Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday 21 August 2024

21st August 2024 Kannada Daily Current Affairs Question Answers Quiz For All Competitive Exams


21st August 2024 Kannada Daily Current Affairs Question Answers Quiz For All Competitive Exams

21 Augst 2024 Daily Kannada Current Affairs, Curent Affairs in Kannada 2024, ಪ್ರಚಲಿತ ವಿದ್ಯಮಾನಗಳ ಪ್ರಶ್ನೆ ಉತ್ತರಗಳು, 2024 ಕನ್ನಡ ಪ್ರಚಲಿತ ವಿದ್ಯಮಾನಗಳು



21st August 2024 Kannada Daily Current Affairs Question Answers Quiz For All Competitive Exams

Daily Kannada Current Affairs Question Answers, Daily Kannada Current Affairs Quiz For All Competitive Exams, Daily Kannada Current Affairs For All Competitive Exams, Day to day Kannada Current Affairs Exams, Karnataka Best Current Affairs Multiple Choice Question Answers For All Competitive Exams, Daily Kannada Current Affairs Quiz, Weekly Kannada Current Affairs Quiz for All Competitive Exams, Monthly Kannada Current Affairs Quiz for All Competitive Exams, Daily current affairs question answers, Daily Kannada Current affairs question answers, Kannada daily current affairs question answers in Kannada, 2024: Daily Objective Current Affairs MCQ Quiz - Edutube Kannada, Daily Current Affairs Quiz,  Today's Current Affairs, Latest Current Affairs Questions, and Answers 2024 in Kannada, Daily Current affairs

  • ಮಾಜಿ ಸೇನಾ ಮುಖ್ಯಸ್ಥ ಎಸ್. ಪದ್ಮನಾಭನ್ ನಿಧನ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ (83) ವಯೋಸಹಜ ಕಾರಣಗಳಿಂದ ಚೆನ್ನೈ ನಲ್ಲಿ ನಿಧನರಾಗಿದ್ದಾರೆ. ಇವರು 1950 ಡಿಸೆಂಬರ್ 05 ರಂದು ಕೇರಳದ ತಿರುವನಂತಪುರಂದಲ್ಲಿ ಜನಿಸಿದ್ದರು. 2000 ಸೆಪ್ಟೆಂಬರ್ 30 ರಿಂದ 31 ಡಿಸೆಂಬರ 2002 ರ ವರೆಗೆ ಸೇನಾ ಮುಖ್ಯಸ್ಥರಾಗಿ ಕರ್ತವ್ಯನಿರ್ವಹಿಸಿದ್ದರು. ಇವರನ್ನು ಆಪ್ತರು ‘ಪ್ಯಾಡಿ’ ಎಂದೇ ಕರೆಯುತ್ತಿದ್ದರು.
  • ಇವಿ ಚಾರ್ಜಿಂಗ್ ಕರ್ನಾಟಕ ಅಗ್ರ: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವ ಕರ್ನಾಟಕ ರಾಷ್ಟ್ರದಲ್ಲೇ ಅತೀ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 5,765 ಇವಿ ಚಾರ್ಜಿಂಗ್ ಸ್ಟೇಷನ್ ಗಳಿವೆ. ಸುಸ್ಥಿರ ಮತ್ತು ಶುದ್ಧ ಧನ ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಬೆಂಗಳೂರು ನಗರವು ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಬಿಇಇ (ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ) ವರದಿಯ ಪ್ರಕಾರ ಕರ್ನಾಟಕದ ನಂತರ ಮಹಾರಾಷ್ಟ್ರವು (1,989), ಉತ್ತರ ಪ್ರದೇಶ ಮತ್ತು ದೆಹಲಿ (1,941) ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿವೆ.
  • ತಂಬಾಕು ನಿಯಂತ್ರಣದ ಬ್ರ್ಯಾಂಡ್ ಅಂಬಾಸಿಡರ್: ಪಿ. ವಿ ಸಿಂಧು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿಶ್ವವನ್ನು ವೀಕ್ಷಿಸಲಲು ಕಾರ್ಯಕ್ರಮವನ್ನು ಆಯೋಜಿಸಿದೆ. ತಂಬಾಕು ರಹಿತದಿನ 2024, ವರ್ಷದ ಥೀಮ್ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು, ತಂಬಾಕು ಸೇವನೆಯ ದುಷ್ಪರಿಣಾಮಗಳಿಂದ ಯುವಕರನ್ನು ರಕ್ಷಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಅವರನ್ನು ತಂಬಾಕು ನಿಯಂತ್ರಣದ ಬ್ರಾಂಡ್ ಅಂಬಾಸಿಡರ್ ಆಗಿ ಇಂದು ನೇಮಕ ಮಾಡಲಾಗಿದೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ಅಲ್ಕಲಾಯ್ಡ್ ಇರುತ್ತದೆ. ಧೂಮಪಾನವು ರಕ್ತದಲ್ಲಿನ ಕಾರ್ಬನ್ ಮಾನಾಕ್ಸೈಡ್ (CO) ಅಂಶವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಆಮ್ಲಜನಕದ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
  • ಥೈಲ್ಯಾಂಡ್ ನ ಅತ್ಯಂತ ಕಿರಿಯ ಪ್ರಧಾನಿ-ಪೇಟೊಂಗ್ಟಾರ್ನ್ ಶಿನವತ್ರಾ: 37 ವರ್ಷದ ಪೇಟೊಂಗ್ಟಾರ್ನ್ ಶಿನವತ್ರಾ ಥಾಯ್ಲೆಂಡ್‌ನ ಅತ್ಯಂತ ಕಿರಿಯ ಪ್ರಧಾನಿ. ಯಿಂಗ್ಲಕ್ ಶಿನವತ್ರಾ ನಂತರ ಅವರು ಥೈಲ್ಯಾಂಡ್‌ನ ಎರಡನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಯಿಂಗ್ಲಕ್ ಶಿನವತ್ರಾ ಅವರ ಸೋದರ ಸೊಸೆ. ಥೈಲ್ಯಾಂಡ್ ರಾಜಧಾನಿ: ಬ್ಯಾಂಕಾಕ್, ಥೈಲ್ಯಾಂಡ್ ಕರೆನ್ಸಿ: ಬಹ್ತ್
  • ರಾಯಪುರದಲ್ಲಿ 17 ನೇ ದಿವ್ಯ ಕಲಾ ಮೇಳ: ಛತ್ತೀಸಗಡ್ ದ ರಾಯ್ ಪುರದಲ್ಲಿ 17 ನೇ ದಿವ್ಯ ಕಲಾ ಮೇಳವನ್ನು ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯು ಆಯೋಜಿಸಿದ್ದು, ಸದರಿ ಕಾರ್ಯಕ್ರಮವು ವಿಕಲಾಂಗ (ವಿಶೇಷ ಚೇತನ) ವ್ಯಕ್ತಿಗಳ ಪ್ರತಿಭೆಯನ್ನು ಪುರಸ್ಕರಿಸುತ್ತದೆ.

  • ಎಂ.ಕರುಣಾನಿಧಿಯವರ ಶತಮಾನೋತ್ಸವ ಸ್ಮರಣಾರ್ಥ ನಾಣ್ಯಕ್ಕೆ ಸನ್ಮಾನ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಸ್ಟ್ 18 ರಂದು ಚೆನ್ನೈನಲ್ಲಿ ಡಾ. ಕಲೈಂಜರ್ ಎಂ. ಕರುಣಾನಿಧಿ ಅವರ ಶತಮಾನೋತ್ಸವದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕರುಣಾನಿಧಿ ಅವರು ಭಾರತೀಯ ರಾಜಕೀಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದರು.

  • ESIC ನ ಮಹಾನಿರ್ದೇಶಕರಾಗಿ ಅಶೋಕ್ ಕುಮಾರ್ ಸಿಂಗ್ ಅಧಿಕಾರ ಗ್ರಹಣ: ಶ್ರೀ ಅಶೋಕ್ ಕುಮಾರ್ ಸಿಂಗ್, IAS ಅವರು ಆಗಸ್ಟ್ 19 ರಂದು ನವದೆಹಲಿಯಲ್ಲಿ ಭಾರತದ ಪ್ರಧಾನ ಕಛೇರಿಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ (ESIC) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. 
  • ಐಸಿಜಿ ಡಿಜಿ ರಾಕೇಶ್ ಪಾಲ್ ಹೃದಯಾಘಾತದಿಂದ ನಿಧನ: ಭಾರತೀಯ ಕೋಸ್ಟ್ ಗಾರ್ಡ್‌ನ ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ತೀವ್ರ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾದರು. ಅವರ ವಯಸ್ಸು 59.

  • ಮುಡಾ ಹಗರಣ: ಕರ್ನಾಟಕದ ಸಿಎಂ ವಿರುದ್ಧ ತನಿಖೆ: ಸ್ವಾಧೀನಪಡಿಸಿಕೊಂಡ ಖಾಸಗಿ ಭೂಮಿಗೆ ಪರಿಹಾರ ನೀಡುವಲ್ಲಿ ಸಂಭವನೀಯ ಅನ್ಯಾಯದ ಕುರಿತು MUDA ತನಿಖೆ ನಡೆಸುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪ್ರಮುಖ ಪ್ರದೇಶದಲ್ಲಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪಗಳು ಹೊರಬಿದ್ದಿದ್ದು, ಕಾನೂನು ಮತ್ತು ನ್ಯಾಯಸಮ್ಮತ ತನಿಖೆ ಚುರುಕುಗೊಂಡಿದೆ. 1904 ರಲ್ಲಿ ಸ್ಥಾಪನೆಯಾದ ಮುಡಾ, ಮೈಸೂರಿನಲ್ಲಿ ನಗರ ಯೋಜನೆಯನ್ನು ನಿರ್ವಹಿಸುತ್ತದೆ ಮತ್ತು ಅಪೂರ್ಣ ಭೂಸ್ವಾಧೀನದಿಂದಾಗಿ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಣಕಾಸಿನ ಸಮಸ್ಯೆಗಳು ಮತ್ತು ಮೊಕದ್ದಮೆಗಳು ಭೂಮಾಲೀಕರಿಗೆ ಸರಿಯಾಗಿ ಪರಿಹಾರ ನೀಡಲು ಮುಡಾಕ್ಕೆ ಕಷ್ಟಕರವಾಗಿದೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 21 August 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ 


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್  ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ :


ಇಲ್ಲಿ ಒದಗಿಸಿರುವ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಉಪಯುಕ್ತವಾಗಿವೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

21 ಆಗಸ್ಟ್ 2024 ಕನ್ನಡದಲ್ಲಿ ಪ್ರತಿದಿನದ ಪ್ರಚಲಿತ ವಿದ್ಯಮಾನಗಳು: 




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads