ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

29 March 2021 Current Affairs || Daily Current Affairs 2021

   

29 ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು



ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!!

ಪ್ರಚಲಿತ ವಿದ್ಯಮಾನಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಪ್ರಚಲಿತ ವಿದ್ಯಮಾನಗಳ ಜ್ಞಾನ ನಮ್ಮನ್ನ ಎಂತಹದೇ ಪರೀಕ್ಷೆಗಳಲ್ಲಿಯೂ ಅತೀ ಹೆಚ್ಚು ಅಂಕಗಳನ್ನು ತೆಗೆಯುವಲ್ಲಿ ಗಣನೀಯ ಪ್ರಮಾಣದ ಪಾಲುದಾರಿಕೆಯನ್ನು ಹೊಂದಿವೆ. ಅದಕ್ಕೆಂದೇ www.edutubekannada.com ತಂಡವು ಪ್ರತಿದಿನದ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದೆ. 


ಪ್ರತಿ ದಿನದ ಪ್ರಚಲಿತ ವಿದ್ಯಮಾನಗಳು, ಮಾಸಿಕ ಪ್ರಚಲಿತ ವಿದ್ಯಮಾನಗಳು ಹಾಗೂ ವಾರ್ಷಿಕ ಪ್ರಚಲಿತ ವಿದ್ಯಮಾನಗಳನ್ನು ಪ್ರತಿದಿನವೂ ನಮ್ಮ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಿರುತ್ತೇವೆ. ದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ ಪಡೆಯಲು ನಮ್ಮ ವೆಬ್‌ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ..!!!


🏵🏵🏵🏵🏵🏵🏵🏵🏵🏵🏵🏵🏵


ಈ ಕೆಳಗೆ ದಿನಾಂಕ : 29 ನೇ ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಚರ್ಚಿಸಲಾಗಿದೆ‌.

29th March 2021 Current Affairs,

29th March 2021 Current Affairs Quiz,

29th March 2021 Current Affairs Daily Current Affairs, 




29th march 2021 Current Affairs

01. ಐಸೋಬಾರ್ ಇಂಡಿಯಾ ಮತ್ತು ಮಾರ್ಕ್ಸ್ & ಸ್ಪೆನ್ಸರ್ ಇತ್ತೀಚೆಗೆ ಯಾವ ರೋಗದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಿದೆ.?
A) ಏಡ್ಸ್ 
B) ಸ್ತನ ಕ್ಯಾನ್ಸರ್
C) ಕ್ಷಯರೋಗ
D) ಕೊರೋನಾ ವೈರಸ್

ಸರಿಯಾದ ಉತ್ತರ : B) ಸ್ತನ ಕ್ಯಾನ್ಸರ್


02. ನಾಸಾದ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಯಾವ ಗ್ರಹದ ಮೇಲೆ ಹಾದುಹೋಗುವ ಭೂಮಿಯ ಮೇಲಿರುವಂತಹ ಮೋಡಗಳ ಅದ್ಭುತ ವೀಡಿಯೋ ತುಣುಕುಗಳನ್ನು ಕಳುಹಿಸಿದೆ.?
A) ಮಂಗಳ
B) ಬುಧ
C) ಶುಕ್ರ
D) ಶನಿ

ಸರಿಯಾದ ಉತ್ತರ : A) ಮಂಗಳ

ವಿವರಣೆ : 

2012 ರಲ್ಲಿ ಮಂಗಳ ಗ್ರಹದ ಮೇಲೆ ಇಳಿದ ನಾಸಾದ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಮಂಗಳ ಗ್ರಹದ ಮೇಲಿರುವಂತಹ ಮೋಡಗಳ ವೀಡಿಯೋ ತುಣುಕುಗಳನ್ನು ಕಳುಹಿಸಿದೆ.


03. ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ (ಐಪಿ) ಸೂಚ್ಯಂಕದ ವಾರ್ಷಿಕ ಆವೃತ್ತಿಯಲ್ಲಿ‌ಭಾರತ ಎಷ್ಟನೇ ಸ್ಥಾನ ಪಡೆದಿದೆ.?
A) 20 ನೇ ಸ್ಥಾನ
B) 35 ನೇ ಸ್ಥಾನ
C) 40 ನೇ ಸ್ಥಾನ
D) 45 ನೇ ಸ್ಥಾನ

ಸರಿಯಾದ ಉತ್ತರ : C) 40 ನೇ ಸ್ಥಾನ

ವಿವರಣೆ : 
ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ಗ್ಲೋಬಲ್ ಇನ್ನೋವೇಶನ್ ಪಾಲಿಸಿ ಸೆಂಟರ್ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕದ ವಾರ್ಷಿಕ ಆವೃತ್ತಿಯಲ್ಲಿ ಭಾರತವು 40 ನೇ ಸ್ಥಾನದಲ್ಲಿದೆ.


🏵🏵🏵🏵🏵🏵🏵🏵🏵🏵🏵🏵🏵

04. ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ಕೆ. ವಿಜಯರಾಘವನ್ ಅವರ ಅಧಿಕಾರವಧಿಯನ್ನು ಎಷ್ಟು ವರ್ಷಗಳವರೆಗೆ ವಿಸ್ತರಿಸಿದೆ.?
A) 2 ವರ್ಷ
B) 3 ವರ್ಷ
C) 4 ವರ್ಷ
D) 1 ವರ್ಷ

ಸರಿಯಾದ ಉತ್ತರ : D) 1 ವರ್ಷ

ವಿವರಣೆ :

2018 ರಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿಯಾಗಿ ನಿವೃತ್ತಿಯಾದ ನಂತರ ಕೆ. ಕೆ. ವಿಜಯರಾಘವನ್ ಅವರನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಈ ಒಪ್ಪಂದದ ಪ್ರಕಾರ ಏಪ್ರಿಲ್ 02 ರಂದು ಅವರ ಅಧಿಕಾರಾವಧಿ ಮುಕ್ತಾಯವಾಗುವುದಿತ್ತು. ಈಗ ಅವರ ಅಧಿಕಾರಾವಧಿಯನ್ನು ಮತ್ತೆ 01 ವರ್ಷದ ವರೆಗೆ ವಿಸ್ತರಿಸಲಾಗಿದೆ.


05. WWE ಪ್ರಕಾರ ಈ ಕೆಳಗಿನ ಯಾವ ಭಾರತೀಯ ಕುಸ್ತಿಪಟುವನ್ನು 'ಹಾಲ್ ಆಫ್ ಫೇಮ್ 2021' ಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ.?
A) ಸುಶೀಲ್ ಕುಮಾರ್
B) ದಿಲೀಪ್ ಸಿಂಗ್ ರಾಣಾ
C) ಗೀತಾ ಫೋಗಟ್
D) ಬಬಿತಾ ಫೋಗಟ್

ಸರಿಯಾದ ಉತ್ತರ : B) ದಿಲೀಪ್ ಸಿಂಗ್ ರಾಣಾ

ವಿವರಣೆ :

ಭಾರತೀಯ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಅಕಾ ದಿ ಗ್ರೇಟ್ ಖಲಿಯನ್ನು ಇತ್ತೀಚೆಗೆ ಹಾಲ್ ಆಫ್ ಫೇಮ್ 2021 ಗೆ ಪ್ರವೇಶಿಸಲು ಘೋಷಿಸಲಾಗಿದೆ

🏵🏵🏵🏵🏵🏵🏵🏵🏵🏵🏵🏵🏵

06. 'Earth Hour Day' ಯಾವ ದಿನದಂದು ಆಚರಿಸಲಾಗುತ್ತದೆ.
A) ಮಾರ್ಚ್ 25
B) ಮಾರ್ಚ್ 28
C) ಮಾರ್ಚ್ 27
D) ಮಾರ್ಚ್ 29

ಸರಿಯಾದ ಉತ್ತರ : C) ಮಾರ್ಚ್ 27




07. ವಿಶ್ವ ರಂಗಭೂಮಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
A) ಮಾರ್ಚ್ 28
B) ಮಾರ್ಚ್ 25
C) ಮಾರ್ಚ್ 29
D) ಮಾರ್ಚ್ 27

ಸರಿಯಾದ ಉತ್ತರ : D) ಮಾರ್ಚ್ 27

🏵🏵🏵🏵🏵🏵🏵🏵🏵🏵🏵🏵🏵


08. 'ಕೈಗೆಟಕುವ ಬಾಡಿಗೆ ವಸತಿ ಯೋಜನೆ' ಯನ್ನು ಪ್ರಾರಂಭಿಸುವುದಾಗಿ ಇತ್ತೀಚೆಗೆ ಯಾವ ರಾಜ್ಯ ಸರಕಾರ ಘೋಷಿಸಿದೆ?
A) ಕರ್ನಾಟಕ
B) ಒಡಿಶಾ
C) ಉತ್ತರಪ್ರದೇಶ
D) ಕರ್ನಾಟಕ

ಸರಿಯಾದ ಉತ್ತರ : C) ಉತ್ತರಪ್ರದೇಶ


09. ಇತ್ತೀಚೆಗೆ ನಿಧನರಾದ ಲಕ್ಷ್ಮಿಪ್ರಿಯ ಮೋಹಪಾತ್ರ ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು.?
A) ಲೇಖಕಿ
B) ನರ್ತಕಿ
C) ಗಾಯಕಿ
D) ನಟಿ

ಸರಿಯಾದ ಉತ್ತರ : B) ನರ್ತಕಿ

10. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಯಾವ ದೇಶದ ಯುವಕರಿಗೆ ಸುವರ್ಣಮಹೋತ್ಸವ ವಿದ್ಯಾರ್ಥಿವೇತನವನ್ನು ಘೋಷಿಸಿದ್ದಾರೆ.?
A) ನೇಪಾಳ
B) ಭೂತಾನ್
C) ಚೀನಾ
D) ಬಾಂಗ್ಲಾದೇಶ

ಸರಿಯಾದ ಉತ್ತರ : D) ಬಾಂಗ್ಲಾದೇಶ


11. ಯಾವ ದೇಶವು ಇತ್ತೀಚೆಗೆ 'Shaheen-1A' ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು.?
A) ಪಾಕಿಸ್ತಾನ
B) ಅಫ್ಘಾನಿಸ್ತಾನ
C) ಚೀನಾ
D) ಬಾಂಗ್ಲಾದೇಶ

ಸರಿಯಾದ ಉತ್ತರ : A) ಪಾಕಿಸ್ತಾನ

🏵🏵🏵🏵🏵🏵🏵🏵🏵🏵🏵🏵🏵

12. ಇತ್ತೀಚೆಗೆ ಮಹಿಂದ್ರ ಮತ್ತು ಮಹಿಂದ್ರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ನೇಮಕಗೊಂಡವರು ಯಾರು?
A) ಸುಮಂತ್ ಭೂಷಣ್
B) ಅನಿಶ್ ಶಾ
C) ಸಂಜೀವ್ ಕುಮಾರ್
D) ಅಮಿತ್ ಗೋಯಲ್

ಸರಿಯಾದ ಉತ್ತರ : B) ಅನಿಶ್ ಶಾ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area