Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 10 March 2019

ಸೋಲಿಗೆ ಹೆದರದಿರಿ : ಟಿಇಟಿ ಟಿಪ್ಸ್

🌺 ಸೋಲಿಗೆ ಹೆದರದಿರಿ : ಟಿಇಟಿ ಟಿಪ್ಸ್  🌺

🌺 ಪ್ರಿಯ ಮಿತ್ರರೇ, 💐🙏

✳ ಈಗ ತಾನೇ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) 2018 ರ ಫಲಿತಾಂಶ ಪ್ರಕಟಗೊಂಡಿದೆ... ಈ ಪರೀಕ್ಷೆ ಕೆಲವು ಸ್ಪರ್ಧಾರ್ಥಿಗಳಿಗೆ ಸಂತಸ ತಂದುಕೊಟ್ಟಿದೆ. ಹಲವಾರು ನನ್ನ ಸನ್ಮಿತ್ರರು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿರುವ ಬಗ್ಗೆ ನನಗೆ ವೈಯಕ್ತಿಕವಾಗಿ ಸಂದೇಶದ ಮೂಲಕ ತಿಳಿಸಿದ್ದೀರಿ. ನಿಮ್ಮ ಈ ಯಶಸ್ಸನ್ನು ಕಂಡು ನನಗೆ ಅತೀವ ಸಂತಸವಾಗಿದೆ. ನೀವುಗಳು "ನಿಮ್ಮಿಂದ ಸ್ಪೂರ್ತಿ ಪಡೆದು ಅಧ್ಯಯನ ಮಾಡಿದ್ದಕ್ಕೆ ನಾವು ಅರ್ಹತೆ ಪಡೆದಿದ್ದೇವೆ ಸರ್" ಎಂಬಂತಹ ದೊಡ್ಡ ಮಾತುಗಳನ್ನಾಡಿದ್ದೀರಿ, ಆದರೆ ನನ್ನದೇನೂ ಇಲ್ಲ, ಅದು ತಮ್ಮ ದೊಡ್ಡಗುಣ ಹಾಗೂ ನಿಮ್ಮ ಸ್ವಂತ ಸಾಮರ್ಥ್ಯದ ಫಲವಾಗಿ ನೀವು ಅರ್ಹತೆ ಪಡೆದಿದ್ದೀರಿ ಅಷ್ಟೇ. ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ತಮಗೆಲ್ಲರಿಗೂ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಲಕು 💐🙏

ಇನ್ನು ಕೆಲವರಿಗೆ ನಿರಾಶೆಯನ್ನುಂಟು ಮಾಡಿದೆ. ಆದರೆ ಸ್ನೇಹಿತರೆ, ವಿಚಲಿತರಾಗದಿರಿ..!! ಇದೊಂದು ಸಾಮಾನ್ಯ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸೋತಿದ್ದೀರೆಂದರೆ ಜೀವನದಲ್ಲೇ ಸೋತಂತಲ್ಲ... ಇದು ಜೀವನವೆಂಬ ಬೃಹತ್ ಪುಸ್ತಕದಲ್ಲಿ ಬರುವ ಒಂದು ಪುಟದಲ್ಲಿನ ಪುಟ್ಟ ಸಾಲು ಎಂದು ಭಾವಿಸಿರಿ. ಇದರಿಂದಲೇ ವಿಚಲಿತರಾಗಿ ಮುಂದಿರುವ ಸುಂದರ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳದಿರೋಣ !! ಪ್ರತೀ ವರ್ಷವೂ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸುತ್ತಾರೆ... ಆದ್ದರಿಂದ ಈ ಬಾರಿ ಆದ ತಪ್ಪುಗಳನ್ನು ಮುಂದಿನ ಬಾರಿ ಮಾಡದೇ ನಿಷ್ಠೆ, ಶ್ರದ್ಧೆ, ಏಕಾಗ್ರತೆಯಿಂದ ಅಧ್ಯಯನ ನಡೆಸಿದರೆ ಟಿಇಟಿ ಪರೀಕ್ಷೆಯೇನು ಕಷ್ಟದ ಪರೀಕ್ಷೆಯಲ್ಲ...

⭕ಕೆಲವರು ಒಂದು ಆಥವಾ ಎರಡು ಅಂಕಗಳಲ್ಲಿ ವ್ಯತ್ಯಾಸವಾಗಿ ಅರ್ಹತೆಯಿಂದ ಹೊರಗುಳಿದಿರಬಹುದು. ಅದಕ್ಕೆ ಕಾರಣ : ⭕

⏩ ನೀವು ಈಗಾಗಲೇ ಯಾವುದೋ ಒಂದು ಸರಕಾರಿ, ಅರೆ ಸರಕಾರಿ ಅಥವಾ ಖಾಸಗಿ ಉದ್ಯೋಗಿ ಯಾಗಿರಬಹುದು.

⏩ ಉದ್ಯೋಗದ ಭರಾಟೆಯಲ್ಲಿ ಓದನ್ನು ನಿರ್ಲಕ್ಷಿಸಿರಬಹುದು.

⏩ ಓದಲು ಆಸಕ್ತಿ ಇಲ್ಲದೇ ಇರಬಹುದು.

⏩ ಶಿಕ್ಷಕ ವೃತ್ತಿಯನ್ನು ಬಿಟ್ಟು, ಇನ್ನಾವುದೋ ಬೇರೆ ಉದ್ಯೋಗಿಯಾಗಿರಬಹುದು.

⏩ ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯಿಂದ ಓದಲು ಆಗದೇ ಇರಬಹುದು.

⏩ ಅವಶ್ಯಕ ಅಧ್ಯಯನ ಸಾಮಗ್ರಿಗಳು ನಿಗದಿತ ಸಮಯದಲ್ಲಿ ದೊರಕದೇ ಇದ್ದಿರಬಹುದು.

⏩ ಅಧ್ಯಯನ ಮಾಡುವ ವಿಧಾನದ ಬಗ್ಗೆ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳದೇ ಇರಬಹುದು.

⏩ ಓದಿಗಾಗಿ ಸಮಯ ಮೀಸಲಿಡದೇ, ಸಮಯ   ಸಿಕ್ಕಾಗ ಓದಿರಬಹುದು.

⏩ ಓದಿದನ್ನು ಚರ್ಚಿಸದೇ, ಬರೆಯದೇ ಬರೀ ಓದಿ ಮುಗಿಸಿರಬಹುದು...

⏩ ಮಾನಸಿಕವಾಗಿ ಸಿದ್ಧರಾಗದೇ ಕೇವಲ ಔಪಚಾರಿಕವಾಗಿ ಓದಿರಬಹುದು.

⏩ ಓದಿಗೆ ಅಡೆತಡೆ ತರುವ ವೈಯಕ್ತಿಕ ಕಾರಣಗಳು.

ಇಷ್ಟೇ ಅಲ್ಲದೇ ಇನ್ನೂ ಹಲವಾರು ಕಾರಣಗಳು ನಿಮ್ಮ ಸೋಲಿಗೆ ಕಾರಣವಾಗಿರಬಹುದು.. ಅವೆಲ್ಲವುಗಳನ್ನು ಧಿಕ್ಕರಿಸಿ ಓದಿನತ್ತ ಗಮನಹರಿಸಿದ್ದೇ ಆದರೆ ನೀವುಗಳು ಮುಂಬರುವ ಪರೀಕ್ಷೆಯಲ್ಲಿ ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ. ಪರೀಕ್ಷೆಗೆ ಅರ್ಜಿ ಕರೆದ ನಂತರ ಓದಿಕೊಳ್ಳದೇ ಈಗಿನಿಂದಲೇ ಅಧ್ಯಯನ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. "ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪ್ರಯತ್ನ" ಮಾಡದೇ ಈಗಿನಿಂದಲೇ ಮುಂಬರುವ ಟಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿರಿ.

ಹಾಗಾದರೆ ಇನ್ನೇಕೆ ತಡ ಬನ್ನಿ ಟಿಇಟಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ತಿಳಿಯೋಣ

🌸✳ ಟಿಇಟಿ ಪರೀಕ್ಷಾ ಯಶಸ್ಸಿನ ಸೂತ್ರಗಳು ✳🌸

ಪ್ರಿಯ ಮಿತ್ರರೇ,

ಯಾವುದೇ ಪರೀಕ್ಷೆಯಾಗಲಿ ಸ್ಪರ್ಧಾರ್ಥಿಗಳು ಅರ್ಜಿ ಕರೆದ ನಂತರವೇ ಅಧ್ಯಯನದಲ್ಲಿ ತೊಡಗುತ್ತಾರೆ, ಹಾಗೂ ಪರೀಕ್ಷೆಗಳಲ್ಲಿ ಮುಖಭಂಗ ಅನುಭವಿಸುತ್ತಾರೆ.  ಆದ್ದರಿಂದ ಆ ಮನೋಭಾವನೆ ಮೊದಲು ನಮ್ಮಿಂದ ದೂರವಾಗಬೇಕು... ಸ್ಪರ್ಧಾತ್ಮಕ ಪರೀಕ್ಷೆಗಳು ಎಂದಮೇಲೆ ಸ್ಪರ್ಧೆ ಇದ್ದೇ ಇರುತ್ತದೆ.. ಆ ಸ್ಪರ್ಧೆಗಳನ್ನು ಎದುರಿಸಲು ಕೆಲವರು ಅವಶ್ಯಕ ತಾಲೀಮುಗಳನ್ನು ಮಾಡಿಯೇ ಇರುತ್ತಾರೆ. ಅಂದರೆ ಪೊಲೀಸ್ ಹುದ್ದೆಗೆ ಆಯ್ಕೆಯಾಗಬೇಕೆಂಬ ಅಭ್ಯರ್ಥಿಯೊಬ್ಬ ಮುಂಬರುವ ದೈಹಿಕ ತಾಳ್ವಿಕೆ (Physical Test) ಗೆ ಓಡುವುದು, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಇತ್ಯಾದಿಗಳೆಲ್ಲವನ್ನೂ ಆಟದ ಮೈದಾನದಲ್ಲಿ ತಯಾರಿ ನಡೆಸಿದ್ದರೆ ಮಾತ್ರ ಆತ ಮುಂದಿನ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪೊಲೀಸ್ ಹುದ್ದೆ ಪಡೆಯಬಲ್ಲ. ಅವನು ಪೊಲೀಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಬಂದು, ದೈಹಿಕ ಪರೀಕ್ಷೆಯಲ್ಲಿ ಫೇಲಾದರೆ ಅವನಿಗೆ ಉದ್ಯೋಗ ದೊರಕದು..

ಹಾಗೆಯೇ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳೂ ಕೂಡ ಸಾಕಷ್ಟು ತಯಾರಿಯನ್ನು ಅಪೇಕ್ಷಿಸುತ್ತವೆ. ಅಂತಹ ಸಂಪೂರ್ಣ ಹಾಗೂ ಸಮಗ್ರ ತಯಾರಿ ನಮ್ಮಲ್ಲಿದ್ದರೆ ಎಂತಹ ಪರೀಕ್ಷೆಯನ್ನಾದರೂ ಸಹ ಧೈರ್ಯದಿಂದ ಎದುರಿಸಬಹುದು. ನಮ್ಮ ಸಿದ್ಧತೆ ಹೇಗಿರಬೇಕೆಂದರೆ ಯಾವ ಪ್ರಶ್ನೆಯನ್ನು ಕೇಳಿದರೂ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರಬಹುದಾದ ಜ್ಞಾನ ನಮ್ಮಲ್ಲಿರಬೇಕು.

✳ ಹಾಗಾದರೆ ಟಿಇಟಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅರ್ಹತೆ ಪಡೆಯುವುದು ಹೇಗೆ?? ಅದಕ್ಕೇ ಇಲ್ಲಿದೆ ಉತ್ತರ 👉

▶ ಇಂದಿನಿಂದಲೇ ಮುಂದಿನ ವರ್ಷದ ಟಿಇಟಿ ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ.

▶ ಟಿಇಟಿ ಪರೀಕ್ಷೆಗೆ ನಿರ್ದಿಷ್ಟಪಡಿಸಿದ ಪಠ್ಯಕ್ರಮವನ್ನು ಮುದ್ರಿಸಿ ಇಟ್ಟುಕೊಂಡಿರಿ.

▶ ಪಠ್ಯಕ್ರಮದಲ್ಲಿ ತಿಳಿಸಿದ ವಿಷಯಗಳನುಸಾರ ಪಠ್ಯಪುಸ್ತಕಗಳನ್ನು ಸಂಗ್ರಹಿಸಿರಿ.

▶ ಟಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಸರಕಾರಿ ಪುಸ್ತಕಗಳನ್ನೇ ಅಧ್ಯಯನ ನಡೆಸಿರಿ.

▶ ಪರೀಕ್ಷೆಗೆ ಅರ್ಜಿ ಕರೆದ ನಂತರವೇ ಮಾರುಕಟ್ಟೆಗಳಲ್ಲಿ "ಟಿಇಟಿ ಕೈಪಿಡಿಗಳು" ಇತ್ಯಾದಿ ದಪ್ಪ ದಪ್ಪ ತಲೆದಿಂಬಿನ ಆಕಾರದ ಪುಸ್ತಕಗಳನ್ನು ಕೊಳ್ಳದಿರಿ, ಅವುಗಳನ್ನು ನೋಡಿದರೆ ಕೆಲವು ಬಾರಿ ನಿದ್ದೆಗೆ ಜಾರುವ ಸಂಭವವಿರುತ್ತದೆ.

▶ ಅಲ್ಲದೇ ಟಿಇಟಿ ಪರೀಕ್ಷೆಗೆ ಉಪಯುಕ್ತವೆನಿಸುವ ಬಹು ಆಯ್ಕೆ ಮಾದರಿ (Multiple Choice) ಪ್ರಶ್ನೋತ್ತರಗಳನ್ನು ಹಾಗೂ ಅಂತಹ ಕೈಪಿಡಿಗಳ ಸಹವಾಸಕ್ಕೆ ಹೋಗಬೇಡಿ.

ರಾಜ್ಯ ಶಿಕ್ಷಣ  ಸಂಶೋಧನೆ ಮತ್ತು ತರಬೇತಿ ಸಂಸ್ಥೆ (DSERT) ಅನುಮೋದಿಸಲ್ಪಟ್ಟ ಪಠ್ಯಪುಸ್ತಕಗಳನ್ನು ಮಾತ್ರ ಬಳಸಿರಿ.

ರಾಜ್ಯ ಸರಕಾರ ಪ್ರಕಟಿಸಿದ ಹಾಗೂ ಅನುಮೋದಿಸಿದ ಪುಸ್ತಕಗಳ ಅಧ್ಯಯನ ಅತೀ ಸೂಕ್ತ.

▶ ಟಿಇಟಿ ಪರೀಕ್ಷೆಗೆ ವಿವರಣಾತ್ಮಕ ವಿಷಯಗಳನ್ನು ಹೊಂದಿರುವ ವಿಸ್ತೃತ ಪಠ್ಯಪುಸ್ತಕಗಳನ್ನು ಓದುವುದು ಒಳಿತು.

▶ ಬಹು ಆಯ್ಕೆಯ ಪ್ರಶ್ನೋತ್ತರಗಳು ನಿಮ್ಮನ್ನು ಸುಲಭವಾಗಿಯೇ ಗೊಂದಲದಲ್ಲಿ ಸಿಲುಕಿಸಬಹುದು.

▶ ವಿವರಣಾತ್ಮಕ ಓದಿನ ನಂತರ ಕಡ್ಡಾಯವಾಗಿ ಪುನರ್ ಮನನ (Revision) ಮಾಡಿ.

▶ ಪುನರ್ ಮನನ ಮಾಡುತ್ತ ಓದಿರುವ ವಿಚಾರವನ್ನು ಪುಸ್ತಕ ಮುಚ್ಚಿಟ್ಟು ಒಂದು ನೋಟ್ ಬುಕ್ ನಲ್ಲಿ ಬರೆಯಿರಿ.

▶ ಒಂದು ಬಾರಿ ಬರೆಯುವುದು ಎರಡು ಬಾರಿ ಓದಿದ್ದಕ್ಕೆ ಸಮವೆಂದು ಹೇಳುತ್ತಾರೆ. ಇದರಿಂದ ಓದು ಮತ್ತಷ್ಟು ಗಟ್ಟಿಗೊಂಡು ಸ್ಮೃತಿ ಸಾಮರ್ಥ್ಯ ಕೂಡ ವೃದ್ಧಿಸುತ್ತದೆ.

▶ ಓದಿನ ಮಧ್ಯೆ ವಿಶ್ರಾಂತಿಗೂ ಕೂಡ ಸಮಯ ಮೀಸಲಿಡಿ.

▶ ಓದಿಗೆ ನಿರ್ದಿಷ್ಟ ಸಮಯವನ್ನು ಹೊಂದಿಸಿಕೊಂಡು ಅಧ್ಯಯನದಲ್ಲಿ ತೊಡಗಿರಿ.

▶ ಪ್ರಾತಃಕಾಲ ಅಂದರೆ ಬೆಳಿಗ್ಗೆ 3 ಗಂಟೆಯಿಂದ 6 ಗಂಟಯವರೆಗಿನ ಅವಧಿಯ ಸಮಯ. ಈ ಸಮಯದಲ್ಲಿ ಓದಿದರೆ ಉತ್ತಮ ಫಲಿತಾಂಶ ಕಾಣಬಹುದು.

▶ ಈಗಾಗಲೇ ಉದ್ಯೋಗದಲ್ಲಿದ್ದರೂ ಶಿಕ್ಷಕರಾಗಬೇಕೆಂಬ ಮಹೋನ್ನತ ಬಯಕೆಯಿದ್ದರೆ ಉದ್ಯೋಗದ ಜೊತೆಗೆ ಓದಿಗೂ ಸ್ವಲ್ಪ ಸಮಯ ಮೀಸಲಿಡಿ.

▶ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡಿರಿ.

▶ ಕಳೆದ ಬಾರಿ ಪರೀಕ್ಷೆಯ ಯಾವ ವಿಭಾಗಗಳಲ್ಲಿ ಕಡಿಮೆ ಅಂಕಗಳು ಬಂದಿವೆಯೋ ಅದೇ ವಿಭಾಗಗಳಿಗೆ ಹೆಚ್ಚಿನ ಒತ್ತು ಕೊಟ್ಟು ಅಧ್ಯಯನ ನಡೆಸುವುದು.

▶ ಓದುವಾಗ ಯಾವುದೇ ರೀತಿಯ ಗೊಂದಲ, ಅನುಮಾನಗಳಿಗೆ ಒಳಗಾಗದೇ ಓದುವುದು.

"Physically Present, Mentally Absent" ಆಗದೇ ಉತ್ತಮ ಓದಿಗೆ ಪ್ರೇರಕರಾಗಿ ಓದಬೇಕು.

▶ ಸದಾ ಜ್ಞಾನದಾಹಿಗಳಾಗಿದ್ದು ಉತ್ತಮ ಜ್ಞಾನ ಯಾವ ಮೂಲದಿಂದ ಬಂದರೂ ಅದನ್ನು ಸ್ವೀಕರಿಸಲು ಸಿದ್ಧರಾಗಿರಬೇಕು.

ಇಷ್ಟೆಲ್ಲ ಸಿದ್ಧತೆಗಳಾದರೆ ಟಿಇಟಿ ಪರೀಕ್ಷೆಯಲ್ಲಿ ಯಶಸ್ವಿಯಾದಂತೆಯೇ ಸರಿ. ಓದುವ ಹಂಬಲ, ಸಾಧಿಸುವ ಛಲ ನಮ್ಮಲ್ಲಿದ್ದರೆ ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಸ್ನೇಹಿತರೇ, ಸೋಲುಗಳಿಗೆ ಹೆದರದೇ, ಈಗ ಬಂದಿರುವ ಸೋಲನ್ನು ನಗುಮುಖದಿಂದಲೇ ಸ್ವಾಗತಿಸುತ್ತ, ನಗುಮುಖದಿಂಲೇ ಆ ಸೋಲಿಗೆ ಬುದ್ಧಿ ಕಲಿಸುವ ತಯಾರಿಗೆ ಈಗಿಂದಲೇ ತಯಾರಾಗಿ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ !!!

ಸರ್ವೇ ಜನಃ ಸುಖಿನೋ ಭವಂತು !!
ಲೋಕಾಸಮಸ್ತಾ ಸುಖಿನೋ ಭವಂತು !!!

⏬ ನಿಮ್ಮ ಪ್ರೀತಿಯ ⏬
ಶ್ರೀ ಪಿ. ಎಲ್. ಪವಾರ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads