ನಿಮ್ಮ ಜಮೀನಿನ ಪೂರ್ಣ ಸರ್ವೇ ನಕ್ಷೆ ಉಚಿತವಾಗಿ ನಿಮ್ಮ ಮೊಬೈಲ್‌ನಲ್ಲಿ!
ನಿಮ್ಮ ಹೊಲ, ಗದ್ದೆಗಳ ಸರ್ವೇ ನಂಬರ್, ನಕ್ಷೆ ಹಾಗೂ ಒತ್ತುವರಿ ವಿವರಗಳನ್ನು ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ! ಕರ್ನಾಟಕ ಸರ್ಕಾರದ ದಿಶಾಂಕ್ ಆಪ್ ಬಳಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲ್ಲಾ ರೈತ ಬಾಂಧವರಿಗೆ ನಮಸ್ಕಾರ! ಇಂದಿನ ಲೇಖನದಲ್ಲಿ, ನಿಮ್ಮ ಭೂಮಿಯ ನಕ್ಷೆ (Land Map), ಸರ್ವೇ ನಂಬರ್ (Survey Number) ಮತ್ತು ಭೂಮಿಯ ಒತ್ತುವರಿ (Land Encroachment) ಆಗಿರುವ ಬಗ್ಗೆ ಮಾಹಿತಿಯನ್ನು ನಿಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿಯೇ ದಿಶಾಂಕ್ ಆಪ್ (Dishank App) ಅನ್ನು ಬಳಸಿಕೊಂಡು ಹೇಗೆ ಪಡೆಯುವುದು ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಸಲಿದ್ದೇವೆ.
ಹೌದು, ಇದು ರೈತರಿಗೆ ನಿಜಕ್ಕೂ ಸಂತಸದ ಸುದ್ದಿ! ಏಕೆಂದರೆ ಈ ಮೊದಲು ಸರ್ವೇ ನಂಬರ್ ತಿಳಿಯಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್‌ಗಳನ್ನು ಕರೆಯಬೇಕಿತ್ತು. ಆದರೆ ಇನ್ನು ಮುಂದೆ ಆ ತಲೆಬಿಸಿ ಇರುವುದಿಲ್ಲ. ನೀವು ಈ ಎಲ್ಲ ವಿಷಯಗಳ ಬಗ್ಗೆ ಮನೆಯಲ್ಲಿ ಕುಳಿತೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ದಿಶಾಂಕ್ ಆಪ್‌ನಿಂದ ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಅಮೂಲ್ಯ ಸಮಯ ಉಳಿತಾಯವಾಗುವುದಲ್ಲದೆ, ಕಚೇರಿಗಳಿಗೆ ಅಲೆಯುವ ತೊಂದರೆಯೂ ತಪ್ಪುತ್ತದೆ. ಇಂತಹ ಉಪಯುಕ್ತ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್‌ಗೆ ತಕ್ಷಣವೇ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕ್ಷೆಗಳ ಆಧಾರದ ಮೇಲೆ ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕಂದಾಯ ಇಲಾಖೆಯು ಪರಿಚಯಿಸಿರುವ ಈ ಅಪ್ಲಿಕೇಶನ್ ಎಲ್ಲಾ ರೈತ ಮಿತ್ರರಿಗೂ ಬಹಳ ಸಹಾಯಕವಾಗಿದೆ. ಅಷ್ಟೇ ಅಲ್ಲದೆ, ನಿಮ್ಮ ಆಸ್ತಿಯ ಜಾಗವು ಸರ್ಕಾರದ ವಶದಲ್ಲಿದೆಯೇ, ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು.
ದಿಶಾಂಕ್ ಆಪ್ – ಒಂದು ಪರಿಚಯ:
ದಿಶಾಂಕ್ ಆಪ್ ಸಾಮಾನ್ಯ ಜನರಿಗೆ ಒಂದು ಅತ್ಯುತ್ತಮ ಸಾಧನವಾಗಿದೆ. ಈ ಅಪ್ಲಿಕೇಶನ್ ಅನ್ನು ಈಗಾಗಲೇ ಸುಮಾರು ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ. ನೀವು ನಿಂತಿರುವ ಜಾಗದ ಮಾಲೀಕತ್ವದ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. ನಿಮ್ಮ ಸರ್ವೇ ಸ್ಕೆಚ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಹೇಗೆ ನೋಡುವುದು ಎಂಬುದನ್ನು ಸಹ ಈ ಲೇಖನದಲ್ಲಿ ತಿಳಿಸಲಾಗುವುದು.
ಅಪ್ಲಿಕೇಶನ್ ಬಳಸುವ ವಿಧಾನ:
1. ಮೊದಲಿಗೆ ನಿಮ್ಮ ಫೋನಿನಲ್ಲಿ ಪ್ಲೇ ಸ್ಟೋರ್ ಆಪ್ ಅನ್ನು ತೆರೆಯಿರಿ ಮತ್ತು ಅದರಲ್ಲಿ ಡಿಶಾಂಕ್ ಆಪ್ ಎಂದು ಟೈಪ್ ಮಾಡಿ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದು ಕರ್ನಾಟಕ ಸರ್ಕಾರದ ಅಧಿಕೃತ ಆಪ್ ಆಗಿದ್ದು, ಇದನ್ನು ತೆರೆಯಿರಿ.
2. ನಿಮ್ಮ ಮೊಬೈಲ್‌ನಲ್ಲಿ ಓಪನ್ ಮಾಡಿದ ನಂತರ, ಇದಕ್ಕೆ ಅಕ್ಸೆಸ್ ಪರ್ಮಿಷನ್ ನೀಡಬೇಕಾಗುತ್ತದೆ. ಅದಕ್ಕಾಗಿ ನೀವು ಹಲೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಮುಂದುವರೆದು ನೀವು ಅಪ್ಲಿಕೇಶನ್‌ನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಎರಡು ಭಾಷೆಗಳಿರುತ್ತವೆ: ಕನ್ನಡ ಮತ್ತು ಇಂಗ್ಲಿಷ್. ನೀವು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
4. ಹೋಂ ಪೇಜ್ ತೆರೆದ ನಂತರ, ನೀವು ನಿಂತಿರುವ ಸ್ಥಳವು ಯಾರ ಹೆಸರಿನಲ್ಲಿದೆ, ಅದರ ಸರ್ವೇ ನಂಬರ್ ಎಷ್ಟು, ಮತ್ತು ಅದರ ವಿಸ್ತೀರ್ಣವನ್ನು ಸಹ ಅಳೆಯಬಹುದು. ಸರ್ಕಾರಿ ಅಧಿಕಾರಿಗಳು ನಿಮ್ಮ ಜಾಗಕ್ಕೆ ಭೇಟಿ ನೀಡಿದಾಗಲೂ ಸಹ ಇದೇ ಆಪ್ ಅನ್ನು ಬಳಸಿಕೊಂಡು ಸರ್ವೇ ಮಾಡುತ್ತಾರೆ.
5. ಈ ಆಪ್‌ನಲ್ಲಿ, ನಿಮ್ಮ ಬಲಭಾಗದಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರಾಜ್ಯದ ಗಡಿಭಾಗ ಯಾವ ಬಣ್ಣದಲ್ಲಿದೆ ಹಾಗೂ ನಿಮ್ಮ ಜಿಲ್ಲೆಯ ಗಡಿ, ತಾಲೂಕಿನ ಗಡಿ, ಹೋಬಳಿ ಗಡಿ, ಗ್ರಾಮದ ಗಡಿ ಯಾವ ಬಣ್ಣದಲ್ಲಿದೆ ಎಂಬ ಮಾಹಿತಿಯನ್ನು ನೀಡುತ್ತದೆ.
6. ಹಾಗೆಯೇ, ಅಕ್ಕಪಕ್ಕದ ಸರ್ವೇ ನಂಬರ್‌ಗಳಲ್ಲಿ ವಸತಿ ಇದೆಯೇ ಅಥವಾ ಬೆಟ್ಟಗಳಿವೆಯೇ, ನದಿ, ಟ್ಯಾಂಕ್ ಅಥವಾ ಯಾವುದೇ ಸರ್ಕಾರಿ ಯೋಜನೆ ಇದೆಯೇ ಎಂಬುದರ ಮಾಹಿತಿಯನ್ನು ಸಹ ತಿಳಿಸುತ್ತದೆ.
7. ಅದರ ಕೆಳಗಿನ ಭಾಗದಲ್ಲಿ ನಿಮಗೆ ನಾಲ್ಕು ಮುಖ್ಯ ಆಯ್ಕೆಗಳು ದೊರೆಯುತ್ತವೆ: ಮಾಪನ ಸಾಧನಗಳು, ಸರ್ವೇ ನಂಬರ್ ಹುಡುಕಿ, ಸ್ಥಳದ ವರದಿ ಮತ್ತು ಮ್ಯಾಪ್‌ಗಾಗಿ ಒತ್ತಿರಿ.
"ಸರ್ವೇ ನಂಬರ್ ಹುಡುಕಿ" ಆಯ್ಕೆಯನ್ನು ಬಳಸುವ ವಿಧಾನ:
ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ನಮೂದಿಸಬೇಕು. ನಂತರ ನಿಮ್ಮ ಸರ್ವೇ ನಂಬರ್ ಅನ್ನು ನಮೂದಿಸಿ ಮತ್ತು ಹೋಗಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಷ್ಟು ವಿವರಗಳನ್ನು ಆಯ್ಕೆ ಮಾಡಿದ ನಂತರ, ನಿಮಗೆ ಆ ಸರ್ವೇ ನಂಬರಿನ ನಕ್ಷೆಯ ರೇಖಾಚಿತ್ರ ದೊರೆಯುತ್ತದೆ. ಇದರಲ್ಲಿ ನೀವು ಕುಳಿತಿರುವ ಸ್ಥಳದಿಂದ ಆ ಜಾಗ ಎಷ್ಟು ದೂರದಲ್ಲಿದೆ ಎಂಬ ವಿವರವೂ ಸಹ ದೊರೆಯುತ್ತದೆ. ಹೆಚ್ಚಿನ ವಿವರಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಮತ್ತು ನೀವು ಮೊದಲೇ ನಿಮ್ಮ ಇಸೇ ನಂಬರ್ ಅನ್ನು ನಮೂದಿಸಿದ್ದರೆ, ಆ ಜಾಗದ ಮಾಲೀಕರ ಹೆಸರು ನಿಮಗೆ ತಿಳಿಯುತ್ತದೆ.
"ತಳದ ವರದಿ" ಆಯ್ಕೆಯನ್ನು ಬಳಸುವ ವಿಧಾನ:
ನೀವು ಈ ಆಯ್ಕೆಯನ್ನು ಆರಿಸಿದ ತಕ್ಷಣ, ನಿಮ್ಮ ಸರ್ವೇ ನಂಬರ್ ಅಥವಾ ಅದು ಒಳಗೊಂಡಿರುವ ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲೆಯ ಹೆಸರುಗಳು ಹಾಗೂ ನಿಮ್ಮಿಂದ 30 ಮೀಟರ್ ಅಂತರದಲ್ಲಿರುವ ನೆರೆಯ ಸರ್ವೇ ನಂಬರ್‌ಗಳ ಮಾಹಿತಿಯು ನಿಮಗೆ ಲಭ್ಯವಾಗುತ್ತದೆ. "ಹೆಚ್ಚಿನ ವಿವರಗಳು" ಎಂಬ ಬಟನ್ ಅನ್ನು ಒತ್ತಿದರೆ, ನೀವು ಪ್ರಸ್ತುತ ನಿಂತಿರುವ ಭೂಮಿಯ ಮಾಲೀಕರು ಯಾರು ಎಂಬ ಸ್ಪಷ್ಟ ಚಿತ್ರಣವನ್ನು ಸಹ ಪಡೆಯಬಹುದು.
"ಮ್ಯಾಪ್‌ಗಾಗಿ ಒತ್ತಿ" ಆಯ್ಕೆಯನ್ನು ಬಳಸುವ ವಿಧಾನ:
ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಜಾಗದ ನಕ್ಷೆಯ ವಿವರವನ್ನು ನಿಮಗೆ ತೋರಿಸುತ್ತದೆ. ಸರ್ವೇ ನಂಬರ್ ಮತ್ತು ಮಾಲೀಕರು ಯಾರು ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು.
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ. ಹೆಚ್ಚಿನ ಕೃಷಿ ಸಂಬಂಧಿತ ಮತ್ತು ತಂತ್ರಜ್ಞಾನ ಮಾಹಿತಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.
No comments:
Post a Comment
If you have any doubts please let me know