ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌺 ಏಪ್ರಿಲ್ 17- ವಿಶ್ವ ಹಿಮೋಫಿಲಿಯಾ ದಿನ, ಈ ದಿನದ ಮಹತ್ವವೇನು? 🌺

🌺 ಏಪ್ರಿಲ್ 17- ವಿಶ್ವ ಹಿಮೋಫಿಲಿಯಾ ದಿನ, ಈ ದಿನದ ಮಹತ್ವವೇನು? 🌺

👉 ವಿಶ್ವ ಹಿಮೋಫಿಲಿಯಾ ಸಂಘಟನೆಯ (ಡಬ್ಲ್ಯುಎಫ್‌ಎಚ್‌) ಸಂಸ್ಥಾಪಕರಾದ ಫ್ರ್ಯಾಂಕ್‌ ಸ್ಕಾನ್ಬೆಲ್‌ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಏಪ್ರಿಲ್‌ 17ರಂದು ಹಮ್ಮಿಕೊಳ್ಳಲಾಗುತ್ತದೆ. 1989ರಿಂದ ಈ ದಿನದ ಆಚರಣೆ ಆರಂಭವಾಗಿದ್ದು, ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಆಶಯ ಈ ದಿನದ್ದು.

🔴 ಏನಿದು ಹಿಮೋಫಿಲಿಯಾ:

ಹೈಮೊ ಎಂಬ ಗ್ರೀಕ್‌ ಪದದಿಂದ ಹುಟ್ಟಿಕೊಂಡ ಈ ಶಬ್ದಕ್ಕೆ ರಕ್ತ ಎಂಬ ಅರ್ಥವಿದೆ. ಫೀಲಿಯಾ ಎಂದರೆ ಪ್ರೀತಿ. ರಕ್ತವನ್ನು ಪ್ರೀತಿಸುವ ಕಾಯಿಲೆ ಎಂದು ಇದನ್ನು ಅರ್ಥಮಾಡಿಕೊಳ್ಳಬಹುದು. ರಕ್ತ ಹೆಪ್ಪುಗಟ್ಟಲು ಸುಮಾರು 13 ರಕ್ತಹೆಪ್ಪುಗಟ್ಟುವ ಅಂಶಗಳು ಅಥವಾ ಘಟಕಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. ಈ ಘಟಕಗಳಲ್ಲಿ ಯಾವುದಾದರೊಂದು ಅಂಶ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅಥವಾ ಅಂಶಗಳ ಕೊರತೆ ಉಂಟಾದಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ರಕ್ತ ಹೆಪ್ಪುಗಟ್ಟದೆ ಹಿಮೋಫಿಲಿಯಾ ರೋಗ ಉಂಟಾಗುತ್ತದೆ.

⭕ ಪುರುಷರಲ್ಲಿ ಅಧಿಕ  ಹಿಮೋಫಿಲಿಯಾವು ರಕ್ತ ಹೆಪ್ಪುಗಟ್ಟುವಿಕೆಯಲ್ಲಿನ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವ ರೋಗ. ತಾಯಿಯಿಂದ ಮಗನಿಗೆ ಬಳವಳಿಯಾಗಿ ಬರುವ ಕಾಯಿಲೆ ಇದಾಗಿದೆ. ಎಕ್ಸ್‌ ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಇದು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಿಗೆ ಈ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಇದಕ್ಕೆ ಕುಸುಮ ರೋಗ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ.

🔲 ಎಷ್ಟು ವಿಧಗಳಿವೆ?:

ಹಿಮೋಫಿಲಿಯಾದಲ್ಲಿ ಎ,ಬಿ, ಸಿ ಎಂಬ ಮೂರು ವಿಧಗಳಿವೆ. ರಕ್ತಹೆಪ್ಪುಗಟ್ಟಲು ನೆರವಾಗುವ 13 ಫ್ಯಾಕ್ಟರ್‌ಗಳಲ್ಲಿ 8ನೇ ಫ್ಯಾಕ್ಟರ್‌ ಅಥವಾ ಘಟಕ ಕಡಿಮೆ ಇದ್ದರೆ ಅದನ್ನು ಟೈಪ್‌ ಎ ಎಂದು, 9ನೇ ಫ್ಯಾಕ್ಟರ್‌ ಕಡಿಮೆ ಇದ್ದರೆ ಟೈಪ್‌ ಬಿ ಎಂದು ಕರೆಯಲಾಗುತ್ತದೆ. ಟೈಪ್‌ ಎ ಹಿಮೋಫಿಲಿಯಾ ಹೆಚ್ಚಾಗಿ ಕಾಣಿಸುತ್ತದೆ. ಬಿ ಮತ್ತು ಸಿ ಹಿಮೋಫಿಲಿಯಾ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆಗೆ ತಕ್ಕಂತೆ ಸೌಮ್ಯ ಹಿಮೋಫಿಲಿಯಾ, ಸಾಧಾರಣ ಹಿಮೋಫಿಲಿಯಾ ಮತ್ತು ತೀವ್ರ ಹಿಮೋಫಿಲಿಯಾ ಎಂದು ವಿಂಗಡಿಸಲಾಗಿದೆ    
             

🔴 ರೋಗ ಲಕ್ಷಣಗಳು 🔴

ಗಂಟು, ಕೀಲು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವ. ಮೂಗಿನಲ್ಲಿ ರಕ್ತಸ್ರಾವ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ. ಸಂಧುನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿಯೂ ರಕ್ತ ಸ್ರಾವವಾಗಬಹುದು. ಮಿದುಳಿನಲ್ಲಿ ರಕ್ತಸ್ರಾವ. ಇವುಗಳಲ್ಲಿ ಕೆಲವೊಂದು ರಕ್ತಸ್ರಾವಗಳು ಮಾರಣಾಂತಿಕವಾಗಿವೆ. ತಕ್ಷಣವೇ ಚುಚ್ಚುಮದ್ದು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area