ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ರೆಗ್ಯುಲೇಟಿಂಗ್ ಕಾಯ್ದೆ 1773 ಸಂಪೂರ್ಣ ಮಾಹಿತಿ

 ರೆಗ್ಯುಲೇಟಿಂಗ್ ಕಾಯ್ದೆ 1773 ಸಂಪೂರ್ಣ ಮಾಹಿತಿ



ಈ ಕಾಯ್ದೆಯ ಮೂಲಕ ಬ್ರಿಟಿಷ್ ಸರ್ಕಾರವು ಮೊಟ್ಟ ಮೊದಲ ಬಾರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿತು.


ಕಾಯ್ದೆಯ ಲಕ್ಷಣಗಳು:


1. ಈ ಕಾಯ್ದೆಯ ಮೂಲಕ ಬಂಗಾಳದ ಗೌವರ್ನ‌್ರನ್ನು ಬಂಗಾಳದ ಗೌವರ್ನರ್ ಜನರಲ್‌ನನ್ನಾಗಿಸಲಾಯಿತು. ಬಂಗಾಳದ ಮೊದಲ ಗವರ್ನರ್ ಜನರಲ್ ಲಾರ್ಡ್‌ವಾರನ್ ಹೇಸ್ಟಿಂಗ್ಸ್, ಬಂಗಾಳದ ಗವರ್ನರ್ ಜನರಲ್‌ಗೆ ಆಡಳಿತದಲ್ಲಿ ನೆರವು ನೀಡಲು 4 ಮಂದಿ ಸದಸ್ಯರಿಂದ ಕೂಡಿದ ಒಂದು ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು.

2. ಈ ಕಾಯ್ದೆಯ ಮೂಲಕ ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳ ಗೌವರ್ನ‌್ರಗಳನ್ನು ಬಂಗಾಳದ ಗೌವರ್ನರ್ ಜನರಲ್‌ಗೆ ಅಧೀನ ಗೊಳಿಸಲಾಯಿತು.

3. ಈ ಕಾಯ್ದೆಯು ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಮೂವರು ಇತರೆ ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂಕೋರ್ಟ್‌ನ್ನು ಕಲ್ಕತ್ತಾದಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು.

4. ಈ ಕಾಯ್ದೆಯು ಯಾವುದೇ ಖಾಸಗಿ ವ್ಯವಹಾರದಲ್ಲಿ ತೊಡಗದಂತೆ ಮತ್ತು ಸ್ಥಳೀಯರಿಂದ ಕಾಣಿಕೆ ಅಥವಾ ಲಂಚ ಸ್ವೀಕರಿಸದಂತೆ ಈಸ್ಟ್ ಇಂಡಿಯಾ ಕಂಪನಿಯು ನೌಕರರ ಮೇಲೆ ನಿರ್ಬಧ ಹೇರಿತು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area