ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ 2 ನೇ ರಾಜ್ಯ ಮತ್ತು CAIR ಇರುವ ಸ್ಥಳದ ಸಂಪೂರ್ಣ ವಿವರಣೆ A complete description of the location of CAIR, the 2nd largest gold producing state in India

ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ 2 ನೇ ರಾಜ್ಯ ಮತ್ತು CAIR ಇರುವ ಸ್ಥಳ ಸಂಪೂರ್ಣ ವಿವರಣೆ


ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ 2 ನೇ ರಾಜ್ಯ ಮತ್ತು CAIR ಇರುವ ಸ್ಥಳದ ಸಂಪೂರ್ಣ ವಿವರಣೆ A complete description of the location of CAIR, the 2nd largest gold producing state in India




A complete description of the location of CAIR, the 2nd largest gold producing state in India

UPSC, KPSC, IAS, KAS, FDA, SDA, PSI, PDO, TEat, CET, ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭಾರತದ ಸಂವಿಧಾನದ ಪ್ರಸ್ತಾವನೆ ಮತ್ತು ರಾಜ್ಯ ನಿರ್ದೇಶಕ ತತ್ವಗಳ ಸಂಪೂರ್ಣ ಹಾಗೂ ಸಮಗ್ರ ವಿವರಣೆ. 


ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ಪ್ರಶ್ನೆಗಳು ಮತ್ತು ಉತ್ತರಗಳು.

Complete details of Indian Constitution Preamble and Directive Principles of state policy for All Competitive Exams like UPSC IAS IPS KPSC KAS FDA SDA TET CET PSI PDO Police constable



3) ಕರ್ನಾಟಕವನ್ನು ಬಿಟ್ಟು ಈ ಕೆಳಗಿನ ಯಾವ ರಾಜ್ಯವು ಭಾರತದಲ್ಲಿ ಚಿನ್ನವನ್ನು ಉತ್ಪಾದಿಸುವ ವರದಿ ಮಾಡಿದೆ?

ಎ) ಒರಿಸ್ಸಾ

ಬಿ) ಜಾರ್ಖಂಡ್

ಸಿ) ರಾಜಸ್ಥಾನ

ಡಿ) ಆಂಧ್ರಪ್ರದೇಶ


ಸರಿಯಾದ ಉತ್ತರ: ಡಿ) ಆಂಧ್ರಪ್ರದೇಶ


ವಿವರಣೆ


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಚಿನ್ನದ ಕುರಿತಾದ ಮಾಹಿತಿ.


  • ಚಿನ್ನವು ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುತ್ತದೆ.
  • ಚಿನ್ನ ಮಣ್ಣು ದೈವ ಲೋಹ ಎನ್ನುವರು.
  • ನೂತನ ಶಿಲಾಯುಗದ ಮಾನವ ಭೂಮಿಯ ಮೇಲೆ ಮೊಟ್ಟ ಮೊದಲು ಚಿನ್ನವನ್ನು ನೋಡಿದನು.
  • ಭಾರತದಲ್ಲಿ ಚಿನ್ನದ ನಾಣ್ಯ ಹೊರಡಿಸಿದ ಮೊದಲ ಮನೆತನ ಕುಶಾನರು.
  • ಕರ್ನಾಟಕ ರಾಜ್ಯವನ್ನು ಚಿನ್ನದ ನಾಡು ಗಂಧದ ಬೀಡು ಕಾಫಿಯನ್ನು ರೇಷ್ಮೆ ಆಗುವುದು ಎಂದು ಕರೆಯಲಾಗುತ್ತದೆ.
  • ಪ್ರಪಂಚದಲ್ಲಿಯೇ ಅತಿ ಆಳವಾದ ಚಿನ್ನದ ಗಣಿ ಕೆಜಿಎಫ್ ನ ಚಾಂಪಿಯನ್ ರೀಫ್ ಆಗಿದೆ.
  • KGF : Kolar Gold Feild
  • ಟೈಲರ್ ಒಪ್ಪಂದ : 1881 ರಲ್ಲಿ ಮೈಸೂರಿನ ಮೊದಲ ದಿವಾನರಾಗಿದ್ದ ಸಿ. ರಂಗಾಚಾರ್ಲು ಹಾಗೂ ಜಾನ್ ಟೈಲರ್ ನಡುವೆ ಕೆಜಿಎಫ್ ನ ಚಿನ್ನದ ಉತ್ಪಾದನೆಗೆ ಸಂಬಂಧಿಸಿದಂತೆ ನಡೆದ ಒಪ್ಪಂದವೇ ಟೈಲರ್ ಒಪ್ಪಂದ.
  • ಕೆಜಿಎಫ್ ನಿಂದ ಚಿನ್ನ ತೆಗೆಯಲು ಆರಂಭಿಸಿದ್ದು : 1885 ರಲ್ಲಿ
  • ಕೆಜಿಎಫ್ ಗೆ ವಿದ್ಯುತ್ ಸೌಕರ್ಯ ಒದಗಿಸುವ ಉದ್ದೇಶದಿಂದ ಕ್ರಿ.ಶ 1902 ರಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ಶಿವನಸಮುದ್ರ ಎಂಬಲ್ಲಿ ಕಾವೇರಿ ನದಿಯಲ್ಲಿ ಜಲವಿದ್ಯುತ್ ಉತ್ಪಾದನೆಯನ್ನು ಮಾಡಲಾಯಿತು. ಇದು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆಯಾಗಿದೆ.
  • ಗದಗಿನ ಕಪ್ಪತಗುಡ್ಡದ ಬೆಣಚುಕಲ್ಲಿನಲ್ಲಿ ಎಳೆಗಳ ರೂಪದಲ್ಲಿ ಚಿನ್ನ ಸಿಗುತ್ತದೆ.

ಚಿನ್ನದ ಕುರಿತಾದ ಸಂಪೂರ್ಣ ಮಾಹಿತಿ


  • ಚಿನ್ನ ಒಂದು ಮೃದುವಾದ ಲೋಹವಾಗಿದೆ ತಾಂತವತೆ ಮತ್ತು ಪತ್ರಶೀಲತೆಯನ್ನು ಹೊಂದಿದೆ.
  • ಚಿನ್ನದ ಶುದ್ಧತೆಯನ್ನು ಕ್ಯಾರೆಟ್ ನಲ್ಲಿ ಅಳೆಯಲಾಗುತ್ತದೆ.
  • ಶುದ್ಧ ಚಿನ್ನವು 24 ಕ್ಯಾರೆಟ್ ಆಗಿದ್ದು ಆಭರಣಕ್ಕೆ ಬಳಸುವ ಚಿನ್ನವು 22 ಕ್ಯಾರೆಟ್ ಆಗಿರುತ್ತದೆ.
  • ಲ್ಯಾಟಿನ್ ಭಾಷೆಯಲ್ಲಿ ಚಿನ್ನವನ್ನು Aurrum ಎನ್ನುವರು.
  • ಚಿನ್ನದ ಪರಮಾಣು ಸಂಖ್ಯೆ 79.
  • ಚಿನ್ನದ ಸಂಕೇತ Au
  • ಚಿನ್ನವು ಸೈನೈಡ್ ನಲ್ಲಿ ಕರಗುತ್ತದೆ, ಚಿನ್ನವು ನೈಟ್ರಿಕ್ ಆಮ್ಲದಲ್ಲಿ ಕರಗುವುದಿಲ್ಲ. ಚಿನ್ನವನ್ನು ಕರಗಿಸಲು ದ್ರವರಾಜ ವನ್ನು ಬಳಸಲಾಗುತ್ತದೆ.
  • ಚಿನ್ನವನ್ನು ಕರಗಿಸುವ ದ್ರವರಾಜ ಅಂದರೆ (ಅಕ್ವರೇಜಿಯಾ)ವು ನೈಟ್ರೋ ಹೈಡ್ರೋಕ್ಲೋರಿಕ್ ಆಮ್ಲ ವಾಗಿದ್ದು, ಅಕ್ವರೇಜಿಯಾವು 1 ಪ್ರಮಾಣದ ನೈಟ್ರಿಕ್ ಆಮ್ಲ ಮತ್ತು 3 ಪ್ರಮಾಣದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊಂದಿರುತ್ತದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ


  • ಸೆಣಬನ್ನು ಚಿನ್ನದ ಎಳೆ ಎನ್ನಲಾಗುತ್ತದೆ.
  • ಚಿನ್ನದ ಹುಡುಗಿ ಪಿ.ಟಿ ಉಷಾ (ಕೇರಳ)
  • ಚಿನ್ನದ ಬೂಟು ಫುಟ್ಬಾಲ್ ಕ್ರೀಡೆಯಲ್ಲಿ ಕೊಡುವರು.
  • ಚಿನ್ನಕ್ಕೆ ಗಟ್ಟಿತನ ಬರಲು 2% ತಾಮ್ರವನ್ನು ಬೆರೆಸುತ್ತಾರೆ.
  • ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುತ್ತಿರುವುದು ರಾಯಚೂರಿನ ಹಟ್ಟಿ ಗ್ರಾಮ.
  • ರಾಯಚೂರಿನ ಹಟ್ಟಿ ಗ್ರಾಮದ ನಂತರ ಭಾರತದಲ್ಲಿ ಹೆಚ್ಚು ಚಿನ್ನವನ್ನು ಉತ್ಪಾದಿಸುವುದು ಆಂಧ್ರಪ್ರದೇಶದ ರಾಮಗಿರ.
  • ಪ್ರಪಂಚದಲ್ಲಿಯೇ ಚಿನ್ನಕ್ಕೆ ಪ್ರಸಿದ್ಧಿ ಪಡೆದ ಸ್ಥಳ ವಿಟ್ ವಾಟರ್ ಲ್ಯಾಂಡ್.
  • ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಜಮಾ ಮಾಡಿ ಇಟ್ಟುಕೊಂಡ ದೇಶ ಅಮೆರಿಕ.
  • ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಬಳಸುವ ದೇಶ ಭಾರತ.
  • 50 ವರ್ಷದ ಆಚರಣೆಗೆ ಚಿನ್ನದ ಅಥವಾ ಸುವರ್ಣಮಹೋತ್ಸವ ಎಂದು ಕರೆಯಲಾಗುತ್ತದೆ.
  • ಶಹಜಹಾನ್ ಮಯೂರ ಸಿಂಹಾಸನ ನಿರ್ಮಿಸಲು ಒಟ್ಟು 1 ಲಕ್ಷ ತೊಲ ಚಿನ್ನ ಬಳಸಿದ್ದನು.
  • ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನದ ನಾಣ್ಯ ಹೊರಡಿಸಿದ ಮನೆತನ ಗುಪ್ತ ಮನೆತನ.
  • ಗುಪ್ತರ ಇತಿಹಾಸವನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ.


ನಿಮಗಿದು ಗೊತ್ತೆ.?

ಇದುವರೆಗೂ ಭೂಮಿಯ ಒಳಗಿನಿಂದ ಕೇವಲ 0.6% ರಷ್ಟು ಲ ಚಿನ್ನವನ್ನು ಮಾತ್ರ ಹೊರಗೆ ತೆಗೆಯಲಾಗಿದೆ. ಇನ್ನು 99.04% ಚಿನ್ನ ಭೂಮಿಯ ಅಂತರಾಳದಲ್ಲಿದೆ.


4) ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ (CAIR) ಯಾವ ಸ್ಥಳದಲ್ಲಿ ಇದೆ?

ಎ) ಮೈಸೂರು

ಬಿ) ಹಾಸನ

ಸಿ) ಬೆಂಗಳೂರು

ಡಿ) ಹೈದರಾಬಾದ್


ಸರಿಯಾದ ಉತ್ತರ: ಸಿ) ಬೆಂಗಳೂರು


ವಿವರಣೆ


  • ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ ಇದು ಬೆಂಗಳೂರಿನಲ್ಲಿದೆ.
  • ಬೆಂಗಳೂರು ನಗರದ ನಿರ್ಮಾಪಕ ಕೆಂಪೇಗೌಡರು.
  • ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿಗಳ ತಯಾರಿಕೆಗೆ ಪ್ರಸಿದ್ಧಿಯನ್ನು ಪಡೆದಿದೆ.
  • ಬೆಂಗಳೂರಿನ ಬ್ಯಾಲ್ಯಾಳು ಗ್ರಾಮ ಅಂತರಿಕ್ಷ ಮಾಹಿತಿ ಕಲೆಹಾಕುವ ಕೇಂದ್ರವಾಗಿದೆ.
  • ಬೆಂಗಳೂರಿನ ರಾಮನಗರ ರೇಷ್ಮೆ ಮಾರುಕಟ್ಟೆಗೆ ಪ್ರಸಿದ್ಧಿ ಪಡೆದಿದೆ.
  • ಬೆಂಗಳೂರಿನ ಜಾಲಹಳ್ಳಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನ ಜನಿಸಿದ ಸ್ಥಳ.
  • ಇಡೀ ಭಾರತದಲ್ಲಿ ಬೆಳಕು ಕಂಡ ಮೊದಲ ನಗರ ಬೆಂಗಳೂರು (1905)
  • ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಬೆಂಗಳೂರಿನಲ್ಲಿದೆ.
  • ನವಕೋಟಿ ನಾರಾಯಣ ಎಂದೇ ಪ್ರಖ್ಯಾತಿ ಪಡೆದಿದ್ದ ಚಿಕ್ಕದೇವರಾಜ ಒಡೆಯರು ಬೆಂಗಳೂರನ್ನು ಖಾಸಿಂಖಾನನಿಂದ ಮೂರು ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು.
  • ಬೆಂಗಳೂರನ್ನು ಸಿಲಿಕಾನ್ ಸಿಟಿ ಗಾರ್ಡನ್ ಸಿಟಿ ಎಲೆಕ್ಟ್ರಾನಿಕ್ ಸಿಟಿ ಕಾಲೇಜ್ ಸಿಟಿ, ಬ್ರೇನ್ ಸಿಟಿ ಆರ್ಥಿಕ ನಗರ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಬೆಂಗಳೂರು ನಗರಕ್ಕೆ ಟೆಕ್ ಹಳ್ಳಿ ಎಂಬ ಹೆಸರು ಕೂಡ ಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area