ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌼🔯 ವಿಜಯನಗರ ಮತ್ತು ಬಹಮನಿ ರಾಜ್ಯ 🔯🌼

🌼🔯 ವಿಜಯನಗರ ಮತ್ತು ಬಹಮನಿ ರಾಜ್ಯ 🔯🌼

• ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಒಂದು ಮಹತ್ವದ ಘಟನೆ. ದಕ್ಷಿಣ ಭಾರತದ ರಾಜಮನೆತನಗಳಾಗಿದ್ದ ದೇವಗಿರಿಯ ಯಾದವರು, ವಾರಂಗಲ್ಲಿನ ಕಾಕತೀಯರು, ಮಧುರೆಯ ಪಾಂಡ್ಯರು, ದ್ವಾರಸಮುದ್ರದ (ಹಳೇಬೀಡು) ಹೊಯ್ಸಳರು ಮತ್ತು ತಂಜಾವೂರಿನ ಚೋಳರು ಅಲ್ಲಾವುದ್ದೀನ್ ಖಿಲ್ಜಿಯ ಭೀಕರ ದಾಳಿಗೆ ತುತ್ತಾದರು.

• ಇದರ ಪರಿಣಾಮವಾಗಿ ರಾಜಕೀಯ ಅಭದ್ರತೆ, ಅಸ್ಥಿರತೆ, ಕ್ಷೋಭೆ, ಭಯ ಮತ್ತು ಧಾರ್ಮಿಕ ವಿಪ್ಲವ ಕಾಣಿಸಿಕೊಂಡವು. ಈ ಸನ್ನಿವೇಶದಲ್ಲಿ ವಿಜಯನಗರ ಸಾಮ್ರಾಜ್ಯ ಉದಯವಾಯಿತು. ಮೂರು ಶತಮಾನಗಳ ಕಾಲ ಆಳ್ವಿಕೆ ನಡೆಸಿತು.

• ಈ ಸಾಮ್ರಾಜ್ಯ 15ನೆಯ ಶತಮಾನದ ವೇಳೆಗೆ ದಕ್ಷಿಣದಲ್ಲಿ ಹಿಂದೂ ಮಹಾಸಾಗರ, ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದವರೆಗೆ ಭೂ ಭಾಗಗಳಿಲ್ಲಿದ್ದ ರಾಜ್ಯಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು. ಹಕ್ಕ-ಬುಕ್ಕರು ಸಾ.ಶ. 1336ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಈ ರಾಜ್ಯವನ್ನು ಸ್ಥಾಪಿಸಿದರು.

• ಮುಂದೆ ಹಂಪೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಯಿತು. ಈ ಸಂದರ್ಭದಲ್ಲಿದ್ದ ಪ್ರಮುಖ ರಾಜಮನೆತನಗಳೆಂದರೆ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನರು, ಕೃಷ್ಣ ಗೋದಾವರಿ ಮುಖಜ ಭೂಮಿಯಲ್ಲಿ ಒರಿಸ್ಸಾದ ಗಜಪತಿಗಳು ಮತ್ತು ಉತ್ತರ ದಖ್ಖನ್ನಿನಲ್ಲಿ ಬಹುಮನಿಗಳು. ಇವರೆಲ್ಲರನ್ನು ಎದುರಿಸಿಕೊಂಡೇ ವಿಜಯನಗರ ಸಾಮ್ರಾಜ್ಯ ಉಳಿದು ಬೆಳೆಯಬೇಕಾಗಿತ್ತು.

• ಸಂಗಮ ವಂಶದ (ಸಾ.ಶ.1336-1486) ಪ್ರಸಿದ್ಧ ದೊರೆಗಳೆಂದರೆ ಒಂದನೆಯ ಹರಿಹರ, ಬುಕ್ಕರಾಯ, ಎರಡನೆಯ ಹರಿಹರ ಮತ್ತು ಪ್ರೌಢದೇವರಾಯ. ಒಂದನೇ ಹರಿಹರ ವಿಜಯನಗರ ರಾಜ್ಯಕ್ಕೆ ಅಸ್ತಿಭಾರ ಹಾಕಿ ಕಡಿದಾದ ಬೆಟ್ಟಗಳ ನಡುವಣ ಪ್ರದೇಶದಲ್ಲಿ ಹೊಸ ರಾಜಧಾನಿಯನ್ನು ಅಭಿವೃದ್ಧಿಪಡಿಸಿದನು.

images sources

ಬುಕ್ಕರಾಯ
• ಮಧುರೈಯ ಸುಲ್ತಾನನನ್ನು ಪದಚ್ಯುತಗೊಳಿಸಿ ಬುಕ್ಕನ ಪುತ್ರ ಕಂಪಣನು ಸಾಮ್ರಾಜ್ಯವನ್ನು ವಿಸ್ತರಿಸಿದನು.

• ಈ ದಿಗ್ವಿಜಯದ ಬಗ್ಗೆ ಗಂಗಾದೇವಿ ಬರೆದ ‘ಮಧುರಾವಿಜಯಂ’ಸಂಸ್ಕøತ ಕೃತಿಯು ಹೆಚ್ಚಿನ ವಿವರಣೆ ನೀಡುತ್ತದೆ.

• ಕೊಂಡವೀಡಿನ ರೆಡ್ಡಿಗಳನ್ನು ಸೋಲಿಸಿ ಪೆನುಗೊಂಡೆ sss ಬುಕ್ಕನು ವಿಜಯನಗರಕ್ಕೆ ಸೇರಿಸಿದನು.

• ಬುಕ್ಕನು ಜೈನರ ಮತ್ತು ಶ್ರೀವೈಷ್ಣವರ ನಡುವಿನ ಧಾರ್ಮಿಕ ಕಲಹವನ್ನು ಬಗೆಹರಿಸಿ ಸರ್ವಮತ ಮನ್ವಯತೆಯ ನೀತಿಯನ್ನು ಎತ್ತಿ ಹಿಡಿದನೆಂದು ಶ್ರವಣಬೆಳಗೊಳದ ಶಾಸನ ತಿಳಿಸುತ್ತದೆ.

• ರಾಜಧಾನಿಯಲ್ಲಿ ಕೋಟೆಯನ್ನು ಕಟ್ಟಿಸಿ, ದೇವಾಲಯಗಳನ್ನು ನಿರ್ಮಿಸಿ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದನು. ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳುಹಿಸಿದ್ದನು.

ಎರಡನೆಯ ಹರಿಹರ
• ಬುಕ್ಕರಾಯನ ಮಗನಾದ ಎರಡನೆಯ ಹರಿಹರನ 27 ವರ್ಷಗಳ ಆಡಳಿತದ ಅವಧಿಯಲ್ಲಿ ವಿಜಯನಗರವು ವಿಶಾಲ ಪ್ರದೇಶಗಳನ್ನು ಒಳಗೊಂಡಿತ್ತು.

• ಈತನು ಕೊಂಡವೀಡು, ಕರ್ನೂಲ್, ನೆಲ್ಲೂರು ಮತ್ತು ಕೋಟೆಗಳನ್ನು ಗೆದ್ದುಕೊಂಡನು. ಬಹಮನಿಯ ಸುಲ್ತಾನ ಮುಜಾಹಿದ್ ತೀರಿಕೊಂಡ ಕಾಲದಲ್ಲಿ ಈತನು ರಾಜ್ಯವನ್ನು ಗೋವೆಯಿಂದ ಕೊಂಕಣ ಕರಾವಳಿಯ ಉತ್ತರಕ್ಕೆ ವಿಸ್ತರಿಸಿದ.

• ಕೃಷ್ಣೆಯ ಉತ್ತರದ ಪಾಂಗಳ ಕೋಟೆಯನ್ನು 1398 ರಲ್ಲಿ ವಶಪಡಿಸಿಕೊಂಡನು.

ಎರಡನೆಯ ದೇವರಾಯ (ಪ್ರೌಢದೇವರಾಯ) (1424-1446)
• ಸಂಗಮ ವಂಶದಲ್ಲಿಯೇ ಶ್ರೇಷ್ಠ ದೊರೆ ಎರಡನೆಯ ದೇವರಾಯ (ಪ್ರೌಢದೇವರಾಯ). ಈತ ‘ಗಜ ಬೇಂಟೆಕಾರ ಎಂಬ ಬಿರುದು ಸಹ ಧರಿಸಿದ್ದ. ಇವನಿಗೆ ಪ್ರತಾಪರುದ್ರ ಎನ್ನುವ ಮತ್ತೊಂದು ಹೆಸರೂ ಇತ್ತು.

• ಎರಡನೆಯ ದೇವರಾಯನು ಒರಿಸ್ಸಾದ ಗಜಪತಿ ಕಪಿಲೇಂದ್ರನನ್ನು ಸೋಲಿಸಿ ಕೊಂಡವೀಡನ್ನು ಗೆದ್ದುಕೊಂಡನು. ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದ.

• ನಂತರ ಕೇರಳವನ್ನು ಗೆದ್ದು, ಕೇರಳ, ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು. ಇದರಿಂದ “ದಕ್ಷಿಣಾಪಥದ ಚಕ್ರವರ್ತಿ”ಎನಿಸಿದ.

• ಈ ವಿಜಯಗಳಿಂದ ವಿಜಯನಗರ ಸಾಮ್ರಾಜ್ಯ ಸಿಂಹಳದ ಗಡಿಗಳಿಂದ ಗುಲ್ಬರ್ಗದವರೆಗೆ ಮತ್ತು ತೆಲಂಗಾಣ, ಮಲಬಾರ್ಗಳಿಗೆ ವಿಸ್ತರಿಸಿಕೊಂಡಿತು.

• ನ್ಯೂನಿಜ್ನ ಪ್ರಕಾರ ಪ್ರೌಢದೇವರಾಯನಿಗೆ ಸಿಲೋನ್, ಪುಲಿಕಾಟ್, ಪೆಗು, ತೆನಾಸ್ಸೆರಿಂ (ಬರ್ಮಾ ಭಾಗ) ಮತ್ತು ಮಲಯದ ರಾಜರು ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು.

• ಸಾಂಪ್ರದಾಯಿಕ ಶತ್ರುಗಳಾದ ಬಹಮನಿ ಅಹಮದ್ ಷಾನನ್ನು ಬಿಜಾಪುರದವರೆಗೆ ಹಿಮ್ಮೆಟ್ಟಿಸಿ ಮುದಗಲ್ ಮತ್ತು ಬಂಕಾಪುರಗಳನ್ನು ತನ್ನ ಸ್ವಾಧೀನ ಮಾಡಿಕೊಂಡನು.

• ಎರಡನೇ ದೇವರಾಯನ ದಳಪತಿಯಾದ ಲಕ್ಕಣ್ಣದಂಡೇಶನು ಒಂದು ನೌಕಾ ವಿಜಯಯಾತ್ರೆಯನ್ನು ಕೈಗೊಂಡು ಯಶಸ್ವಿಯಾದನು.

• ಈತನು ಪರಮತ ಸಹಿಷ್ಣುವಾಗಿದ್ದನು. ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಜೈನ ಮತ್ತು ವೈಷ್ಣವ ದೇವಾಲಯಗಳು ನಿರ್ಮಾಣಗೊಂಡವು.

• ಸ್ವತಃ ಕವಿಯಾಗಿದ್ದ, ಈತನ ಆಸ್ಥಾನದಲ್ಲಿ ಸಂಸ್ಕøತ ಕವಿ ಡಿಂಡಿಮ ಮತ್ತು ಕನ್ನಡ ಕವಿ ಲಕ್ಕಣದಂಡೇಶರು ಇದ್ದರು. ದೇವರಾಯನ ಕಾಲದಲ್ಲಿ ವೀರಶೈವ ಸಂಪ್ರದಾಯ ಹಾಗೂ ಸಾಹಿತ್ಯ ಪುನರುಜ್ಜೀವನ ಪಡೆದವು.

• ಸಾ.ಶ. 1446ರಲ್ಲಿ ಎರಡನೆಯ ದೇವರಾಯನ ಮರಣದ ನಂತರ ಬಂದ ದುರ್ಬಲ ಅರಸರೊಂದಿಗೆ ಸಂಗಮ ವಂಶದ ಆಳ್ವಿಕೆ ಮುಕ್ತಾಯವಾಯಿತು.

ಕೃಷ್ಣದೇವರಾಯ (ಸಾ.ಶ. 1509-1529)
• ತುಳುವ ಸಂತತಿಯ ನರಸನಾಯಕನ ಹಾಗೂ ಎರಡನೆಯ ಸತಿ ನಾಗಲಾಂಬಿಕೆಯ ಪುತ್ರನಾದ ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ದೊರೆ.

• ಇವನ ಆಳ್ವಿಕೆಯ ಅವಧಿಯಲ್ಲಿ ವಿಜಯನಗರವು ತನ್ನ ಸಾಧನೆಗಳ ಪರಾಕಾಷ್ಠತೆಯನ್ನು ತಲುಪಿತು. ಜಗದ್ವಿಖ್ಯಾತರಾದ ಅಶೋಕ, ಸಮುದ್ರಗುಪ್ತ, ಹರ್ಷವರ್ಧನರ ಸಾಲಿನಲ್ಲಿ ನಿಲ್ಲುವ ಇವನು 20 ವರ್ಷಗಳ ಕಾಲ ಆಳ್ವಿಕೆ ಮಾಡಿದ.

• ಕೃಷ್ಣದೇವರಾಯ ಪಟ್ಟಕ್ಕೆ ಬಂದಾಗ ರಾಜ್ಯದ ಒಳ ಹಾಗೂ ಹೊರಗೆ ಜಟಿಲವಾದ ಸಮಸ್ಯೆಗಳಿದ್ದವು. ಹೊಸ ಜಲಮಾರ್ಗಗಳ ಮೂಲಕ ಆಗಮಿಸಿದ ಐರೋಪ್ಯರು ಇಲ್ಲಿ ನೆಲೆಗಳನ್ನು ಸ್ಥಾಪಿಸಲು ಆರಂಭಿಸಿದರು.

• ಬಹಮನಿ ರಾಜ್ಯದ ಐದು ಷಾಹಿ ರಾಜ್ಯಗಳು ಸುಲ್ತಾನರಾಗಿ ಹೊಸ ರೂಪ ಪಡೆದುಕೊಂಡು ಕೃಷ್ಣದೇವರಾಯನ ವಿರುದ್ಧ ಕದನಕ್ಕಿಳಿದರು.

• ಜೊತೆಗೆ ಉಮ್ಮತ್ತೂರು ಹಾಗೂ ಒರಿಸ್ಸಾದ ಅರಸರು ವಿಜಯನಗರದ

ಮೇಲೆ ಹಗೆತನವನ್ನು ಸಾಧಿಸುತ್ತಲೇ ಇದ್ದರು.

ಕೃಷ್ಣದೇವರಾಯನ ಸೈನಿಕ ಸಾಧನೆಗಳು
• ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ. ಇವನು ಎಲ್ಲಾ ಯುದ್ಧಗಳನ್ನು ಜಯಿಸಿ ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದನು.

• ಕೃಷ್ಣದೇವರಾಯ ಪಟ್ಟಾಭಿಷಿಕ್ತನಾಗುವ ಹೊತ್ತಿಗೆ ಆಂತರಿಕ ಕಲಹಗಳಿಂದಾಗಿ ವಿಜಯನಗರದ ಕಾನೂನು-ಸುವ್ಯವಸ್ಥೆ ಹದಗೆಟ್ಟಿತ್ತು. ಸಾ.ಶ.1510 ರಿಂದ 1521ರವರೆಗಿನ ಆಳ್ವಿಕೆಯು ಧೀರ್ಘಕಾಲದ ಮುತ್ತಿಗೆ, ಯುದ್ಧ ಮತ್ತು ವಿಜಯಗಳಿಂದ ತುಂಬಿದೆ.

• ಸುಮಾರು 14 ಪ್ರಮುಖ ಯುದ್ಧಗಳನ್ನು ಕೈಗೊಂಡನು. ಅವುಗಳು ಬಹಮನಿ, ಬಿಜಾಪುರದ ಆದಿಲ್ಶಾಹಿ, ಅಹಮದ್ ನಗರದ ನಿಜಾಂಶಾಹಿ, ಗೋಲ್ಕೊಂಡದ ಕುತುಬ್ಶಾಹಿ, ಒರಿಸ್ಸಾದ ಗಜಪತಿ ಹಾಗೂ ಪಾಳೇಗಾರರೊಂದಿಗೆ ನಡೆಯಿತು.

• 1509ರಲ್ಲಿ ಯೂಸುಫ್ ಆದಿಲ್ಶಾಹನು ಇತರ ಶಾಹಿ ಮನೆತನಗಳೊಂದಿಗೆ ಒಟ್ಟಾಗಿ ವಿಜಯನಗರದ ಮೇಲೆ ಯುದ್ಧ ಘೋಷಿಸಿದನು. ಯುದ್ಧದಲ್ಲಿ ಬಿಜಾಪುರದ ಆದಿಲ್ಶಾಹಿ ಮರಣ ಹೊಂದಿದನು. ಈ ಸಮಯದಲ್ಲಿ ಕೃಷ್ಣದೇವರಾಯನು ರಾಯಚೂರು ದೋ ಆಬ್ನ್ನು ವಶಪಡಿಸಿಕೊಂಡನು.

• ಜೊತೆಗೆ ಕೃಷ್ಣದೇವರಾಯನು ಬಂಧನದಲ್ಲಿದ್ದ ಮಹಮದ್ ಶಾಹನನ್ನು ಬಿಡುಗಡೆಗೊಳಿಸಿ ಬಹಮನಿಯ ರಾಜನನ್ನಾಗಿಸಿದನು. ಹಾಗಾಗಿ ‘ಯವನರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಧರಿಸಿದನು.

• ಈ ಯುದ್ಧಗಳು ಈಗಾಗಲೇ ಅವನತಿಯ ಹಾದಿಯಲ್ಲಿದ್ದ ಬಹಮನಿಯರ ಶಕ್ತಿಯನ್ನು ಪೂರ್ಣವಾಗಿ ನಾಶಮಾಡಿತು. ನಂತರ ಉಮತ್ತೂರಿನ ಪಾಳೇಯಗಾರ ಗಂಗಾರಾಯನ ವಿರುದ್ಧ ಆಕ್ರಮಣ ಕೈಗೊಂಡನು.

• ಈ ಭಾಗವನ್ನು ಶ್ರೀರಂಗಪಟ್ಟಣ ಪ್ರಾಂತ್ಯಕ್ಕೆ ಸೇರಿಸಲಾಯಿತು. ಕೃಷ್ಣದೇವರಾಯ ಕೈಗೊಂಡ ದಂಡಯಾತ್ರೆಗಳಲ್ಲಿ ಒರಿಸ್ಸಾದ ಗಜಪತಿಯೊಂದಿಗಿನ ಯುದ್ಧ ಮುಖ್ಯವಾಗಿದೆ.

• ಈ ಯುದ್ಧವು 1512 ರಿಂದ 1518ರವರೆಗೆ ಧೀರ್ಘಕಾಲ ನಡೆಯಿತು. ಕೊಂಡವೀಡು, ವಿಜಯವಾಡ ಮತ್ತು ಕೊಂಡಪಳ್ಳಿಗಳನ್ನು ವಶಪಡಿಸಿಕೊಂಡನು.

• ಇವು ಒರಿಸ್ಸಾದ ಗಜಪತಿ ಪ್ರತಾಪರುದ್ರದೇವನ ದಕ್ಷಿಣ ಭಾಗಗಳು. ಒಡಿಸ್ಸಾದ ಗಜಪತಿ ಶರಣಾಗಿ ತನ್ನ ಮಗಳನ್ನು ಕೃಷ್ಣದೇವರಾಯನಿಗೆ ವಿವಾಹ ಮಾಡಿಕೊಟ್ಟನು.

• ಬಿಜಾಪುರದ ಇಸ್ಮಾಯಿಲ್ ಆದಿಲ್ಶಾ ರಾಯಚೂರನ್ನು 1520ರಲ್ಲಿ ವಶಪಡಿಸಿಕೊಂಡನು. ರಾಯಚೂರಿಗಾಗಿ ವಿಜಯನಗರ ಬಿಜಾಪುರ ಸುಲ್ತಾನರ ನಡುವೆ ಘೋರವಾದ ಯುದ್ಧ ನಡೆಯಿತು. ಪೋರ್ಚುಗೀಸ್ ರು ವಿಜಯನಗರಕ್ಕೆ ಸಹಾಯ ಮಾಡಿದರು.

• ಹಿಂದೆ ಪೋರ್ಚುಗೀಸ್ ರು ಗೋವಾ ವಶಪಡಿಸಿಕೊಳ್ಳಲು ಕೃಷ್ಣದೇವರಾಯ ಸಹಕಾರ ನೀಡಿದ್ದನು. ಯುದ್ಧದಲ್ಲಿ ರಾಯಚೂರು ಕೃಷ್ಣದೇವರಾಯನ ವಶವಾಯಿತು.

• ಈತನ ಆಳ್ವಿಕೆಯಲ್ಲಿ ವಿಜಯನಗರವು ಉತ್ತರದಲ್ಲಿ ಗೋದಾವರಿ ಮತ್ತು ಕೃಷ್ಣ ನದಿಗಳು, ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರದವರೆಗೂ ವಿಸ್ತರಿಸಿತು.

• ಕೃಷ್ಣದೇವರಾಯ ಯುದ್ಧ ನೈಪುಣ್ಯತೆಯ ಜೊತೆಗೆ ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯಾಡಳಿತ ವಿಚಾರದಲ್ಲಿ ಈತನಿಗೆ ಇದ್ದ ವ್ಯಾವಹಾರಿಕ ಜ್ಞಾನವನ್ನು ಇವನು ಬರೆದ ‘ಆಮುಕ್ತ ಮಾಲ್ಯದ’ ತೆಲುಗು ಕೃತಿಯು ತಿಳಿಸುತ್ತದೆ. ಕೃಷಿ ವಿಸ್ತರಣೆಗೆ ನೀರಾವರಿ ಅನುಕೂಲತೆಗಳನ್ನು ಒದಗಿಸಿದನು.

• ಪೋರ್ಚುಗೀಸ್ ಸ್ನೇಹದಿಂದ ವಿದೇಶೀ ವ್ಯಾಪಾರ ಹೆಚ್ಚಿಸಿಕೊಂಡನು. ಮದುವೆಯ ಮೇಲಿನ ತೆರಿಗೆಯನ್ನು ರದ್ದುಗೊಳಿಸಿದನು.

• ಕಲೆ, ಸಾಹಿತ್ಯ ಮತ್ತು ಧರ್ಮಗಳ ಶ್ರೇಷ್ಠ ಪೋ ಷಕನಾಗಿದ್ದನು. ಈತನ ಆಸ್ಥಾನದಲ್ಲಿ ಅಷ್ಠ ದಿಗ್ಗಜರೆಂಬ ತೆಲುಗು ಭಾಷೆಯ ಕವಿಗಳಿದ್ದರು. ಸ್ವತ: ಕವಿಯಾಗಿದ್ದ ಕೃಷ್ಣದೇವರಾಯ ‘ಜಾಂಬವತಿ ಕಲ್ಯಾಣ’ ಎಂಬ ನಾಟಕವನ್ನು ಸಂಸ್ಕøತ ಭಾಷೆಯಲ್ಲಿ ರಚಿಸಿದನು.

• ಅಲ್ಲಸಾನಿ ಪೆದ್ದಣ್ಣ, ನಂದಿ ತಿಮ್ಮಣ್ಣ, ದೂರ್ಜಟಿ, ತೆನಾಲಿರಾಮಕೃಷ್ಣ ಮುಂತಾದವರು ಆಸ್ಥಾನದ ತೆಲುಗು ಕವಿಗಳಾಗಿದ್ದರು. ಕೃಷ್ಣದೇವರಾಯನು ಹಂಪೆಯಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಿಸಿದನು.

• ಈತನು ತನ್ನ ಕಾಲದಲ್ಲಿ ಇನ್ನೂ ಕೆಲವು ದೇವಾಲಯಗಳ ಜೊತೆಗೆ ಹಂಪೆಯ ವಿರೂಪಾಕ್ಷ ದೇವಾಲಯದ ಮಹಾ ರಂಗಮಂಟಪವನ್ನು ನಿರ್ಮಿಸಿದನು.

• ಎಲ್ಲ ಮತೀಯರು ಈತನ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹೊಂದಿದ್ದರೆಂದು ಪೋರ್ಚುಗೀಸ್ ಪ್ರವಾಸಿಗಳಾದ ಪಾಯೆಸ್ ಮತ್ತು ಬರ್ಬೋಸ ಹೇಳುತ್ತಾ, ಇವನ ಘನತೆ ಮತ್ತು ಸಾಮಥ್ರ್ಯವನ್ನು ಕೊಂಡಾಡಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಪತನ
• ಕೃಷ್ಣದೇವರಾಯನ ನಂತರ ಅಚ್ಯುತರಾಯ ಮತ್ತು ಸದಾಶಿವರಾಯ ಆಳಿದರು. ಕೃಷ್ಣದೇವರಾಯನ ಅಳಿಯ ಅರವೀಡು ವಂಶದ ರಾಮರಾಯನು ಆಡಳಿತವನ್ನು ನಿಯಂತ್ರಿಸಿದನು.

• ರಾಮರಾಯನು ತನ್ನ 23 ವರ್ಷಗಳ ಆಳ್ವಿಕೆಯಲ್ಲಿ ಕೈಗೊಂಡ ಯುದ್ಧಗಳು ಸಾಮ್ರಾಜ್ಯದ ಗೌರವವನ್ನು ಹೆಚ್ಚಿಸಿದ್ದರೂ, ಇದು ವಿಜಯನಗರಕ್ಕೆ ಅನೇಕ ಶತ್ರುಗಳನ್ನು ಸೃಷ್ಟಿಸಲು ಕಾರಣವಾಯಿತು.

• ದಖ್ಖನಿನ ಸುಲ್ತಾನರ ರಾಜ್ಯಗಳು ಆಗಾಗ ನಡೆಸುತ್ತಿದ್ದ ದಾಳಿಗೆ, ಪ್ರತೀಕಾರವಾಗಿ ರಾಮರಾಯನು ವಿಜಯಾಪುರ ಹಾಗೂ ಗೋಲ್ಕೊಂಡ ರಾಜ್ಯಗಳ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು ಕದನಕ್ಕೆ ಪ್ರಚೋದನೆ ನೀಡಿದವು.

• ವಿಜಯನಗರ ಸಾಮ್ರಾಜ್ಯದ ಏಳಿಗೆ ಮತ್ತು ಸಮೃದ್ಧಿಯ ಬಗ್ಗೆ ಮತ್ಸರ ಮತ್ತು ದ್ವೇಷಗಳನ್ನು ಹೊಂದಿದ್ದ ದಖ್ಖನಿನ ಸುಲ್ತಾನರು ಮತದ ಹೆಸರಿನಲ್ಲಿ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾದರು.

• ಸಾ.ಶ. 1565 ರಲ್ಲಿ ನಾಲ್ಕು ರಾಜ್ಯಗಳ ಒಕ್ಕೂಟ ಸೈನ್ಯ ವಿಜಯನಗರದ ಮೇಲೆ ದಾಳಿ ಮಾಡಿತು. ಇದರಲ್ಲಿ ರಾಮರಾಯನ ಸೈನ್ಯ ಸೋತಿತು ಮತ್ತು ಅವನು ಹತನಾದನು. ವಿಜಯ ಸಾಧಿಸಿದ ದಖ್ಖನಿನ ಸುಲ್ತಾನರ ಸೈನ್ಯವು ಭವ್ಯವಾಗಿದ್ದ ವಿಜಯನಗರವನ್ನು ಕೊಳ್ಳೆ ಹೊಡೆಯಿತು.

• ಇದರ ಫಲವಾಗಿ ಸಾಮ್ರಾಜ್ಯದ ರಾಜಧಾನಿ ಹಂಪೆಯು ಹಾಳು ಹಂಪೆಯಾಯಿತು. ಮುಂದೆ ಪೆನುಕೊಂಡ, ಚಂದ್ರಗಿರಿ, ಕೊನೆಗೆ ವೆಲ್ಲೂರುಗಳಿಂದ ಅರವೀಡು ವಂಶದ ಆಡಳಿತ ಸಾ.ಶ. 1646ರವರೆಗೆ ಮುಂದುವರೆಯಿತು.

• ಕರ್ನಾಟಕದಲ್ಲಿ ಮೈಸೂರು, ಕೆಳದಿ, ಚಿತ್ರದುರ್ಗ ಮುಂತಾದ ವಿಜಯನಗರದ ಸಾಮಂತರು ಸ್ವತಂತ್ರರಾದರು.

ವಿಜಯನಗರದ ಸಾಂಸ್ಕøತಿಕ ಕೊಡುಗೆಗಳು
ಆಡಳಿತ :
• ವಿಜಯನಗರ ಸಾಮ್ರಾಜ್ಯದ ಆಡಳಿತವು ಪಾರಂಪರಿಕವಾಗಿ ಮುಂದುವರೆಯಿತು. ರಾಜರೇ ಅಧಿಕಾರದ ಕೇಂದ್ರವಾಗಿದ್ದರು. ರಾಜರು ತಮ್ಮ ಜೇಷ್ಠ ಪುತ್ರನನ್ನೇ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುತ್ತ

ಿದ್ದರು.

• ವಿಕೇಂದ್ರಿಕೃತ ವ್ಯವಸ್ಥೆಯಿದ್ದರೂ ವಿಜಯನಗರವು ಪ್ರಬಲ ಕೇಂದ್ರಾಡಳಿತವನ್ನು ಹೊಂದಿತ್ತು. ಆಡಳಿತ ವ್ಯವಸ್ಥೆಯನ್ನು ಮಂತ್ರಿಮಂಡಲ ಸೇನಾಡಳಿತ ಮತ್ತು ಪ್ರಾಂತೀಯ ಮಾಂಡಲಿಕತ್ವವೆಂದು ವಿಂಗಡಿಸಲಾಗಿತ್ತು.

• ಒಬ್ಬ ನಾಯಕನಿಗೆ ಅಥವಾ ಪಾಳೆಯಗಾರನಿಗೆ ಸೈನಿಕ ಸೇವೆಯ ಷರತ್ತಿನ ಮೇಲೆ ರಾಜನು ಭೂಮಿಯನ್ನು ಕೊಡುತ್ತಿದ್ದ. ಪ್ರಾಂತೀಯ ಹಂತದಲ್ಲಿ ನಾಯಂಕರ ಅಥವಾ ಅಮರ ನಾಯಕರು (ನಾಯಕರು), ರಾಜ್ಯಮಂಡಲ, ಗ್ರಾಮಾಡಳಿತ ಹೀಗೆ ವಿವಿಧ ಬಗೆಗಳಿದ್ದವು.

• ತಿಮ್ಮರಸ ಮಹಾ ಪ್ರಧಾನ ಮಂತ್ರಿಯಾಗಿದ್ದನು. ಆಡಳಿತಾತ್ಮಕವಾಗಿ ಸಾಮ್ರಾಜ್ಯವು ರಾಜ್ಯ, ನಾಡು ಹಾಗೂ ಗ್ರಾಮಗಳೆಂಬ ಆಡಳಿತ ಘಟಕಗಳನ್ನು ಹೊಂದಿತ್ತು.

• ಅರಸನು ನ್ಯಾಯಾಂಗ ವಿಚಾರಗಳಲ್ಲಿ ಪರಮಾಧಿಕಾರವನ್ನು ಪಡೆದಿದ್ದನು. ಪ್ರಾಂತಗಳಲ್ಲಿ ಪ್ರಾಂತಾಧಿಕಾರಿಯು ನ್ಯಾಯ ತೀರ್ಮಾನ ಮಾಡುತ್ತಿದ್ದನು. ಶಿಕ್ಷೆಗಳು ಉಗ್ರವಾಗಿದ್ದವು. ಗ್ರಾಮಗಳು ಆಡಳಿತ ವ್ಯವಸ್ಥೆಯ ಕೊನೆಯ ಘಟಕಗಳಾಗಿದ್ದು, ಅಲ್ಲಿ ಗ್ರಾಮಸಭೆಗಳು ಆಡಳಿತ ನಿರ್ವಹಿಸುತ್ತಿದ್ದವು.

• ಗೌಡ, ಕರಣಮ್ (ಶಾನುಭೋಗ), ತಳವಾರ ಗ್ರಾಮಾಡಳಿತದಲ್ಲಿ ನೆರವಾಗುತ್ತಿದ್ದರು. ನಾಡುಗಳಲ್ಲಿ ನಾಡಗೌಡರು ಮತ್ತು ಪಟ್ಟಣಗಳಲ್ಲಿ ಪಟ್ಟಣ ಸ್ವಾಮಿ ಅಥವಾ ಪಟ್ಟಣಶೆಟ್ಟಿ ಆಡಳಿತ ನೋಡಿಕೊಳ್ಳುತ್ತಿದ್ದರು.

• ವಿಜಯನಗರ ಸಮರ್ಥವಾದ ಸೈನ್ಯವನ್ನು ಹೊಂದಿತ್ತು. ಖಾಯಂ ತಂಡ, ಸಾಮಂತರ ಸೈನ್ಯ ಮತ್ತು ಸುಸಭ್ಯ (ಇದು ರಾಜನ ರಕ್ಷಣಾ ಪಡೆಯಾಗಿತ್ತು) ಸೇನಾ ಎಂಬ ಮೂರು ಹಂತಗಳಿಂದ ಕೂಡಿತ್ತು.

• ಕಾಲುದಳ, ಅಶ್ವದಳ, ಗಜದಳ ಮತ್ತು ಫಿರಂಗಿಗಳು ಸೈನ್ಯದ ಪ್ರಮುಖ ಭಾಗಗಳು. ಸಾ.ಶ. 1368 ರಿಂದ ಯುದ್ಧದಲ್ಲಿ ಫಿರಂಗಿಗಳ ಉಪಯೋಗ ಆರಂಭವಾಯಿತು.

• ಬೃಹದಾಕಾರದ ಆನೆಗಳು ಇದ್ದವು. ಅರಬ್ ದೇಶದ ಕುದುರೆಗಳು ವಿಜಯನಗರದ ಆಕರ್ಷಣೆಯಾಗಿದ್ದವು. ಸೈನ್ಯದಲ್ಲಿ ನೌಕಾಪಡೆಯೂ ಇತ್ತು. ಯಾವ ಜಾತಿಯವರಾದರೂ ಸೈನ್ಯದಲ್ಲಿ ಸೇರಿ ಗೌರವದ ಸ್ಥಾನಮಾನ ಹೊಂದಬಹುದಿತ್ತು. ಒಕ್ಕಲಿಗರು, ಬೇಡರು ಪಾಳೆಯಗಾರರಾದರು. ಕೋಟೆ-ಕೊತ್ತಲಗಳು ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು.

ಸಾಮಾಜಿಕ ವ್ಯವಸ್ಥೆ :
• ಸಮಾಜವು ಚಾತುರ್ವರ್ಣ ವ್ಯವಸ್ಥೆಯ ಮೇಲೆ ರೂಪುಗೊಂಡಿತ್ತು. ಹೀಗಿದ್ದರೂ ಅನೇಕ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು.

• ಕುಶಲ ಕಲೆಗಾರರು, ಕಮ್ಮಾರರು, ಅಕ್ಕಸಾಲಿಗರು, ಕಂಚುಗಾರರು, ಬಡಗಿಗಳು, ನೇಕಾರರು, ಸಮಗಾರರು (ಚಮ್ಮಾರರು) ಅಧಿಕ ಸಂಖ್ಯೆಯಲ್ಲಿದ್ದರು. ಬಾಲ್ಯವಿವಾಹ, ಸಹಗಮನ ಮತ್ತು ದೇವದಾಸಿ ಪದ್ಧತಿಗಳು ರೂಢಿಯಲ್ಲಿದ್ದವು.

• ಸಾಮಾನ್ಯವಾಗಿ ಏಕಪತ್ನಿತ್ವ ರೂಢಿಯಲ್ಲಿದ್ದರೂ, ದೊರೆಗಳು ಮತ್ತು ಶ್ರೀಮಂತರು ಬಹುಪತ್ನಿಯರನ್ನು ಹೊಂದಿರುತ್ತಿದ್ದರು. ವಿಜಯನಗರದಲ್ಲಿ ಸ್ತ್ರೀ ಜಟ್ಟಿಗಳು (ಕುಸ್ತಿಪಟುಗಳು), ಅರಮನೆ ಕಾವಲುಗಾರ್ತಿಯರು ಇದ್ದರು. ಹೋಳಿ, ದೀಪಾವಳಿ ಮತ್ತು ದಸರಾ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು.

• ದಸರಾ ಹಬ್ಬವು ಹಂಪಿಯಲ್ಲಿ ರಾಜಾಶ್ರಯದಲ್ಲಿ ವೈಭವದಿಂದ ನಡೆಯುತ್ತಿತ್ತು. ಸಂಗೀತ, ನೃತ್ಯಗಳು ಹೆಚ್ಚಿನ ಜನಮನ್ನಣೆ ಪಡೆದಿದ್ದವು.

ಆರ್ಥಿಕ ವ್ಯವಸ್ಥೆ:
• ವಿಜಯನಗರವು ಆರ್ಥಿಕವಾಗಿ ಸಮೃದ್ಧವಾಗಿತ್ತು. ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು. ಕೃಷಿಕರು ಸಾಮಾನ್ಯವಾಗಿ ತಮ್ಮ ಉತ್ಪಾದನೆಯ ನಾಲ್ಕನೆಯ ಒಂದು ಭಾಗವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದರು.

• ವೃತ್ತಿ ತೆರಿಗೆ, ಮನೆ ಕಂದಾಯ, ದಾರಿ ಸುಂಕ, ಸಂತೆ ಸುಂಕ, ವಾಣಿಜ್ಯ ತೆರಿಗೆ, ಆಮದು ಮತ್ತು ರಫ್ತು ತೆರಿಗೆಗಳು, ಸಾಮಂತರಿಂದ ಬರುವ ಕಪ್ಪಕಾಣಿಕೆಗಳು ರಾಜ್ಯದ ಇತರ ಆದಾಯದ ಮೂಲಗಳಾಗಿದ್ದವು. ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.

• ಇವರು ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು. ಜೋಳ, ರಾಗಿ, ಭತ್ತ, ಸಜ್ಜೆ, ಗೋಧಿ, ಅವರೆ, ಹೆಸರು, ಉದ್ದು, ತೊಗರಿ, ಎಳ್ಳು, ಶೇಂಗಾ, ಹತ್ತಿ, ಕಬ್ಬು, ತೆಂಗು ಮುಖ್ಯ ಬೆಳೆಗಳಾಗಿದ್ದವು. ವಿಜಯನಗರದ ಅರಸರು ಬಾವಿ, ಕೆರೆ-ಕಾಲುವೆಗಳನ್ನು ಕಟ್ಟಿಸುವುದರ ಮೂಲಕ ಕೃಷಿ, ನೀರಾವರಿಯನ್ನು ಉತ್ತೇಜಿಸಿದರು.

• ಇವರ ಕಾಲದಲ್ಲಿ ಗೇಣಿ, ಗುತ್ತಿಗೆ, ಸಿದ್ಧಾಯ, ವಾರ ಮತ್ತು ಗಡಿ ಎಂಬ ಐದು ಬಗೆಯ ಭೂ ಹಿಡುವಳಿ ಪದ್ಧತಿಗಳಿದ್ದವು. ವಿಜಯನಗರ ಸಾಮ್ರಾಜ್ಯದ ಕಾಲವು ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಿತ್ತು.

• ಮೆಣಸು, ಲವಂಗ, ಏಲಕ್ಕಿ ಮುಂತಾದ ಮಸಾಲೆ ಸಾಮಾನುಗಳು, ಪೆಟ್ಲುಪ್ಪು (ಸೋರುಪ್ಪು), ಕಬ್ಬಿಣದ ಅದಿರು, ವಜ್ರ, ಕಲ್ಲುಸಕ್ಕರೆ, ಕಸ್ತೂರಿ, ಶ್ರೀಗಂಧ, ಸುಗಂಧ ದ್ರವ್ಯ ಮುಂತಾದವುಗಳನ್ನು ರಫ್ತು ಮಾಡುತ್ತಿದ್ದರು.

• ಬಟ್ಟೆ ನೇಯ್ಗೆಯ ಮುಖ್ಯ ಕೈಗಾರಿಕೆಗಳು ಇದ್ದವು. ಚಿನ್ನದ ವರಹ, ಗದ್ಯಾಣ ಮತ್ತು ಪಗೋಡ, ಬೆಳ್ಳಿಯ ತಾರಾ, ತಾಮ್ರದ ಪಣ, ದುಡ್ಡು ಮತ್ತು ಕಾಸುಗಳು ಬಳಕೆಯಲ್ಲಿದ್ದವು.

ಧಾರ್ಮಿಕ ವ್ಯವಸ್ಥೆ :
• ವಿಜಯನಗರವು ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದ ಕೀರ್ತಿಗೆ ಪಾತ್ರವಾಗಿದೆ. ಶ್ರೀವೈಷ್ಣವ ಮತ್ತು ಜೈನ ಮತಾವಲಂಬಿಗಳು ತಮ್ಮ ತಮ್ಮ ಮತಾಭಿಪ್ರಾಯಗಳನ್ನು ಮರೆತು, ಪರಸ್ಪರ ಗೌರವದಿಂದ ಬಾಳುವಂತಹ ವಾತಾವರಣವಿತ್ತು.

• ವಿಜಯನಗರ ಸಾಮ್ರಾಜ್ಯವನ್ನಾಳಿದ ಆರಂಭದ ಅರಸರು ಶೈವ ಮತ್ತು ವೀರಶೈವ ಪೋಷಕರಾಗಿದ್ದರೆ, ನಂತರದವರು ವೈಷ್ಣವ ಮತದ ಉಪಾಸಕರಾಗಿದ್ದರು.

• ವಿಜಯನಗರ ರಾಜ್ಯವು ಮಹಾನವಮಿಯನ್ನು ವಿಶೇಷವಾಗಿ ಆಚರಿಸುತ್ತಿತ್ತು.

• ವಿಜಯನಗರದಲ್ಲಿ ಮುಸ್ಲಿಮರಿಗೆ ಮಸೀದಿಗಳನ್ನು ಕಟ್ಟಿಸಲಾಗಿತ್ತು. ಪೋರ್ಚುಗೀಸ್ ರೊಂದಿಗೆ ವ್ಯಾಪಾರ ವೃದ್ಧಿಸಿಕೊಂಡ ವಿಜಯನಗರದ ಅರಸರು ಕ್ರೈ ಸ್ತ ಮತಕ್ಕೂ ಪ್ರೋತ್ಸಾಹ ಕೊಟ್ಟರಲ್ಲದೆ ಚರ್ಚುಗಳನ್ನು ಕಟ್ಟಲು ಅನುಮತಿ ನೀಡಿದರು.

ಸಾಹಿತ್ಯ :
• ಸಾಮ್ರಾಜ್ಯದಲ್ಲಿ ಏರ್ಪಟ್ಟಿದ್ದ ಶಾಂತಿ ಮತ್ತು ಸುವ್ಯವಸ್ಥೆ, ಆರ್ಥಿಕ ಪ್ರಗತಿಯ ಪರಿಣಾಮದಿಂದ ಸಾಹಿತ್ಯವು ಹುಲುಸಾಗಿ ಬೆಳೆಯಿತು. ಕನ್ನಡ, ಸಂಸ್ಕøತ, ತೆಲುಗು ಮತ್ತು ತಮಿಳು ಭಾಷೆಯ ಸಾಹಿತ್ಯ ಕೃತಿಗಳು ರಚನೆಯಾದವು.

• ರತ್ನಾಕರವರ್ಣಿ ಬರೆದ ‘ಭರತೇಶ ವೈಭವ’, ಚಾಮರಸರು ರಚಿಸಿದ ‘ಪ್ರಭುಲಿಂಗಲೀಲೆ’, ಕುಮಾರವ್ಯಾಸನ ‘ಗದುಗಿನ ಭಾರತ’ ಕನ್ನಡದ ಮುಖ್ಯ ಕಾವ್ಯಗಳಾಗಿವೆ.

• ಭೀಮಕವಿಯು ಪಾಲ್ಕುರಿಕೆ ಸೋಮನಾಥನ ತ

ೆಲುಗು ಕೃತಿ ‘ಬಸವ ಪುರಾಣ’ವನ್ನು ಕನ್ನಡದಲ್ಲಿ ಬರೆದಿದ್ದಾನೆ. ವೀರಶೈವರ ವಚನಗಳ ಸಂಕಲನವಾದ ‘ಶೂನ್ಯಸಂಪಾದನೆ’ ರಚನೆಯಾಯಿತು.

• ಲಕ್ಕಣದಂಡೇಶನ ‘ಶಿವತತ್ವ ಚಿಂತಾಮಣಿ’ ಅಲ್ಲದೆ ಕನ್ನಡದಲ್ಲಿ ಮಾನವವೈದ್ಯಶಾಸ್ತ್ರ, ಪಶುವೈದ್ಯ, ಕಾವ್ಯಶಾಸ್ತ್ರ, ಜೋತಿಷ್ಯ, ಪಾಕಶಾಸ್ತ್ರ ರಚನೆಯಾದವು. ಪುರಂದರದಾಸ, ಕನಕದಾಸ, ಶ್ರೀಪಾದರಾಯರು, ವ್ಯಾಸರಾಯರು ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

• ಕನಕದಾಸರ ‘ಮೋಹನ ತರಂಗಿಣಿ’, ‘ನಳ ಚರಿತೆ’, ‘ಹರಿಭಕ್ತಸಾರ’ ಮತ್ತು ‘ರಾಮಧಾನ್ಯ ಚರಿತೆ’ ಮುಖ್ಯವಾದವು. ಸಂಸ್ಕøತದಲ್ಲಿ ವಿದ್ಯಾರಣ್ಯರ ‘ಶಂಕರ ವಿಜಯ’ ಮತ್ತು ‘ಸರ್ವದರ್ಶನ ಸಂಗ್ರಹ’ ರಚನೆಗೊಂಡವು. • ಇವರ ಸೋದರ ಸಾಯಣಾಚಾರ್ಯರು ‘ವೇದಾರ್ಥ ಪ್ರಕಾಶ’ ಎಂಬ ವೇದಭಾಷ್ಯ ಮತ್ತು ಆಯುರ್ವೇದ ಸುಧಾನಿಧಿ, ಪುರುಷಾರ್ಥ ಸುಧಾನಿಧಿ ಮುಂತಾದ ಕೃತಿಗಳನ್ನು ರಚಿಸಿದರು.

• ಕಂಪಣರಾಯನ ಮಡದಿ ಗಂಗಾದೇವಿ ‘ಮಧುರಾವಿಜಯಂ’ ಎಂಬ ಕೃತಿಯನ್ನು ರಚಿಸಿದಳು. ಇದು ಕಂಪಣನ ದಂಡಯಾತ್ರೆಯನ್ನು, ಅಲ್ಲಿನ ಪವಿತ್ರ ಸ್ಥಳಗಳ ವರ್ಣನೆಯನ್ನು ತಿಳಿಸುತ್ತದೆ.

• ಎರಡನೇ ದೇವರಾಯನ ಆಸ್ಥಾನ ಕವಿಯಾದ ಶ್ರೀನಾಥನು ‘ಕವಿ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು. ಅಲ್ಲಸಾನಿ ಪೆದ್ದಣನ ‘ಮನುಚರಿತಮು’, ತಿಮ್ಮಣನ ‘ಪಾರಿಜಾತಾಪಹರಣಂ’, ತೆನಾಲಿ ರಾಮಕೃಷ್ಣನ ‘ಉಭಟಾರಾಧ್ಯ ಚರಿತಂ’ ಪ್ರಮುಖ ಕೃತಿಗಳಾಗಿವೆ. ತಮಿಳು ಕವಿಗಳಾದ ಪರಂಜ್ಯೋತಿಯರ್, ವೀರ ರಾಘವರ್, ಮಂಡಲಪುರುಷ, ಜ್ಞಾನ ಪ್ರಕಾಶ, ಹರಿಹರ ಮುಂತಾದವರು ಕೃಷ್ಣದೇವರಾಯನ ಆಸ್ಥಾನದಲ್ಲಿದ್ದರು. ಪರಂಜ್ಯೋತಿಯರ್ ಕವಿಯು ‘ತಿರುವಳಯಾಡಲ್ ಪುರಾಣಂ’ ಕೃತಿಯನ್ನು ರಚಿಸಿದನು. ವಿಜಯನಗರ ಕಾಲದಲ್ಲಿ ಸಂಸ್ಕøತ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಪ್ರೋತ್ಸಾಹ ಸಿಕ್ಕಿತ್ತು.

• ಈ ಸಾಮ್ರಾಟರನ್ನು ವಾಸ್ತುಕಲೆಯ ಮಹಾನ್ ಪೋಷಕರು ಎನ್ನಲಾಗಿದೆ. ಇವರ ಕಾಲದಲ್ಲಿ ದೇವಾಲಯ, ಅರಮನೆ, ಕೋಟೆ, ಗೋಪುರ, ಮಹಾಮಂಟಪ, ಸಾರ್ವಜನಿಕ ಕಟ್ಟಡಗಳು, ಕೆರೆ ಕಟ್ಟೆ, ಕಾಲುವೆ, ಅಣೆಕಟ್ಟೆ ಮುಂತಾದವು ನಿರ್ಮಾಣವಾಗಿವೆ.

ವಿಜಯನಗರದ ಕಲೆಯ ಪ್ರಮುಖ ವೈಶಿಷ್ಟ್ಯಯಗಳು :
• ವಿಜಯನಗರದ ಅರಸರು ಚಾಲುಕ್ಯ, ಚೋಳ ಮತ್ತು ಹೊಯ್ಸಳ ವಾಸ್ತುಶೈಲಿಯ ಮಾದರಿಗಳನ್ನು ಮುಂದುವರೆಸಿದರು.

• ಇವರ ಶೈಲಿಯ ಪ್ರಧಾನ ಲಕ್ಷಣವೆಂದರೆ ಹಲವಾರು ಕಂಭಗಳ ಸಾಲುಗಳಿಂದ ಕೂಡಿದ ವಿಶಾಲ ಸಭಾ ಮಂಟಪ ಅಥವಾ ಕಲ್ಯಾಣ ಮಂಟಪಗಳು.

• ದೇವಾಲಯಗಳು ಎತ್ತರವಾದ ಗೋಪುರಗಳನ್ನು, (ರಾಯ ಗೋಪುರ) ಹೊಂದಿದ್ದು ಪತ್ರಾಕೃತಿಯ ಕಮಾನುಗಳನ್ನು ಮತ್ತು ಮಂಟಪಗಳನ್ನು ಹೊಂದಿವೆ.

• ಈ ಕಲೆಯಲ್ಲಿ ಅಲಂಕಾರಕ್ಕಿಂತ ಭವ್ಯತೆ, ರುದ್ರತೆ ಮತ್ತು ಗಾಂಭೀರ್ಯದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇವರು ಕಟ್ಟಡಗಳಿಗೆ ಬಿರುಸಾದ ಕಣಶಿಲೆ ಬಳಸಿದ್ದಾರೆ.

• ಪ್ರಮುಖ ದೇವಾಲಯಗಳು ಇವರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಹಂಪೆ, ಶೃಂಗೇರಿ, ತಿರುಪತಿ, ಕಂಚಿ, ಲೇಪಾಕ್ಷಿ, ಕಾರ್ಕಳ, ಮೂಡಬಿದ್ರಿ, ಭಟ್ಕಳ, ಚಿದಂಬರಂ, ಕಾಳಹಸ್ತಿ, ನಂದಿ, ಶ್ರೀಶೈಲ, ಕೋಲಾರ ಮುಂತಾದ ಕಡೆಗಳಲ್ಲಿ ಕಾಣಬಹುದು.

• ಶೃಂಗೇರಿ ವಿದ್ಯಾಶಂಕರ ದೇವಾಲಯವು ವಿಜಯನಗರ ಕಾಲದ ಆರಂಭದ ದೇವಾಲಯಗಳಲ್ಲಿ ಪ್ರಮುಖವಾಗಿದೆ. ಈ ದೇವಾಲಯದ ವಿನ್ಯಾಸವು ಭಾರತದಲ್ಲಿಯೇ ಅಪೂರ್ವ ಮಾದರಿಯದಾಗಿದೆ.

• ವಿಜಯನಗರದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ ಹಂಪಿಯ ವಿರೂಪಾಕ್ಷ ದೇವಾಲಯ. ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಇದು ಸೊಗಸಾದ ಕೆತ್ತನೆಯ ಕಂಬಗಳು, ಅಲಂಕೃತ ಚಾವಣಿಗಳನ್ನು ಹೊಂದಿದೆ.

• ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಾಲಯವು ಶೃಂಗಾರಮಯ ಕಲಾತ್ಮಕ ಕೆಲಸಕ್ಕೆ ಹೆಸರಾಗಿದೆ. ಸಪ್ತಸ್ವರಗಳನ್ನು ಧ್ವನಿಸುವ ಕಂಭಗಳು, ವಿಶಾಲವಾದ ಕಲ್ಯಾಣಮಂಟಪಗಳು, ಕಲ್ಲಿನಲ್ಲಿ ಕೆತ್ತಿದ ರಥ ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ.

• ಕೃಷ್ಣದೇವರಾಯ ನಿರ್ಮಿಸಿದ ಮಹಾನವಮಿ ದಿಬ್ಬದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿತ್ತು. ರಾಜಧಾನಿಗೆ ಬಹಳ ದೂರದ ಪ್ರಾಂತಗಳಿಂದಲೂ ರಾಜರು, ಮಂಡಲೇಶ್ವರರೂ ಚಕ್ರವರ್ತಿಯ ಆಜ್ಞೆಯ ಮೇರೆಗೆ ಬಂದು ಸೇರುವರೆಂದು ಪರ್ಶಿಯಾದ ರಾಯಭಾರಿ ಅಬ್ದುಲ್ ರಜಾಕ್ ಹೇಳುತ್ತಾನೆ.

• ಕಮಲ್ ಮಹಲ್, ಗಜಶಾಲೆ, ರಾಣಿ ಸ್ನಾನಗೃಹ ಇಂಡೋ-ಮುಸ್ಲಿಂ ಶೈಲಿಯ ಉತ್ತಮ ಕಟ್ಟಡಗಳಾಗಿವೆ. ಲಕ್ಷ್ಮಿನರಸಿಂಹ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಉದ್ಧಾನ ವೀರಭದ್ರನ ಶಿಲ್ಪಗಳು ಆಕರ್ಷಕವಾಗಿವೆ.

• ವಿಜಯನಗರದ ಕಾಲದ ಹಂಪಿಯ ಕೋಟೆಯು ಕಲ್ಲಿನರಥ ಭದ್ರವಾದ 7 ಸುತ್ತಿನಿಂದ ಕೂಡಿತ್ತು. ಪ್ರಸ್ತುತ 4 ಸುತ್ತುಗಳು ಉಳಿದುಕೊಂಡಿವೆ.

ಸಂಗೀತ ಮತ್ತು ನೃತ್ಯ :
• ವಿಜಯನಗರದ ದೊರೆಗಳು ಲಲಿತಕಲೆಗಳಾದ ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಕಲೆಗಳನ್ನು ಪೋಷಿಸಿ ಬೆಳೆಸಿದರು ಕಲಾವಿದರಿಗೆ ಅರಮನೆ ಮತ್ತು ದೇವಾಲಯಗಳಲ್ಲಿ ಹೆಚ್ಚಿನ ಗೌರವವಿತ್ತು.

• ಪುರಂದರದಾಸರು, ಕನಕದಾಸರು ತಮ್ಮ ಕೀರ್ತನಗಳ ಮೂಲಕ ಕರ್ನಾಟಕ ಸಂಗೀತಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ನರ್ತಕಿಯರು ಸರ್ವಾಲಂಕಾರ ಭೂಷಿತರಾಗಿ ದೇವಾಲಯ ಮತ್ತು ಅರಮನೆಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು.

ವಿಜಯನಗರ ಸಾಮ್ರಾಜ್ಯದ ಅಂತ್ಯ
• ವಿಜಯನಗರದ ಚರಿತ್ರೆಯಲ್ಲಿ ಸಾ.ಶ. 1565ರಲ್ಲಿ ನಡೆದ ರಕ್ಕಸ-ತಂಗಡಿ ಯುದ್ಧವು ಅತ್ಯಂತ ನಿರ್ಣಾಯಕ ಯುದ್ಧಗಳಲ್ಲಿ ಒಂದು. ಇದು ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಮೂಲೆಗುಂಪು ಮಾಡಿ ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.

• ಕೃಷ್ಣದೇವರಾಯನ ನಿಧನದ ನಂತರದಲ್ಲಿ ಅಧಿಕಾರಕ್ಕಾಗಿ ಆಂತರಿಕ ಸಂಘರ್ಷಗಳು ಕಂಡುಬಂದವು. ನಂತರದ ದೊರೆ ಅಚ್ಯುತ ದೇವರಾಯನ ನಿಧನ ಮತ್ತೊಮ್ಮೆ ಅಧಿಕಾರಕ್ಕಾಗಿ ಆಂತರಿಕ ಕದನಕ್ಕೆ ದಾರಿ ಮಾಡಿತು.

• ಸದಾಶಿವರಾಯನು ಪಟ್ಟಕ್ಕೆ ಬಂದರೂ ಆಡಳಿತ ಅಳಿಯ ರಾಮರಾಯನ ಕೈಯಲ್ಲಿತ್ತು. ರಾಮರಾಯ ತನ್ನ ಆಳ್ವಿಕೆಯಲ್ಲಿ ಕೈಗೊಂಡ ಯುದ್ಧಗಳು ಸಾಮ್ರಾಜ್ಯದ ವಿಸ್ತಾರ ಹೆಚ್ಚಿಸಿದ್ದರೂ ಅನೇಕ ಶತ್ರುಗಳನ್ನು ಸೃಷ್ಟಿಸಿತ್ತು. ರಾಮರಾಯನ ನೀತಿಗಳು ದಖನ್ ಸುಲ್ತಾನರನ್ನು ಒಂದುಗೂಡಿಸಿತು.

ಬಹಮನಿ ರಾಜ್ಯ
• ಸಾ.ಶ. 14ನೆಯ ಶತಮಾನದಲ್ಲಿ ಕಂಡುಬಂದ ಮತ್ತೊಂದು ಬದಲಾವಣೆಯೇ ಬಹಮನಿ ರಾಜ್ಯದ ಉದಯ. ಸಾ.ಶ. 1347ರಲ್ಲಿ ಅಲ್ಲಾಉದ್ದೀನ್ ಹಸನ್ಗಂಗು ಬಹಮನ್ಷಾನು ಇದನ್ನು ಸ್ಥಾಪಿಸಿದನು.

• ಸಾ.ಶ. 1347 ರಿಂದ 1527ರವರೆಗೆ ಬಹಮ

ನಿ ಹಾಗೂ 1686ರವರೆಗೆ ಶಾಹಿ ಮನೆತನಗಳು ಆಳ್ವಿಕೆ ಮಾಡಿದವು. ಈ ಮನೆತನದಲ್ಲಿ ಮಹಮ್ಮದ್ ಷಾ, ಫಿರೋಜ್ ಷಾ, ಯೂಸೂಫ್ ಅಲಿ ಖಾನ್, ಒಂದನೇ ಇಬ್ರಾಹಿಂ ಆದಿಲ್ ಷಾ, ಪ್ರಮುಖರು.

• ಬಹಮನಿಗಳ ರಾಜಕೀಯ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗಮನಿಸಬಹುದು. ಮೊದಲ ಹಂತದಲ್ಲಿ (1346-1422) ಗುಲ್ಬರ್ಗ ರಾಜಧಾನಿಯಾಗಿತ್ತು. ಇವರ ಮುಖ್ಯ ಪ್ರತಿಸ್ಪರ್ಧಿಗಳು ತೆಲಂಗಾಣ ಮತ್ತು ವಿಜಯನಗರದ ರಾಜರುಗಳಾಗಿದ್ದರು. • ಎಂಟು ಸುಲ್ತಾನರು ಆಳ್ವಿಕೆ ನಡೆಸಿದರು. ಷಿಯಾಬುದ್ದೀನ್ ಅಹಮದ್ ರಾಜಧಾನಿಯನ್ನು ಬೀದರ್ಗೆ ಸ್ಥಳಾಂತರಿಸಿದನು. ಬಹಮನಿಗಳ ಅಂತ್ಯದವರೆಗು ಬೀದರ್ ರಾಜಧಾನಿಯಾಗಿತ್ತು.

ಮಹಮ್ಮದ್ ಗವಾನ (ಸಾ.ಶ. 1411-1481) :

• ಸಾ.ಶ. 1347 ರಿಂದ ಸಾ.ಶ. 1426 ರವರೆಗೆ ಗುಲ್ಬರ್ಗ ಬಹಮನಿಯರ ರಾಜಧಾನಿಯಾಗಿತ್ತು. ಈ ಕಾಲಘಟ್ಟದಲ್ಲಿ ಮಹಮ್ಮದ್ ಗವಾನನು ನಿಷ್ಠೆ, ನಿಸ್ವಾರ್ಥತೆಯಿಂದ ಆಳ್ವಿಕೆ ನಡೆಸಿದನು.

• ಪ್ರಧಾನ ಮಂತ್ರಿಯಾಗಿ ಬಹಮನಿ ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದನು. ಕೈರೋದಲ್ಲಿ ಇಸ್ಲಾಂ ಮತಶಾಸ್ತ್ರ ಮತ್ತು ಕಾನೂನು ಅಭ್ಯಸಿಸಿ, ಅರಬ್ಬೀ, ಪಾರಸೀ ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿದನು.

• ಬಹಮನಿ ಸುಲ್ತಾನರಾದ ಹುಮಾಯೂನ್, ನಿಜಾಂಷಾ ಹಾಗೂ ಮೂರನೇ ಮಹಮದ್ಷಾನ ಆಳ್ವಿಕೆಯ ಕಾಲದಲ್ಲಿ ಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು.

• ಇವನು ತನ್ನ ದಿಗ್ವಿಜಯಗಳು ಹಾಗೂ ಅಚ್ಚುಕಟ್ಟಾದ ಆಡಳಿತ ಕ್ರಮದಿಂದ ಬಹಮನಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದನು. ಗವಾನನು ಕೊಂಕಣ, ಗೋವ ಮತ್ತು ಬೆಳಗಾವಿಯನ್ನು ವಶಪಡಿಸಿಕೊಂಡನು.

• ನಂತರ ಓರಿಸ್ಸಾದ ಮೇಲೆ ದಾಳಿ ಮಾಡಿ, ಅಲ್ಲಿಂದ ಕೊಂಡವೀಡು ಪ್ರದೇಶವನ್ನು ವಶಪಡಿಸಿಕೊಂಡನು. ಸಾ.ಶ. 1481ರಲ್ಲಿ ಕಂಚಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ಲೂಟಿ ಮಾಡಿದನು.

• ಬಹಮನಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣನಾದನು. ಬಹಮನಿ ರಾಜ್ಯದಲ್ಲಿ ಆಂತರಿಕ ಈರ್ಷೆಗಳು ಹೆಚ್ಚಾಗಿ ಗವಾನನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ರಾಜನ ಬಳಿ ಅವರ ಶತ್ರುಗಳು ಮಾಡಿದರು.

• ಅವರ ಕುತಂತ್ರದ ರಾಜಕೀಯ ಗವಾನನು ರಾಜ ದ್ರೋಹದ ಆರೋಪವನ್ನು ಎದುರಿಸಬೇಕಾದ ಸಂದರ್ಭ ಬಂದಿತು. ಇದರ ಪರಿಣಾಮವಾಗಿ ರಾಜನ ಆಜ್ಞೆಯಂತೆ ಅವನ ಶಿರಚ್ಛೇದನವಾಯಿತು. ಇವನ ಮರಣದ ನಂತರ ಬಹಮನಿ ರಾಜ್ಯವು ದುರ್ಬಲಗೊಂಡು ಐದು ಭಾಗಗಳಲ್ಲಿ ಒಡೆದುಹೋಯಿತು.

ಎರಡನೇ ಇಬ್ರಾಹಿಂ ಆದಿಲ್ ಷಾ (ಸಾ.ಶ. 1580-1627) :
• ಆದಿಲ್ ಶಾಹಿಗಳಲ್ಲಿ ಶ್ರೇಷ್ಠ ದೊರೆಯಾದ ಎರಡನೇ ಇಬ್ರಾಹಿಂನು ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಸಿಂಹಾಸನಾರೋಹಣ ಮಾಡಿದನು. ಈತನ ಆಡಳಿತಾವಧಿಯು 47 ವರ್ಷಗಳಾಗಿದ್ದು, ಚರಿತ್ರಾರ್ಹ ಘಟನೆಗಳನ್ನು ಒಳಗೊಂಡಿವೆ.

• ಈತನು ರಾಜಕೀಯವಾಗಿ ವಿಜಯಾಪುರವನ್ನು ವೈಭವದ ಉತ್ತುಂಗ ಶಿಖರಕ್ಕೆ ಏರಿಸಿ, ದಕ್ಷ ಆಡಳಿತವನ್ನು ನೀಡಿ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದನು. “ಕಿತಾಬ್-ಏ-ನವರಸ” ಎಂಬ ಗ್ರಂಥದಲ್ಲಿ ಈತನು ಸರಸ್ವತಿ, ಗಣೇಶ ಮತ್ತು ನರಸಿಂಹರ ಸ್ತುತಿಯೊಂದಿಗೆ ಆರಂಭಿಸಿದ್ದು ಇದರ ವೈಶಿಷ್ಟ್ಯ ಯವಾಗಿದೆ.

• ಇದರಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆಯೂ ಸ್ತುತಿಗಳಿವೆ. ಈ ಗ್ರಂಥವು ಇಬ್ರಾಹಿಂನ ವಿದ್ವತ್ತು, ಘನತೆ ಹಾಗೂ ಮತೀಯ ಉದಾರತೆಗೆ ಸಾಕ್ಷಿಯಾಗಿದೆ.

ಬಹಮನಿ ಸುಲ್ತಾನರ ಸಾಂಸ್ಕøತಿಕ ಕೊಡುಗೆಗಳು
• ಬಹಮನಿ ಹಾಗೂ ಷಾಹಿ ಸುಲ್ತಾನರು ಸುಮಾರು ಎರಡು ಶತಮಾನಗಳ ಕಾಲ ಕರ್ನಾಟಕದಲ್ಲಿ ಆಳ್ವಿಕೆ ಮಾಡಿದರು.

• ಕರ್ನಾಟಕವು ಸೇರಿದಂತೆ ತಮಿಳುನಾಡಿನ ತಂಜಾವೂರಿನವರೆಗೆ ರಾಜ್ಯವನ್ನು ವಿಸ್ತರಿಸಿದ್ದರು.

• ಆಡಳಿತವನ್ನು ಇಸ್ಲಾಂ ಮತಶಾಸ್ತ್ರದ ಆಧಾರದ ಮೇಲೆ ವ್ಯವಸ್ಥೆಗೊಳಿಸಿದ್ದರು.

ಆಡಳಿತ:
• ಆಡಳಿತದಲ್ಲಿ ಕೇಂದ್ರ, ಪ್ರಾಂತೀಯ ಹಾಗೂ ಗ್ರಾಮ ಆಡಳಿತವೆಂಬ ಮೂರು ಭಾಗಗಳಿದ್ದವು. ಇವುಗಳಲ್ಲಿ ಕಂದಾಯ ನ್ಯಾಯ ಮತ್ತು ಸೈನ್ಯ ಆಡಳಿತಗಳಿದ್ದವು.

• ಕೇಂದ್ರ ಸರ್ಕಾರದಲ್ಲಿ ಸುಲ್ತಾನನೇ ಆಡಳಿತದ ಮುಖ್ಯಸ್ಥನಾಗಿರುತ್ತಿದ್ದ. ಮಂತ್ರಿಮಂಡಲಕ್ಕೆ ‘ಮಜ್ಲಿಸ್-ಇ-ಇಲ್ವಿತ್’ ಎಂದು ಕರೆಯುತ್ತಿದ್ದರು.

• ಉನ್ನತ ಅಧಿಕಾರಿಗಳು, ದಂಡನಾಯಕರು, ಉಲೇಮರು, ಅಮೀರರು ಸುಲ್ತಾನನ ಆಪ್ತರು ಮತ್ತು ಸಂಬಂಧಿಗಳು ಆಗಿದ್ದರು. ಗವಾನನು ರಾಜ್ಯದಲ್ಲಿ ಹಿಂದೆ ಇದ್ದ ನಾಲ್ಕು ತರಫ್ (ಪ್ರಾಂತ) ಗಳನ್ನು ಎಂಟು ಘಟಕಗಳಾಗಿ ವಿಂಗಡಿಸಿದನು.

• ಹಾಗೆಯೆ ಪ್ರಾಂತಗಳನ್ನು 15 ಸರ್ಕಾರಗಳಾಗಿ ವಿಂಗಡಿಸಲಾಗಿತ್ತು. ಸುಭೇದಾರ ಎಂಬ ಅಧಿಕಾರಿಯು ಸರ್ಕಾರಗಳಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದನು.

• ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಲಾಗಿತ್ತು. ಕೊತ್ವಾಲ್, ದೇಶಮುಖ ಮತ್ತು ದೇಸಾಯಿ ಎಂಬ ಅಧಿಕಾರಿಗಳು ಪರಗಣದ ಅಧಿಕಾರಿಗಳಾಗಿದ್ದರು.

• ಆಡಳಿತದ ಕೊನೆಯ ಘಟಕವಾದ ಗ್ರಾಮಗಳಲ್ಲಿ ಪಟೇಲ, ಕುಲಕರ್ಣಿ ಮತ್ತು ಕಾವಲುಗಾರ ಎಂಬ ಅಧಿಕಾರಿಗಳಿದ್ದರು. ಗ್ರಾಮಾಡಳಿತ ಘಟಕಗಳು ಸ್ವಾಯತ್ತ ಸಂಸ್ಥೆಯಾಗಿದ್ದವು. ಕಂದಾಯ,

ಸೈನ್ಯ ಮತ್ತು ನ್ಯಾಯಾಡಳಿತ :
• ಅಮೀರ್-ಏ-ಜುಮ್ಲಾರು ಕಂದಾಯದ ಮುಖ್ಯಸ್ಥರಾಗಿದ್ದರು. ಭೂಕಂದಾಯವು ರಾಜ್ಯಾದಾಯದ ಮೂಲವಾಗಿತ್ತು. ಉತ್ಪತ್ತಿಯ 1 ರಿಂದ 1 ನೇ ಭಾಗದಷ್ಟನ್ನು ಭೂಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು.

• ಮನೆ, ಗಣಿ, ಹೊಗೆಸೊಪ್ಪು, ಹುಲ್ಲುಗಾವಲು, ವ್ಯಾಪಾರ, ವೃತ್ತಿ ಸೇರಿದಂತೆ 50 ಬಗೆಯ ತೆರಿಗೆಗಳಿದ್ದವು. ತೆರಿಗೆಯಿಂದ ಬಂದ ಹಣವನ್ನು ಅರಮನೆ, ಯುದ್ಧ, ಅಂಗರಕ್ಷಕರು, ಕೋಟೆ ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕೆ ಬಳಸುತ್ತಿದ್ದರು.

• ಬಹಮನಿ ರಾಜ್ಯವು ಸೈನಿಕ ಬಲದ ಮೇಲೆ ನಡೆಯುತ್ತಿತ್ತು. ಸೈನ್ಯದ ಮೇಲಿನ ವೆಚ್ಚ ಬಹಳವಾಗಿತ್ತು. ಇವರ ರಾಜ್ಯದಲ್ಲಿ ನಾಲ್ಕು ಬಗೆಯ ಸೈನಿಕ ವರ್ಗಗಳಿದ್ದವು. ಖಾಯಂ ಸೈನ್ಯ, ಯುದ್ಧಕಾಲದಲ್ಲಿ ನೇಮಿಸಿಕೊಳ್ಳುತ್ತಿದ್ದ.

• ಸುಲ್ತಾನ ಹಾಗೂ ಕೋಟೆಯ ಕಾವಲುಪಡೆಗಳು. ಪದಾತಿ, ಅಶ್ವದಳ, ಗಜದಳ ಮತ್ತು ಸಿಡಿಮದ್ದು ಪಡೆಗಳು ಸೈನ್ಯದ ಮುಖ್ಯ ವಿಭಾಗಗಳಾಗಿದ್ದವು. ಆದಿಲ್ಶಾಹಿ ರಾಜ್ಯದ ಅನೇಕ ಕೋಟೆಗಳಲ್ಲಿ, ಬಿಜಾಪುರದ ಕೋಟೆ ಹೆಚ್ಚು ಸುಭದ್ರವಾಗಿತ್ತು.

• ಸುಲ್ತಾನನು ರಾಜ್ಯದ ಸರ್ವೋಚ್ಚ ನ್ಯಾಯಾಧೀಶನಾಗಿದ್ದನು. ರೂಢಿ, ಸಂಪ್ರದಾಯ ಮತ್ತು ಇಸ್ಲಾಂ ಮತ ತತ್ವಗಳಿಗನುಸಾರವಾಗಿ ನ್ಯಾಯಪಾಲನೆ ಮಾಡುತ್ತಿದ್ದ. ಖಾಜಿಗಳು, ಹಿರಿಯ ಅಧಿಕಾರಿಗಳು ನ್ಯಾಯಪಾಲನೆಯಲ್ಲ

ಿ ಸುಲ್ತಾನನಿಗೆ ಸಹಕರಿಸುತ್ತಿದ್ದರು.

• ಇವರ ದಕ್ಷ ಆಡಳಿತದಿಂದಾಗಿ ರಾಜ್ಯವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿತು.

ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು:
• ಕೃಷಿ, ಗ್ರಾಮ ಜೀವನದ ಮುಖ್ಯ ಉದ್ಯೋಗವಾಗಿತ್ತು. ನೇಕಾರಿಕೆ, ಸಕ್ಕರೆ, ಬೆಲ್ಲ ತಯಾರಿಕೆ, ನೂಲುವುದು, ನೇಯುವುದು, ಚರ್ಮಗಾರಿಕೆ, ಕುಂಬಾರಿಕೆ, ಬಡಿಗಿತನ, ಅಕ್ಕಸಾಲಿ, ಸುಗಂಧಿ, ಶಿಲ್ಪಗಾರಿಕೆ ಮುಂತಾದ ಉದ್ಯೋಗಗಳು ಅಸ್ತಿತ್ವದಲ್ಲಿದ್ದವು.

• ಧಾಬೋಲ್, ರಾಜಾಪುರ, ಚೌಲ ಮತ್ತು ಗೋವಾ ಈ ಕಾಲದ ಬಂದರುಗಳಾಗಿದ್ದವು. ರೇಷ್ಮೆ, ಮದ್ಯ, ಚಿನ್ನ, ಬೆಳ್ಳಿ, ತಾಮ್ರ, ತವರ, ಸೀಸ, ಗಾಜು ಮತ್ತು ಕುದುರೆಗಳು ಪ್ರಮುಖ ಆಮದುಗಳಾಗಿದ್ದವು.

• ವ್ಯಾಪಾರ ಹಾಗೂ ವೃತ್ತಿ ಸಂಘಗಳು ಅಸ್ತಿತ್ವದಲ್ಲಿದ್ದವು. ‘ಹೊನ್ನು’ ಎಂಬ ಬಂಗಾರದ ನಾಣ್ಯ, ‘ಲಾರಿ’, ‘ಟಂಕ’ ಎಂಬ ಬೆಳ್ಳಿ ನಾಣ್ಯಗಳು ಚಲಾವಣೆಯಲ್ಲಿದ್ದವು.

• ಸಮಾಜದಲ್ಲಿ ಅವಿಭಕ್ತ ಪಿತೃಪ್ರಧಾನ ಕುಟುಂಬಗಳು ಮುಂದುವರೆದವು. ಜಾತಿ ಪದ್ದತಿ ಹಾಗೂ ಬಹುಪತ್ನಿತ್ವಗಳು ರೂಢಿಯಲ್ಲಿದ್ದವು.

• ಭಕ್ತಿಪಂಥದ ಹರಿದಾಸರು ಮತ್ತು ಮುಸ್ಲಿಂ ಸೂಫಿ ಸಂತರು ಎರಡು ಸಮಾಜಗಳಲ್ಲೂ ಪ್ರೀತಿ ಬೆಳೆಸಲು ಪ್ರಯತ್ನಿಸಿದರು. ಮುಸ್ಲಿಂ ಸಮಾಜದಲ್ಲಿ ಸುನ್ನಿ, ಷಿಯಾ, ಸಯ್ಯದ್, ಶೇಖ್ ಮತ್ತು ಪಠಾಣ ಎಂಬ ವರ್ಗ ವಿಂಗಡಣೆಗಳಿದ್ದವು. ಮುಸ್ಲಿಂ ಸ್ತ್ರೀಯರಲ್ಲಿ ಪರದಾ ಪದ್ಧತಿ ರೂಢಿಯಲ್ಲಿತ್ತು.

ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪ :
• ಇವರ ಶೈಕ್ಷಣಿಕ ನೀತಿಯು ಇಸ್ಲಾಂ ಸಂಸ್ಕøತಿಯನ್ನು ಬೆಳೆಸುವುದಾಗಿತ್ತು. ಮಕ್ತಬ ಎಂಬ ಶಾಲೆಗಳಿದ್ದವು. ಇವು ಮಸೀದಿಗಳ ನಿಯಂತ್ರಣದಲ್ಲಿದ್ದವು.

• ಮಕ್ತಬಗಳಲ್ಲಿ ಅಕ್ಷರ ಜ್ಞಾನ, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರಗಳನ್ನು ಬೋಧಿಸುತ್ತಿದ್ದರು. ಮದರಸಾಗಳು ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವು.

• ಸ್ವತಃ ವಿದ್ವಾಂಸನಾಗಿದ್ದ ಮಹಮ್ಮದ್ ಗವಾನ್ ಬೀದರ್ನಲ್ಲಿ ಇಸ್ಲಾಂ ಮತ ಮತ್ತು ಕಾನೂನಿನ ಶಿಕ್ಷಣವನ್ನು ಪ್ರೋತ್ಸಾಹಿಸಲು ಮದರಸ (ಮಹಾವಿದ್ಯಾಲಯ) ವನ್ನು ಸ್ಥಾಪಿಸಿದನು.

• ಇದು 242 ಅಡಿ ಉದ್ದ, 222 ಅಡಿ ಅಗಲ ಮತ್ತು 56 ಅಡಿ ಎತ್ತರವಿರುವ ಮೂರು ಅಂತಸ್ತಿನ ದಖ್ಖನಿನ ಶೈಲಿಯ ಭವ್ಯ ಕಟ್ಟಡ.

• ಇಲ್ಲಿ ಸುಮಾರು 3000 ಹಸ್ತ ಪ್ರತಿಗಳುಳ್ಳ ಗ್ರಂಥಾಲಯವೂ ಇತ್ತು. ಇದು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮತ್ತು ಸಾಂಪ್ರಾದಾಯಿಕ ವ್ಯಕ್ತಿಗಳಿಗೆ ತಂಗುದಾಣವೂ ಆಗಿತ್ತು.

• ಇಲ್ಲಿ ಖಗೋಳಶಾಸ್ತ್ರ, ವ್ಯಾಕರಣ, ಗಣಿತ, ತತ್ವಶಾಸ್ತ್ರ, ಇತಿಹಾಸ, ರಾಜನೀತಿಗಳ ಅಧ್ಯಯನ ನಡೆಯುತ್ತಿತ್ತು. ಸುಲ್ತಾನರು ಇಂಡೋ ಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪ ಬೆಳೆಸಿದರು.

• ಒಂದನೆಯ ಅಲಿ ಆದಿಲ್ ಶಹನು ನಿರ್ಮಾಣ ಮಾಡಿದ ಜಾಮಿಯ ಮಸೀದಿಯು ಈ ಕಾಲದ ಒಂದು ಮುಖ್ಯ ಸ್ಮಾರಕವಾಗಿದೆ. ಇಬ್ರಾಹಿಂ ರೋಜಾ, ಗೋಲಗುಂಬಜ್, ಗಗನ್ಮಹಲ್, ಅಸಾರ್ ಮಹಲ್ಗಳು ಇವರ ಪ್ರಮುಖ ಸ್ಮಾರಕಗಳಾಗಿವೆ.

• ಈ ಸ್ಮಾರಕಗಳಿಂದಾಗಿ ಆದಿಲ್ ಷಾಹಿಗಳು ವಿಶ್ವವಿಖ್ಯಾತರಾಗಿದ್ದಾರೆ. ವಿಶ್ವದ ಶ್ರೇಷ್ಠ ಕಟ್ಟಡಗಳಲ್ಲಿ ವಿಜಯಪುರದಲ್ಲಿರುವ ಗೋಲಗುಂಬಜ್ ಒಂದಾಗಿದೆ.

• 1800 ಚದುರ ಅಡಿ ವಿಸ್ತೀರ್ಣವನ್ನು ಒಳಗೊಂಡಿದೆ. ನಾಲ್ಕು ಮೂಲೆಗಳಲ್ಲಿ ಏಳು ಅಂತಸ್ತಿನ ಒಂದೊಂದು ಮಿನಾರಗಳಿವೆ. ಮಧ್ಯದಲ್ಲಿ ಬೃಹತ್ ಗುಮ್ಮಟವಿದೆ.

• ಈ ಕಾಲದ ಗಿಲಾನಿ ಎಂಬ ಖಗೋಳ ವಿಜ್ಞಾನಿಯು ದೇವಗಿರಿಯಲ್ಲಿ ಒಂದು ಗಗನ ವೀಕ್ಷಣಾಲಯವನ್ನು ನಿರ್ಮಿಸಿದ್ದನು. • ಮಹಮ್ಮದ ಗವಾನ ಕಾಲದಲ್ಲಿ ಬೀದರ್ನಲ್ಲಿ ಮದ್ರಸಾ ಸ್ಥಾಪಿಸಲಾಯಿತು. ಪ್ರಾಂತ್ಯಗಳಲ್ಲೂ ಕೂಡ ಮದ್ರಸಾಗಳು ತೆರೆಯಲ್ಪಟ್ಟುವು. ಬಹಮನಿ ಸಾಮ್ರಾಜ್ಯದಲ್ಲಿ ಮದ್ರಸಾಗಳು ಶೈಕ್ಷಣಿಕ ಕೇಂದ್ರಗಳಾಗಿ ರೂಪಗೊಂಡಿದ್ದವು.

• ಬಹುಮನಿ ಕಾಲದಲ್ಲಿ ಪರ್ಶಿಯನ್ ಭಾಷೆಯು ಪ್ರಮುಖ ಭಾಷೆಯಾಗಿತ್ತು.

• ಬಹುಮನಿ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ್ಪವು ಇಂಡೋಸರಾಸೆನಿಕ್ ಶೈಲಿಯೆಂದು ಕರೆಯಲ್ಪಟ್ಟಿದೆ. • ಬಹುಮನಿ ರಾಜ್ಯದಮೊದಲ ಮತ್ತು ಎರಡನೆಯ ರಾಜಧಾನಿಯಾಗಿದ್ದ ಗುಲ್ಬರ್ಗಾಮತ್ತು ಬೀದಗಳಲ್ಲಿ ಕೋಟೆಗಳು, ಅರಮನೆಗಳು,ಮಸೀದಿಗಳು, ಸಮಾದಿಗಳು ನಿರ್ಮಾಣಗೊಂಡಿದ್ದು, ಇಂಡೋಸೆರಾಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿದ್ದವು.

• ಬಹುಮನಿಕಾಲದ ಕಲೆ ಮತ್ತು ವಾಸ್ತುಶಿಲ್ಪ ಶೈಲಿಯ ಅರಮನೆಗಳಲ್ಲಿಜುಮ್ಮಾ ಮಸೀದಿ ಉದಾಹರಣೆಯಾಗಿದೆ.

• ಬೀದರ್ನ ಜನಾನ್ಮಹಲ್, ರಂಗೀನ್ ಮಹಲ್, ದಿವಾನ್ ಖಾನೆ, ಜಾಮೀಮಸೀದಿ ಮುಂತಾದವು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಉದಾಹರಣೆಗಳಾಗಿವೆ.

ಮಹಮ್ಮದ ಗವಾನ್ ಕ್ರಿಶ. 1447-1481
• ಪರ್ಶಿಯಾದ Tಲಾನ್ ರಾಜ್ಯದ ಗವಾನ್ ಎಂಬ ಗ್ರಾಮದಲ್ಲಿಪಂಥೀಯವನಾಗಿದ್ದನು. ಪರ್ಶಿಯಾದ ಸೂಫಿ ಸಂತನ 1405ರಲ್ಲಿ ಜನಿಸಿದ ಈತ, ಅನನ್ಯ ಸೂಫಿ ಮೂಲಕ ಬೀದರ್ಗೆ ಬಂದ ಮಹಮ್ಮದ ಗವಾನ ಉತ್ತಮ ವಿದ್ವತ್ತು, ಸುಸಂಸ್ಕೃತ ವರ್ತನೆ ಮತ್ತು ಪ್ರಾಮಾಣಿಕತೆಯಿಂದಾಗಿ ಬಹುಮನಿ ಸುಲ್ತಾನನನ ಗಮನ ಸೆಳೆದು ಸುಲ್ತಾನನ 🌼🔯

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area