ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

KARTET 2021 Important Psychology Question Answers Part-I

2020 ರಲ್ಲಿ ನಡೆದ ಟಿಇಟಿ ಪತ್ರಿಕೆ-2 ಪರೀಕ್ಷೆಯ ಶಿಶು ಮನೋವಿಜ್ಞಾನ ಮತ್ತು ವಿಕಸನ
ವಿಷಯದ ಬಗ್ಗೆ ಕೇಳಿದ 30 ಪ್ರಶ್ನೆಗಳ ವಿಸ್ತøತ ವಿವರಣೆ


KARTET 2021 Important Psychology Question Answers




ಪ್ರ. ನಂ 01. ಪಿಯಾಜೆಯವರ ಪ್ರಕಾರ ವಿಕಸನವು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಈ ಅಂಶಗಳನ್ನು ಒಳಗೊಂಡಿರುತ್ತದೆ.
          ಎ) ಪ್ರಬುದ್ಧತೆ
          ಬಿ) ಅನುಭವ
          ಸಿ) ಸಮತೋಲನ
          ಡಿ) ಸಾಮಾಜಿಕ ಪರಿವರ್ತನೆ
         (1) ಎ, ಬಿ                                     (2) ಬಿ, ಸಿ, ಡಿ
         (3) ಎ, ಬಿ, ಡಿ                               (4) ಎ, ಬಿ, ಸಿ, ಡಿ

ಸರಿಯಾದ ಉತ್ತರ: (4) ಎ, ಬಿ, ಸಿ, ಡಿ

ಉತ್ತರದ ವಿಶ್ಲೇಷಣೆ:


ಮಗುವಿನ ಜ್ಞಾನಾತ್ಮಕ ವಿಕಾಸಕ್ಕೆ ಸಂಬಂಧಿಸಿದಂತೆ ಸ್ವಿಸ್ ಮನೋವಿಜ್ಞಾನಿಯಾದ ಜೀನ್ ಪಿಯಾಜೆ ರವರು ನೀಡಿದ ಸಿದ್ಧಾಂತ ಅತ್ಯಂತ ಪ್ರಸಿದ್ಧವಾದುದು. ಅಲ್ಲದೇ ಈ ಸಿದ್ಧಾಂತವು ಮಗುವಿನ ಸಂಜ್ಞಾನಾತ್ಮಕ ಚಿಂತನೆಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುವ ಸಿದ್ಧಾಂತವಾಗಿದ್ದು, ಶಿಶು ಮನೋವಿಜ್ಞಾನದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಜ್ಞಾನಾತ್ಮಕ ವಿಕಾಸಕ್ಕೆ ಬೌದ್ಧಿಕ ವಿಕಾಸ, ಮಾನಸಿಕ ವಿಕಾಸ, ಸಂಜ್ಞಾನಾತ್ಮಕ ವಿಕಾಸ ಎಂದೂ ಕರೆಯಲಾಗುತ್ತದೆ. ಮಾನಸಿಕ ವಿಕಾಸ ಎಂಬುದು ಒಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದ್ದು, ಮಗುವಿನ ಜನನದಿಂದಲೇ ಆರಂಭವಾಗಿರುತ್ತದೆ.

ಪಿಯಾಜೆಯವರ ಪ್ರಕಾರ ಬುದ್ಧಿಶಕ್ತಿಯು, ಸ್ವಾಂಗೀಕರಣ ಮತ್ತು ಹೊಂದಾಣಿಕೆಯ ಒಂದು ಸಮತೋಲಿತ ಸ್ಥಿತಿ ಎಂಬ ಭಾಗಗಳನ್ನು ಹೊಂದಿದೆ. ಈತನು ಬುದ್ಧಿಶಕ್ತಿಯನ್ನು ಅದರ ಕಾರ್ಯ, ರಚನೆ ಮತ್ತು ವಸ್ತು ಎಂದು ಉಪವಿಭಾಗಗಳಾಗಿ ಮಾಡಿದ್ದಾನೆ. ಪಿಯಾಜೆಯವರ ಸಿದ್ಧಾಂತದ ಪ್ರಕಾರ ಬುದ್ಧಿಶಕ್ತಿಯ ವಿಕಾಸವು ನಿರ್ದಿಷ್ಟ ಹಂತಗಳಲ್ಲಿ ಮುಂದುವರೆಯುತ್ತದೆ. 

ಜ್ಞಾನಾತ್ಮಕ ವಿಕಾಸವು ಉನ್ನತ ಮಟ್ಟದ ಮಾನಸಿಕ ಪ್ರಕ್ರಿಯೆಯನ್ನು ಹೊಂದಿದ್ದು, ಇದು ಸಂವೇದನೆ, ಪ್ರತ್ಯಕ್ಷಾನುಭವ, ಸ್ಮøತಿ, ಒಳನೋಟ, ಪ್ರಾಕಲ್ಪನೆ ರಚನೆ, ಆಲೋಚನೆ, ತಾರ್ಕಿಕತೆ, ಪರಿಕಲ್ಪನೆ ರೂಪಿಸುವಿಕೆ, ತೀರ್ಪು ನೀಡುವಿಕೆ, ಮುಂತಾದವುಗಳನ್ನು ಒಳಗೊಂಡಿದೆ. ಅಲ್ಲದೇ ಸಂವೇದನೆಗಳ ಮೂಲಕ ಬಂದಂತಹ ಮಾಹಿತಿಯನ್ನು ಸಂಸ್ಕರಿಸುವ, ಅರ್ಥೈಸುವ, ಆಲೋಚಿಸುವ, ಮಾರ್ಪಾಡು ಮಾಡುವ ಮತ್ತು ಪ್ರತಿಕ್ರಿಯಿಸುವ ಜ್ಞಾನಾತ್ಮಕ ಪ್ರಕ್ರಯೆ ಆಗಿದೆ.

ಜ್ಞಾನಾತ್ಮಕ ವಿಕಾಸವು ಒಂದು ಮಾನಸಿಕ ಪ್ರಕ್ರಿಯೆ ಆಗಿದ್ದು, ಮಗು ತನ್ನ ವಯಸ್ಸು ಮತ್ತು ಅನುಭವಗಳೊಂದಿಗೆ ಪರಿಸರ ಅಥವಾ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಮತ್ತು ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು, ಹೊಂದಿಕೊಂಡು ಹೋಗುವಂತಹ ಒಂದು ಉನ್ನತ ಮಾನಸಿಕ ಆಲೋಚನೆಯನ್ನು ಮಾನಸಿಕ ವಿಕಾಸ ಎನ್ನಬಹುದು.

ಪ್ರ. ನಂ 02. ಕೋಹ್ಲ್‍ಬರ್ಗ್‍ನ ಪ್ರಕಾರ ಒಬ್ಬ ವ್ಯಕ್ತಿಯು ನೈತಿಕ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುವ ಸಂಜ್ಞಾನಾತ್ಮಕ ಪ್ರಕ್ರಿಯೆಗಳು
          ಎ) ಕಲ್ಪನಾಶಕ್ತಿ ಮತ್ತು ಆಲೋಚಿಸುವುದು
          ಬಿ) ಆಲೋಚಿಸುವುದು ಮತ್ತು ಕಾರಣೀಕರಿಸುವುದು
          ಸಿ) ಕಾರಣೀಕರಿಸುವುದು ಮತ್ತು ನಿರ್ಧಾರ ಕೈಗೊಳ್ಳುವುದು
          ಡಿ) ಆಲೋಚಿಸುವುದು ಮತ್ತು ತೀರ್ಮಾನ ಕೈಗೊಳ್ಳುವುದು

ಸರಿಯಾದ ಉತ್ತರ : ಬಿ) ಆಲೋಚಿಸುವುದು ಮತ್ತು ಕಾರಣೀಕರಿಸುವುದು

ಉತ್ತರದ ವಿಶ್ಲೇಷಣೆ:


ಮಕ್ಕಳ ನೈತಿಕ ವಿಕಾಸದ ಕುರಿತು ಎರಡು ಪ್ರಮುಖ ಸಿದ್ಧಾಂತಗಳಿವೆ:-

1) 1932 ರಲ್ಲಿ ಜೀನ್ ಪಿಯಾಜೆಯವರಿಂದ ಪ್ರಾರಂಭಿಸಲ್ಪಟ್ಟ ಸಂಜ್ಞಾನಾತ್ಮಕ ಸಿದ್ಧಾಂತ, 1950ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಲಾರೆನ್ಸ್ ಕೋಹ್ಲಬರ್ಗ್ ರವರಿಂದ ಮಾರ್ಪಾಡು ಹೊಂದಿ ಮುನ್ನಡೆ ಹೊಂದಿದ ಸಿದ್ಧಾಂತವು ಮೊದಲನೆಯದು.
2) ಆಲ್ಫ್ರೆಡ್ ಬಾಂಡೂರ ರವರ ಸಾಮಾಜಿಕ ಕಲಿಕೆಯ ಸಿದ್ಧಾಂತ ಎರಡನೆಯದು.

ಕೋಹ್ಲಬರ್ಗ್ ರವರ ನೈತಿಕ ವಿಕಾಸದ ಸಿದ್ಧಾಂತ:

ಕೋಹ್ಲಬರ್ಗ್ ರವರ ನೈತಿಕ ಬೆಳಣಿಗೆಯು ಮೂರು ಮಟ್ಟಗಳಲ್ಲಿ ಹಾಗೂ ಆರು ಹಂತಗಳಲ್ಲಿ ನಡೆಯುತ್ತದೆ.

ಮೊದಲ ಮಟ್ಟ: ಸಾಂಪ್ರದಾಯಿಕ ಪೂರ್ವ ಮಟ್ಟ 

1. ಶಿಕ್ಷೆ ಮತ್ತು ವಿಧೇಯತೆ ಅಭಿಸ್ಥಾಪನೆ:
 
ಸರಿ ತಪ್ಪುಗಳ ಅರಿವು ಇರುವುದಿಲ್ಲ. ತಪ್ಪು ಮಾಡಿದಾಗ ನೀಡುವ ಶಿಕ್ಷೆಯ ಭಯದಿಂದ ಪರಿಸರವು ಅಪೇಕ್ಷಿಸುವ ವರ್ತನೆಗಳನ್ನು ರೂಢಿಸಿಕೊಳ್ಳುತ್ತದೆ. 

2. ಅಕೃತಿಮ ಕ್ರಿಯಾ ಸೌಜನ್ಯ ಅಭಿಸ್ಥಾಪನೆ: 

ಬಹುಮಾನ ಅಥವಾ ಒಳ್ಳೆಯವನು ಎಂದು ಕರೆಯಿಸಿಕೊಳ್ಳುವ ಸಲುವಾಗಿ ಉತ್ತಮ ವರ್ತನೆಗಳನ್ನು ತೋರಿಸುವುದು.

ಎರಡನೆಯ ಮಟ್ಟ: ಸಾಂಪ್ರದಾಯಿಕ ಹಂತ (ಮಟ್ಟ)

1) ಅಂತರ ವೈಯಕ್ತಿಕ ಅನುಕ್ರಮಣಿಕೆ ಅಥವಾ ಹೊಂದಾಣಿಕೆ ಅಭಿಸ್ಥಾಪನೆ:

ನನ್ನ ಉತ್ತಮ ನಡೆತೆಯಿಂದ ಅಥವಾ ಗುಣಗಳಿಂದ ಇತರರಿಂದ ನಾನು ಸ್ವೀಕರಿಸಲ್ಪಡಬೇಕು ಎಂಬ ಉದ್ದೇಸದಿಂದ ಉತ್ತಮ ನಡತೆಯನ್ನು ರೂಪಿಸಕೊಳ್ಳುತ್ತದೆ.

2) ಕಾನೂನು ಮತ್ತು ಸುವ್ಯವಸ್ಥೆಯ ಅಭಿಸ್ಥಾಪನೆ:
ಸಾಮಾಜಿಕ ನಿಯಮಗಳನ್ನು ಪಾಲಿಸಬೇಕೆಂಬುದನ್ನು ಅರ್ಥೈಸಿಕೊಂಡು ಉತ್ತಮ ನಡತೆಗಳನ್ನು ಪ್ರದರ್ಶಿಸುವುದು.


ಮೂರನೆಯ ಮಟ್ಟ: ಸಾಂಪ್ರದಾಯಿಕೋತ್ತರ ಹಂತ (ಮಟ್ಟ)

1) ಸಾಮಾಜಿಕ ಒಪ್ಪಂದದ ಅಭಿಸ್ಥಾಪನೆ:

ಸಮಾಜ ಒಪ್ಪಿತ ನಿಯಮಗಳಿಗೆ ಬದ್ಧನಾಗಿ ಉತ್ತಮ ವರ್ತನೆಗಳನ್ನು ಪ್ರದರ್ಶಿಸುವುದು.

2) ಸಾರ್ವತ್ರಿಕ ನೈತಿಕ ತತ್ವ ಅಭಿಸ್ಥಾಪನೆ:
ಇದು ನೈತಿಕ ಪ್ರಜ್ಞೆಯ ತಾತ್ವಿಕ ನೆಲೆಯಲ್ಲಿ ರೂಪಿತವಾಗಿದೆ. ಇದರಲ್ಲಿ ವ್ಯಕ್ತಿಯ ಅಂತರ್ಗತ ತತ್ವಗಳು ಆತನ ನಡತೆಯನ್ನು ನಿರ್ದೇಶಿಸುತ್ತದೆ.





ಪ್ರ. ನಂ 03. ಭಾರತೀಯ ಸಂವಿಧಾನವು ಸ್ಪಷ್ಟೀಕರಿಸಿರುವ ‘ಲಿಂಗಾಧಾರಿತ ನಿಷ್ಪಕ್ಷಪಾತ ಸಿದ್ಧಾಂತವು’ ಈ ಹಕ್ಕನ್ನು ಖಾತ್ರಿಗೊಳಿಸುತ್ತದೆ
          1) ಜೀವನ ಮತ್ತು ಜೀವನದ ಭದ್ರತೆಯ ಹಕ್ಕು
          2) ಸ್ವಾತಂತ್ರ್ಯದ ಹಕ್ಕು
          3) ಸಮಾನತೆಯ ಹಕ್ಕು
          4) ಶೋಷಣೆಯ ವಿರುದ್ಧದ ಹಕ್ಕು

ಸರಿಯಾದ ಉತ್ತರ: 1) ಜೀವನ ಮತ್ತು ಜೀವನದ ಭದ್ರತೆಯ ಹಕ್ಕು


ಪ್ರ. ನಂ 04. ಒಂದು ಪರಿಕಲ್ಪನೆಯನ್ನು ಬೋಧಿಸುವಾಗ ತರಗತಿಯಲ್ಲಿ ಶಿಕ್ಷಕರು ಮೊದಲು ವ್ಯಾಖ್ಯೆಯನ್ನು ನಿರೂಪಿಸಿ, ನಂತರ ಪರಿಶೀಲನೆಗಾಗಿ ಉದಾಹರಣೆಗಳನ್ನು ನೀಡುವರು. ಈ ಶಿಕ್ಷಕರು ಅನುಸರಿಸಿದ ವಿಧಾನ
          1) ವಿಶ್ಲೇಷಣಾ ವಿಧಾನ 
          2) ಸಂಶ್ಲೇಷಣಾ ವಿಧಾನ
          3) ಅನುಗಮನ ವಿಧಾನ
          4) ನಿಗಮನ ವಿಧಾನ

ಸರಿಯಾದ ಉತ್ತರ : 4) ನಿಗಮನ ವಿಧಾನ

01. ಅನುಗಮನ ಬೋಧನಾ ಪದ್ಧತಿ (Inductive Method)  (ಅ-ಉ)

  • ಅನುಗಮನ ಪದ್ಧತಿಯ ಪ್ರತಿಪಾದಕರು : ಫ್ರಾನ್ಸಿಸ್ ಬೇಕನ್ (2018)
  • ಉದಾಹರಣೆಯಿಂದ ನಿಯಮದಡೆಗೆ ಅಥವಾ ಸಾರ್ವತ್ರಿಕ ತತ್ವದ ಕಡೆಗೆ ಸಾಗುವುದೇ ಅನುಗಮನ ಪದ್ಧತಿ.
  • ಕಲಿಕೆಯು ಉದಾಹರಣೆಯಿಂದ ಸೂತ್ರದ ಕಡೆಗೆ, ಮೂರ್ತದಿಂದ ಅಮೂರ್ತದ ಕಡೆಗೆ, ನಿರ್ದಿಷ್ಟದಿಂದ ಸಮಾನ್ಯದ ಕಡೆಗೆ, ಗೊತ್ತಿದ್ದುದರಿಂದ ಗೊತ್ತಿಲ್ಲದ ಕಡೆಗೆ, (2015 1 & 2, 2016, 2018 ಪತ್ರಿಕೆ-2) ಸರಳದಿಂದ ಕಠಿಣದ ಕಡೆಗೆ, ನಿರ್ದಿಷ್ಟವಾದ ಪದ್ಧತಿಗೆ ಅನುಗಮನ ಎನ್ನುವರು.
  • ಮೊದಲು ಉದಾಹರಣೆಗಳನ್ನು ನೀಡಿ ನಂತರ ಸೂತ್ರದ ನಿರೂಪಣೆ ಮಾಡುವುದು ಅನುಗಮನ ಪದ್ಧತಿ.

02. ನಿಗಮನ ಬೋಧನಾ ಪದ್ಧತಿ (Deductive Method) (ನಿ-ಸು)

  • ಸೂತ್ರದಿಂದ ಉದಾಹರಣೆಯ ಕಡೆಗೆ, ಅಮೂರ್ತದಿಂದ ಮೂರ್ತದ ಕಡೆಗೆ, ಗೊತ್ತಿಲ್ಲದ್ದರಿಂದ ಗೊತ್ತಿದ್ದುದರ ಕಡೆಗೆ, ಕಠಿಣತೆಯಿಂದ ಸರಳತೆಯೆಡೆಗೆ ಸಾಗುವ ಬೋಧನಾ ಪದ್ಧತಿಯೇ ನಿಗಮನ ಪದ್ಧತಿ. (2015, 2017 ರ ಪತ್ರಿಕೆ-1)
  • ನಿಗಮನ ಪದ್ಧತಿಯ ಪ್ರತಿಪಾದಕ : ಅರಿಸ್ಟಾಟಲ್
  • ಇಲ್ಲಿ ಮೊದಲು ಸೂತ್ರವನ್ನು ಹೇಳಿ ಅನಂತರ ಉದಾಹರಣೆಗಳನ್ನು ವಿವರಿಸಲಾಗುತ್ತದೆ.

03. ಸಂಪೂರ್ಣ ಪದ್ಧತಿ

  • ಅನುಗಮನ ಮತ್ತು ನಿಗಮನ ಎರಡೂ ಪದ್ಧತಿಗಳ ಸಂಯೋಜಿತ ವಿಧಾನವೇ ಸಂಪೂರ್ಣ ಪದ್ಧತಿ.

04. ಸಂಶೋಧನಾ ಪದ್ಧತಿ

  • ವಿದ್ಯಾರ್ಥಿಗಳು ನೇರ ವೀಕ್ಷಣೆ ಮತ್ತು ಪ್ರಯೋಗಗಳ ಮೂಲಕ ತಾವೇ ಸ್ವತಃ ಎಲ್ಲವನ್ನು ಕಂಡುಹಿಡಿಯುತ್ತ ಕಲಿಯುವ ಪದ್ಧತಿಯೇ ಸಂಶೋಧನಾ ಪದ್ಧತಿ.
  • ಸಂಶೋಧನಾ ಪದ್ಧತಿಯ ಜನಕ : ಪ್ರೋ| ಹೆಚ್. ಇ. ಆರ್ಮ್‍ಸ್ಟ್ರಾಂಗ್.

05. ಉಪನ್ಯಾಸ ಪದ್ಧತಿ (Lecture Method)
  • ಇದನ್ನು “Chalk and Talk” ಪದ್ಧತಿ ಎಂದೂ ಕರೆಯುತ್ತಾರೆ. 
  • ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಯೋಜಿತ ರೀತಿಯಲ್ಲಿ ಮಕ್ಕಳಿಗೆ ಆ ವಿಷಯದ ಬಗ್ಗೆ ವಿವರಣೆ, ವರ್ಣನೆ, ಉದಾಹರಣೆ, ಹೋಲಿಕೆ ಸ್ಪಷ್ಟೀಕರಣಗಳೊಂದಿಗೆ ಹೇಳುವುದನ್ನೇ ಉಪನ್ಯಾಸ ಪದ್ಧತಿ ಎನ್ನುವರು. (2015 ರ ಪತ್ರಿಕೆ-2)
  • ಇತಿಹಾಸ ಬೋಧಕನು ಮಕ್ಕಳಲ್ಲಿ ನಿರೂಪಣಾ ಶೈಲಿಯನ್ನು ಬೆಳೆಸಲು ಉಪನ್ಯಾಸ ಪದ್ಧತಿಯನ್ನು ಬಳಸಬೇಕು. (2014 ರ   ಪತ್ರಿಕೆ-2)

06. ಯೋಜನಾ ಪದ್ಧತಿ (Project Method) :-

  • ಯೋಜನಾ ಪದ್ಧತಿಯ ಪ್ರತಿಪಾದಕ : ಕಿಲ್ ಪ್ಯಾಟ್ರಿಕ್ (2018 ರ ಪತ್ರಿಕೆ-2)
  • ಕಿಲ್ ಪ್ಯಾಟ್ರಿಕ್ : “ಸಾಮಾಜಿಕ ಸನ್ನಿವೇಶದಲ್ಲಿ ನಡೆಯುವ ಮನಃಪೂರ್ವಕವಾದ ಹಾಗೂ ಉದ್ದೇಶಿತ ಚಟುವಟಿಕೆಯೇ ಯೋಜನಾ ಪದ್ಧತಿ.”
  • ಎಲ್ಲಕ್ಕಿಂತ ಮುಖ್ಯವಾಗಿ ಯೋಜನಾ ಪದ್ಧತಿಯು ಜಾನ್ ಡ್ಯೂಯಿ ಅವರ “ಮಾಡಿ ಕಲಿ, ನೋಡಿ ತಿಳಿ” ಜೀವಿಸುತ್ತಾ ತಿಳಿ ಎಂಬ ತತ್ವದ ಅಡಿಯಲ್ಲಿ ರೂಪಿತಗೊಂಡಿದೆ. (2014 ರ   ಪತ್ರಿಕೆ-2)
  • ಸಮಾಜವಿಜ್ಞಾನ ಬೋಧಿಸಲು ಯೋಜನಾ ಪದ್ಧತಿಯು ಸನ್ನಿವೇಶವನ್ನು ಒದಗಿಸಿಕೊಡುತ್ತದೆ (2014 ರ   ಪತ್ರಿಕೆ-2)
  • ಶಾಲೆಗಳಲ್ಲಿ “ವಿದ್ಯಾರ್ಥಿ ಸಂಸತ್” ನ್ನು ರಚಿಸುವುದು ಯೋಜನಾ ಪದ್ಧತಿಗೆ ಒಂದು ಉದಾಹರಣೆಯಾಗಿದೆ. (2015 ರ ಪತ್ರಿಕೆ-2)


07. ಕ್ರೀಡಾ ಪದ್ಧತಿ

  • ಇದು ಚಟುವಟಿಕೆ ಕೇಂದ್ರಿತ ಆಧುನಿಕ ಬೋಧನಾ ಪದ್ಧತಿಯಾಗಿದೆ.
  • ಶೈಕ್ಷಣಿಕ ವಿಚಾರಗಳನ್ನು ಆಟದ ರೂಪದಲ್ಲಿ ವರ್ಗಾಯಿಸಿ, ಚಟುವಟಿಕೆಗಳ ಮೂಲಕ ವರ್ಣರಂಜಿತವಾಗಿ, ಆಕರ್ಷಕವಾಗಿ ಬೋಧಿಸುವುದೇ ಕ್ರೀಡಾಪದ್ಧತಿ.
  • ಇದು “ಕೆಲಸ ಮಾಡುತ್ತಾ ಕಲಿ, ಆಡುತ್ತಾ ಕಲಿ ಮತ್ತು ಪಾಲ್ಗೊಂಡು ಕಲಿ” ಎಂಬ ಮನೋವೈಜ್ಞಾನಿಕ ತತ್ವದ ತಳಹದಿಯ ಮೇಲೆ ಬೆಳೆದು ಬಂದಿದೆ.
  • ಕ್ರೀಡಾಪದ್ಧತಿಯ ಪ್ರತಿಪಾದಕ: ಅಮೇರಿಕಾದ ಕಾಲ್ಡ್‍ವೆಲ್ ಕುಕ್.
  • ಕಾಲ್ಡ್‍ವೆಲ್ ಕುಕ್ ಅವರು ತಮ್ಮ (Pಟಚಿಥಿ Wಚಿಥಿ) ಎಂಬ ಗ್ರಂಥದಲ್ಲಿ ಕ್ರೀಡಾಪದ್ಧತಿಯ ಪ್ರಮುಖ ಅಂಶಗಳನ್ನು ವಿವರಿಸಿದ್ದಾನೆ.

08. ಕಿಂಡರ್‍ಗಾರ್ಟನ್ ಪದ್ಧತಿ 

  • ಜರ್ಮನಿಯ ಫ್ರೆಡರಿಕ್ ಪ್ರೊಬೆಲ್ ಎಂಬ ಶಿಕ್ಷಣ ತಜ್ಞ ರೂಪಿಸಿದ್ದಾನೆ.
  • ಜರ್ಮನಿ ಭಾಷೆಯಲ್ಲಿ ಕಿಂಡರ್ ಎಂದರೆ ಕಿಡ್ಸ್, ಮಕ್ಕಳು ಹಾಗೂ ಗಾರ್ಟನ್ ಎಂದರೆ ತೋಟ ಎಂದರ್ಥ. ಕಿಂಡರ್‍ಗಾರ್ಟನ್ ಎಂದರೆ “ಮಕ್ಕಳ ತೋಟ” ಎಂದರ್ಥ.
  • ಪ್ರೊಬೆಲ್ ಮಹಾಶಯನು ಮಗುವನ್ನು ಹಸಿರು ಗಿಡಕ್ಕೆ ಹೋಲಿಸಿದ್ದಾನೆ, ಗಿಡವೊಂದಕ್ಕೆ ನೀರು ಗೊಬ್ಬರ ಹಾಕಿ ಹೆಮ್ಮರವಾಗಿ ಹೇಗೆ ಬೆಳೆಸುತ್ತೇವೆಯೋ ಹಾಗೆಯೇ ಮಗುವಿಗೆ ಆರೈಕೆ ಗೈದರೆ ಮಗುವು ಸುಂದರವಾಗಿ ಬೆಳೆಯಬಹುದು.

09. ಚರ್ಚಾ ಪದ್ಧತಿ (Discussion Method)

  • ಚರ್ಚಾ ವಿಧಾನದ ಪ್ರತಿಪಾದಕ : ಪ್ರೊ. ಆರ್ಮ್‍ಸ್ಟ್ರಾಂಗ್.
  • ಚರ್ಚಾವಿಧಾನವನ್ನು ಸಮಾಲೋಚನ ವಿಧಾನ, ಜಿಜ್ಞಾಸು ವಿಧಾನ ಎಂದೂ ಕರೆಯುತ್ತಾರೆ.
  • ವಿಷಯದ ಒಳಹೊಕ್ಕು ಶೋಧನೆಗೈಯುಂಥದ್ದೇ ಚರ್ಚಾವಿಧಾನ.
  • ಇದು ಸಂಘಟಿತ ತೀರ್ಮಾನ ತೆಗೆದುಕೊಳ್ಳಲು ಉತ್ತಮವಾದ ವಿಧಾನವಾಗಿದೆ. (2018 ರ ಪತ್ರಿಕೆ-2)
  • ಇದು ಸಾಮೂಹಿಕ ಆಲೋಚನೆ ಮತ್ತು ತೀರ್ಮಾನ ತೆಗೆದುಕೊಳ್ಳುವುದೇ ಚರ್ಚಾಪದ್ಧತಿಯ ಪ್ರಮುಖ ಉದ್ದೇಶ. (2017 ರ ಪತ್ರಿಕೆ-2)
  • ಇದು ಸ್ಪರ್ಧಾತ್ಮಕ ಸಹಕಾರ, ಒಪ್ಪಂದ ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನವಾಗಿದೆ. (2018 ರ ಪತ್ರಿಕೆ-2)
  • ಶಿಶುಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಚರ್ಚಾ ಪದ್ಧತಿಯು ಅತ್ಯಂತ ಉತ್ಕøಷ್ಟವಾದ ಪದ್ಧತಿಯಾಗಿದೆ.

10. ಮಾಂಟೆಸ್ಸೋರಿ ಪದ್ಧತಿ (Montessori Method)

  • ಬೋಧನಾ ವಿಧಾನದಲ್ಲಿ ಮಾಂಟೆಸ್ಸೋರಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲನ್ನೇ ಸೃಷ್ಟಿಸಿದೆ ಎನ್ನಬಹುದು.
  • ಇಟಲಿಯ ಕುಲಸಂಜಾತೆಯಾದ ಮೇಡಮ್ ಮಾಂಟೆಸ್ಸೋರಿ ಪ್ರತಿಪಾದಿಸಿದ್ದಾರೆ.
  • ಮಾಂಟೆಸ್ಸೋರಿ ಅವರ ಪ್ರಕಾರ ಮಗುವು ತರಗತಿಯ ಒಳಗೆ & ಹೊರಗೆ ಯಾರ ಬಂಧನವೂ ಇಲ್ಲದೇ ಸ್ವತಂತ್ರವಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ.
  • ಮಗುವಿನ ವಿಕಾಸಕ್ಕಾಗಿ ಶಿಕ್ಷಕನು ಸರ್ವತಾ ದುಡಿಯಬೇಕು ಮತ್ತು ಆಶಿಸಬೇಕು ಎಂದಿದ್ದಾರೆ.
  • ಜೀವನ ಚರಿತ್ರಾ ಪದ್ಧತಿ
  • ಇದು ಇತಿಹಾಸ ಬೋಧನೆಗೆ ಇರುವ ಅತ್ಯುತ್ತಮ ಬೋಧನಾ ವಿಧಾನ. (2015 ರ ಪತ್ರಿಕೆ-2)
  • ಜೀವನ ಚರಿತ್ರಾ ಪದ್ಧತಿಯ ಪ್ರಮುಖ ಉದ್ದೇಶ : ವಿವಿಧ ಚಾರಿತ್ರಿಕ ವ್ಯಕ್ತಿಗಳಂತೆ ತಾವೂ ಸಾಧನೆ ಮಾಡಲು ಸ್ಪೂರ್ತಿ ಮೂಡಿಸುವದು (2015 ರ ಪತ್ರಿಕೆ-2)


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area