ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌼🔯 ಸಾಪೇಕ್ಷತಾ ಸಿದ್ಧಾಂತ 🔯🌼

🌼🔯 ಸಾಪೇಕ್ಷತಾ ಸಿದ್ಧಾಂತ 🔯🌼

ನ್ಯೂಟನಿಯನ್‌ ಯಾಂತ್ರಿಕ ವಿಜ್ಞಾನದ ಬದಲಿಗೆ ಲೊರೆಂಟ್ಜ್‌ ರೂಪಾಂತರಗಳನ್ನು ಬಳಸಿ, ಕೇವಲ ಸಾಪೇಕ್ಷತಾ ಸಿದ್ಧಾಂತದಿಂದ ವಿವರಿಸಿರುವಂತೆ ಚಲನ ಶಕ್ತಿಯನ್ನು ಗಣನೆ ಮಾಡಿದಾಗ ದ್ರವ್ಯರಾಶಿಯೊಂದರ ವೇಗವನ್ನು ಶೂನ್ಯ ವೇಗದಿಂದ ಎಲ್ಲೆಯುಳ್ಳ ವೇಗಕ್ಕೆ ಹೆಚ್ಚಿಸಲು ಮಾಡಲಾದ ಕಾರ್ಯ) ಐನ್‌ಸ್ಟೀನ್‌ ಈ ಗಣಿಕೆಗಳ ಉಪ-ಉತ್ಪನ್ನವನ್ನು ಪರಿಶೋಧಸಿದ. ಇದು ಶೂನ್ಯ ವೇಗದಲ್ಲಿ ಮಾಯವಾಗದಂತಹ ಶಕ್ತಿ ಪರಿಮಾಣವಾಗಿದೆ. ಇದನ್ನು ಅವರು ನಿಶ್ಚಲ ದ್ರವ್ಯರಾಶಿ ಶಕ್ತಿ ಎಂದರು. ಯಾವುದೇ ದ್ರವ್ಯರಾಶಿ ನಿಶ್ಚಲ ಸ್ಥಿತಿಯಲ್ಲಿರುವಾಗ ಈ ಶಕ್ತಿಯನ್ನು ಹೊಂದಿರತಕ್ಕದ್ದು. ಕಾಯಕ್ಕಿರುವ (=ವಸ್ತು) ಶಕ್ತಿಯು ಅದರ ಮೊತ್ತದ ಮೇಲೆ ಅವಲಂಬಿತವಾಗಿದೆ.
ಇದರಲ್ಲಿ m ಎನ್ನುವುದು ದ್ರವ್ಯರಾಶಿ,c ನಿರ್ವಾತ ಪ್ರದೇಶದಲ್ಲಿ ಬೆಳಕಿಗಿರುವ ವೇಗ,E ನಿಶ್ಚಲ ಶಕ್ತಿಯ ದ್ರವ್ಯರಾಶಿ.

ಉದಾಹರಣೆಗೆ, ಋಣಕಣ-ಪೊಸಿಟ್ರಾನ್ನಲ್ಲಿ ಪ್ರತಿ ಕಣದ ನಿಶ್ಚಲ ದ್ರವ್ಯರಾಶಿಯು ನಶಿಸಿಹೋಗುತ್ತದೆ. ಆದರೆ ಎರಡೂ ಕಣಗಳ ಜಡತ್ವ ಸಮಾನವು (ಅದರ ಸ್ಥಿರ ದ್ರವ್ಯರಾಶಿ) ಉಳಿದುಕೊಳ್ಳುತ್ತದೆ (ಏಕೆಂದರೆ ಶಕ್ತಿ ಎಂದಿಗೂ ದ್ರವ್ಯರಾಶಿಯ ಜೊತೆ ಸಂಬಂಧ ಉಳ್ಳದ್ದು); ಹಾಗೂ ಈ ಜಡತ್ವ ಮತ್ತು ಸ್ಥಿರ ದ್ರವ್ಯರಾಶಿಯನ್ನು ದ್ರವ್ಯರಾಶಿಯಿಲ್ಲದಂತಹ ಫೊಟಾನ್‌ಗಳು ಒಯ್ಯುತ್ತವೆ, ಆದರೆ ವ್ಯವಸ್ಥೆಯಾಗಿ ಅವು ತಮ್ಮ ದ್ರವ್ಯರಾಶಿಯನ್ನು ಉಳಿಸಿಕೊಳ್ಳುತ್ತವೆ. ಇದು ಒಂದು ಹಿಮ್ಮೊಗವಾಗಬಲ್ಲ ಪ್ರಕ್ರಿಯೆ. ಹಿಂದುಮುಂದಾದ ಪ್ರಕ್ರಿಯೆಯನ್ನು ಜೋಡಿ ರಚನೆ ಎನ್ನಲಾಗಿದೆ. ಇದರಲ್ಲಿ, ನಿರ್ಮೂಲವಾಗುವ ಎರಡು (ಅಥವಾ ಅದಕ್ಕೂ ಹೆಚ್ಚು) ಕಣಗಳ ನಿಶ್ಚಲ ದ್ರವ್ಯರಾಶಿಯು ಸೃಷ್ಟಿಯಾಗುತ್ತದೆ.

ಸಾಮಾನ್ಯ ಸಾಪೇಕ್ಷತೆಯಲ್ಲಿ, ಒತ್ತಡ-ಶಕ್ತಿ ಕರ್ಷಕ (ಸ್ಟ್ರೆಸ್‌-ಎನರ್ಜಿ-ಟೆನ್ಸಾರ್‌) ಗುರುತ್ವ ಕ್ಷೇತ್ರಕ್ಕೆ ಮೂಲ ಪರಿಮಾಣವಾಗುತ್ತದೆ. ಸಾಪೇಕ್ಷತೆಯ ಸಿದ್ಧಾಂತದಿಂದ ವಿವರಿಸಲಾಗಿಲ್ಲದ ನ್ಯೂಟನಿಯನ್‌ ಸಾಮೀಪ್ಯದಲ್ಲಿ, ದ್ರವ್ಯರಾಶಿಯು ಮೂಲ ಪರಿಮಾಣವಾಗುವ ರೀತಿಗೆ ಇದು ಸ್ಥೂಲ ಸದೃಶವಾಗಿದೆ.

'ಶಕ್ತಿಯು ದ್ರವ್ಯರಾಶಿಗೆ ಸಮಾನವಾಗಿದೆ' ಎಂಬ ಮಾತು ಕೇಳಿಬರುವುದು ಅಪರೂಪದ್ದೇನಲ್ಲ. 'ಪ್ರತಿಯೊಂದು ಶಕ್ತಿಗೂ ಜಡತ್ವ ಮತ್ತು ಗುರುತ್ವ ಸಮಾನವಾಗಿ ಇರುತ್ತದೆ' ಎಂದು ಹೇಳುವುದು ಹೆಚ್ಚು ನಿಖರ. ದ್ರವ್ಯರಾಶಿಯು ಶಕ್ತಿಯ ಒಂದು ರೂಪ.ಆದ್ದರಿಂದ, ದ್ರವ್ಯರಾಶಿಗೂ ಸಹ ಜಡತ್ವ ಮತ್ತು ಗುರುತ್ವ ಇದ್ದೇ ಇರುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area