ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

01-05-2019 ರ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು

🌺 ಪ್ರಿಯ ಮಿತ್ರರೇ 💐🙏

🌺 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ : 01-05-2019 ರ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು : ನಿಮಗಾಗಿ 🌺

1.  ಈ ಕೆಳಗಿನ ಯಾವ ದಿನದಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ?
1. ಮೇ-1
2. ಏಪ್ರಲ್-7     
3. ಏಪ್ರಲ್-8
4. ಏಪ್ರಲ್-10

ಸರಿಯಾದ ಉತ್ತರ : 1

ವಿವರಣೆ : 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಮಹತ್ವದ ಘಟ್ಟ. ಬಂಡವಾಳಶಾಹಿಗಳು ಅನಿರ್ದಿಷ್ಟ ಅವಧಿ ತನಕ ದುಡಿಸಿಕೊಳ್ಳುತ್ತಿದ್ದನ್ನು ವಿರೋಧಿಸಿ ಅಮೆರಿಕದ ಶಿಕಾಗೋ ನಗರದ ಹೇ ಮಾರ್ಕೆಟ್‌ನಲ್ಲಿ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದರು.ಹೋರಾಟ ತೀವ್ರ ಸ್ವರೂಪ ಪಡೆದಿದ್ದರಿಂದ ಪೊಲೀಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.ನೂರಾರು ಕಾರ್ಮಿಕರು ಮೃತಪಟ್ಟರು. ಇದನ್ನು ಲೆಕ್ಕಿಸದೆ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಚಾಲನೆಗೆ ತರಲಾಯಿತು. ಹೀಗೆ ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿಗಾಗಿ ಮೇ 1ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತದೆ.

🔴 ನಿರ್ಧಾರವಾಗಿದ್ದು ಯಾವಾಗ? 🔴

1889ರಲ್ಲಿ ಪ್ಯಾರಿಸ್‌ನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತಾರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ.

🔷 ಭಾರತದಲ್ಲಿ 🔷

ಭಾರತದಲ್ಲಿ ಮೊದಲು ಮೇ ದಿನವನ್ನು ಆಚರಿಸಿದ್ದು 1923ರಲ್ಲಿ, ಮದ್ರಾಸಿನಲ್ಲಿ, ಹಿಂದೂಸ್ತಾನ್ ಲೇಬರ್ ಕಿಸಾನ್ ಪಾರ್ಟಿಯ ಮುಖಂಡ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ 'ಮದ್ರಾಸ್ ಉಚ್ಚನ್ಯಾಯಾಲಯದ ಎದುರಿನಲ್ಲಿರುವ ಕಡಲದಂಡೆಯಲ್ಲಿ ಮತ್ತು ಟಿಫಿಕೇನ್ ಕಡಲದಂಡೆಯಲ್ಲಿ ಮೇ ದಿನವನ್ನು ಆಚರಿಸಲಾಯಿತು.

⭕ ಕಾಯಿದೆ, ಕಾನೂನುಗಳು ⭕

ಕಾರ್ಮಿಕರ ಕಲ್ಯಾಣಕ್ಕಾಗಿ ಆಯಾ ದೇಶಗಳು ಹಲವಾರು ಕಾನೂನು ಕಟ್ಟಳೆಗಳನ್ನು ರೂಪಿಸಿವೆ.ಕಾರ್ಮಿಕರಿಗೆ ತಕ್ಕ ಕೂಲಿ ದೂರಕಿಸಿಕೊಡುವುದು, ಕಾರ್ಮಿಕರು ಕೆಲಸ ನಿರ್ವಹಿಸಲು ಉದ್ಯೋಗದಾತರು ಉತ್ತಮ ವಾತಾವರಣ ಕಲ್ಪಿಸಿಕೊಡುವಂತೆ ಮಾಡುವುದು, ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದಾಗ ಅವರಿಗೆ ಧನಸಹಾಯ ಸೇರಿದಂತೆ ನಾನಾ ರೀತಿಯ ಸೌಲಭ್ಯ ದೊರಕಿಸಿಕೊಡುವುದು, ವಿಮಾ ಯೋಜನೆ ಜಾರಿ ಮಾಡುವುದು, ಉದ್ಯೋಗ ದಕ್ಷತೆಯನ್ನು ಹೆಚ್ಚಿಸಲು ಹೆಚ್ಚಿನ ಶಿಕ್ಷಣ ನೀಡುವುದು, ಅಪಘಾತಗಳಲ್ಲಿ ಮೃತಪಟ್ಟರೆ ಪರಿಹಾರ ಒದಗಿಸುವುದು ಹೀಗೆ ಹಲವಾರು ಕಾಯಿದೆ, ಕಾನೂನುಗಳು ಸರಕಾರ ಜಾರಿಗೆ ತಂದಿವೆ.

2.  ಸ್ಟಾರ್ಟಪ್‌ಬ್ಲಿಂಕ್ ಸಂಸ್ಥೆಯ ಸಮೀಕ್ಷೆಯಲ್ಲಿ  ಬೆಂಗಳೂರಿಗೆ ಎಷ್ಟನೇ ಸ್ಥಾನ ಲಬಿಸಿದೆ?
1. 11
2. 12
3. 13
4. 14

ಸರಿಯಾದ ಉತ್ತರ : 1

ವಿವರಣೆ : ಸ್ಟಾರ್ಟಪ್‌ಬ್ಲಿಂಕ್ ಸಂಸ್ಥೆಯ ಸಮೀಕ್ಷೆಯಲ್ಲಿ  ಬೆಂಗಳೂರಿಗೆ 11ನೇ ಸ್ಥಾನ.ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೊದಲ ಸ್ಥಾನ ಗಳಿಸಿದೆ.

3.  ಈ ಕೇಳಗಿನ ಯಾರಿಗೆ ಇಂಡಿಯನ್ ಆಯಿಲ್ ಮತ್ತು ಟೈಮ್ಸ್ ನೆಟ್‌ವರ್ಕ್ ಎಕ್ಸಲೆನ್ಸ್ ಮಹಿಳಾ ಸಾಧಕಿ ಪ್ರಶಸ್ತಿ ಲಭಿಸಿದೆ?
1. ಉಮಾಶ್ರೀ
2. ಟಿ.ಎಸ್.ಲತಾ    
3. ಅರುಂಧತಿನಾಗ್
4. ಯಾರು ಅಲ್ಲ

ಸರಿಯಾದ ಉತ್ತರ : 2

ವಿವರಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ ಆರ್‌ಟಿಸಿ) ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಟಿ.ಎಸ್.ಲತಾ ಅವರಿಗೆ ದೇಶದ ಲಾಜೆಸ್ಟಿಕ್ಸ್ ನಲ್ಲಿ ಪ್ರತಿಷ್ಠಿತ ಇಂಡಿಯನ್ ಆಯಿಲ್ ಮತ್ತು ಟೈಮ್ಸ್ ನೆಟ್‌ವರ್ಕ್ ಎಕ್ಸಲೆನ್ಸ್ ಮಹಿಳಾ ಸಾಧಕಿ ಪ್ರಶಸ್ತಿ ಲಭಿಸಿದೆ.

4.  ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯ ಮೂರ್ತಿಯನ್ನಾಗಿ ಈ ಕೇಳಗಿನ ಯಾರು ನೇಮಕ ಗೊಂಡಿದ್ದಾರೆ?
1. ಅಭಯ್ ಶ್ರೀನಿವಾಸ್ ಓಕಾ
2. ಎಲ್.ನಾರಾಯಣ್
3. ಅರುಂಧತಿನಾಗ್
4. ಯಾರು ಅಲ್ಲ

ಸರಿಯಾದ ಉತ್ತರ : 1

ವಿವರಣೆ : ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯ ಮೂರ್ತಿಯನ್ನಾಗಿ ಅಭಯ್ ಶ್ರೀನಿವಾಸ್ ಓಕಾ ಅವರು ನೇಮಕಕ್ಕೆ ರಾಷ್ಟ್ರಪತಿ ಅಂಕಿತ ನಿಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area