Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday 22 August 2024

23 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು


23 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು

23 august 2024 daily Current Affairs Question Answers Quiz in Kannada For All Competitive Exams ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು, GK Quiz Kannada



23rd August 2024 Kannada Daily Current Affairs Question Answers Quiz For All Competitive Exams

23 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿವೆ. ಈ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಅಥವಾ ರಸಪ್ರಶ್ನೆಗಳ ಬಹು ಆಯ್ಕೆಯ ಪ್ರಶ್ನೋತ್ತರಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಅತೀ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸುತ್ತವೆ. ಈ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಇತ್ತೀಚಿನ ಪ್ರಮುಖ ಪ್ರಚಲಿತ ವಿದ್ಯಮಾನಗಳ ಕುರಿತು ಹಾಗೂ ಪ್ರಮುಖ ಜಾಗತಿಕ ಘಟನೆಗಳ ಕುರಿತು ಹೆಚ್ಚಿನ ಜ್ಞಾನವನ್ನು ಪಡೆಯಬಹುದು.

23 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆಯೊಂದಿಗೆ ಉತ್ತಮವಾಗಿ ರಚಿಸಲಾದ ಪ್ರಪಂಚದ ಪ್ರಮುಖ ಘಟನೆಗಳ ಅರಿವು ಹೊಂದುವ ಮೂಲಕ ನೀವುಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮವಾಗಿ ತಯಾರಾಗಬಹುದು.

23 ಆಗಸ್ಟ್ 2024 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
  • ಆಗಸ್ಟ್-22 ಮದ್ರಾಸ್/ಚೆನ್ನೈ ದಿನ: ಆಗಸ್ಟ್ 22 ರ 1639 ರಂದು ಆಂಡ್ರ್ಯೂ ಕೋಗನ್ ಮತ್ತು ಫ್ರಾನ್ಸಿಸ್ ಡೇ ಅವರ ಕೋರಿಕೆಯಂತೆ ವಂಡಿವಾಷ್ ನ ಅರಸ ಡಮರ್ಲಾ ವೆಂಕಟಾದ್ರಿ ನಾಯಕ ರು ಈಸ್ಟ್ ಇಂಡಿಯಾ ಕಂಪನಿಗೆ ಸುಮಾರು 3 ಮೈಲು ಉದ್ದದ ಭೂಮಿಯನ್ನು ನೀಡಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಫೋರ್ಟ್ ಸೇಂಟ್ ಜಾರ್ಜ್ ಕೋಟೆಯ ನಿರ್ಮಾಣಕ್ಕೆ ಅನುಮತಿ ನೀಡಿದನು. ಮೂಲತಃ ಈ ಭೂಮಿಯು ಮದ್ರಾಸಪಟ್ಟಣ ಎಂಬ ಮೀನುಗಾರ ಗ್ರಾಮವಾಗಿತ್ತು. ಇದುವೇ ಬೆಳೆದು ಇಂದಿನ ಮೆಟ್ರೋಪಾಲಿಟನ್ ನಗರವಾದ ಮದ್ರಾಸ್/ಚೆನ್ನೈ ಎಂಬ ನಗರವಾಗಿದೆ. ಇದೇ ದಿನ ಅಂದರೆ 22 ಆಗಸ್ಟ್ 1996 ರಂದು ಮದ್ರಾಸ್ ನ್ನು ಚೆನ್ನೈ ಎಂದು ಮರುನಾಮಕರಣ ಮಾಡಲಾಯಿತು. ಭಾರತದಲ್ಲಿ ಬ್ರಿಟಿಷರು ನಿರ್ಮಿಸಿದ ಮೊಟ್ಟ ಮೊದಲ ಕೋಟೆ ಎಂಬ ಪ್ರಸಿದ್ಧಿ ಫೋರ್ಟ್ ಸೇಂಟ್ ಜಾರ್ಜ್ ಗೆ ಇದೆ. ಈ ಕೋಟೆ ಚೆನ್ನೈನಲ್ಲಿದೆ.


  • ವಿಶ್ವ ಸಸ್ಯ ಜನ್ಯ ಕ್ಷೀರ ದಿನ: ಆಗಸ್ಟ್-22: ಸಸ್ಯಾಧಾರಿತವಾದ ಹಾಲು ಲ್ಯಾಕ್ಟೋಸ್ ಮುಕ್ತವಾಗಿದೆ ಮತ್ತು ಹಸುವಿನ ಹಾಲಿಗೆ ಉತ್ತಮವಾದ ಪರ್ಯಾಯವಾಗಿದೆ. ವಿಶ್ವ ಸಸ್ಯ ಹಾಲು ದಿನವನ್ನು 2017 ರಲ್ಲಿ ಪ್ಲಾಂಟ್ ಬೇಸ್ಡ್ ನ್ಯೂಸ್ ನ ಸಹ ಸಂಸ್ಥಾಪಕ ರಾಬಿ ಲಾಕಿ ರಚಿಸಿದ್ದಾರೆ. ವಿಶ್ವ ಸಸ್ಯ ಜನ್ಯ ಕ್ಷೀರ ದಿನವನ್ನು ಪಿಬಿಎನ್ ಮತ್ತು ಪ್ರೊ ವೆಜ್ ನಡುವೆ ಸಹಯೋಗದಲ್ಲಿ ಆರಂಭವಾಯಿತು. ಸಸ್ಯ ಆಧಾರಿತ ಹಾಲು ಲ್ಯಾಕ್ಟೋಸ್ ಮುಕ್ತವಾಗಿರುವ ಕಾರಣ ಅದು ಸೇವನೆಗೆ ಅತಿ ಮುಖ್ಯವಾಗಿದೆ. ಸಸ್ಯ ಹಾಲು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು ಖನಿಜಗಳನ್ನು ಸುರಕ್ಷಿತವಾಗಿ ಒದಗಿಸುತ್ತದೆ. ಬಾದಾಮಿ ಹಾಲು, ಸೋಯಾ ಹಾಲು, ಗೋಡಂಬಿ ಹಾಲು, ಅಕ್ಕಿ ಹಾಲು, ಸೆಣಬಿನ ಹಾಲು ಮತ್ತು ಅಗಸೆ ಹಾಲು ಜನಪ್ರಿಯ ಸಸ್ಯ ಜನ್ಯ ಹಾಲುಗಳಾಗಿವೆ.


  • 2024 ರಲ್ಲಿ ಅತೀ ಹೆಚ್ಚಿನ ಚಿನ್ನ ಹೊಂದಿರುವ ದೇಶಗಳ ಪೈಕಿ ಅಮೇರಿಕ ಮುಂಚೂಣಿಯಲ್ಲಿದೆ: ಐಎಂಎಫ್ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿಯ ಅನುಸಾರ ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನ ಹೊಂದಿದ ಅಗ್ರ ಹತ್ತು ದೇಶಗಳಲ್ಲಿ ಭಾರತಕ್ಕೂ ಸ್ಥಾನವಿದೆ. ಈ ಸಾಲಿನಲ್ಲಿ ಅಮೇರಿಕ ದೇಶವು ಮೊದಲ ಸ್ಥಾನದಲ್ಲಿದ್ದು, ಅಮೇರಿಕವು 8,133 ಟನ್ ಬಂಗಾರವನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಜರ್ಮನಿ (3,351 ಟನ್) ಇಟಲಿ (2,452 ಟನ್), ಫ್ರಾನ್ಸ್ (2,437 ಟನ್), ರಷ್ಯಾ (2,336 ಟನ್), ಚೀನಾ (2,264 ಟನ್) ಸ್ವಿಟ್ಜರ್ಲೆಂಡ್ (1,040 ಟನ್) ಜಪಾನ್ (846 ಟನ್) ಹಾಗೂ ಭಾರತವ (831 ಟನ್) ನೆದರ್ಲೆಂಡ್ (612 ಟನ್) ಬಂಗಾರವನ್ನು ಹೊಂದಿವೆ. ಈ ಮಾಹಿತಿಯು 2024 ರ ಮೇ ತಿಂಗಳ ಅನುಸಾರವಿದೆ.


  • ಗ್ಯಾಸ್ಟ್ರೋಡಿಯಾ ಇಂಡಿಕಾ ಎಂಬ ವಿಭಿನ್ನ ಆರ್ಕಿಡ್ ಪತ್ತೆ: ಭಾರತದ ಸಿಕ್ಕಿಂ ನಲ್ಲಿರುವ ಫಾಂಬೋಗ್ಲೋ ವನ್ಯಜೀವಿ ಅಭಯಾರಣ್ಯದಲ್ಲಿ ಆರ್ಕಿಡ್ ಜಾತಿಯ ಗ್ಯಾಸ್ಟ್ರೋಡಿಯಾ ಇಂಡಿಕಾ ಎಂಬ ವಿಭಿನ್ನ ಸಸ್ಯ ಪತ್ತೆಯಾಗಿದೆ. ಸಸ್ಯಶಾಸ್ತ್ರಜ್ಞ ಮಧುಸೂಧನ ಖಾನಾಲ್ ಈ ಹೂವನ್ನು ಪತ್ತೆ ಹಚ್ಚಿದ್ದು, ಈ ಸಸ್ಯವು ತನ್ನ ಹೂವುಗಳನ್ನು ತೆರೆಯದಿರುವುದೇ ಇದರ ವಿಶೇಷತೆಯಾಗಿದೆ. 1950 ರಿಂದ 2010 ಮೀಟರ್ ಎತ್ತರದ ಪ್ರದೇಶದಲ್ಲಿ ಈ ಸಸ್ಯವು ಕಂಡುಬಂದಿದೆ. ಈ ಸಸ್ಯವು ಬೆದರಿಕೆಯ ಕಾರಣದಿಂದಲೇ ತನ್ನ ಹೂವುಗಳನ್ನು ಬಚ್ಚಿಡುತ್ತವೆ ಎಂಬ ವಿಚಾರವೂ ತಿಳಿದಿದೆ.


  • ಕೃಷಿ ಉತ್ಪನ್ನಗಳ ರಫ್ತು ಭಾರತಕ್ಕೆ 8 ನೇ ಸ್ಥಾನ: ವಿಶ್ವ ವ್ಯಾಪಾರ ಸಂಸ್ಥೆ (ವರ್ಲ್ಡ್ ಟ್ರೇಡ್ ಆರ್ಗನೈಸೇಷನ್) ನೀಡಿದ ವರದಿಯ ಅನುಸಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕೃಷಿ ಉತ್ಪನ್ನಗಳ ರಫ್ತಿನಲ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ವ್ಯಾಪಾರ ಸಂಸ್ಥೆಯ 2023 ನೇ ಸಾಲಿನ ಜಾಗತಿಕ ಕೃಷ ಉತ್ಪನ್ನಗಳ ರಫ್ತು ಕುರಿತು ವ್ಯಾಪಾರ ಅಂಕಿ ಅಂಶಗಳ ವರದಿಯಲ್ಲಿ ಈ ವಿಚಾರವು ಬಹಿರಂಗಗೊಂಡಿದೆ. ಟಾಪ್ ಮೊದಲ ದೇಶವಾಗಿ ಯುರೋಪಿಯನ್ ಒಕ್ಕೂಟವಿದ್ದರೆ ಎರಡನೆಯ ಸ್ಥಾನದಲ್ಲಿ ಅಮೇರಿಕ, ಬ್ರೆಜಿಲ್, ಚೀನಾ, ಕೆನಡಾ, ಮೆಕ್ಸಿಕೋ, ಇಂಡೋನೇಷ್ಯಾ, ಭಾರತ, ಆಸ್ಟ್ರೇಲಿಯಾ, ಥಾಯ್ಲೆಂಡ್ ದೇಶಗಳು ಕ್ರಮವಾಗಿ ಟಾಪ್ ಹತ್ತು ಸ್ಥಾನಗಳನ್ನು ಪಡೆದಿವೆ. WTO 1995 ರಲ್ಲಿ ಮರ್ರಾಕೇಶ್ ಒಪ್ಪಂದದ ಅಡಿಯಲ್ಲಿ ವ್ಯಾಪಾರ ಮತ್ತು ಸುಂಕಗಳ ಮೇಲಿನ ಸಾಮಾನ್ಯ ಒಪ್ಪಂದವನ್ನು (GATT) ಬದಲಿಸುವ ಮೂಲಕ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಇದರ ಕೇಂದ್ರ ಕಛೇರಿ ಇದೆ. ಪ್ರಸ್ತುತ, WTO 164 ಸದಸ್ಯರನ್ನು ಹೊಂದಿದೆ ಮತ್ತು ಭಾರತವು WTO ಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಯನ್ನು ಮೊದಲು GATT ಎಂದು ಕರೆಯಲಾಗುತ್ತಿತ್ತು. GATT ಅನ್ನು ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ (WTO) ಎಂದು 1 ಜನವರಿ 1955 ರಂದು ಮರುನಾಮಕರಣ ಮಾಡಲಾಯಿತು. General Agreement on Tariffs and Trade ಎಂಬುದು GATT ನ ವಿಸ್ತೃತ ರೂಪವಾಗಿದೆ.


  • ಜಂಟಿ ಮಿಲಿಟರಿ ತರಬೇತಿ ವ್ಯಾಯಾಮ "ಮಿತ್ರ ಶಕ್ತಿ": ಭಾರತ ಮತ್ತು ಶ್ರೀಲಂಕಾ ದೇಶಗಳು ಜಂಟಿ ಮಿಲಿಟರಿ ತರಬೇತಿ ವ್ಯಾಯಾಮ "ಮಿತ್ರ ಶಕ್ತಿ" ನಡೆಸುತ್ತಿವೆ.

  • ಅಶೋಕ್ ಕುಮಾರ್ ಇಎಸ್ ಐಸಿ ಮಹಾನಿರ್ದೇಶಕ: ಅಶೋಕ್ ಕುಮಾರ್ ಅವರು ನೌಕರರ ರಾಜ್ಯ ವಿಮಾ ನಿಗಮದ (ಇಎಸ್ ಐಸಿ) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ESIC ಭಾರತದಲ್ಲಿನ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒದಗಿಸುತ್ತದೆ.
  • ದಕ್ಷಿಣ ಕೊರಿಯಾ ಮತ್ತು ಅಮೆರಿಕದ ನಡುವೆ "ಉಲ್ಚಿ ಫ್ರೀಡಂ ಶೀಲ್ಡ್ ವ್ಯಾಯಾಮ": ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ "ಉಲ್ಚಿ ಫ್ರೀಡಂ ಶೀಲ್ಡ್ ವ್ಯಾಯಾಮ" ಪ್ರಾರಂಭವಾಗಿದೆ.
  • ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ಗೆ ರೆಫ್ರಿಯಾಗಿ ರೆಹ್ಲಾಂಗ್ ಧರ್: 8ನೇ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ಗೆ ರೆಫ್ರಿಯಾಗಿ ರೆಫ್ಲಾಂಗ್ ಧರ್ ಅವರನ್ನು ನೇಮಿಸಲಾಗಿದೆ. ಈ ಪ್ರತಿಷ್ಠಿತ ಪಂದ್ಯಾವಳಿಯು ಮಹಿಳಾ ಫುಟ್‌ಬಾಲ್‌ನಲ್ಲಿ ಯುವ ಪ್ರತಿಭೆಗಳನ್ನು ಪ್ರದರ್ಶಿಸುತ್ತದೆ.


  • ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ: ಹೈದರಾಬಾದ್ ವಿಮಾನ ನಿಲ್ದಾಣವು ಇಂಡಿಯಾ ಟ್ರಾವೆಲ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.

  • ನವದೆಹಲಿಯಲ್ಲಿ 19 ನೇ CII ಇಂಡಿಯಾ ಆಫ್ರಿಕಾ ಬಿಸಿನೆಸ್ ಕಾನ್ಕ್ಲೇವ್: 19 ನೇ CII ಇಂಡಿಯಾ ಆಫ್ರಿಕಾ ಬಿಸಿನೆಸ್ ಕಾನ್ಕ್ಲೇವ್ ನವದೆಹಲಿಯಲ್ಲಿ ಪ್ರಾರಂಭವಾಗಿದೆ.
  • ಅಲೈನ್ ಡೆಲೋನ್ (ನಟ) ನಿಧನ: ಖ್ಯಾತ ಫ್ರೆಂಚ್ ನಟ ಅಲೈನ್ ಡೆಲೋನ್ ನಿಧನ
  • ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ಬ್ರೆಜಿಲ್‌ನಲ್ಲಿ ಸಿಬ್ಬಂದಿ ಕೆಲಸದಿಂದ ವಜಾ: ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ಬ್ರೆಜಿಲ್‌ನಲ್ಲಿ ತನ್ನ ಸಿಬ್ಬಂದಿಯನ್ನು ತೆಗೆದುಹಾಕುವುದಾಗಿ ಘೋಷಿಸಿತು.

  • ನವದೆಹಲಿಯಲ್ಲಿ ಮೊದಲ ನೀತಿ ನಿರೂಪಕರ ವೇದಿಕೆಯನ್ನು ಜೆಪಿ ನಡ್ಡಾ ಉದ್ಘಾಟಿಸಿದರು: ಜೆಪಿ ನಡ್ಡಾ ಹೊಸ ದೆಹಲಿಯಲ್ಲಿ ಮೊದಲ ನೀತಿ ನಿರೂಪಕರ ವೇದಿಕೆಯನ್ನು ಉದ್ಘಾಟಿಸಿದರು.
  • ಮಲೇಷ್ಯಾ ಪ್ರಧಾನಿ ಭಾರತಕ್ಕೆ ಭೇಟಿ: ಮಲೇಷ್ಯಾ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದರು.
  • ಜಾರ್ಖಂಡ್ “ಮುಖ್ಯಮಂತ್ರಿ ಮೈಯಾ ಸಮ್ಮಾನ್ ಯೋಜನೆ” ಪ್ರಾರಂಭ: ಜಾರ್ಖಂಡ್ “ಮುಖ್ಯಮಂತ್ರಿ ಮೈಯಾ ಸಮ್ಮಾನ್ ಯೋಜನೆ” ಯನ್ನು ಪ್ರಾರಂಭಿಸಿದ್ದಾರೆ.
  • ಮಾಜಿ ಸೇನಾ ಮುಖ್ಯಸ್ಥ ಎಸ್.ಪದ್ಯನಾಭ ನಿಧನ: ಮಾಜಿ ಸೇನಾ ಮುಖ್ಯಸ್ಥ ಎಸ್.ಪದ್ಯನಾಭ ವಿಧಿವಶರಾಗಿದ್ದಾರೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 23 August 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ 


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್  ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

23 ಆಗಸ್ಟ್ 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ :


ಇಲ್ಲಿ ಒದಗಿಸಿರುವ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಉಪಯುಕ್ತವಾಗಿವೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

23 ಆಗಸ್ಟ್ 2024 ಕನ್ನಡದಲ್ಲಿ ಪ್ರತಿದಿನದ ಪ್ರಚಲಿತ ವಿದ್ಯಮಾನಗಳು: 




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads