ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭೂಗೋಳಶಾಸ್ತ್ರ ನೋಟ್ಸ್

🌺 FDA SDA-2020 ವಿಶೇಷ 🌺

🔵 ಭೂಗೋಳಶಾಸ್ತ್ರ🔵

🌍 ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ , ಉಪಗ್ರಹ, ಧೂಮಕೇತು, ಉಲ್ಕೆಗಳು, ಕ್ಷುದ್ರಗ್ರಹಗಳು ಮುಂತಾದವುಗಳ ಸಮೂಹವನ್ನು ಸೌರವ್ಯೂಹ ಎನ್ನುವರು.

🌍 ಭೂಕೇಂದ್ರ ಸಿದ್ಧಾಂತ- ಭೂಮಿ ಮಧ್ಯದಲ್ಲಿ ಅಚಲವಾಗಿ ನಿಂತಿದ್ದು ಉಳಿದೆಲ್ಲಾ ಆಕಾಶ ಕಾಯಗಳು ಅದರ ಸುತ್ತ ಸುತ್ತುವ ಮಾದರಿ.

🌍 ಭೂಕೇಂದ್ರ ಸಿದ್ಧಾಂತದ ಪ್ರತಿಪಾದಕರು – ಟಾಲೆಮಿ

🌍 ಸೂರ್ಯ ಕೇಂದ್ರ ಸಿದ್ಧಾಂತ- ಸೂರ್ಯನೇ ಸೌರವ್ಯೂಹದ ಕೇಂದ್ರವಾಗಿದ್ದು ಉಳಿದ ಆಕಾಶಕಾಯಗಳು ಅದರ ಸುತ್ತ ಸುತ್ತುವ ಪದ್ದತಿ.

🌍 ಸೂರ್ಯ ಕೇಂದ್ರ ಸಿದ್ದಾಂತದ ಪ್ರತಿಪಾದಕರು –ಕೋಪರ್ನಿಕಸ್, ಗೆಲಿಲಿಯೋ

🌍 ಒಂದು ಕಾಯ ತನ್ನ ಅಕ್ಷದ ಸುತ್ತ ಸುತ್ತುವುದಕ್ಕೆ ಹೀಗೆನ್ನುವರು –
ಭ್ರಮಣ

🌍 ಒಂದು ಕಾಯ ಇನ್ನೋಂದು ಕಾಯದ ಸುತ್ತಲು ತಿರುಗುವದಕ್ಕೆ ಹೀಗೆನ್ನುವರು – ಪರಿಭ್ರಮಣ

🌍 ಗ್ರಹಗಳ ಚಲನೆಯ ನಿಯಮಗಳನ್ನು ಆವಿಷ್ಕರಿಸಿದವನು- ಜೋಹಾನಿಸ್ ಕೆಪ್ಲರ್

🌍 ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ – 08

🌍 ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳ ಅನುಕ್ರಮಣಿಕೆ- ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೋನ್,

🌍 21 ನೇ ಶತಮಾನದ ಆದಿಯಲ್ಲಿ ಕಂಡುಹಿಡಿಯಲಾದ ಗ್ರಹದ ಹೆಸರು –
ಸೆಡ್ನಾ

🌍 ಸೂರ್ಯನಿಗೆ ಅತಿ ಹತ್ತಿರದಲ್ಲಿರುವ ಗ್ರಹ – ಬುಧ

🌍 ಬುಧ ಗ್ರಹಕ್ಕೆ ಯಾವುದೇ ಉಪಗ್ರಹಗಳಲ್ಲಿ.

🌍 ಬುಧ ಗ್ರಹದ ಪರಿಭ್ರಮಣಾ ಅವಧಿ – 88 ದಿನಗಳು

🌍 ಬುಧ ಗ್ರಹದ ಭ್ರಮಣಾ ಅವಧಿ – 176 ದಿನಗಳು

🌍 ರಾತ್ರಿ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ – ಶುಕ್ರ

🌍 ಶುಕ್ರಗ್ರಹದ ತಾಪವು ಅಧಿಕವಾಗಲು ಯಾವ ಪರಿ ಣಾಮ ಕಾರಣ- ಹಸಿರು ಮನೆ ಉಷ್ಣ ಪರಿಣಾಮ

🌍 ಶುಕ್ರಗ್ರಹದಲ್ಲಿ ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ- ಪಶ್ಚಿಮ

🌍 ಸೌರವ್ಯೂಹದ ಗ್ರಹಗಳು ಚಲಿಸುವ ದಿಕ್ಕಿಗೆ ವಿರುದ್ದವಾಗಿ ಚಲಿಸುವ ಗ್ರಹಗಳು- ಶುಕ್ರ ಮತ್ತು ಯುರೇನೆಸ್

🌍 ಶುಕ್ರಗ್ರಹದ ಪರಿಭ್ರಮಣಾ ಅವಧಿ- 224 ದಿನಗಳು.

🌍 ಶುಕ್ರಗ್ರಹದ ಭ್ರಮಣಾ ಅವಧಿ – 243 ದಿನಗಳು

🌍 ಜೀವಿಗಳಿರುವ ಏಕೈಕ ಗ್ರಹ – ಭೂಮಿ

🌍 ನೀಲಿಗ್ರಹವೆಂದು ಯಾವ ಗ್ರಹವನ್ನು ಕರೆಯುತ್ತಾರೆ- ಭೂಮಿ

🌍 ಭೂಮಿಯ ಉಪಗ್ರಹ – ಚಂದ್ರ

🌍 ಭೂಮಿಗೆ ಹತ್ತಿರದಲ್ಲಿರುವ ಗ್ರಹ –
ಮಂಗಳ

🌍 ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವ ಚಲನೆಯನ್ನು ಹೀಗೆನ್ನುವರು- ದೈನಿಕ ಚಲನೆ

🌍 ಭೂಮಿಯು ಸೂರ್ಯನ ಸುತ್ತ ಸತ್ತುವುದೇ – ವಾರ್ಷಿಕ ಚಲನೆ

🌍 ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ- ಭೂಮಿ

🌍 ಸೌರವ್ಯೂಹದಲ್ಲಿ ಭೂಮಿಯ ಕಕ್ಷೆಯ ಆಕಾರವು – ಅಂಡಾಕಾರವಾಗಿದೆ.

🌍 ಭೂಮಿಯ ವಾತಾವರಣವು – 78% ಸಾರಜನಕ, 21% ಆಮ್ಲಜನಕ, 0.03 % ಇಂಗಾಲದ ಡೈ ಆಕ್ಸೈಡ್, 0.97% ಇತರ ಅನಿಲಗಳನ್ನು ಹೊಂದಿದೆ.

🌍 ಭೂಮಿಯ ಭ್ರಮಣೆಯ ಅವಧಿ- 23 ಗಂಟೆ 56 ನಿಮಿಷ, 4.09 ಸೆಕೆಂಡ್ಗಳು.

🌍 ಭೂಮಿಯ ಪರಿಭ್ರಮಣೆಯ ಅವಧಿ- 365 ದಿನ 6 ಗಂಟೆ 9 ನಿಮಿಷ 9.54 ಸೆಕೆಂಡ್ಗಳು.

🌍 ಕೆಂಪು ಗ್ರಹ ಯಾವುದು – ಮಂಗಳ

🌍 ಮಂಗಳ ಗ್ರಹದ ಇತರ ಹೆಸರು-
ಅಂಗಾರಕ, ಕುಜಗ್ರಹ

🌍 ಮಂಗಳನ ವಾತಾವರಣದಲ್ಲಿರುವ ಅನಿಲ- ಕಾರ್ಬನ್ ಡೈ ಆಕ್ಸೈಡ್

🌍 ಮಂಗಳ ಗ್ರಹದ ಉಪಗ್ರಹಗಳು –
ಪೋಬೋಸ್ ಮತ್ತು ಡೈಮೋಸ್

🌍 ಸೌರವ್ಯೂಹದ ದೈತ್ಯಾಕಾರದ ಗ್ರಹ ಯಾವುದು- ಗುರು

🌍 ಗ್ರಹಗಳಲ್ಲಿ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ- ಗುರು

🌍 ಬೃಹಸ್ಪತಿ ಎಂದು ಯಾವ ಗ್ರಹವನ್ನು ಕರೆಯುತ್ತಾರೆ – ಗುರು

🌍 ಅತ್ಯಂತ ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ಗ್ರಹ- ಗುರು

🌍 ಅತ್ಯಂತ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಗ್ರಹ- ಗುರು

🌍 ಗುರುವಿನ ಅತ್ಯಂತ ದೊಡ್ಡ ಉಪಗ್ರಹ- ಗ್ಯಾನಿಮೇಡ್

🌍 ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹ – ಗ್ಯಾನಿಮೇಡ್

🌍 ಗುರುಗ್ರಹದ ಉಪಗ್ರಹಗಳು –
ಐಯೋ, ಯೂರೋಪ, ಗ್ಯಾನಿಮೇಡ್, ಕ್ಯಾಲಿಸ್ಟೋ

🌍 ಗುರುಗ್ರಹದ ಉಪಗ್ರಹಗಳನ್ನು ಕಂಡುಹಿಡಿದವನು- ಗೆಲಿಲಿಯೋ

🌍 ಗೆಲಿಲಿಯನ್ ಉಪಗ್ರಹ ಯಾವುವು –
ಐಯೋ, ಯೂರೋಪ, ಗ್ಯಾನಿಮೇಡ್, ಕ್ಯಾಲಿಸ್ಟೋ

🌍 ಸೌರವ್ಯೂಹದ ಅತ್ಯಂತ ಸುಂದರವಾದ ಗ್ರಹ – ಶನಿ

🌍 ಸೌರವ್ಯೂಹದ ಎರಡನೇ ಅತಿ ದೊಡ್ಡ ಗ್ರಹ – ಶನಿ

🌍 ಅತಿ ಸುಂದರವಾದ ಉಂಗುರುಗಳನ್ನು ಹೊಂದಿರುವ ಗ್ರಹ – ಶನಿ

🌍 ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ – ಶನಿ
🌍 ಶನಿಯ ದೊಡ್ಡ ಉಪಗ್ರಹ- ಟೈಟಾನ್

🌍 ತನ್ನದೇ ಆದ ವಾತಾವರಣವನ್ನು ಹೊಂದಿರುವ ಸೌರವ್ಯೂಹದ ಏಕೈಕ ಉಪಗ್ರಹ- ಟೈಟಾನ್

🌍 ಶನಿ ಗ್ರಹದ ಎರಡು ಉಂಗುರುಗಳ ನಡುವಿನ ಖಾಲಿ ಜಾಗ – ಕ್ಯಾಸಿನಿ ವಿಭಾಜಕ

🌍 ದೂರದರ್ಶಕದಿಂದ ಪತ್ತೆಯಾದ ಮೊದಲ ಗ್ರಹ- ಯುರೇನೆಸ್

🌍 ಯುರೇನಸ್ ಗ್ರಹವನ್ನು ಕಂಡುಹಿಡಿದವರು- ವಿಲಿಯಂ ಹರ್ಷಲ್

🌍 ಸೌರವ್ಯೂಹದ ಮೂರನೇ ಅತ್ಯಂತ ದೊಡ್ಡ ಗ್ರಹ – ಯುರೇನಸ್

🌍 ನ್ಯೂಟನ್ನ ಚಲನೆ, ಗುತ್ವ ನಿಯಮಗಳ ಅನ್ವಯದ ಮೇಲೆ ಕಂಡುಹಿಡಿಯಲ್ಪಟ್ಟ ಗ್ರಹಗಳು- ನೆಪ್ಚೊನ್ ಮತ್ತು ಪ್ಲೂಟೋ

🌍 ನೆಪ್ಚೊನ್ ಗ್ರಹವನ್ನು ಕಂಡುಹಿಡಿದ ವರ್ಷ – 1846

🌍 ನೆಪ್ಚೊನ್ ಗ್ರಹವನ್ನು ಕಂಡುಹಿಡಿದವರು- ಜೋಹಾನ್ಗಾಲಿ

🌍 ಸೂರ್ಯನಿಂದ ಅತಿ ದೂರದಲ್ಲಿರುವ ಗ್ರಹ- ಪ್ಲೂಟೋ

🌍 ಪ್ಲೂಟೋ ಗ್ರಹವನ್ನು ಆವಿಷ್ಕರಿಸಿದ ವರ್ಷ – 1930

🌍 ಪ್ಲೂಟೋಗ್ರಹದ ಉಪಗ್ರಹ- ಶೆರಾನ್

🌍 ಉಂಗುರ ವ್ಯವಸ್ಥೆ ಹೊಂದಿರುವ ಗ್ರಹಗಳು- ಗುರು, ಶನಿ, ಯುರೇನಸ್, ನೆಪ್ಚೊನ್

🌍 ಹಿಮ್ಮುಖ ಚಲನೆ ಇರುವ ಗ್ರಹ- ಶುಕ್ರ ಮತ್ತು ಯುರೇನಸ್

🌍 ಅತಿ ಚಿರಪರಿಚಿತವಾಗಿರುವ ಒಂದು ಧೂಮಕೇತು – ಹ್ಯಾಲಿ

🌍 1986 ರಲ್ಲಿ ಕಾಣಿಸಿಕೊಂಡಿದ್ದ ಧೂಮಕೇತು – ಹ್ಯಾಲಿ

🌍 ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ-
76 ವರ್ಷಕ್ಕೊಮ್ಮೆ

🌍 ಧೂಮಕೇತುವು ಚಲಿಸುವ ಪಥವು ಹೇಗಿರುತ್ತದೆ-
ಅಂಡಾಕೃತಿಯಾಗಿರುತ್ತದೆ.

🌍 ಆಕಾಶಕಾಯಗಳ ಅಧ್ಯಯನವನ್ನು ಖಗೋಳಶಾಸ್ತ್ರ ಎನ್ನುವರು.

🌍 ಭಾರತೀಯ ಆಂತರಿಕ್ಷ ಸಂಶೋಧನಾ ಸಂಸ್ಥೆಯ “ಮೂನ್ ಮಿಷನ್” ಯಾವುದು – ಚಂದ್ರಯಾನ

🌍 ಪ್ರಥಮ ಮಹಿಳಾ ಗಗನಯಾತ್ರಿ-
ವೆಲೆಂಟೀನಾ ಟೆರಿಸ್ಕೋವಾ

🌍 ಚಂದ್ರನ ಮೇಲೆ ಕಾಲೂರಿದ ಪ್ರಪ್ರಥಮ ಮನುಷ್ಯ ಯಾರು – ನೀಲ್ ಆರ್ಮಸ್ಟ್ರಾಂಗ್ ,1969 ಜುಲೈ 21, ಅಪೋಲೋ ನೌಕೆಯಲ್ಲಿ

🌍 ಯು.ಎಸ್ ನ ಬಾಹ್ಯಾಕಾಶ ನೌಕೆಯಲ್ಲಿ ಯಾವ ಭಾರತೀಯ ಮಹಿಳೆ ಮೃತ ಪಟ್ಟಿದ್ದು- ಕಲ್ಪನಾ ಚಾವ್ಲಾ

🌍 ಋತುಗಳ ಬದಲಾವಣೆ ಯಾವುದರಿಂದ ಆಗುತ್ತದೆ- ಭೂಮಿ ತನ್ನ ಅಕ್ಷೆಯಲ್ಲಿ ಸರ್ಯನ ಸುತ್ತ ಸುತ್ತುವುದರಿಂದ

🌍 ಬಾಹ್ಯಾಕಾಶ ಮಾನವನಿಗೆ ಆಕಾಶವು ಯಾವ ರೀತಿ ಕಾಣುತ್ತದೆ- ಕಪ್ಪು

🌍 ಗ್ರಹಣಗಳು ಯಾವಾಗ ಸಂಭವಿಸುತ್ತದೆ- ಭೂಮಿ ಮತ್ತು ಚಂದ್ರ ಸೂರ್ಯನ ಸುತ್ತಲೂ ಸುತ್ತುತ್ತಿರುವಾಗ ಕೆಲವೊಂದು ಸಂದರ್ಭದಲ್ಲಿ ಮೂರು ಒಂದೇ ನೇರದಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತದೆ.

🌍 ಪೌರ್ಣಮಿ ಯಾವಾಗ ಬರುತ್ತದೆ- ಭೂಮಿಯು ಸೂರ್ಯ ಮತ್ತು ಚಂದ್ರನ ಮಧ್ಯೆ ಬಂದಾಗ

🌍 ಹುಣ್ಣಿಮೆ ಎಂದರೆ- ರಾತ್ರಿಯೆಲ್ಲ ಚಂದ್ರನ ಪೂರ್ಣಬಿಂಬವನ್ನು ಕಾಣುವ ದಿನ.

🌍 ಅಮಾವಾಸ್ಯೆ ಎಂದರೆ ರಾತ್ರಿ ಆಕಾಶದಲ್ಲಿ ಚಂದ್ರನು ಕಾಣಿಸದೇ ಇರುವ ದಿನ.

🌍 ಚಂದ್ರಗ್ರಹಣ ಸಂಭವಿಸುವುದು ಯಾವಾಗೆಂದರೆ- ಚಂದ್ರ ಮತ್ತು ಸೂರ್ಯ ನಡುವೆ ಭೂಮಿ ಬಂದಾಗ

🌍 ಸೂರ್ಯಗ್ರಹಣವೆಂದರೆ ಸಂಭವಿಸುವುದು ಯಾವಾಗೆಂದರೆ- ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ

🌍 ಹುಣ್ಣಿಮೆಯಿಂದ ಅಮವಾಸ್ಯೆವರೆಗಿನ ಅವಧಿ- ಶುಕ್ಲಪಕ್ಷ

🌍 ಅಮವಾಸ್ಯೆಯಿಂದ ಹುಣ್ಣಿಮೆವರೆಗಿನ ಅವಧಿ- ಕೃಷ್ಣಪಕ್ಷ

🌍 ಪ್ರತಿದಿನ ಚಂದ್ರ ಎಷ್ಟು ನಿಮಿಷ ತಡವಾಗಿ ಉದಯಿಸುತ್ತಾನೆ- 48 ರಿಂದ 50 ನಿಮಿಷ

🌍 ಅಮವಾಸ್ಯೆ ಮತ್ತು ಹುಣ್ಣಿಮೆಗಳು ಸಂಭವಿಸಲು ಕಾರಣ-ಪ್ರತಿದಿನ ಚಂದ್ರ 48 ರಿಂದ 50 ನಿಮಿಷ ತಡವಾಗಿ ಉದಯಿಸುತ್ತಾನೆ.

🌍 ನಾಸಾ ಎಂದರೆ- ನ್ಯಾಷನಲ್ ಎರೊನಾಟಿಕಲ್ ಎಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್

🌍 ಸುನೀತ ವಿಲಿಯಮ್ಸ್ ಅಂತರಿಕ್ಷದಲ್ಲಿ ಎಷ್ಟು ದಿನ ಕಳೆದಿದ್ದರು- 195

🌍 ಮೊಟ್ಟ ಮೊದಲ ಭಾರತೀಯ ಅಂತರಿಕ್ಷ ಯಾತ್ರಿ- ರಾಕೇಶ ಶರ್ಮ

🌍 ಅಸ್ಟರಾಯಿಡಸ್ ( ಕ್ಷುದ್ರಗ್ರಹ) ಗಳು ಎಲ್ಲಿರುತ್ತವೆ- ಮಂಗಳ ಮತ್ತು ಗುರುಗ್ರಹಗಳ ಕಕ್ಷೆಗಳ ನಡುವೆ.

🌎 ಅತಿ ದೊಡ್ಡ ನಾಲ್ಕು ಕ್ಷುದ್ರಗ್ರಹಗಳು – ಸಿರೆಸ್, ಪಲಾಸ್, ಜೂನೊ,ವೆಸ್ತಾ

🌎 ಯಾವ ದಿನಾಂಕಗಳಂದು ಹಗಲು ರಾತ್ರಿಗಳ ಅವಧಿ ಸಮವಾಗಿರುತ್ತದೆ.-
ಮಾರ್ಚ 21 ಮತ್ತು ಸೆಪ್ಟೆಂಬರ್ 22

🌎 ಹಗಲಿನ ಅವಧಿ ಈ ದಿನದಲ್ಲಿ ಹೆಚ್ಚಾಗಿದೆ-
ಜೂನ್ 22

🌎 ರಾತ್ರಿಯ ಅವಧಿ ಈ ದಿನದಲ್ಲಿ ಅತಿ ಹೆಚ್ಚಾಗಿದೆ- ಡಿಸೆಂಬರ್ 22

🌎 ಇತ್ತೀಚೆಗೆ ಗ್ರಹದ ಸ್ಥಾನಮಾನವನ್ನು ಕಳೆದುಕೊಂಡು ಗ್ರಹ -ಪ್ಲೂಟೋ

ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..








ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area