ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ಸಂಪೂರ್ಣ ಜೀವನ ಚರಿತ್ರೆ

 ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ಸಂಪೂರ್ಣ ಜೀವನ ಚರಿತ್ರೆ:

ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ಸಂಪೂರ್ಣ ಜೀವನ ಚರಿತ್ರೆ Dmitri Mendaleev Life Story in Kannada_www.edutubekannada

ಡಿಮಿಟ್ರಿ ಮೆಂಡಲೀವ್‌ರವರು ರಷ್ಯದ ರಸಾಯನಶಾಸ್ತ್ರಜ್ಞ. ಅವರು ಆವರ್ತ ಕೋಷ್ಟಕವನ್ನು ಕಂಡುಹಿಡಿದರು ಮತ್ತು ಅವರ ಜೀವನವನ್ನೇ ರಸಾಯನಾಸ್ತ್ರದ ಸಂಶೋಧನೆಗಾಗಿ ಮುಡುಪಾಗಿಟ್ಟಿದ್ದರು. ಇಂದು ಫೆಬ್ರುವರಿ 8 ಅವರ ಜನ್ಮದಿನ.


ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ಆರಂಭಿಕ ಜೀವನ:


ಮೆಂಡಲೀವ್‌ರವರು ವರ್ಕ್‌ ನಿ ಅರೆಂಜ಼ನಿ ಎಂಬ ಹಳ್ಳಿಯಲ್ಲಿ 1834 ರ ಫೆಬ್ರುವರಿ 8 ರಂದು ಜನಿಸಿದರು. ಈ ಹಳ್ಳಿಯು ಸೈಬೇರಿಯಾದಲ್ಲಿದೆ. ಇವಾನ್ ಪಾವ್ಲೊವಿಚ್ ಮೆಂಡಲೀವ್ ಮತ್ತು ಮರಿಯ ಡಿಮಿಟ್ರಿಯಿವ್ ಮೆಂಡಲೀವ, ಮೆಂಡಲೀವ್‌ರವರ ಪೋಷಕರು. ಅವರ ತಾತ ಪಾವೆಲ್ ಮ್ಯಾಕ್ಸಿಮೊವಿಚ್ ಸೊಕೊಲೊವ್ ಟೂರ್ ಪ್ರದೇಶದಲ್ಲಿರುವ ರಷ್ಯನ್ ಧಾರ್ಮಿಕ ಚರ್ಚ್ ನಲ್ಲಿ ಧರ್ಮಗುರುಗಳಾಗಿದ್ದರು.


ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ವಿದ್ಯಾಭ್ಯಾಸ:


ಅವರ ಉನ್ನತ ವಿದ್ಯಾಭ್ಯಾಸಕ್ಕಾಗಿ 1849ರಲ್ಲಿ ಮೆಂಡಲೀವ್‌ರವರ ತಾಯಿ ಮೆಂಡಲೀವ್‌ರವರೊಡನೆ ರಷ್ಯಾದೆಲ್ಲೆಡೆ ಸಂಚರಿಸಿದರು. ಮಾಸ್ಕೋನ ವಿಶ್ವವಿದ್ಯಾನಿಲಯ ಮೆಂಡಲೀವ್‌ರವರ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಿಲ್ಲ, ಬಡ ಮೆಂಡಲೀವ್ ರವರ ಕುಟುಂಬ ಸೆಂಟ್ ಪೀಟರ್ಸ್ ಬರ್ಗ್‌ಗೆ ಹಿಂತಿರುಗಿದರು. ಮೆಂಡಲೀವ್‌ರವರು 1850ರಲ್ಲಿ

ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಮೆಯಿನ್ ಪೆಡಗಾಜಿಕಲ್ ಇನ್ಸ್ಟಿಟ್ಯೂಟ್‌ನಲ್ಲಿ ಪ್ರವೇಶ ಪಡೆದರು. ಅವರ ಪದವಿ ನಂತರ ಅವರಿಗೆ ಟಿ.ಬಿ ಸೋಂಕು ತಗುಲಿತು. ಇದರಿಂದಾಗಿ ಕಪ್ಪುಸಾಗರದ ಉತ್ತರ ತೀರದಲ್ಲಿರುವ ಕ್ರಿಮಿಯನ್ ಪೆನಿನ್‌ಸುಲಿಗೆ 1855ರಲ್ಲಿ ಪ್ರಯಾಣ ಬೆಳೆಸಿದರು. ಅವರು ಅಲ್ಲಿರುವ ಸಿಮ್‌ಫೆರೋಪೊಲ್ ಜಿಮ್ನಾಯಿಸಮ್ ನಂ.1 ರಲ್ಲಿ ವಿಜ್ಞಾನದಲ್ಲಿ ಪ್ರಾವಿಣ್ಯ ಹೊಂದಿದರು. ಅವರು 1857ರಲ್ಲಿ ಉತ್ತಮ ಆರೋಗ್ಯ ದೊಂದಿಗೆ ಸೆಂಟ್ ಪೀಟರ್ಸ್‌ಬರ್ಗ್‌ಗೆ ಮರಳಿದರು.

ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ವೃತ್ತಿ ಜೀವನ


  • 1859 ರಿಂದ 1861ರ ನಡುವೆ ಅವರು ಹೈಡೆಲ್ಬರ್ಗ್‌ನಲ್ಲಿ ದ್ರವ ಕ್ಯಪಿಲರಿಯನ್ನು ಹಾಗು ರೋಹಿತದ ಬಗ್ಗೆ ಅಧ್ಯಯನ ಮಾಡಿದರು.
  •  1861ರ ಆಗಸ್ಟ್ ಅಂತ್ಯದಲ್ಲಿ ಅವರು ರೋಹಿತ ವಿಷಯದ ಮೇಲೆ ತಮ್ಮ ಮೊದಲ ಪುಸ್ತಕವನ್ನು ಬರೆದರು.
  • 1865ರಲ್ಲಿ ನೀರಿನೊಂದಿಗೆ ಆಕ್ಕೋಹಾಲ್‌ನ ಸಮ್ಮಿಶ್ರಣದ ಕುರಿತು ಬರೆದ ಅವರ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿತು.
  •  1867 ರಲ್ಲಿ ಮೆಂಡಲೀವ್ ರವರಿಗೆ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿತು.
  • 1871ರಲ್ಲಿ ಸೆಂಟ್ ಪೀಟರ್ಸ್‌ಬರ್ಗ್‌ನ ರಸಾಯನಶಾಸ್ತ್ರ ವಿಭಾಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಮಾಡಿದರು.
  • ಅವರಿಗೆ 1882ರಲ್ಲಿ ರಾಯಲ್ ಸೊಸೈಟಿ ಆಫ್ ಲಂಡನ್ ನೀಡುವ ಡೇವಿ ಮೆಡಲ್ ದೊರಕಿತು. 
  • 17 ಆಗಸ್ಟ್ 1890 ರಲ್ಲಿ ಅವರು ಸೆಂಟ್ ಪೀಟರ್ಸ್‌ಬರ್ಗ್ ವಿಶ್ವವಿದ್ಯಾನಿಲಯಕ್ಕೆ ರಾಜಿನಾಮೆ ನೀಡಿದರು. 
  • 1892ರಲ್ಲಿ ರಾಯಲ್ ಸೊಸೈಟಿಯ ವಿದೇಶ ಪ್ರತಿನಿಧಿಯಾಗಿ ಆಯ್ಕೆಯಾದರು. 
  • 1905ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್‌ನ ಸದಸ್ಯರಾಗಿ ಮೆಂಡಲೀವ್‌ರವರು ಆಯ್ಕೆಯಾದರು.

ಮೆಂಡಲೀವ್‌ರವರ ಆವರ್ತ ಕೋಷ್ಟಕದ ಕುರಿತ ಸಂಶೋಧನೆಗಾಗಿ 1906ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಸಮಿತಿಯು ಸ್ವೀಡಿಷ್‌ ಅಕಾಡೆಮಿಗೆ, ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲು ಶಿಫಾರಸು ಮಾಡಿತು. ಸ್ವೀಡಿಷ್ ಅಕಾಡೆಮಿಯ ರಸಾಯನಶಾಸ್ತ್ರ ವಿಭಾಗದವರು ಇದಕ್ಕೆ ಸಹಕರಿಸಿದರು. ಅಕಾಡೆಮಿಯ ಸದಸ್ಯರ ಒಮ್ಮತದಂದೆ ಒಬ್ಬರನ್ನು ಆಯ್ಕೆಮಾಡಲಾಗುತ್ತದೆ. ಸಮಿತಿಯ ಹಿರಿಯ ಸದಸ್ಯರಾದ ಪೀಟರ್ ಕ್ಲಾಸನ್, ಹೆನ್ರಿ ಮೊಯಿಸನ್‌ರವರನ್ನು ಶಿಫಾರಸು ಮಾಡುತ್ತಾರೆ. ಸ್ವಾಂಟೆ ಅರೇನಿಯಸ್, ರಸಾಯನಶಾಸ್ತ್ರದ ನೊಬಲ್ ಕಮಿಟಿಯ ಸದಸ್ಯರಾಗಿರದಿದ್ದರೂ, ಅಲ್ಲಿನ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.


ಅರೇನಿಯಸ್‌ರವರು ಆವರ್ತಕ ವ್ಯವಸ್ಥೆಯು ತುಂಬಾ ಹಳೆಯದೆಂದು ಹೇಳಿದ್ದರಿಂದ ಮೆಂಡಲೀವ್‌ರವರು ಪ್ರಶಸ್ತಿಯಿಂದ ವಂಚಿತರಾದರು. ಅರೇನಿಯಸ್‌ರವರ ವಿಘಟನೆಯ ಸಿದ್ದಾಂತವನ್ನು ಮೆಂಡಲೀವ್‌ರವರು ಟೀಕಿಸಿದ್ದರಿಂದ ಅಲ್ವೇನಿಯಸ್‌ರವರಿಗೆ ಮೆಂಡಲೀವ್‌ರವರ ಮೇಲೆ ದ್ವೇಷವಿತ್ತೆಂದು ಅವರ ಸಮಕಾಲಿನರು ಹೇಳುತ್ತಾರೆ. ಎಲ್ಲಾ ವಾದ ವಿವಾದಗಳ ನಂತರ 1906ರ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಅಕಾಡೆಮಿಯ ಸದಸ್ಯರೆಲ್ಲಾ ಸೇರಿ ಮೊಯಿಸನ್ ರವರನ್ನು ಆಯ್ಕೆ ಮಾಡಿದರು. ಪುನಃ 1907ರಲ್ಲಿ ಮೆಂಡಲೀವ್‌ರವರಿಗೆ ಪ್ರಶಸ್ತಿ ಕೈ ತಪ್ಪಿತು. 


ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ನಿಧನ:


1907ರಲ್ಲಿ ಇನ್‌ಫೂಯೆಂಜ್ ಕಾಯಿಲೆಯಿಂದಾಗಿ ತಮ್ಮ 72 ನೇ ವಯಸ್ಸಿನಲ್ಲಿ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಿಧನರಾದರು. 101 ಪರ ವಾಣು ಸಂಖ್ಯೆಯ 'ಮೆಂಡಲೀವಿಯಮ್' ಅನ್ನು ಡಿಮಿಟ್ರಿ ಮೆಂಡಲೀವ್‌ರವರ ಗೌರವಾರ್ಥ ಈ ಮೂಲಧಾತುವಿಗೆ ನಾಮಕರಣ ಮಾಡಲಾಗಿದೆ.

ರಸಾಯನ ಶಾಸ್ತ್ರದಲ್ಲಿ ಅತ್ಯಂತ ಆಸಕ್ತಿಯಿದ್ದ ಮೆಂಡಲೀವ್ ತಮ್ಮ 21ನೇ ವಯಸ್ಸಿನಲ್ಲೇ 500ಕ್ಕಿಂತಲು ಹೆಚ್ಚು ಪುಟಗಳನ್ನೊಳಗೊಂಡು ಪುಸ್ತಕವನ್ನು 64 ದಿನದಲ್ಲೇ ಹಗಲು ರಾತ್ರಿ ಬರೆದರು. ಜ್ಞಾನದ ಸಮುದ್ರ ತುಂಬಾ ಸುಂದರವಾಗಿದೆ, ಈ ಸಮುದ್ರಕ್ಕೆ ಎಲ್ಲಾ ಜನತೆ ಸೇರಿ ಅದರ ಸಂತೋಷವನ್ನು ಸವಿಯಬೇಕು ಹಾಗಾಗಿ ಈ ಸಮುದ್ರಕ್ಕೆ ಎಲ್ಲರನ್ನು ಕರೆತರುವ ಕೆಲಸವನ್ನು ಮಾಡಲು ತುಂಬಾ ಸಂತೋಷವೆಂದು ಮೆಂಡಲೀವ್ ನಂಬಿದ್ದರು. ಹಾಗೇ ಜೀವನ ನಡೆಸಿದರು. ಇದರ ಸ್ಫೂರ್ತಿಯನ್ನು ನಾವೂ ಪಡೆದು ವಿಜ್ಞಾನವನ್ನು ಪಸರಿಸುವ ಕಾರ್ಯ ಮಾಡಬೇಕಿದೆ.


ಡಿಮಿಟ್ರಿ ಮೆಂಡಲೀವ್‌ರವರ ಆವರ್ತ ಕೋಷ್ಟಕ:

ಆಧುನಿಕ ಆವರ್ತ ಕೋಷ್ಟಕದ ಜನಕ ಡಿಮಿಟ್ರಿ ಮೆಂಡಲೀವ್ ರವರ ಸಂಪೂರ್ಣ ಜೀವನ ಚರಿತ್ರೆ Dmitri Mendaleev Life Story in Kannada_www.edutubekannada


ಶಿಕ್ಷಕರಾದ ನಂತರ ಮೆಂಡಲೀವ್‌ರವರು ಪ್ರಿನ್ಸಿಪಲ್ಸ್ ಆಫ್ ಕೆಮಿಸ್ಟ್ರಿ (ಎರಡು ಸಂಪುಟಗಳು 1868-1870) ಎಂಬ ಪುಸ್ತಕವನ್ನು ಬರೆದರು. ಮೆಂಡಲೀವ್‌ರವರು ತಮ್ಮ ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳನ್ನು ಅದರ ರಸಾಯನಿಕ ಗುಣಲಕ್ಷಣಗಳ ಪ್ರಕಾರ ವಿಂಗಡಿಸಲು ತೀರ್ಮಾನಿಸಿದರು. ಈ ಮಾದರಿಯಲ್ಲಿ ಹೆಚ್ಚುವರಿ ಮೂಲಧಾತುಗಳನ್ನು ಸೇರಿಸುವ ಮೂಲಕ ಮೆಂಡಲೀವ್‌ರವರು ಆವರ್ತ ಕೋಷ್ಟಕದಲ್ಲಿ ಅವರ ವಿಸ್ತ್ರತ ಆವೃತ್ತಿಯನ್ನು ಅಭಿವೃದ್ಧಿಪಡಿಸಿದರು. 6 ಮಾರ್ಚ್ 1869ರಲ್ಲಿ ಮೆಂಡಲೀವ್‌ರವರು ಮೂಲಧಾತುಗಳನ್ನು ಅದರ ಪರಮಾಣು ತೂಕ ಮತ್ತು ವೆಲೆನ್ಸಿಯಾನುಸಾರ ವಿಂಗಡಿಸಬಹುದೆಂದು ರಷ್ಯನ್‌ ಕೆಮಿಕಲ್ ಸೊಸೈಟಿಯಲ್ಲಿ ಪ್ರಸ್ತುತ ಪಡಿಸಿದರು.


ಡಿಮಿಟ್ರಿ ಮೆಂಡಲೀವ್‌ರವರ ಆವರ್ತ ಕೋಷ್ಟಕದಲ್ಲಿನ ಕೆಲವು ಮುಖ್ಯ ಅಂಶಗಳು:


ಮೂಲಧಾತುಗಳನ್ನು ಅದರ ಪರಮಾಣು ತೂಕದ ಪ್ರಕಾರ ವಿಂಗಡಿಸಿದರೆ ಅವು ಒಂದು ಸ್ಪಷ್ಟ ಆವರ್ತನವನ್ನು ಪ್ರದರ್ಶಿಸುತ್ತದೆ. ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುವ ಮೂಲಧಾತುಗಳ ಪರಮಾಣು ತೂಕ ಸುಮಾರು ಒಂದೇ ರೀತಿಯಲ್ಲಿ ಇರುತ್ತದೆ (ಉದಾ:Pt, Ir, Os) ಅಥವಾ ನಿಯಮಿತವಾಗಿ ಹೆಚ್ಚಿರುತ್ತದೆ (ಉದಾ:K, Rb, Cs).. ಮೂಲಧಾತುಗಳನ್ನು ಅದರ ಪರಮಾಣುತೂಕದ ಪ್ರಕಾರ ವಿಂಗಡಿಸಿದರೆ, ಮೂಲಧಾತುಗಳ ಪರಮಾಣು ತೂಕ, ವೆಲೆನ್ಸಿಗೆ ಅನುರೂಪವಾಗಿರುತ್ತದೆ ಹಾಗು ಸ್ವಲ್ಪಮಟ್ಟಿಗೆ ಅದರ ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುತ್ತದೆ. ಇದನ್ನು ನಾವು Li, BB, C, N, O ಮತ್ತು ಈ ಸರಣಿಯಲ್ಲಿ ಕಾಣಬಹುದು. ಅತ್ಯಂತ ವ್ಯಾಪಕವಾಗಿ ಹರಡಿರುವ ಮೂಲಧಾತು ಸಣ್ಣಪರಮಾಣು ತೂಕ ಹೊಂದಿರುತ್ತದೆ. ಪರಮಾಣು ತೂಕ ಮೂಲಧಾತುವಿನ ಪಾತ್ರವನ್ನು ನಿರ್ಧರಿಸುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area