ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ


  • ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯು ಜೀವಮಾನದ ಕ್ರೀಡಾ ಸಾಧನೆಗಾಗಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನೀಡುವ ದೇಶದ ಅತ್ಯುನ್ನತ ಗೌರವವಾಗಿದೆ.
  • ಕ್ರೀಡಾ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪ್ರಮುಖ ಕ್ರೀಡಾಪಟುಗಳ ಸಾಧನೆಯನ್ನು ಗೌರವಿಸುವ ಸಲುವಾಗಿ ನೀಡುವ ಅತ್ಯುನ್ನತ ಗೌರವ ಇದಾಗಿದೆ.
  • 1991-92 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಸ್ಥಾಪಿಸಲಾದ ಈ ಪ್ರಶಸ್ತಿಯನ್ನು 2021 ರ ಆಗಸ್ಟ್ 06 ರಿಂದ ದೇಶದ ಹಾಕಿ ಮಾಂತ್ರಿಕ (ದಿ ವಿಜಾರ್ಡ್) ಎಂದೇ ಪ್ರಖ್ಯಾತರಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಯಿತು.
  • ಇವತ್ತಿನ ತರಗತಿಯಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ

  • ಇದು ಭಾರತದ ಕ್ರೀಡಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ
  • ಈ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ರಾಜೀವಗಾಂಧಿ ಹೆಸರಿನಲ್ಲಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಆಟಗಾರರಿಗೆ ಪ್ರತಿ ವರ್ಷ ನೀಡಲಾಗುತ್ತದೆ.
  • ಈ ಪ್ರಶಸ್ತಿ ಸ್ಥಾಪನೆಯ ಮುಂಚಿತವಾದ 1961ರಲ್ಲಿ ಸ್ಥಾಪನೆಯಾದ ಅರ್ಜುನ್ ಪ್ರಶಸ್ತಿ ಭಾರತ ಕ್ರೀಡಾ ಕ್ಷೇತ್ರದ ಶ್ರೇಷ್ಠ ಪ್ರಶಸ್ತಿಯಾಗಿತ್ತು.
  • ಮೊದಲ ಹೆಸರು – ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (ಆಗಸ್ಟ್ 06, 2021 ಕ್ಕೆ ಧ್ಯಾನ್ ಚಂದ್ ಹೆಸರು ನಾಮಕರಣ ಮಾಡಲಾಯಿತು.)

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ


  • ಸ್ಥಾಪನೆ-1991
  • ನೀಡುವ ಕ್ಷೇತ್ರ- ಕ್ರೀಡೆ
  • ನೀಡುವವರು- ಭಾರತ ಸರಕಾರ
  • ನೀಡುವ ಸಚಿವಾಲಯ:- ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ
  • ನೀಡುವ ದಿನ - ಅಗಷ್ಟ 29 (ರಾಷ್ಟ್ರೀಯ ಕ್ರೀಡಾ ದಿನ)
  • ಪ್ರದಾನ ಮಾಡುವವರು- ರಾಷ್ಟ್ರಪತಿಗಳು
  • ಮೊತ್ತ- 25 ಲಕ್ಷ ರೂ
  • ಅಂತರಾಷ್ಟ್ರೀಯ ಮಟ್ಟದಲ್ಲಿ ಸತತ ನಾಲ್ಕು ವರ್ಷದ ಸಾಧನೆಯನ್ನು ನೋಡಿ ಪ್ರಶಸ್ತಿಯ ಆಯ್ಕೆ ಮಾಡಲಾಗುತ್ತದೆ.
  • ಇಲ್ಲಿಯವರೆಗೆ ಇಟ್ಟು 58 ಆಟಗಾರರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ
  • ಈ ಪ್ರಶಸ್ತಿಯನ್ನು ಮೊದಲು ಪಡೆದವರು ಚೆಸ್ ಆಟಗಾರರಾದ ವಿಶ್ವನಾಥ ಆನಂದ್ (1991-92)
  • 1995 ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ - ಕರ್ಣಂ ಮಲ್ಲೇಶ್ವರಿ (ಭಾರ ಎತ್ತುವಿಕೆ)
  • 1996 ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಟೆನ್ನಿಸ್ ಆಟಗಾರ - ಲಿಯಾಂಡರ್ ಪೇಸ್
  • 2005 ರಲ್ಲಿ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಆಟಗಾರ ಪಂಕಜ್ ಅಡ್ವಾಣಿ (ಬಿಲಿಯರ್ಡ್ಸ್ ಮತ್ತು ಸ್ನೂಕರ್)
  • ಪ್ರಶಸ್ತಿಯ ಮೊದಲ ವಿಜೇತ ವಿಶ್ವನಾಥ್ ಆನಂದ (ಚೆಸ್)
  • ಈ ಪ್ರಶಸ್ತಿ ಪಡೆದ ಕಿರಿಯ ವಯಸ್ಸಿನ ಆಟಗಾರ– ಅಭಿನವ್ ಬಿಂದ್ರಾ
  • ಇತ್ತೀಚಿಗೆ 2022 ರಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ  ಪಡೆದವರು- ಅಚಂತ್ ಶರತ್ ಕಮಲ್ (ಟೇಬಲ್ ಟೆನ್ನಿಸ್ ಆಟಗಾರ)

2021 ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಮಾಹಿತಿ

   
ಅ. ನಂ   
   
ಪ್ರಶಸ್ತಿ ವಿಜೇತರ ಹೆಸರು   
   
ಕ್ರೀಡೆಯ ವಿಧ   
   
1   
   
ನೀರಜ್ ಚೋಪ್ರಾ   
   
ಅಥ್ಲೆಟಿಕ್ಸ್   
   
2   
   
ರವಿ   ಕುಮಾರ್ ದಹಿಯಾ   
   
ಫ್ರೀಸ್ಟೈಲ್   ಕುಸ್ತಿ   
   
3   
   
ಲೊವ್ಲಿನಾ ಬೊರ್ಗೊಹೈನ್   
   
ಬಾಕ್ಸಿಂಗ್   
   
4   
   
ಪಿಆರ್ ಶ್ರೀಜೇಶ್   
   
ಹಾಕಿ   
   
5   
   
ಅವನಿ   ಲೇಖರ   
   
ಪ್ಯಾರಾಲಿಂಪಿಕ್   ಶೂಟಿಂಗ್   
   
6   
   
ಸುಮಿತ್ ಆಂಟಿಲ್   
   
ಪ್ಯಾರಾ-ಅಥ್ಲೆಟಿಕ್ಸ್   
   
7   
   
ಪ್ರಮೋದ್   ಭಗತ್   
   
ಪ್ಯಾರಾ-ಬ್ಯಾಡ್ಮಿಂಟನ್   
   
8   
   
ಕೃಷ್ಣ   ನಗರ   
   
ಪ್ಯಾರಾ-ಬ್ಯಾಡ್ಮಿಂಟನ್   
   
9   
   
ಮನೀಶ್ ನರ್ವಾಲ್   
   
ಪ್ಯಾರಾಲಿಂಪಿಕ್   ಶೂಟಿಂಗ್   
   
10   
   
ಮಿಥಾಲಿ   ರಾಜ್   
   
ಕ್ರಿಕೆಟ್   
   
11   
   
ಸುನಿಲ್   ಛೆಟ್ರಿ   
   
ಫುಟ್ಬಾಲ್   
   
12   
   
ಮನಪ್ರೀತ್   ಸಿಂಗ್   
   
ಹಾಕಿ   

2020 ರಲ್ಲಿ ಐದು ಕ್ರೀಡಾಪಟುಗಳಿಗೆ ಕೊಡಲಾಯಿತು
1) ರೋಹಿತ ಶರ್ಮಾ (ಕ್ರೀಕೇಟ್)
2) ಮಾಣಿಕಾ ಭಾತ್ರಾ (ಟೆಬಲ್ ಟೇನಿಸ್)
3) ವಿನೇಶ ಪೋಗಾಟ (ಕುಸ್ತಿ)
4) ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೆಟಿಕ್)
5) ರಾಣಿ ರಂಪಾಲ (ಹಾಕಿ)



ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದ ಇತರರು

1995 - ಕರ್ಣಂ ಮಲ್ಲೇಶ್ವರಿ - ಭಾರ ಎತ್ತುವಿಕೆ
1996 - ಲಿಯಾಂಡರ್ ಫೇಸ್ - ಟೆನ್ನಿಸ್
1997 - ಸಚಿನ್ ತೆಂಡುಲ್ಕರ್ - ಕ್ರಿಕೇಟ್
1999 - ಧನರಾಜ್ ಪಿಳ್ಳೆ - ಹಾಕಿ
2001 - ಅಭಿನವ ಬಿಂದ್ರಾ - ಶೂಟಿಂಗ್
2005 - ಪಂಕಜ್ ಅಡ್ವಾಣಿ - ಸ್ನೂಕರ್
2007 - ಎಮ್.ಎಸ್.ದೋನಿ - ಕ್ರಿಕೆಟ್
2008 - ಮೇರಿಕೊಮ್ - ಬಾಕ್ಸಿಂಗ್
2008 - ವಿಜೇಂದ್ರ ಸಿಂಗ್ - ಬಾಕ್ಸಿಂಗ್
2008 - ಸುಶೀಲ್ ಕುಮಾರ - ಕುಸ್ತಿ
2009 - ಸೈನಾ ನೆಹ್ವಾಲ್ - ಬ್ಯಾಡ್ಮಿಂಟನ್
2012 - ಯೋಗೆಶ್ವರ ದತ್ - ಕುಸ್ತಿ
2012 - ವಿಜಯಕುಮಾರ - ಶೂಟಿಂಗ್
2013 - ರಂಜನ್ ಶೋಧಿ - ಶೂಟಿಂಗ್

ಯಾರಿದು ಮೇಜರ್ ಧ್ಯಾನ್ ಚಂದ?

ಮೇಜರ್ ಧ್ಯಾನ್‌ಚಂದ್ ಅವರ ಸಂಪೂರ್ಣ ಪರಿಚಯ

  • ಜನನ: ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ರಜಪೂತ್ ಕುಟುಂಬವೊಂದರಲ್ಲಿ ಆಗಸ್ಟ್ 29, 1905 ರಲ್ಲಿ ಧ್ಯಾನ್ ಚಂದ್ ಜನಿಸಿದರು. ಅವರ ತಂದೆ ಭಾರತೀಯ ಬ್ರಿಟೀಶ್ ಸೈನ್ಯದಲ್ಲಿ ಹವಾಲ್ದಾರ್ ಅಗಿದ್ದರು. ಪ್ರಯಾಗದಿಂದ ತದನಂತರ ಕುಟುಂಬವು ‘ಝಾನ್ಸಿ' ನಗರಕ್ಕೆ ವಲಸೆ ಬಂದಿತು.
  • ಮೇಜರ್ ಧ್ಯಾನ್ ಚಂದ್ ಸಿಂಗ್ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು. ಇಡೀ ಪ್ರಪಂಚದಲ್ಲಿಯೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ.
  • ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. 14ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ ನನ್ನು ಸುಬೇದಾರ್-ಮೇಜರ್ ಭೋಲೆ ತಿವಾರಿಯವರು ಗಮನಿಸಿದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಇವರು ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. ಹೀಗೆ ಅವರು ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿ ಮುಂದೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾಗಿ ರೂಪುಗೊಂಡರು.
  • 1928 ರಲ್ಲಿ ಭಾರತೀಯ ಹಾಕಿ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, ನೆದರ್ ಲ್ಯಾಂಡ್ ನ ಆಮ್ ಸ್ಟೆರ್ ಡ್ಯಾಮ್ ನಲ್ಲಿ ಆಯೋಜಿಸಲಾದ 1928 ರ ಬೇಸಗೆಯ ಒಲಂಪಿಕ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. 3-0 ಗೋಲ್ ಗಳಲ್ಲಿ 2 ನ್ನು ಗಳಿಸುವ ಮೊಲಕ ಭಾರತೀಯ ತಂಡಕ್ಕೆ ನೆದರ್‌ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದರು. ಈ ಸರಣಿಯಲ್ಲಿ ಭಾರತ ಸ್ವರ್ಣ ಪದಕ ಗಳಿಸಿದ್ದು ಇತಿಹಾಸ.

ಮೇಜರ್ ಧ್ಯಾನ್ ಚಂದ ಕುರಿತಾದ ದಂತ ಕಥೆಗಳು


01. ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ “ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ. ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.
02. 1936ರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು. "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ".
03. ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ. ಆದರೆ ಇದನ್ನು ಧ್ಯಾನ್ ಚಂದರು ಸ್ವೀಕರಿಸಲಿಲ್ಲ.
04. ಕ್ರಿಕೆಟ್ ಆಟದ ಸಾರ್ವಕಾಲಿಕ ತಾರೆ ಡಾನ್ ಬ್ರಾಡ್ ಮನ್, ಒಮ್ಮೆ ಅಡಿಲೈಡ್ ನಲ್ಲಿ ಧ್ಯಾನ್ ಚಂದ್ ಅವರನ್ನು ಮುಖಾಮುಖಿಯಾದಾಗ ಕೇಳಿದರಂತೆ "ಏನಪ್ಪಾ, ನಾವು ಕ್ರಿಕೆಟ್ನಲ್ಲಿ ರನ್ ಬಾರಿಸುವಂತೆ ನೀನು ಗೋಲುಗಳನ್ನು ಬಾರಿಸುತ್ತೀಯಲ್ಲ" ಎಂದು.

ಮೇಜರ್ ಧ್ಯಾನ್ ಚಂದ ವಿಶೇಷತೆಗಳು


  • ಧ್ಯಾನ್ ಚಂದ್ ಭಾರತೀಯ ಫೀಲ್ಡ್ ಹಾಕಿ ಆಟಗಾರ, ಸಾಮಾನ್ಯವಾಗಿ ಹಾಕಿ ಮೈದಾನದಲ್ಲಿ ‘ಜಾದೂಗಾರ’ ‘ಹಾಕಿ ಮಾಂತ್ರಿಕ’ ಎಂದು ಕರೆಯುತ್ತಾರೆ.
  • ಹಾಕಿ ಆಟದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪರಿಗಣಿಸಲಾಗಿದೆ. ಅವರು ತಮ್ಮ ಅಸಾಧಾರಣ ಗೋಲ್-ಸ್ಕೋರಿಂಗ್ ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ.
  • ಧ್ಯಾನ್ ಚಂದ್ ತಮ್ಮ 22 ವರ್ಷಗಳ (1926-48) ವೃತ್ತಿಜೀವನದಲ್ಲಿ 400 ಗೋಲುಗಳನ್ನು ಗಳಿಸಿದ್ದಾರೆ.
  • ನೆದರ್ಲ್ಯಾಂಡ್ಸ್ನ ಹಾಕಿ ಅಧಿಕಾರಿಗಳು ಒಮ್ಮೆ ಅವರ ಹಾಕಿ ಸ್ಟಿಕ್ ಅನ್ನು ಮುರಿದು ಒಳಗೆ ಮ್ಯಾಗ್ನೆಟ್ ಇದೆಯೇ ಎಂದು ಪರಿಶೀಲಿಸಿದರು.
  • ಧ್ಯಾನ್ ಚಂದ್ ಅವರು ಮೂರು ಒಲಂಪಿಕ್ ಚಿನ್ನದ ಪದಕಗಳನ್ನು (1928, 1932, ಮತ್ತು 1936) ಫೀಲ್ಡ್ ಹಾಕಿಯಲ್ಲಿ ಗೆದ್ದರು.
  • ಇವರಿಗೆ 1956 ರಲ್ಲಿ ಮೂರನೇ ಅತ್ಯುನ್ನತ (ಆಗ ಎರಡನೇ ಅತ್ಯುನ್ನತ) ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿ ನೀಡಿತು.
  • ಧ್ಯಾನ್ ಚಂದ್ ಅವರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಏನೂ ವಿಶೇಷವಲ್ಲ ಬಿಡಿ. ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ.
  • ಎರಡನೆ ವಿಶ್ವಯುದ್ದ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ ಚಂದ್ 1948 ರಲ್ಲಿ ತಮ್ಮ 42ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ ರೂಪ್ ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ 29 ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು 1979ರ ಡಿಸೆಂಬರ್ 3ರಂದು ನಿಧನರಾದರು

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area