ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Revised height of World's highest peak Mount Everest 8848.86 meter

 ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ 8848.86 ಮೀಟರ್






ಸ್ನೇಹಿತರೆ, ಎಲ್ಲರಿಗೂ ನಮಸ್ಕಾರ..!!!

ಈಗಾಗಲೇ ವಿಶ್ವದ ಅಯೀ ಎತ್ತರದ ಪರ್ವತ ಶಿಖರ ಎಂಬ ಖ್ಯಾತಿ ಹೊಂದಿದ್ದ, ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ 8848.86 ಮೀಟರ್ ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಲ್ಲಿ ಹಾಗೂ ಚೀನಾ ದೇಶದ ವಿದೇಶಾಂಗ ಸಚಿವ ವಾಂಗ್ ಯಿ ಜಂಟಿಯಾಗಿ ಡಿಸೆಂಬರ್ 28, 2020 ರಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಿಸಿದರು. ಇದು ಸಾವಿರ 950ರಲ್ಲಿ ಭಾರತವು ನಡೆಸಿದ ಸಮೀಕ್ಷೆ ಗಿಂತ 86 ಸೆಂಟಿಮೀಟರ್ ಅಂದರೆ 2.8 ಅಡಿ ಅಧಿಕವಾಗಿದೆ ಪರಿಷ್ಕೃತ ವರದಿಯನ್ವಯ ಮೌಂಟ್ ಎವರೆಸ್ಟ್ ಸಮುದ್ರಮಟ್ಟದಿಂದ 8848.86 ಮೀಟರ್ ಅಂದರೆ 29032 ಅಡಿಗಳು ಎತ್ತರವಿದ್ದು, ವಿಶ್ವದ ಅತಿ ಎತ್ತರದ ಶಿಖರ ಎಂಬ ಕೀರ್ತಿಗೆ ಮತ್ತೊಮ್ಮೆ ಪಾತ್ರವಾಗಿದೆ.

ಸಮೀಕ್ಷೆ ನಡೆಸಲು ಕಾರಣವೇನು :-

2015ರಲ್ಲಿ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ನೇಪಾಳ ನಲುಗಿ ಹೋಗಿತ್ತು, ಈ ಭೂಕಂಪದಲ್ಲಿ 9000 ಜನರು ಮರಣ ಹೊಂದಿದ್ದರು, ಅಲ್ಲದೇ ಜ್ವಾಲಾಮುಖಿ ಮತ್ತು ನೈಸರ್ಗಿಕ ವಿಕೋಪಗಳಿಂದ ಹಿಮಾಲಯ ಶ್ರೇಣಿಯಲ್ಲಿ ಬದಲಾವಣೆ ಆಗಿರಬಹುದು ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದರು, ಆದ್ದರಿಂದ ನಡೆಸಲು ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಶಿಖರದ ಸಮೀಕ್ಷೆ ನಡೆಸಲು ನಿರ್ಧಾರ ಮಾಡಿತ್ತು. ಸದರಿ ಸಮೀಕ್ಷೆಯನ್ನು ನೇಪಾಳ ಮತ್ತು ಚೀನಾ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿವೆ.

ಈ ಹಿಂದಿನ ಹಲವು ಸಮೀಕ್ಷೆಗಳಲ್ಲಿದ್ದ ಮೌಂಟ್ ಎವರೆಸ್ಟ್ ಶಿಖರದ ಎತ್ತರ :-

1) ಭಾರತದ ಸಮೀಕ್ಷೆ :

ಸಾವಿರ 1955 ರಲ್ಲಿ ಭಾರತವು ನಡೆಸಿದ ಸಮೀಕ್ಷೆಯಂತೆ ಮೌಂಟ್ ಎವರೆಸ್ಟ್ ಶಿಖರದ ಎತ್ತರ 8848 ಮೀಟರ್ ಆಗಿತ್ತು.

2) ಚೀನಾದ ಸಮೀಕ್ಷೆ :

2005ರಲ್ಲಿ ಚೀನಾದ ಸರ್ವರ್ಗಳು ಮೌಂಟ್ ಎವರೆಸ್ಟ್ ಶಿಖರದ ಎತ್ತರವನ್ನು ಅಳೆದರು. ಅದು 8,844.43 ಮೀಟರ್ ಇದೆ ಎಂದು ಘೋಷಿಸಿದರು. ಇದಕ್ಕೂ ಮುನ್ನ 1975 ರಲ್ಲಿ ಪರ್ವತದ ಎತ್ತರ 8848.13 ಮೀಟರ್ ಇದೆ ಎಂದು ಚೀನಾ ಸರ್ಕಾರವು ಸಮೀಕ್ಷೆಯ ವರದಿಯಲ್ಲಿ ಘೋಷಿಸಿತ್ತು. ಅಲ್ಲದೆ ಚೀನಾದ ಸರ್ವೆಯರ್ ಗಳು ಪರ್ವತದ ನಿಖರ ಅಳತೆ ಕಂಡುಹಿಡಿಯಲು ಆರು ಬಾರಿ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ್ದರು. ಮೌಂಟ್ ಎವರೆಸ್ಟ್ ಶಿಖರದಿಂದ ನೇಪಾಳ-ಚೀನಾ ಗಡಿರೇಖೆ ಹೋಗಿದ್ದು ಉಭಯ ದೇಶಗಳು ಸಾವಿರ 1961 ರಲ್ಲಿ ಗಡಿ ವಿವಾದವನ್ನು ಇತ್ಯರ್ಥಪಡಿಸಿಕೊಂಡಿದ್ದರು.

ಜಗತ್ತಿನ ಅತಿ ಎತ್ತರದ ಶಿಖರಗಳು

1) ಒಂದು ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ :-

ಮೌಂಟ್ ಎವರೆಸ್ಟ್ ಶಿಖರ ಜಗತ್ತಿನ ಅತಿ ಎತ್ತರದ ಶಿಖರವಾಗಿದ್ದು, ಇದು ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಕಂಡುಬರುತ್ತದೆ. ಹಿಮಾಲಯದಲ್ಲಿ ಮಹಾಲಂಗೂರ್ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದಲ್ಲಿ 'ಸಾಗರಮಾತಾ' ಎಂದು ಕರೆದರೆ ಟಿಬೆಟ್ ನಲ್ಲಿ 'ಚ್ಯುಮೋಲುಂಗಮ್' ಎಂದು ಕರೆಯುತ್ತಾರೆ.

🌼 ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲಿಗರೆಂದರೆ ನ್ಯೂಜಿಲೆಂಡ್ ನ ಪರ್ವತಾರೋಹಿ ಎಡ್ಮಂಡ್ ಹಿಲರಿ ಮತ್ತು ನೇಪಾಳದ ಶೆರ್ಫಾ ತೇನ್ ಸಿಂಗ್ ರವರು 1953 ಮೇ 29 ರಂದು ಎವರೆಸ್ಟ್ ಶಿಖರವನ್ನು ಏರಿದರು.

🌼 ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಮಹಿಳೆ ಜಪಾನ ಜುಂಕೊ ತಬಾಯ್ (1975)

🌼 ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ (1984)

🌼 ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಪ್ರಪಂಚದ ಮೊದಲ ಅಂಗವಿಕಲ ಮಹಿಳೆ ಅರುಣಿಮಾ ಸಿನ್ಹಾ (2011) ಉತ್ತರ ಪ್ರದೇಶ.

2) ಜಗತ್ತಿನ ಎರಡನೇ ಅತಿ ಎತ್ತರದ ಶಿಖರ K2 :-

ಜಗತ್ತಿನ ಎರಡನೇ ಅತಿ ಎತ್ತರದ ಶಿಖರ K2 ಪರ್ವತವು ಭಾರತದಲ್ಲಿದೆ. ಈ ಪರ್ವತವನ್ನು ಗಾಡ್ವಿನ್ ಆಸ್ಟಿನ್ (Godwin Austin) ಎಂದು ಕೂಡ ಕರೆಯುತ್ತಾರೆ. ಇದು ಭಾರತದ ಅತಿ ಎತ್ತರವಾದ ಹಾಗೂ ಜಗತ್ತಿನ ಎರಡನೇ ಅತಿ ಎತ್ತರವಾದ ಶಿಖರವಾಗಿದೆ. ಹಿಮಾಲಯದ ಕಾರಕೋರಂ ಶ್ರೇಣಿಗಳಲ್ಲಿ ಇದು ಕಂಡುಬರುತ್ತಿದ್ದು, 8.611 ಮೀ. ಎತ್ತರವನ್ನು ಹೊಂದಿದೆ.

3) ಜಗತ್ತಿನ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗಾ :-

ಕಾಂಚನಜುಂಗಾ ಪರ್ವತವು ಭಾರತದ ಸಿಕ್ಕಿಂನಲ್ಲಿದೆ. ಹಿಮಾಲಯದ ಕಾಂಚನಜುಂಗಾ ಶ್ರೇಣಿಯಲ್ಲಿ ಕಂಡುಬರುವ ಈ ಶಿಖರದ ಎತ್ತರ ಸಮುದ್ರಮಟ್ಟದಿಂದ 8586 ಮೀಟರ್ ಇದೆ.

4) ಜಗತ್ತಿನ ನಾಲ್ಕನೇ ಅತಿ ಎತ್ತರದ ಶಿಖರ ಲೋಥ್ಸೆ :-

ಹಿಮಾಲಯದ ಮಹಾಲಂಗೂರು ಶ್ರೇಣಿಯಲ್ಲಿ ಕಂಡುಬರುವ ಈ ಶಿಖರವು ಸಮುದ್ರಮಟ್ಟದಿಂದ 8516 ಮೀಟರ್ ಎತ್ತರದಲ್ಲಿದೆ.

ಸ್ನೇಹಿತರೆ ನಿಮಗಿದು ತಿಳಿದಿರಲಿ : ಜಗತ್ತಿನ ಎರಡನೆಯ ಮೂರನೆಯ ಹಾಗೂ ನಾಲ್ಕನೆಯ ಅತಿ ಎತ್ತರದ ಪರ್ವತ ಶಿಖರಗಳು ಭಾರತದಲ್ಲಿರುವುದು ನಮ್ಮ ದೇಶದ ಹೆಮ್ಮೆ.



💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥








You May Also Download These Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Indian Economic BookPDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
FDA SDA Model Question Paper 2020 PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
10000+ Science Question Answers 411 pages PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2010-2017 Old Police Constable Question Papers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ



💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥





(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)

💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥

::ನಮ್ಮ ಎಲ್ಲಾ Social Media Links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ...


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area