ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Specialist Cadre Officer Job In SBI

  ಭಾರತೀಯ ಸ್ಟೇಟ್‌ ಬ್ಯಾಂಕ್‌ ಸ್ಪೆಷಲಿಸ್ಟ್‌ ಆಫೀಸರ್ ನೇಮಕ : 100 ಹುದ್ದೆಗಳಿಗೆ ಅರ್ಜಿ ಆಹ್ವಾನ








ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭಸುದ್ದಿ...!!!

ಹೌದು. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 100 ವಿಶೇಷ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಮುಂಬೈನ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ (ಎಸ್‍ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ವಿಭಾಗದಲ್ಲಿನ ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮುಂಬೈನಲ್ಲಿ ನೇಮಕ ಮಾಡಲಾಗುವುದು. ಒಟ್ಟು ಹುದ್ದೆಗಳು 100.

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

🔯 ಹುದ್ದೆಗಳ ವಿವರ 🔯

🏵 ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್) – 40
🏵 ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್) – 60


🔮🔮🔮🔮🔮🔮🔮🔮🔮🔮🔮🔮🔮🔮🔮🔮🔮


🔯 ವಿದ್ಯಾರ್ಹತೆ 🔯

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲುಸಬಯಸುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್,  ಇನ್​ಫೋರ್ಮೇಷನ್​ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‍ನಲ್ಲಿ ಬಿಇ, ಬಿ.ಟೆಕ್, ಸೈಬರ್ ಸೆಕ್ಯುರಿಟಿ, ಇನ್​ಫೋರ್ಮೇಷನ್​ ಟೆಕ್ನಾಲಜಿಯಲ್ಲಿ ಎಂ.ಟೆಕ್, ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಸಿಎ/ ಎಂಎಸ್ಸಿ, ಎಂಎಸ್ಸಿ (ಐಟಿ) ಹುದ್ದೆಗೆ ಅನುಗುಣವಾಗಿ ವಿಶೇಷ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

🌺 ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು :

ನೇಮಕಾತಿಗಾಗಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಆನ್‍ಲೈನ್ ಲಿಖಿತ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಇಚ್ಛೆ ಅನುಸಾರ 3 ಪರೀಕ್ಷಾ ಕೇಂದ್ರಗಳನ್ನು ಗುರುತಿಸಬೇಕು. 

🌺 ಹುದ್ದೆಗಳ ವರ್ಗೀಕರಣ :

ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 44, ಎಸ್‍ಸಿಗೆ 15, ಎಸ್ಟಿಗೆ 7, ಇತರ ಹಿಂದುಳಿದ ವರ್ಗಕ್ಕೆ 25, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 9 ಸ್ಥಾನ ಮೀಸಲಿರಿಸಲಾಗಿದೆ.

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

🔴 ವಯೋಮಿತಿ :

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದಿನಾಂಕ: 31.10.2020 ಕ್ಕೆ ಅನ್ವಯಿಸುವಂತೆ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳು ಗರಿಷ್ಠ 28 ವರ್ಷ, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ  ಗರಿಷ್ಠ 33 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

🔴 ಆಯ್ಕೆ ಪ್ರಕ್ರಿಯೆ ಹೇಗೆ:

ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಿ, ಆನ್‍ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 


🔮🔮🔮🔮🔮🔮🔮🔮🔮🔮🔮🔮🔮🔮🔮🔮🔮


🔴 ಲಿಖಿತ ಪರೀಕ್ಷೆ ಯಾವಾಗ :

ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ 2 ಫೆಬ್ರುವರಿ 2021. ಲಿಖಿತ ಪರೀಕ್ಷೆಯಲ್ಲಿ ಜನರಲ್ ಆಪ್ಟಿಟ್ಯೂಡ್ ಹಾಗೂ ವೃತ್ತಿ ಸಂಬಂಧಿತ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

🔴 ಅರ್ಜಿ ಶುಲ್ಕ ಎಷ್ಟು :

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಪಾವತಿಸಬೇಕು.


🔮🔮🔮🔮🔮🔮🔮🔮🔮🔮🔮🔮🔮🔮🔮🔮🔮


🔴 ವೇತನ ಶ್ರೇಣಿ :

ಜೂನಿಯರ್ ಮ್ಯಾನೇಜ್‍ಮೆಂಟ್ ಗ್ರೇಡ್ ಸ್ಕೇಲ್ 1 ಅಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 23,700 ರೂ.ನಿಂದ 42,020 ರೂ. ವೇತನ ಪಡೆಯುತ್ತಾರೆ, ಮಿಡ್ಲ್ ಮ್ಯಾನೇಜ್‍ಮೆಂಟ್ ಗ್ರೇಡ್ ಸ್ಕೇಲ್ 2 ರ ಅಡಿಯಲ್ಲಿ ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 31,705 ರೂ.ನಿಂದ 45,950 ರೂ. ವೇತನ ಪಡೆಯುತ್ತಾರೆ.

ಅಲ್ಲದೇ , ಡಿಎ, ಮನೆ ಬಾಡಿಗೆ ಭತ್ಯೆ, ಸಿಸಿಎ‌, ವೈದ್ಯಕೀಯ ಭತ್ಯೆ ಸೇರಿದಂತೆ ವಿವಿಧ ಭತ್ಯೆಗಳನ್ನು ಸರಕಾರಿ ನಿಯಮದನ್ವಯ ನೀಡಲಾಗುತ್ತದೆ..


🔮🔮🔮🔮🔮🔮🔮🔮🔮🔮🔮🔮🔮🔮🔮🔮🔮


♒ ಪ್ರಮುಖ ದಿನಾಂಕಗಳು ♒

⏹ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ - 22-12-2020

⏹ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ - 11-01-2021

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

🔷 ಅರ್ಜಿ ಶುಲ್ಕ ಎಷ್ಟು? 

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.750/-

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಸೂಚನೆ : ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಸಹ ಪಾವತಿಸಬಹುದು.

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತರು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ https://www.sbi.co.in/ ಗೆ ಭೇಟಿ ನೀಡಿರಿ.


SBI ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್‌ :  https://www.sbi.co.in.in/














(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ


💥  ನಮ್ಮ ಎಲ್ಲಾ Social Media links 💥

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ...





















ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area