ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಪಂಡಿತ ದೀನ ದಯಾಳ ಉಪಾಧ್ಯಾಯರ ಸಂಪೂರ್ಣ ಜೀವನ ಚರಿತ್ರೆ

ಇಂದು ಪಂಡಿತ ದೀನದಯಾಳ ಉಪಾಧ್ಯಾಯ ರ ಸಂಸ್ಮರಣಾ ದಿನ

ಪಂಡಿತ ದೀನ ದಯಾಳ ಉಪಾಧ್ಯಾಯರ ಸಂಪೂರ್ಣ ಜೀವನ ಚರಿತ್ರೆ Pandith Deendayal Upadhyaya Complete Life History in Kannada

ಪಂಡಿತ ದೀನದಯಾಳ ಉಪಾಧ್ಯಾಯರು ಭಾರತ ಕಂಡ ಅದ್ಭುತ ದಾರ್ಶನಿಕ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತ. 1968ರ ಫೆಬ್ರವರಿ 11 ರಂದು ನಿಗೂಢ ರೀತಿಯಲ್ಲಿ ಮರಣಿಸಿದ ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯ ಸ್ಮರಣಾ ದಿನವಾದ ಇಂದು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಸುಸಂದರ್ಭ.


ಪಂಡಿತ ದೀನದಯಾಳ ಉಪಾಧ್ಯಾಯರು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದವರು. ಅವರು ಕಾಲವಾದ ನಂತರ ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬಿಜೆಪಿ ಉದಯಕ್ಕೆ ಕಾರಣವಾಯಿತು.


ಪಂಡಿತ ದೀನದಯಾಳ ಉಪಾಧ್ಯಾಯರ ಜನನ:


ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಗಲಾ ಚಂದ್ರವನ ಗ್ರಾಮದಲ್ಲಿ ದೀನದಯಾಳ ಉಪಾಧ್ಯಾಯರು ಜನಿಸಿದರು. ಅವರ ತಂದೆ ಭಗವತಿ ಪ್ರಸಾದ್ ಅವರು ಖ್ಯಾತ ಜ್ಯೋತಿಷಿಯಾಗಿದ್ದರು. ದೀನದಯಾಳರು 3 ವರ್ಷದವರಾಗಿದ್ದಲೇ ತಂದೆಯನ್ನು ಕಳೆದುಕೊಂಡರು. ಮುಂದೆ, ಅವರ ತಾಯಿ ಶ್ರೀಮತಿ ರಾಮ್ ಪ್ಯಾರಿ ಅವರೇ ದೀನದಯಾಳರ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತರು. ಆದರೆ ದೀನದಯಾಳರಿಗೆ 8 ವರ್ಷವಾದಾಗ ಅವರ ತಾಯಿಯೂ ಇಹಲೋಕ ತ್ಯಜಿಸಿದರು.


ಪಂಡಿತ್ ದೀನದಯಾಳ್ ಉಪಾಧ್ಯಾಯರ ಶಿಕ್ಷಣ:


ಚಿಕ್ಕ ವಯಸ್ಸಿನಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡ ದೀನದಯಾಳ್ ಶಿಕ್ಷಣದಲ್ಲಿ ಅಪ್ರತಿಮ ಬುದ್ಧಿಮತ್ತೆ ತೋರಿದ. ಸಿಕಾರ್ ಮಹಾರಾಜ ಕಲ್ಯಾಣ್ ಸಿಂಗ್ ದೀನದಯಾಳರಿಗೆ ಬಂಗಾರದ ಪದಕ ನೀಡಿ, ಆತನ ಶಿಕ್ಷಣಕ್ಕೆ ನೀರೆರೆದರು. ಮುಂದೆ ಪಿಲಾನಿಯಲ್ಲಿ ಬಿಟ್ಸ್ ಕಾಲೇಜಿನಲ್ಲಿ ಅಗ್ರ ಸ್ಥಾನದಲ್ಲಿ ವಿಜ್ಞಾನ ಪದವಿ (1939) ಪಡೆದರು.


ಅದಾದನಂತರ Provincial Services Exam ಬರೆದು, ಉತ್ತೀರ್ಣರಾದರೂ ಆಡಳಿತ ಸೇವೆಗೆ ಸೀಮಿತರಾಗದೆ ಜನಸಾಮಾನ್ಯರ ಸೇವೆಗೆ ಅಂಕಿತರಾದರು. 1937ರಲ್ಲಿ ಕಾನ್ಸುರದಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿ ಬಾಲೂಜಿ ಮಹಾಶಬ್ದ ಮೂಲಕ ಖಖಖಗೆ ಪರಿಚಿತರಾದರು.

ಆಡಲೇ ಸ್ಥಾಪಕ ಡಾ. ಹೆಗ್ಡೆವಾರ್ ಅವರನ್ನು ಭೇಟಿ ಮಾಡಿದ್ದು. 1942ರಿಂದ ಪೂರ್ಣ ಪ್ರಮಾಣದಲ್ಲಿ ಖಖಖ ಕಾರ್ಯಕರ್ತರಾದರು. ಮುಂದೆ 1951ರಲ್ಲಿ ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗ ದೀನದಯಾಳರು ಆ ಸಂಘಟನೆಯ ಮೊದಲ ಪ್ರಧಾನ ಕಾರ್ಯದರ್ಶಿಯಾದರು. 


ಪಂಡಿತ ದೀನದಯಾಳ ಉಪಾಧ್ಯಾಯರ ನಿಧನ:


1953ರಲ್ಲಿ ಶ್ಯಾಂ ಪ್ರಸಾದರ ನಿಧನಾನಂತರ ಭಾರತೀಯ ಜನಸಂಘವನ್ನು ಮುನ್ನಡೆಸುವ ಮಹತ್ತರ ಹೊಣೆ ದೀನದಯಾಳರ ಭುಜದ ಮೇಲೆ ಬಿತ್ತು. ಮುಂದೆ, 1968ರ ಫೆಬ್ರವರಿ 11 ರಂದು ಮೊಘಲ್ ಸರಾಯ್ ರೈಲು ನಿಲ್ದಾಣದಲ್ಲಿ ದೀನದಯಾಳರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ದುರಂತವೇ ಸರಿ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area