ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕೇರಳದಲ್ಲಿ ಮೊದಲ ಬಾರಿಗೆ ‘ಗ್ರೀನ್‌ ಚೆಕ್‌ಪೋಸ್ಟ್‌’

ಕೇರಳದಲ್ಲಿ ಮೊದಲ ಬಾರಿಗೆ ‘ಗ್ರೀನ್‌ ಚೆಕ್‌ಪೋಸ್ಟ್‌’


ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ‘ವಾಗಮನ್‌’ ಬೆಟ್ಟ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ‘ಗ್ರೀನ್‌ ಚೆಕ್‌ಪೋಸ್ಟ್‌’ಗಳನ್ನು ಕೇರಳ ಸರ್ಕಾರ ಸ್ಥಾಪಿಸಿದೆ.

ಇಲ್ಲಿನ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಈ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಗುರಿಯನ್ನು ಇರಿಸಿಕೊಂಡು, ಬೆಟ್ಟಕ್ಕೆ ಇರುವ ಐದು ಪ್ರವೇಶ ಮಾರ್ಗಗಳಲ್ಲಿ ‘ಹರಿತ ಕೇರಳಂ’(ಹಸಿರು ಕೇರಳ)ಯೋಜನೆಯಡಿ  ‘ಹಸಿರುಸೇನೆ’ಯನ್ನು ಸರ್ಕಾರ ನಿಯೋಜಿಸಿದೆ.

ಈ ಪ್ರದೇಶದಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಪ್ಲಾಸ್ಟಿಕ್‌ ಸೇರಿದಂತೆ ಇತರೆ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ, ಹಿಂದಿನ ಸೌಂದರ್ಯವನ್ನು ಮರುಕಳಿಸುವ ಉದ್ದೇಶದಿಂದ ಈ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area