ಕಮಹಾದೇವಿ
B. ಅಲ್ಲಮಪ್ರಭು
C. ಅಂಡಯ್ಯ
D. ಅತ್ತಿಮಬ್ಬೆ
A ✅
ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?
A. 5
B. 10
C. 15
D. 20
B✅
ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು? ಎಂದು ಹೇಳಿದ ಕವಿ?
A. ಬಸವಣ್ಣನವರು
B. ಕೆ.ಎಸ್.ನಿಸಾರ ಅಹಮದ್
C. ಕನಕದಾಸರು
D. ಸರ್ವಜ್ಞ
D✅
ಕರುಣಾಳು ಬಾ ಬೆಳಕೇ ಮುಸುಕಿದಿ ನೀ ಮಬ್ಬಿನಲಿ ಎಂದ ಕವಿ?
A. ಬಿ.ಎಂ.ಶ್ರೀ
B. ತಿ.ನಂ.ಶ್ರೀ
C. ಕೆ.ಎಸ್.ನರಸಿಂಹಸ್ವಾಮಿ
D. ಕುವೆಂಪು
A✅
ಪಾಂಚಾಲಿ ಇದು ಯಾರ ಹೆಸರು?
A. ಸೀತೆ
B. ಮಂಡೋದರಿ
C. ದ್ರೌಪದಿ
D. ಅಹಲ್ಯ
C✅
ಗೀಗೀ ಪದದ ಮೇಳದಲ್ಲಿ ಎಷ್ಟು ಜನ ಗಾಯಕರಿರುತ್ತಾರೆ?
A. ಎರಡರಿಂದ ಮೂರು
B. ಮೂರರಿಂದ ನಾಲ್ಕು
C. ನಾಲ್ಕರಿಂದ ಐದು
D. ಐದರಿಂದ ಆರು
B✅
ದುಶ್ಯಂತನು ಶಾಕುಂತಲೆಗೆ ನೀಡಿದ್ದ ಉಂಗುರವು ಯಾವ ಪ್ರಾಣಿಯ ಹೊಟ್ಟೆಯಲ್ಲಿ ದೊರಕಿತು?
A. ಮೀನು
B. ಸಿಂಹ
C. ಹುಲಿ
D. ಚಿರತೆ
A✅
ಕಣ್ವ ಮಹಾಮುನಿಗಳ ಸಾಕು ಮಗಳು ಯಾರು?
A. ರಾಧೆ
B. ಗಿರಿಜಾ
C. ದ್ರಾಕ್ಷಾಯಣಿ
D. ಶಕುಂತಲೆ
D✅✅
"ಚಾಡಿಕೋರ" ಎಂಬುದು ------ ನಾಮ.
a) ತದ್ದಿತಾಂತ
b) ಕೃದಂತ
c) ಭಾವನಾಮ
d) ಕೃದಂತ ಭಾವ
A✅
ಹಗಲು ಕನಸು ಎಂಬುದು ಸಮಾಸ.
a) ಕರ್ಮಧಾರಯ
b) ಅಂಶಿ
c) ತತ್ಪುರುಷ
d) ದ್ವಿಗು
C✅
"ಕೆಳದುಟಿ" ಎಂಬುದು _ಸಮಾಸ.
a) ಅಂಶಿ
b) ದ್ವಂದ್ವ
c) ದ್ವಿಗು
d) ಕರ್ಮಧಾರೆಯ
A✅
"ಕಥೆಹೇಳು" ಎಂಬುದು _ ಸಮಾಸ.
a) ದ್ವಿಗು
b) ಬಹುವ್ರೀಹಿ
c) ಅಂಶಿ
d) ಕ್ರಿಯಾ
D✅
_ ಎಂಬುದು ಅವಧಾರಣೆಯಿಂದ ಕೂಡಿದ ಪದ.
a) ನಾನು
b) ನಾನೂ
c) ನಾನೇ
d) ನಾನೋ
C✅
ಆ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೆ ಹಿಂತಿರುಗಿದೆನು ಇಲ್ಲಿ ಕೂಡಲೇ ಎಂಬುದು.
a) ಅನುಸರ್ಗಾವ್ಯಯ
b) ಸಾಮಾನ್ಯಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
B✅
ಆಹಾ, ನೀರು ಅಮೃತದಂತಿದೆ ಇಲ್ಲಿ ಆಹಾ ಎಂಬುದು?
a) ಸಾಮಾನ್ಯಾವ್ಯಯ
b) ಅನುಸರ್ಗಾವ್ಯಯ
c) ಸಂಬಂಧ ಸೂಚಕಾವ್ಯಯ
d) ಭಾವಸೂಚಕಾವ್ಯಯ
C✅

ಈ ವಾಖ್ಯದಲ್ಲಿ
ಮಗು ಕುಣಿಯುತ್ತಾ ಬೀದಿಗೆ ಹೋಯಿತು ಇಲ್ಲಿ ಕುಣಿಯುತ್ತಾ -------- ಪದ.
a) ನಾಮಪದ
b) ಕ್ರಿಯಾಪದ
c) ಸಾಪೇಕ್ಷ ಕ್ರಿಯಾಪದ
d) ನಾಮ ಪ್ರಕೃತಿ
C✅
ನೀವು ಬುದ್ದಿವಂತರಾಗಿ ಬಾಳಿ ಇಲ್ಲಿ "ಬುದ್ದಿವಂತರಾಗಿ" ಎಂಬುದು ...
a) ನಾಮಪದ
b) ಕ್ರಿಯಾಪದ
c) ಕ್ರಿಯಾ ವಿಶೇಷಣ
d) ಭಾವನಾಮ
C✅
"ಅಂಥದು" ಎಂಬ ಪದ ವಾಚಕ.
a) ಸಂಖ್ಯಾವಾಚಕ
b) ಪರಿಮಾಣ ವಾಚಕ
c) ಪ್ರಕಾರ ವಾಚಕ
d) ದಿಗ್ವಾಚಕ
C✅
ಕೈಕಾಲು ಮೂಡಿತೋ ನಭಕೆ ಈ ವಾಕ್ಯದಲ್ಲಿರುವ ಅಲಂಕಾರ?
ಅ. ಉಪಮಾ
ಬ. ಉತ್ಪ್ರೇಕ್ಷೆ
ಕ. ಅರ್ಥಂತರನ್ಯಾಸ
ಡ. ದೃಷ್ಟಾಂತ
B✅
ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧನಾಗಿದ್ದಾನೆ?
ಅ. ಷಟ್ಪದಿ
ಬ. ರಗಳೆ
ಕ. ದಾಸರಪದ
ಡ. ತ್ರಿಪದಿ
D✅
ಮೈಯೆಲ್ಲಾ ಕಣ್ಣಾಗಿ ಎಂದರೆ?
ಅ.ದೇಹದಲ್ಲೆಲ್ಲಾ ಕಣ್ಣು
ಬ.ಬಹಳ ನಿದ್ದೆಗೆಟ್ಟುಕೊಂಡು
ಕ.ತುಂಬಾ ಜಾಗರೂಕನಾಗಿರು
ಡ.ಬಹಳ ಧೈರ್ಯವಾಗಿರು
C✅
ಕನ್ನಡಿತಿ ಎಂಬಲ್ಲಿ ....ಸಂಧಿ ಇದೆ?
ಅ.ಆಗಮ
ಬ.ಆದೇಶ
ಕ.ಲೋಪ
ಡ.ಸವರ್ಣದೀರ್ಘ
C✅
ಮಂದಾನಿಲ ರಗಳೆಯ ಲಕ್ಷಣ?
ಅ. ನಾಲ್ಕು ಮಾತ್ರೆಯ ನಾಲ್ಕು ಗಣಗಳು
ಬ. ನಾಲ್ಕು ಮಾತ್ರೆಯ ಐದು ಗಣಗಳು
ಕ. ಮೂರು ಮಾತ್ರೆಯ ಎಂಟು ಗಣಗಳು
ಡ. ಐದು ಮಾತ್ರೆಯ ನಾಲ್ಕು ಗಣಗಳು
A✅
ಬಹುವ್ರೀಹಿ ಸಮಾಸಕ್ಕೆ ನಿದರ್ಶನ?
ಅ.ಮುಂಬಾಗಿಲು
ಬ.ಅರಮನೆ
ಕ. ಕೆಂದಾವರೆ
ಡ.ನಾಲ್ಮೊಗ
D✅
ಮುಮ್ಮಡಿ ರಚನೆಯಲ್ಲಿನ ಮೂರು ರೂಪ?
ಅ. ಸಂಬಂಧಸೂಚಕ ವಿಶೇಷಣ
ಬ. ಗುಣಾತ್ಮಕ ವಿಶೇಷಣ
ಕ. ಸಂಖ್ಯಾ ವಿಶೇಷಣ
ಡ. ಪರಿಮಾಣಾತ್ಮಕ ವಿಶೇಷಣ
C✅
ಇದು ಭವಿಷ್ಯತ್ ಕಾಲದ ವಾಕ್ಯ?
ಅ.ಮಕ್ಕಳು ಶಾಲೆಗೆ ಹೋಗುವರು
ಬ.ಮಕ್ಕಳು ಶಾಲೆಗೆ ಹೋದರು
ಕ. ಮಕ್ಕಳು ಶಾಲೆಗೆ ಹೋಗುವವರು
ಡ.ಮಕ್ಕಳು ಶಾಲೆಗೆ ಹೋಗರು
A✅
ಙ,ಞ,ಣ,ನ,ಮ ಅಕ್ಷರಗಳಿಗೆ ಈ ಹೆಸರಿದೆ?
ಅ.ಅಲ್ಪ ಪ್ರಾಣಗಳು
ಬ.ಅನುನಾಸಿಕಗಳು
ಕ.ಮಹಾಪ್ರಾಣಗಳು
ಡ.ಸಂಧ್ಯಾಕ್ಷರಗಳು.
B✅
'ಅತ್ತಣಿಂ' ಇದು ಯಾವ ವಿಭಕ್ತಿಗೆ ಉದಾಹರಣೆ------?
ಎ)ಷಷ್ಠಿ
ಬಿ)ಪಂಚಮಿ
ಸಿ)ಚತುಥಿ೯
ಡಿ)ದ್ವಿತಿಯಾ
B✅
'ಆಧ್ಯಾತ್ಮ' ಸಂಧಿ ತಿಳಿಸಿ?
ಎ)ವೃದ್ಧಿಸಂಧಿ
ಬಿ)ಅನುನಾಸಿಕ ಸಂಧಿ
ಸಿ)ಶ್ಚುತ್ವಸಂಧಿ
ಡಿ)ಯಣ್ ಸಂಧಿ
D✅
'ವಿದ್ಯುಲೇಪನ' ಈ ಪದವನ್ನು ಬಿಡಿಸಿ ಬರೆದಾಗ------?
ಎ)ವಿದ್ಯುತ್ +ಲೇಪನ
ಬಿ)ವಿದ್ಯು+ಆಲೇಪನ
ಸಿ)ವಿದ್ಯುತ್+ ಉಲ್ಲೇಪನ
ಡಿ)ವಿದ್ಯು+ಲೇಪನ
A✅
ರಾಮನು ಮನೆಯಿಂದ ಹೊರಗೆ ಬಂದು ಕಾವೇರಿಯಲ್ಲಿ ಸ್ನಾನ ಮಾಡಿದ. ಈ ವಾಕ್ಯದಲ್ಲಿ ರೂಢನಾಮ ಯಾವುದು,?
ಎ)ರಾಮ
ಬಿ)ಮನೆ
ಸಿ)ಹೊರಗೆ
ಡಿ)ಸ್ನಾನ
B✅
ಈ ಕೆಳಗಿನ ಪದಗಳಲ್ಲಿ ಅನ್ವಥ೯ನಾಮ ಯಾವುದು?
ಎ)ಜಯಣ್ಣ
ಬಿ)ಪವ೯ತ
ಸಿ)ವಿದ್ವಾಂಸ
ಡಿ)ಭಾರತ
C✅
'ಮುಖ್ಯೋಪಾಧ್ಯಾಯರು' ತಮ್ಮ ಕಾಯ೯ವನ್ನು
ಯಶಸ್ವಿಯಾಗಿ ಪೂರೈಸಿದರು. ಈ ವಾಕ್ಯದಲ್ಲಿ ಆತ್ಮಾಥ೯ಕ ಸವ೯ನಾಮ-------?
ಎ)ಮುಖ್ಯೋಪಾಧ್ಯಾಯರು
ಬಿ)ತಮ್ಮ
ಸಿ)ಕಾಯ೯
ಡಿ)ಯಶಸ್ವಿ
B✅

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area