ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers

ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers

ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers


2022 Updated Text Book: ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers

2022 Revised Textbook: ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers

2022 Revised Textbook: ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಘಟಕದ ಪ್ರಶ್ನೋತ್ತರಗಳು - Karnatakadalli British Alvikege Pratirodhagalu mattu Mysorina Odeyaru SSLC Social Science Question Answers


ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು ಸಂಪೂರ್ಣ ನೋಟ್ಸ್

ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: 1707 ರಲ್ಲಿ ಸಂಭವಿಸಿದ ಔರಂಗಜೇಬನ ಮರಣ

ಉತ್ತರ: ಚಿಕ್ಕ ದೇವರಾಜ ಒಡೆಯರ್

ಉತ್ತರ: ಮದ್ರಾಸ್ ಒಪ್ಪಂದ (1769)

ಉತ್ತರ: ಮಂಗಳೂರು ಒಪ್ಪಂದ (1784)

ಉತ್ತರ: ಮೂರನೇ ಆಂಗ್ಲೋ ಮೈಸೂರು ಯುದ್ಧ

ಉತ್ತರ: ಶಿವಲಿಂಗಪ್ಪ

ಉತ್ತರ: ಸಂಗೊಳ್ಳಿ ರಾಯಣ್ಣ

ಉತ್ತರ: ರೈತರ ಬಂಡಾಯ

ಉತ್ತರ: ಪುಟ್ಟ ಬಸಪ್ಪ

ಉತ್ತರ: ಮೇಡೋಸ್ ಟೇಲರ್

ಉತ್ತರ: ಸುರುಪುರದ ವೆಂಕಟಪ್ಪ ನಾಯಕ

ಉತ್ತರ: ವೀರಪ್ಪ

ಉತ್ತರ: ಮದರಾಸ್ ಒಪ್ಪಂದ

ಉತ್ತರ: ಮಂಗಳೂರು ಒಪ್ಪಂದ.

ಉತ್ತರ: ಶ್ರೀರಂಗಪಟ್ಟಣ ಒಪ್ಪಂದ

ಉತ್ತರ: ಶಿವಲಿಂಗಪ್ಪ

ಉತ್ತರ: ಯಾದಗಿರಿ

ಉತ್ತರ: ಬಾಗಲಕೋಟೆ

ಉತ್ತರ: ರೈತರ

ಉತ್ತರ: ಮೈಸೂರು

ಉತ್ತರ: -ರಾಜ ಒಡೆಯರು

ಉತ್ತರ: ರಾಜ ಒಡೆಯರು

ಉತ್ತರ: ರಾಜ ಒಡೆಯರು.

ಉತ್ತರ: ರಾಜ ಒಡೆಯರು.

ಉತ್ತರ: ಚಿಕ್ಕದೇವರಾಜ ಒಡೆಯರು

ಉತ್ತರ: ಚಿಕ್ಕದೇವರಾಜ ಒಡೆಯರು

ಉತ್ತರ: ಚಿಕ್ಕದೇವರಾಜ ಒಡೆಯರು

ಉತ್ತರ: ಚಿಕ್ಕದೇವರಾಜ ಒಡೆಯರು

ಉತ್ತರ: ಚಿಕ್ಕದೇವರಾಜ ಒಡೆಯರು

ಉತ್ತರ: 1767-1769

ಉತ್ತರ: 1769 ರಲ್ಲಿ ನಡೆದ ಮದ್ರಾಸ್ ಒಪ್ಪಂದ.

ಉತ್ತರ: ಹೈದರಾಲಿ ಮತ್ತು ಟಿಪ್ಪು ಸುಲ್ತಾನ್

ಉತ್ತರ: 1780-1784

ಉತ್ತರ: ಸರ್ ಐರ್ ಕೂಟ್

ಉತ್ತರ: 1781 ರಲ್ಲಿ ಪೋರ್ಟೋನೋವೆ ಎಂಬಲ್ಲಿ

ಉತ್ತರ: 1784 ರ ಮಂಗಳೂರು ಒಪ್ಪಂದ

ಉತ್ತರ: 1792 ರ ಶ್ರೀರಂಗಪಟ್ಟಣ ಒಪ್ಪಂದ

ಉತ್ತರ: 1799

ಉತ್ತರ: ಮೈಸೂರು ಸಂಸ್ಥಾನವೆಂದು ಹೆಸರುವಾಸಿಯಾಯಿತು.

ಉತ್ತರ: ಸಿ. ರಂಗಾಚಾರ್ಲು.

ಉತ್ತರ: ಸಿ. ರಂಗಾಚಾರ್ಲು.

ಉತ್ತರ: ಕೆ ಶೇಷಾದ್ರಿ ಅಯ್ಯರ್.

ಉತ್ತರ: ಕೆ ಶೇಷಾದ್ರಿ ಅಯ್ಯರ್.

ಉತ್ತರ: ಚಾಮರಾಜೇಂದ್ರ ಒಡೆಯರ್

ಉತ್ತರ: ಚಾಮರಾಜೇಂದ್ರ ಒಡೆಯರ್

ಉತ್ತರ: ಬೆಂಗಳೂರು

ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರು

ಉತ್ತರ: ಪಿಎನ್ ಕೃಷ್ಣಮೂರ್ತಿ, ವಿ.ಪಿ ಮಾಧವರಾಯರು, ಸರ್ ಎಂ ವಿಶ್ವೇಶ್ವರಯ್ಯನವರು, ಕಾಂತರಾಜ್ ಅರಸ್, ಸರ್ ಆಲ್ಬಿಯನ್ ಬ್ಯಾನರ್ಜಿ, ಸರ್ ನಿರ್ಜಾ ಇಸ್ಮಾಯಿಲ್.

ಉತ್ತರ: ಮೈಸೂರು ವಿಶ್ವವಿದ್ಯಾನಿಲಯ

ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್

ಉತ್ತರ: ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಿಮೆಂಟ್ ಕಾರ್ಖಾನೆ ಕಾಗದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಬೆಳಗೊಳದ ರಾಸಾಯನಿಕ ವಸ್ತುಗಳ ಮತ್ತು ಕೃತಕ ಗೊಬ್ಬರಗಳ ಕಾರ್ಖಾನೆ ಮುಂತಾದವುಗಳು.

ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್.

ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್

ಉತ್ತರ: ಮಹಾತ್ಮ ಗಾಂಧಿ

ಉತ್ತರ: ಹುಲಿ ಎಂದರ್ಥ

ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-04. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಹಾಗೂ ಮೈಸೂರಿನ ಒಡೆಯರು : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ:

• ರಾಜಕೀಯ ಚಾಣಾಕ್ಷನಾಗಿದ್ದು ಮೈಸೂರಿನ ರಾಜಕೀಯ ಪರಿಸ್ಥಿತಿ ಗಮನಿಸುತ್ತಿದ್ದನು.

• ದೇವನಹಳ್ಳಿ ಮುತ್ತಿಗೆಯಲ್ಲಿ ಪ್ರಸಿದ್ಧಿ ಪಡೆದನು.

• ಸೈನಿಕರ ವಿಶ್ವಾಸಗಳಿಸಿದನು.

• ದಳವಾಯಿಗಳು ಹಾಗು ಕೃಷ್ಣರಾಜ ಒಡೆಯರ್‌ರನ್ನು ಮೂಲೆಗುಂಪಾಗಿಸಿ ಅಧಿಕಾರಕ್ಕೆ ಬಂದನು.

ಉತ್ತರ:

• ಹೈದರಾಲಿಯು ಪೋರ್ಟೋನೋವೆ ಕದನದಲ್ಲಿ ಸೋತನು.

• ನಂತರ ಹೈದರಾಲಿಯು ಅನಾರೋಗ್ಯದಿಂದ ಮೃತನಾದನು.

• ಟಿಪ್ಪು ಯುದ್ಧ ಮುಂದುವರೆಸಿ ಮಂಗಳೂರಿನಲ್ಲಿ ಬ್ರಿಟಿಷರನ್ನು ಸೋಲಿಸಿದನು.

• ಮಂಗಳೂರು ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು.

ಉತ್ತರ:

• ಟಿಪ್ಪು ತನ್ನ ಅರ್ಧರಾಜ್ಯವನ್ನು ಬಿಟ್ಟು ಕೊಡುವುದು.

• ಯುದ್ಧ ನಷ್ಟವಾಗಿ 3 ಕೋಟಿ ರೂಪಾಯಿಗಳನ್ನು ಟಿಪ್ಪು ಬ್ರಿಟಿಷರಿಗೆ ನೀಡಬೇಕು.

• ಯುದ್ಧ ನಷ್ಟ ನೀಡುವವರೆವಿಗೆ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆ ಇಡಬೇಕು.

• ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

ಉತ್ತರ:

• ವಿಶಾಲವಾಗಿದ್ದ ಮೈಸೂರು ರಾಜ್ಯದ ಬಹುಭಾಗವನ್ನು ಬ್ರಿಟಿಷರು,ಮರಾಠರು, ನಿಜಾಮ ಹಂಚಿಕೊಂಡರು.

• ಉಳಿದ ಭಾಗವನ್ನು ಮೈಸೂರಿನ ಒಡೆಯರಿಗೆ ನೀಡಲಾಯಿತು.

• ಮೈಸೂರಿನ ಒಡೆಯರು ಸಹಾಯಕ ಸೈನ್ಯ ಪದ್ಧತಿ ಒಳಪಟ್ಟರು

• ಇದರಿಂದಾಗಿ ಬ್ರಿಟಿಷರು ಮೈಸೂರಿನ ಮೇಲೆ ನಿಯಂತ್ರಣ ಹೊಂದಿದಂತಾಯಿತು.

ಉತ್ತರ: ದೋಂಡಿಯಾ ವಾಫ್‌ನು ತನ್ನದೇ ಒಂದು ಸೈನ್ಯ ಸಂಘಟಿಸಿದನು. ನಂತರ ಶಿವಮೊಗ್ಗ ಮತ್ತು ಬಿದನೂರು ಕೋಟೆಗಳನ್ನು ವಶಪಡಿಸಿಕೊಂಡನು. ಬ್ರಿಟಿಷರು ಮತ್ತೆ ಆ ಪ್ರದೇಶಗಳನ್ನು ಅವನಿಂದ ಗೆದ್ದು ಕೊಂಡರು. ಇದಕ್ಕೆ ಹೆದರದ ದೋಂಡಿಯಾ ತುಂಗಾಭದ್ರ ಮತ್ತು ಮಲಪ್ರಭಾ ನದಿಗಳ ನಡುವಿನ ಪ್ರದೇಶದಲ್ಲಿ ಧೈರ್ಯವಾಗಿ ಸಂಚರಿಸುತ್ತಿದ್ದನು. ಬ್ರಿಟಿಷರು ಅಲ್ಲಿಂದಲು ಓಡಿಸಿದರು. ನೆರವಿಗಾಗಿ ದೋಂಡಿಯಾ ನಿಜಾಮ ಮತ್ತು ಮರಾಠರ ಬೆಂಬಲಗಳಿಸಲು ಪ್ರಯತ್ನಿಸಿ ವಿಫಲನಾದನು. ಕೊನೆಗೆ ಬ್ರಿಟಿಷರಿಂದ ಹತ್ಯೆಗೀಡಾದನು.

ಉತ್ತರ:

• ಕಿತ್ತೂರಿನ ಸ್ವಾತಂತ್ರ್ಯ ತನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದನು.

• ಚೆನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದನು.

• ಗುಪ್ತ ಸಭೆಗಳನ್ನು ನಡೆಸಿ ಮುಂದಿನ ಯೋಜನೆ ರೂಪಿಸುತ್ತಿದ್ದನು.

• ಬ್ರಿಟಿಷರ ಕಛೇರಿಗಳು ಮತ್ತು ಖಜಾನೆಗಳನ್ನು ಲೂಟಿಮಾಡಿದನು.

• ನಮ್ಮವರ ಸಂಚಿಗೆ ಬಲಿಯಾಗಿ ಬ್ರಿಟಿಷರಿಂದ ಬಂಧನಕ್ಕೊಳಗಾದನು.

• ಬ್ರಿಟಿಷರು ನಂದಗಡದಲ್ಲಿ ಗಲ್ಲಿಗೇರಿಸಿದರು.

ಉತ್ತರ:

• ಕಲ್ಯಾಣ ಸ್ವಾಮಿಯ ನಂತರ ಪುಟ್ಟಬಸಪ್ಪ ಕೊಡಗಿನಲ್ಲಿ ಹೋರಾಟ ಮುಂದುವರೆಸಿದನು.

• ಬ್ರಿಟಿಷರಿಂದ ನೊಂದ ಜನರನ್ನು ಸಂಘಟಿಸಿ ಹೋರಾಟ ಆರಂಭಿಸಿದನು.

• ಪುಟ್ಟಬಸಪ್ಪ ತನ್ನ ಹೋರಾಟವನ್ನು ಸುಳ್ಯ, ಬೆಳ್ಳಾರೆ, ಪುತ್ತೂರುಗಳಲ್ಲಿ ಮುಂದುವರೆಸಿದನು.

• ಬೆಳ್ಳಾರೆಯಲ್ಲಿ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡು ಅಧಿಕಾರಿಗಳನ್ನು ಬಂಧಿಸಿದನು.

• ಜನರಿಗೆ ಕಿರುಕುಳ ನೀಡುತ್ತಿದ್ದ ಅಮಲ್ದಾರನೋರ್ವನನ್ನು ಕೊಂದನು.

• ಬಂಟ್ವಾಳದ ಜೈಲು ಮತ್ತು ಖಜಾನೆಗಳನ್ನು ಲೂಟಿ ಮಾಡಿಸಿದನು.

• ಬ್ರಿಟಿಷರು ಪುಟ್ಟಬಸಪ್ಪ ಮತ್ತು ಅವನ ಬೆಂಬಲಿಗರನ್ನು ಬಂಧಿಸಿ ಗಲ್ಲಿಗೇರಿಸಿದರು.

ಉತ್ತರ:

• ನಾನಾ ಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬ ಗುಮಾನಿ ಬ್ರಿಟಿಷರಿಗೆ ಬಂತು.

• ಕ್ಯಾಂಪ್‌ಬೆಲ್ ಎಂಬ ಅಧಿಕಾರಿ ಸುರಪುರದ ರಾಜ ವೆಂಕಟಪ್ಪ ನಾಯಕನ ವಿರುದ್ಧವಾಗಿ ವರದಿ ನೀಡಿದನು.

• ವೆಂಕಟಪ್ಪ ನಾಯಕನು ಬ್ರಿಟಿಷರ ವಿರುದ್ಧ ಧೈರ್ಯವಾಗಿ ಹೋರಾಡಿದನು.

• ಬ್ರಿಟಿಷರು ಅವನನ್ನು ಸೋಲಿಸಿ ಕೋಟೆ ವಶಪಡಿಸಿಕೊಂಡರು.

ಉತ್ತರ:

• ಬ್ರಿಟಿಷರು ಶಸ್ತ್ರಾಸ್ತ್ರ ಬಳಕೆ ನಿಷೇಧ ಕಾನೂನು ಜಾರಿಗೆ ತಂದರು.

• ಇದು ಮೂಲತ: ಬೇಡರಾಗಿದ್ದ ಹಲಗಲಿ ಬೇಡರಿಗೆ ಅಸಮದಾನ ಉಂಟಾಗಲು ಕಾರಣವಾಯಿತು.

• ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ದರಿರಲಿಲ್ಲ.

• ಇವರು ತಮ್ಮ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು.

• ಇಂಗ್ಲೀಷರ ಸೇನೆ ಇವರ ಹೋರಾಟವನ್ನು ಹತ್ತಿಕ್ಕಿತು.

• ಬಂಡಾಯಗಾರರನ್ನು ಗಲ್ಲಿಗೇರಿಸಲಾಯಿತು.

ಉತ್ತರ:

• ಚಿಕ್ಕದೇವರಾಜ ಒಡೆಯರ ಕಾಲ 1673-1704.

• ಇವರು ಸಮರ್ಥಯೋಧರೂ ಹಾಗೂ ಆಡಳಿತಗಾರರೂ ಆಗಿದ್ದರು.

• ಶಿವಾಜಿಯ ಸೇನೆಯನ್ನು ಮಧುರೆ, ಇಕ್ಕೇರಿ ಮತ್ತು ಬಿಜಾಪುರಗಳಲ್ಲಿ ಹಿಮ್ಮೆಟಿಸಿದರು.

• ಮಾಗಡಿ, ಮಧುಗಿರಿ, ಕೊರಟಗೆರೆ ಮತ್ತಿತರ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು.

• ಬೆಂಗಳೂರನ್ನು ಮೊಗಲರ ಸೇನಾನಿಯಿಂದ ಕೊಂಡುಕೊಂಡರು.

• ಇವರಿಗೆ ಕರ್ನಾಟಕ ಕವಿಚಕ್ರವರ್ತಿ, ಅಪ್ರತಿಮ ವೀರ, ತೆಂಕಣರಾಜ, ನವಕೋಟಿ ನಾರಾಯಣ ಎಂಬ ಬಿರುದುಗಳಿದ್ದವು.

• ಆಡಳಿತದಲ್ಲಿ ನೆರವು ನೀಡಲು ಒಂದು ಸಚಿವ ಸಂಪುಟ (ಅಠಾರ ಕಛೇರಿ)ವನ್ನು ನೇಮಕ ಮಾಡಿದ್ದರು.

• ಅಂಚೆ ವ್ಯವಸ್ಥೆಯು ಇವರ ಕಾಲದಲ್ಲಿ ಜಾರಿಯಾಯಿತು.

• ಕಾವೇರಿ ನದಿಗೆ ಅಣೆಕಟ್ಟು ಕಟ್ಟಿ ಚಿಕ್ಕದೇವರಾಜ ನಾಲೆ ಮತ್ತು ದೊಡ್ಡ ದೇವರಾಜ ನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಮಾಡಿದರು.

• ತಿರುಮಲಾರ್ಯ, ಸಂಚಿ ಹೊನ್ನಮ್ಮ ಸೇರಿದಂತೆ ಅನೇಕ ಕವಿಗಳಿಗೆ ಮತ್ತು ಪಂಡಿತರಿಗೆ ಆಶ್ರಯ ನೀಡಿದರು.

ಉತ್ತರ:

• ನಾಲ್ವಡಿ ಕೃಷ್ಣರಾಜ ಒಡೆಯರು ಕಾಲ 1894 - 1940)

• ಇವರ ಕಾಲದಲ್ಲಿ ಅಭಿವೃದ್ಧಿ ಕಾರ್ಯವು ಹೆಚ್ಚಿತು.

• ಚಿನ್ನದ ಗಣಿ ಸುಧಾರಣೆ, ಕಾಲೇಜು ಸ್ಥಾಪನೆ, ಮಾರಿಕಣಿವೆ ಜಲಾಶಯ ನಿರ್ಮಾಣ, ರೈಲುಮಾರ್ಗ, ಆಸ್ಪತ್ರೆ ಸ್ಥಾಪನೆ ಹಾಗೂ ಕಾವೇರಿ ಜಲಪಾತವನ್ನು ಉಪಯೋಗಿಸಿಕೊಂಡು ಶಿವನಸಮುದ್ರದಲ್ಲಿ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸುವ ಕಾರ್ಯಗಳು ಆರಂಭವಾದವು.

• ಈ ವಿದ್ಯುತ್ ಕೇಂದ್ರದಿಂದ ಕೋಲಾರದ ಚಿನ್ನದ ಗಣಿಗೂ ನಂತರ ಬೆಂಗಳೂರಿಗೂ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಯಿತು.

• ಭಾರತದಲ್ಲಿ ವಿದ್ಯುತ್ ಪಡೆದ ನಗರಗಳಲ್ಲಿ ಬೆಂಗಳೂರೇ ಮೊದಲನೆಯದು.

• 1902ರಲ್ಲಿ ಕೃಷ್ಣರಾಜರು ಅಧಿಕಾರ ವಹಿಸಿಕೊಂಡರು.

• ಇವರು ಪಿ.ಎನ್. ಕೃಷ್ಣಮೂರ್ತಿ, ವಿ.ಪಿ. ಮಾಧವರಾಯರು, ಸರ್.ಎಂ. ವಿಶ್ವೇಶ್ವರಯ್ಯನವರು, ಕಾಂತರಾಜ ಅರಸ್, ಸರ್ ಆಲ್ಟಿಯನ್ ಬ್ಯಾನರ್ಜಿ, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ಪ್ರಖ್ಯಾತ ದಿವಾನರುಗಳ ಸೇವೆಯನ್ನು ಪಡೆದ ಅದೃಷ್ಟಶಾಲಿಗಳು.

• ಕೃಷ್ಣರಾಜ ಒಡೆಯರು ಪ್ರಜೆಗಳಲ್ಲಿ ವಿದ್ಯಾಭ್ಯಾಸವು ವ್ಯಾಪಕವಾಗಿ ಹರಡಬೇಕೆಂಬ ವಿಷಯದಲ್ಲಿ ತುಂಬಾ ಆಸಕ್ತರಾಗಿದ್ದರು.

• ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿಯೂ ಶಿಕ್ಷಣ ಶುಲ್ಕವನ್ನು ರದ್ದು ಮಾಡಲಾಯಿತು.

• ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಏಳಿಗೆಗೆ ನೆರವು ಸಿಕ್ಕಿತು.

• ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು.

• ವಿದೇಶ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ವಿದ್ಯಾರ್ಥಿ ವೇತನ ನೀಡುವ ಪದ್ಧತಿಯನ್ನು ಜಾರಿಗೆ ತರಲಾಯಿತು.

• ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು 1905 ರಲ್ಲಿ ಟಾಟಾರವರ ಬೆಂಬಲದಿಂದ ಸ್ಥಾಪಿಸಲಾಯಿತು.

• ನೀರಾವರಿ ಸೌಲಭ್ಯಗಳನ್ನೊದಗಿಸಲು ವಿಶೇಷ ಗಮನಕೊಡಲಾಯಿತು.

• ಬೆಳಗೊಳದ ಹತ್ತಿರ ಕಾವೇರಿ ನದಿಗೆ ಅಣೆಕಟ್ಟು ಒಂದನ್ನು ಕಟ್ಟಲಾಯಿತು.

• ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಯಿತು. ಅನೇಕ ದೊಡ್ಡ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು.

• ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾಗದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಬೆಳಗೊಳದ ರಾಸಾಯನಿಕ ವಸ್ತುಗಳ ಮತ್ತು ಕೃತಕ ಗೊಬ್ಬರಗಳ ಕಾರ್ಖಾನೆ ಮುಂತಾದವುಗಳು ಸ್ಥಾಪನೆಗೊಂಡವು.

• ನ್ಯಾಯ ವಿಧಾಯಕ ಸಭೆಯನ್ನು ರಚಿಸಲಾಯಿತು.

• ರಾಜ್ಯಾಂಗದ ಬದಲಾವಣೆಯಲ್ಲಿ ಇದೊಂದು ದೊಡ್ಡ ಹೆಜ್ಜೆಯಾಯಿತು.

• ಕೃಷ್ಣರಾಜ ಒಡೆಯರು ಸರಳರೂ, ಸಾತ್ವಿಕ ಸ್ವಭಾವದವರೂ, ಸಮರ್ಥ ಆಡಳಿತಗಾರರೂ ಮತ್ತು ವಿದ್ಯಾಪಕ್ಷಪಾತಿಗಳೂ ಆಗಿದ್ದರು.

• ಅವರಿಗೆ ಲಲಿತಕಲೆಗಳಲ್ಲಿ ತುಂಬಾ ಅಭಿರುಚಿ, ಸಂಗೀತ ವಿದ್ವಾಂಸರುಗಳಿಗೆ ಪ್ರೋತ್ಸಾಹ ನೀಡಿದ್ದರು.

• ಪ್ರಸಿದ್ಧ ವಿದ್ವಾಂಸರುಗಳಾದ ಶ್ಯಾಮಾಶಾಸ್ತ್ರಿ, ಎಂ. ಹಿರಿಯಣ್ಣ, ವೀಣೆ ಶೇಷಣ್ಣ, ಸಾಂಬಯ್ಯ, ಬಿಡಾರಂ ಕೃಷ್ಣಪ್ಪ, ಮುತ್ತಯ್ಯ ಭಾಗವತರ್, ವಾಸುದೇವಾಚಾರ್ಯ, ಟಿ. ಚೌಡಯ್ಯ, ಮುಂತಾದವರು.

• ನಾಲ್ವಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹ ಪಡೆದರು.

• ಇವರ ಆಡಳಿತದಿಂದಾಗಿ ಮೈಸೂರು 'ಮಾದರಿ ರಾಜ್ಯ' ಎಂಬ ಹೆಸರನ್ನು ಪಡೆದಿತ್ತು.

• ಮಹಾತ್ಮ ಗಾಂಧಿಯವರು ಇವರನ್ನು 'ರಾಜರ್ಷಿ' ಎಂದು ಕರೆದಿದ್ದಾರೆ.

ಉತ್ತರ:

• ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ಹೈದರಾಲಿ ತನ್ನ ಚಾಣಾಕ್ಷ ನಡೆಗೆ ಹೆಸರಾಗಿದ್ದನು.

• ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.

• ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಆರ್ಕಾಟಿ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.

• ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಸಫಲನಾದನು. ಶಸ್ತ್ರಗಳ ಉಪಯೋಗ ಮತ್ತು ಪ್ರಯೋಗಗಳಲ್ಲಿ ಖ್ಯಾತಿಗಳಿಸಿದನು.

• ಬಹುಬೇಗನೆ ನವಾಬ್ ಹೈದರಾಲಿ ಖಾನ್ ಎಂದು ಹೆಸರಾದನು. • ಚುರುಕಿನ ಸೈನಿಕ ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿಸಿದನು.

• ಅರಸರಾಗಿದ್ದ ಕೃಷ್ಣರಾಜ ಒಡೆಯರನ್ನು ಮೂಲೆ ಗುಂಪಾಗಿಸಿ ಮೈಸೂರಿನಲ್ಲಿ ಏಳಿಗೆ ಹೊಂದಿದನು.

ಉತ್ತರ:

• ಈ ಯುದ್ಧದಲ್ಲಿ ಹೈದರಾಲಿಯು ಪೋರ್ಟೊನೋವೆ ಎಂಬಲ್ಲಿ ನಡೆದ ಕದನದಲ್ಲಿ ಸೋತನು.

• ಪುಲಿಕಾಟ್ ಸೋಲಿಂಗೂರುಗಳ ಕದಗಳಲ್ಲಿಯು ಆರ್ಥಿಕ ಹಾನಿ ಅನುಬವಿಸಿದನು.

• ಬ್ರಿಟಿಷರು ಕುತಂತ್ರದಿಂದ ಮರಾಠರು ಹಾಗೂ ನಿಜಾಮರನ್ನು ಹೈದರನ ಒಕ್ಕುಟದಿಂದ ತಮ್ಮ ಕಡೆಗೆ ಸೆಳೆದು ಕೊಂಡರು.

• ಹೈದರಾಲಿಯು ಅನಾರೋಗ್ಯವಾದರೂ ಹೋರಾಡುತ್ತಲೇ ಮಡಿದನು.

• ಟಿಪ್ಪುವು ಬ್ರಿಟಿಷರ ದಾಳಿಯಿಂದ ಮಂಗಳೂರು ಮತ್ತು ಬಿದನೂರು ದಾಳಿಗಳನ್ನು ರಕ್ಷಿಸಿದನು.

• ಟಿಪ್ಪುವು ಮಂಗಳೂರು ಒಪ್ಪಂದದೊಂದಿಗೆ 2 ನೇ ಆಂಗ್ಲೋ ಮಸೂರು ಯುದ್ಧವನ್ನು ಮುಕ್ತಾಯಗೊಳಿಸಿದನು.

ಉತ್ತರ:

• ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಬಿಟ್ಟು ಕೊಡುವುದು.

• ಟಿಪ್ಪು ಮೂರು ಕೋಟಿ ರೂ ಗಳನ್ನು ಬ್ರಿಟಿಷರಿಗೆ ಯುದ್ಧ ನಷ್ಠ ಭರ್ತಿಯಾಗಿ ಕೊಡುವುದು.

• ಯುದ್ಧ ನಷ್ಠ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು.

• ಯುದ್ಧದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

ಉತ್ತರ: 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಹತನಾದನು, ಆತನ ಮರಣ ಬ್ರಿಟಿಷರಿಗೆ ಇಡೀ ಭಾರತವೇ ಕೈ ವಶವಾದ ಸಂತೋಷವನ್ನು ತಂದಿತು. ಬ್ರಿಟಿಷರು ಆತನ ಹತೋಟಿಯಲ್ಲಿದ್ದ ಭೌಗೋಳಿಕ ಪ್ರದೇಶಗಳನ್ನು ಮರಾಠರು ಮತ್ತು ನಿಜಾಮರೊಂದಿಗೆ ಹಂಚಿಕೊಂಡರು. ಒಂದು ಸಣ್ಣ ಭೌಗೋಳಿಕ ಪ್ರದೇಶವನ್ನು ಮೈಸೂರು ಒಡೆಯರ ರಾಜ್ಯ ವಂಶಕ್ಕೆ ವರ್ಗಾಹಿಸಿದರು. ಹೀಗೆ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧವು ಬ್ರಿಟಿಷರನ್ನು ಮೈಸೂರು ಪ್ರದೇಶದಲ್ಲಿ ಭದ್ರಗೊಳಿಸಿತು.

ಉತ್ತರ:

• ಟಿಪ್ಪುವಿನ ಸೈನ್ಯದಲ್ಲಿದ್ದ ಅತೃಪ್ತಸೈನಿಕರು, ಅಧಿಕಾರದಿಂದ ಮುಕ್ತಗೊಳಿಸಲ್ಪಟ್ಟ ಪಾಳೆಯಗಾರರನ್ನು ಸಂಘಟಿಸಿ ಒಂದು ಸೈನ್ಯವನ್ನು ಸುಸಜ್ಜಿತ ಗೊಳಿಸಿದನು.

• ಧೋಂಡಿಯಾವಾಫ್ ನು ಬ್ರಿಟಿಷರ ವಿರುದ್ಧದ ಬಂಡಾಯದ ಭಾವುಟವನ್ನು ಹಾರಿಸಿದನು.

• ಗೌರ್ನರ್ ಲಾರ್ಡ ವೆಲ್ಲೆಸ್ಲಿ ಅದನ್ನು ಹತ್ತಿಕ್ಕಲು ಪ್ರಾರಂಭಿಸಿದನು.

• ಧೋಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ, ಹೊನ್ನಾಳಿ, ಹರಿಹರ ಮೊದಲಾದವುಗಳ ಮೇಲೆ ಆಕ್ರಮಣ ನಡೆಯಿತು.

• ಬ್ರಿಟಿಷರು ಇವನ ಹಿಡಿತದಿಂದ ಶಿಕಾರಿಪುರವನ್ನು ವಶಪಡಿಸಿಕೊಂಡನು.

• ಅಂತಿಮವಾಗಿ ಲಾರ್ಡ ವೆಲ್ಲೆಸ್ಲಿಯ ಸೈನ್ಯ ಎಲ್ಲಾ ದಿಕ್ಕುಗಳಿಂದಲೂ ಅವನನ್ನು ಹಿಂಬಾಲಿಸಿತು.

• ರಾಯಚೂರಿನಿಂದ ಹೊರಟ ಅವನನ್ನು ಕೋನ್‌ಗಲ್ ಎಂಬಲ್ಲಿ ದಾಳಿ ನಡೆಸಿ ಬ್ರಿಟಿಷರು ಅವನನ್ನು ಕೊಂದರು.

ಉತ್ತರ:

• ಕಿತ್ತೂರಿನಲ್ಲಿ ಮಲ್ಲಸರ್ಜನ ಮರಣ ನಂತರ, ಶಿವಲಿಂಗ ರುದ್ರ ಸರ್ಜ ಅಧಿಕಾರಕ್ಕೆ ಬಂದರು, ಅವನ ದೈಹಿಕ ಪರಿಸ್ಥಿತಿಗಳಿಂದಾಗಿ ನಿಜವಾದ ಆಡಳಿತ ಗಾರಳಾಗಿ ಚೆನ್ನಮ್ಮ ನೋಡಿಕೊಳ್ಳುತಿದ್ದಳು.

• ಶಿವಲಿಂಗರುದ್ರಸರ್ಜನ ಮರಣ ನಂತರ ಶಿವಲಿಂಗಪ್ಪ ಎಂಬುವನನ್ನು ದತ್ತು ಪಡೆದು ಚೆನ್ನಮ್ಮ ಆಡಳಿತ ನಿರ್ವಹಿಸಲು ಪ್ರಾರಂಭಿಸಿದಳು.

• ದತ್ತುಮಕ್ಕಳಿಗೆ ಹಕ್ಕಿಲ್ಲಎಂದು ಬ್ರಿಟಷರ ಥ್ಯಾಕರೆ,ಕಿತ್ತೂರನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಇದನ್ನು ಚೆನ್ನಮ್ಮ ವಿರೋಧಿಸಿದಳು.

• ಕಿತ್ತೂರು ರಾಣಿ ಚೆನ್ನಮ್ಮಳ ಸೈನ್ಯ ಬ್ರಿಟಿಷರ ಥ್ಯಾಕರೆ ಯನ್ನು ಕೊಂದು, ಸೈನ್ಯವನ್ನು ಸೋಲಿಸಿ ಸೆರೆ ಹಿಡಿಯಿತು.

• ನಂತರ ಎರೆಡನೇ ಬಾರಿಗೆ ನಡೆದ ಯುದ್ಧದಲ್ಲಿ ಚೆನ್ನಮ್ಮ ವೀರಾವೇಶದಿಂದ ಹೊರಾಡುತ್ತ ಸೆರೆಮನೆ ಸೇರಿದಳು.

ಉತ್ತರ:

• ಸಂಗೊಳ್ಳಿ ರಾಯಣ್ಣ ಕಿತ್ತೂರಿನ ಯುದ್ಧದಲ್ಲಿ ಚನ್ನಮ್ಮನ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದನು ಯುದ್ಧದಲ್ಲಿ ಸೆರೆಯಾಳಾಗಿ ಬಂಧಿಸಲ್ಪಟ್ಟು ನಂತರ ಬಿಡುಗಡೆಗೊಂಡನು.

• ಸೈನಿಕರನ್ನು ಸಂಘಟಿಸುತ್ತ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡನು.

• ಭೌಗೋಳಿಕವಾಗಿಆಯಕಟ್ಟಿನ ಸ್ಥಳಗಳಲ್ಲಿ ಗುಪ್ತಸಭೆಗಳನ್ನು ನಡೆಸುವ ಮೂಲಕ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡನು.

• ಬ್ರಿಟಿಷ್ ಆಡಳಿತದ ಅಂಗವಾಗಿದ್ದ ತಾಲ್ಲೂಕು ಕಚೇರಿ ಮತ್ತು ಖಜಾನೆಗಳನ್ನು ಲೂಟಿ ಮಾಡಿದನು.

• ನಂದಗಡ, ಖಾನಾಪುರ, ಮತ್ತು ಸಂಪಗಾವಿಗಳ ಮೇಲೆ ಬ್ರಿಟಿಷರ ವಿರುದ್ಧ ಕಾಯಾಚರಣೆ ಮಾಡಿದನು.

• ಬ್ರಿಟಿಷರು ಒಂದು ಸಂಚನ್ನು ರೂಪಿಸಿ ಅವನನ್ನು ಸೆರೆ ಹಿಡಿದು ಅಪರಾಧಿ ಎಂದು ಘೋಷಿಸಿ ಗಲ್ಲಿಗೇರಿಸಿದರು.

• ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಅಮರವಾದದ್ದು.

ಉತ್ತರ: ಬ್ರಿಟಿಷ್ ಸರ್ಕಾರವು ಸುರಪುರದ ಬೆಳವಣಿಗೆಗಳನ್ನು ಸೂಕ್ಷಮವಾಗಿ ಅವಲೋಕಿಸುತ್ತಿತ್ತು. 1857 ರ ಪ್ರಾರಂಭದ ಹೋರಾಟದಲ್ಲಿನ ನಾನಾ ಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬ ಪುಕಾರು ಕಂಡು ಬಂದಿತ್ತು. ಇದರಿಂದಾಗಿ ಬ್ರಿಟಿಷರು ರಾಜನ್ನು ಸಂಶಯದಿಂದ ಕಾಣುವಂತಾಯಿತು. ರಾಜನ ಅವಧಿಯಲ್ಲಿನ ಆಡಳಿತದ ಬಗ್ಗೆ ವರದಿ ನೀಡಲು ಬ್ರಿಟಿಷ್ ಸರ್ಕಾರ ಕ್ಯಾಂಪಬೆಲ್ ಎಂಬ ಅಧಿಕಾರಿಯನ್ನು ನೇಮಿಸಿತು. ರಾಜನು ಆಡಳಿತ ದುರ್ವ್ಯವಹಾರಗಳಲ್ಲಿ ನಿರತನಾಗಿದ್ದಾನೆಂದು ಹೈದಾರಬಾದ್ ರೆಸಿಡೆಂಟ್ ಗೆ ವರದಿ ಕೊಟ್ಟನು. 1858 ರಲ್ಲಿ ವೆಂಕಟಪ್ಪ ನಾಯಕ ಬ್ರಿಟಿಷರ ವಿರುದ್ಧ ಹೋರಾಡಿದನು, ಬ್ರಿಟಿಷ್ ಸೈನ್ಯ ಸುರಪುವನ್ನು ಆಕ್ರಮಿಸಿತು, ಯುದ್ಧ ಮುಂದುವರೆಸಿತು ಬ್ರಿಟಿಷರು ಸುರಪುರ ಕೋಟೆಯನ್ನು ವಶಪಡಿಸಿಕೊಂಡರು.

ಉತ್ತರ: 1857 ರ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯ ಪ್ರದೇಶದಲ್ಲಿ ಶಸ್ತ್ರಗಳ ಬಳಕೆಯನ್ನು ನಿರ್ಬಂಧಿಸಿ ಕಾನೂನನ್ನು ಜಾರಿಗೆ ತಂದರು. ಇದನ್ನು ಹಲಗಲಿಗೂ ಸಹ ಅನ್ವಯಿಸಲಾಯಿತು. ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ. ಹಲಗಲಿಯ ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಸಿಕೊಳ್ಳುವ ಉದ್ದೇಶದಿಂದ ಬ್ರಿಟಿಷರ ವಿರುದ್ಧ ಸಿಡಿದ್ದೆದ್ದರು.

ಉತ್ತರ:

•ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ.

•ಕೋಲಾರ ಚಿನ್ನದ ಗಣಿ ಆರಂಭ.

•ಬೆಂಗಳೂರು – ಮೈಸೂರು ರೈಲ್ವೆ ಪ್ರಾರಂಭ.

ಉತ್ತರ:

•ಸಮರ್ಥ ಯೋಧ ಮತ್ತು ದಕ್ಷ ಆಡಳಿತಗಾರ.

•ಶಿವಾಜಿ ಸೇನೆಯನ್ನು ಸೋಲಿಸಿದರು.

•ಮಾಗಡಿ, ಮಧುಗಿರಿ, ಕೊರಟಗೆರೆ ವಶ.

•ಬೆಂಗಳೂರನ್ನು ಮೊಘಲರಿಂದ ಕೊಂಡರು.

•ಅಠಾರಾ ಕಚೇರಿ ಸ್ಥಾಪನೆ.

•ಅಂಚೆ ಇಲಾಖೆ ಸ್ಥಾಪನೆ.

•ಕಾವೇರಿ ನದಿಗೆ 2 ಕಾಲುವೆ ನಿರ್ಮಾಣ.

•ಕವಿ ಪಂಡಿತರಿಗೆ ಆಶ್ರಯ.

•ಕವಿಚಕ್ರವರ್ತಿ, ನವಕೋಟಿ ನಾರಾಯಣ ಬಿರುದು ಧರಿಸಿದ್ದರು.

ಉತ್ತರ:

• ಗಾಂಧೀಜಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡರು.

• ಮೈಸೂರು ವಿಶ್ವವಿದ್ಯಾಲಯ.

• ಕನ್ನಡ ಸಾಹಿತ್ಯ ಪರಿಷತ್ತು.

• ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು.

• ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ.

• ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.

• ಮಂಡ್ಯದಲ್ಲಿ ಕಾಗದ ಮತ್ತು ಸಕ್ಕರೆ ಕಾರ್ಖಾನೆ.

• ಮೈಸೂರು ಗಂಧದ ಎಣ್ಣೆ ಕಾರ್ಖಾನೆ.

• ಸಾಬೂನು ಮತ್ತು ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆ.

ಉತ್ತರ:

•ಔರಂಗಜೇಬನ ಮರಣ.

• ದ.ಭಾರತದಲ್ಲಿ ಮೊಘಲರ ಹತೋಟಿ ತಪ್ಪಿತ್ತು.

• ಕರ್ನಾಟಿಕ್ ಪ್ರದೇಶದಲ್ಲಿ ರಾಜಕೀಯ ಕಿತ್ತಾಟ.

• ಚಿಕ್ಕದೇವರಾಜ ಒಡೆಯರ ಮರಣ.

• ಒಡೆಯರ ಮರಣದಿಂದ ಮೈಸೂರಿನ ಮೇಲಾದ ದುಷ್ಪರಿಣಾಮ.

• ಇದರಿಂದ ಹೈದರಾಲಿ ರಾಜಕೀಯ ಪ್ರಾಮುಖ್ಯತೆ ಗಳಿಸಿದನು.

ಉತ್ತರ:

• ರಾಜಕೀಯ ಚಾಣಾಕ್ಷ.

• ದೇವನಹಳ್ಳಿ ಮುತ್ತಿಗೆಯ ಸೈನಿಕ ಕಾರ್ಯಾಚರಣೆ.

• ಸೈನಿಕರ ವಿಶ್ವಾಸ ಗಳಿಸಿದನು.

• ಶಸ್ತ್ರಗಳ ಉಪಯೋಗ & ಪ್ರಯೋಗಗಳಲ್ಲಿ ಖ್ಯಾತಿ

• ದಳವಾಯಿಗಳ ಬಲ ಕುಂದಿಸಿದನು.

• ಒಡೆಯರನ್ನು ಮೂಲೆಗುಂಪಾಗಿಸಿ ಅಧಿಕಾರ ಸ್ಥಾಪಿಸಿದನು.

ಉತ್ತರ:

ಕಾರಣ :

• ಹೈದರಾಲಿಯ ರಾಜಕೀಯ ಪ್ರಾಬಲ್ಯ.

• ಆರ್ಕಾಟಿನ ರಾಜಕೀಯ ಸಮಸ್ಯೆ.

• ಹೈದರಾಲಿಯ ಏಳಿಗೆ ಬ್ರಿಟಿಷ್, ಮರಾಠರು & ನಿಜಾಮನಿಗೆ ಅಸಹನೆ ಮೂಡಿಸಿತ್ತು.

• ಮುನ್ನಡೆ : ಹೈದರಾಲಿ ವಿರುದ್ಧ ಬ್ರಿಟೀಷ್, ಮರಾಠರು & ನಿಜಾಮನ ಒಪ್ಪಂದ.

• ಹೈದರಾಲಿ ಮಿತ್ರಕೂಟವನ್ನು ಒಡೆದನು.

• ಹೈದರಾಲಿ ಆರ್ಕಾಟಿನ ಮೇಲೆ ಮುತ್ತಿಗೆ ಹಾಕಿದನು.

• ಹೈದರಾಲಿ ಮಿಂಚಿನ ಕಾರ್ಯಾಚರಣೆ ನಡೆಸಿದನು.

• ಹೈದರಾಲಿ ಮದ್ರಾಸಿನವರೆಗೆ ಮುಂದುವರೆದನು.

• ಪರಿಣಾಮ : ಬ್ರಿಟೀಷರು ಮದ್ರಾಸ್ ಒಪ್ಪಂದ ಮಾಡಿಕೊಂಡರು.

ಉತ್ತರ:

ಕಾರಣ :

• ತಿರುವಾಂಕುರು & ತಂಜಾವೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶ

• ಬ್ರಿಟೀಷರಿಂದ ಮದ್ರಾಸ ಒಪ್ಪಂದ ಉಲ್ಲಂಘನೆ.

• ಬ್ರಿಟೀಷರು ಮಾಹೆ ವಶಪಡಿಸಿಕೊಂಡದ್ದು.

• ಬ್ರಿಟೀಷರು ಒಪ್ಪಂದಕ್ಕೆ ವಿರುದ್ಧವಾಗಿ ನಡೆದದ್ದು.

ಮುನ್ನಡೆ : 1. 1780 ರಲ್ಲಿ ಯುದ್ಧ ಆರಂಭ.

• ಹೈದರಾಲಿಯಿಂದ ಅನೇಕ ಕೋಟೆ ವಶ.

• ಕಾಂಚಿಪುರಂ ವಶ

• ಕೋರಮಂಡಲ ತೀರದವರೆಗೆ ಮುನ್ನಡೆ

• ಹೈದರಾಲಿಯಿಂದ ಆರ್ಕಾಟಿನ ವಶ

• ಬ್ರಿಟೀಷರ ವಿರುದ್ಧ ಹೈದರಾಲಿಗೆ ಫ್ರೆಂಚರ ನೆರವು

• 1781 ರಲ್ಲಿ ಪೊರ್ಟಿನೋವೊ ಕದನದಲ್ಲಿ ಹೈದರಾಲಿಯ ಸೋಲು

• ಪುಲಿಕಾಟ್ & ಸೋಲಿಂಗೂರು ಕದನದಲ್ಲಿ ಪರಾಭವ

• 1782 ರಲ್ಲಿ ಹೈದರಾಲಿಯ ಮರಣ

• ಟಿಪ್ಪು ಮಂಗಳೂರಿನಲ್ಲಿ ಬ್ರಿಟೀಷರನ್ನು ಸೋಲಿಸಿದನು.

ಪರಿಣಾಮ : 1. ಮಂಗಳೂರು ಒಪ್ಪಂದದಿಂದ ಯುದ್ಧ ಕೊನೆಗೊಂಡಿತು.

ಉತ್ತರ:

• ಕಾರಣ :

• 1. ತಿರುವಾಂಕೂರಿನ ಸಮಸ್ಯೆ

• 2. ಬ್ರಿಟೀಷರಿಂದ ಮಂಗಳೂರು ಒಪ್ಪಂದ ಉಲ್ಲಂಘನೆ

• ಮುನ್ನಡೆ : 1. ಬ್ರಿಟೀಷರು ಕಾರವಾರ ಕೊಯಮತ್ತೂರು, ಡಿಂಡಿಗಲ್ ವಶಪಡಿಸಿಕೊಂಡರು,

• 2. ಟಿಪ್ಪುವಿನಿಂದ ಬಾರಾಮಲ್, ಸತ್ಯಮಂಗಲ ವಶ

• 3. ಕಾರ್ನ್ವಾಲಿಸ್ ಕೋಲಾರ & ಹೊಸಕೋಟೆ ವಶಪಡಿಸಿಕೊಂಡನು.

• 4. ಬೆಂಗಳೂರು ವಶ

• 5. ಬ್ರಿಟೀಷರು, ಮರಾಠರು & ನಿಜಾಮರು ಶ್ರೀರಂಗಪಟ್ಟಣ ಕೋಟೆ ಹಾಳುಗೆಡವಿದರು.

• ಪರಿಣಾಮ : 1. ಶ್ರೀರಂಗಪಟ್ಟಣ ಒಪ್ಪಂದದಿಂದ ಯುದ್ಧ ಅಂತ್ಯ.

ಉತ್ತರ:

• ಟಿಪ್ಪು ಅರ್ಧ ರಾಜ್ಯ ಬಿಟ್ಟುಕೊಟ್ಟನು.

• ಯುದ್ಧ ನಷ್ಟದ ಪರಿಹಾರ 3 ಕೋಟಿ ರೂ. ಕೊಡುವುದು.

• ಹಣ ಕೊಡುವವರೆಗೆ ಇಬ್ಬರು ಗಂಡು ಮಕ್ಕಳನ್ನು ಒತ್ತೆ ಇಡುವುದು.

• ಸೆರೆ ಹಿಡಿದಿದ್ದ ಸೈನಿಕರ ಬಿಡುಗಡೆ.

ಉತ್ತರ:

• 1799 ರಲ್ಲಿ ಯುದ್ಧ ಆರಂಭ

• ಬ್ರಿಟೀಷರು ಟಿಪ್ಪು ಕೋಟೆ ಭೇದಿಸಿದರು.

• ಟಿಪ್ಪು 1799 ರಲ್ಲಿ ಹತನಾದನು.

• ಟಿಪ್ಪುವಿನ ಪ್ರದೇಶಗಳನ್ನು ಮರಾಠರು & ನಿಜಾಮನೊಂದಿಗೆ ಬ್ರಿಟೀಷರು ಹಂಚಿಕೊಂಡರು.

• ಸಣ್ಣ ಪ್ರಾಂತ ಒಡೆಯರಿಗೆ ಹಸ್ತಾಂತರ.

ಉತ್ತರ:

• ಅವಮಾನಕರ ಒಪ್ಪಂದದ ಷರತ್ತುಗಳು

• ಟಿಪ್ಪು ದೇಶೀಯ ರಾಜರ ನೆರವು ಪಡೆಯಲು ಪ್ರಯತ್ನಿಸಿದ್ದು

• ಟಿಪ್ಪು ಫ್ರೆಂಚರೊಂದಿಗೆ ಹೊಂದಿದ್ದ ಸಂಬಂಧ

• ಟಿಪ್ಪು ಫ್ರೆಂಚರ ನೆರವು ಪ್ರಯತ್ನಿಸಿದ್ದು.

• ಟಿಪ್ಪು & ಫ್ರೆಂಚರ ನಡುವಿನ ಸ್ನೇಹ.

• ಟಿಪ್ಪುವಿನ ಮೇಲೆ ಬ್ರಿಟೀಷರು ಹೊಸ ಷರತ್ತು ವಿಧಿಸಿದ್ದು.

ಉತ್ತರ:

• ಶಿವಮೊಗ್ಗ & ಬಿದನೂರು ಕೋಟೆ ವಶ

• ಬ್ರಿಟೀಷರು ಶಿವಮೊಗ್ಗ, ಹೊನ್ನಾಳಿ, ಹರಿಹರದ ಮೇಲೆ ಆಕ್ರಮಣ ನಡೆಸಿದರು.

• ಶಿಕಾರಿಪುರ ಸೋಲಿನ ನಂತರ ಗುತ್ತಿಯ ಕಡೆಗೆ ಪಲಾಯನ

• ನಿಜಾಮನು ಗುತ್ತಿ ಮುತ್ತಿದಾಗ ಮರಾಠರ ಕಡೆಗೆ ಪಲಾಯನ

• ಫ್ರೆಂಚರಿಂದ ದೊಂಡಿಯಾನಿಗೆ ಪ್ರೋತ್ಸಾಹ.

• ಬ್ರಿಟೀಷರು ಅವನನ್ನು ಹಿಂಬಾಲಿಸಿದರು.

• ಬ್ರಿಟೀಷರಿಂದ ಅನೇಕ ಸೈನಿಕರ ಹತ್ಯೆ.

• ಸುರಪುರ ಗೆದ್ದ ದೊಂಡಿಯಾ ಬ್ರಿಟೀಷ್ ಸೈನ್ಯವನ್ನು ಚದುರಿಸಿದನು.

• ಕೊನ್ಗಲ್ ಕಾರ್ಯಾಚರಣೆಯಲ್ಲಿ ದೊಂಡಿಯಾ ಹತ್ಯೆಯಾದನು.

ಉತ್ತರ:

• ಗುಪ್ತ ಸಭೆಗಳ ಮೂಲಕ ಯೋಜನೆ ತಯಾರಿ

• ನಂದಗಡ, ಖಾನಾಪುರ, ಸಂಪಗಾವಿ ಕಾರ್ಯಾಚರಣೆ

• ರಾಣಿ ಚೆನ್ನಮ್ಮನ ಜೊತೆಯಲ್ಲಿ ಬ್ರಿಟೀಷರ ವಿರುದ್ಧ ಹೋರಾಟ

• ತಾಲ್ಲೋಕು ಕಛೇರಿ & ಖಜಾನೆ ಲೂಟಿ ಮಾಡಿದನು.

• ರಾಯಣ್ಣನನ್ನು ಸೆರೆಹಿಡಿಯಲು ಕೃಷ್ಣರಾಯ ಸಂಚಿಗೆ ಕೈ ಜೋಡಿಸಿದನು.

• ರಾಯಣ್ಣನನ್ನು ಬಂಧಿಸಿ ಧಾರವಾಡಕ್ಕೆ ತರಲಾಯಿತು.

• 1831ರಲ್ಲಿ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.

ಉತ್ತರ:

• ಬಸಪ್ಪ ಬಂಡುಕೋರರನ್ನು ಸಂಘಟಿಸಿದನು.

• ತಂಬಾಕು & ಉಪ್ಪಿನ ಕರವನ್ನು ರದ್ದು ಮಾಡಲಾಗುವುದು ಎಂದು ಘೋಷಿಸಿದನು.

• ಬಳ್ಳಾರೆಯಲ್ಲಿ ಸರ್ಕಾರಿ ಕಛೇರಿಯನ್ನು ವಶಪಡಿಸಿಕೊಂಡನು.

• ಬ್ರಿಟೀಷ್ ಅಧಿಕಾರಿಗಳನ್ನು ಬಂಧಿಸಿದನು.

• ಪುತ್ತೂರಿನಲ್ಲಿ ಬ್ರಿಟೀಷ್ ಸೈನ್ಯವನ್ನು ಎದುರಿಸಿದನು.

• ಪಾಣಿ, ಮಂಗಳೂರು, ಬಂಟ್ವಾಳದಲ್ಲಿ ಕಾರ್ಯಾಚರಣೆ ನಡೆಸಿದನು.

• ಜೈಲು, ಖಜಾನೆ ಲೂಟಿ ಮಾಡಿದನು.

• ಬ್ರಿಟೀಷರು ಸ್ಥಳೀಯರ ಸಹಕಾರದಿಂದ ಅವನು & ಅವನ ಸಹಚರರನ್ನು ಸೆರೆಹಿಡಿದು ಗಲ್ಲಿಗೇರಿಸಿದರು.

ಉತ್ತರ:

• ಬ್ರಿಟೀಷರು ರಾಜನನ್ನು ಅನುಮಾನದಿಂದ ಕಾಣುತ್ತಿದ್ದರು.

• ರಾಜನು ದುರ್ವ್ಯವಹಾರದಲ್ಲಿ ನಿರತನಾಗಿದ್ದಾನೆಂದು ರೆಸಿಡೆಂಟನಿಗೆ ವರದಿ ಸಲ್ಲಿಸಿದರು.

• ಬ್ರಿಟೀಷರು ಸುರಪುರವನ್ನು ಆಕ್ರಮಿಸಿದರು.

• ಯುದ್ಧ ಮುಂದುವರೆಯಿತು.

• ಕೋಟೆ ಬ್ರಿಟೀಷರ ವಶವಾಯಿತು.

• ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಬಂಧಿಸಿದರು.

ಉತ್ತರ:

• ಬ್ರಿಟೀಷರಿಂದ ಶಸ್ತ್ರಾಸ್ತ್ರ ಕಾಯ್ದೆ ಜಾರಿ.

• ಅದನ್ನು ಹಲಗಲಿಯ ಬೇಡರಿಗೂ ಅನ್ವಯಿಸಿದರು.

• ಇದನ್ನು ವಿರೋಧಿಸಿ ಬೇಡರು ಬ್ರಿಟೀಷರ ವಿರುದ್ಧ ಸಿಡಿದೆದ್ದರು.

• ಇವರ ಜೊತೆಗೆ ಮಂಟರೂ, ಬೇದಾನಿ, ಆಲಗುಂಡಿಯ ಬೇಡರು ಸೇರಿಕೊಂಡರು.

• ದಂಗೆಯೆದ್ದ ಬೇಡರನ್ನು ಬ್ರಿಟೀಷರು ಹತ್ತಿಕ್ಕಿದರು.

• ಅನೇಕರನ್ನು ಗಲ್ಲಿಗೇರಿಸಿದರು.

ಉತ್ತರ:

• ಕೊಪ್ಪಳ & ಹತ್ತಿರದ ಕೋಟೆ ವಶಪಡಿಸಿಕೊಂಡನು.

• ರೈತರು & ಜಮೀನ್ದಾರರು ಅವನ ಕೈ ಜೋಡಿಸಿದರು.

• ಬ್ರಿಟೀಷರು ವೀರಪ್ಪನ ಬಂಡಾಯ ಹತ್ತಿಕ್ಕಲು ಸೈನ್ಯ ನಿಯೋಜಿಸಿದರು.

• ವೀರಪ್ಪ ಬ್ರಿಟೀಷರ ವಿರುದ್ಧ ಹೋರಾಟ ಮುಂದುವರೆಸಿದನು.

• ವೀರಪ್ಪ ಸತತ ಹೋರಾಟ ನಡೆಸಿ ಮರಣ ಹೊಂದಿದನು.

• ಬ್ರಿಟೀಷರಿಂದ ಕೋಟೆ ವಶ.

ಉತ್ತರ:

• ಚೆನ್ನಮ್ಮ ದತ್ತು ಮಗನ ಪರವಾಗಿ ಆಡಳಿತ ನಡೆಸುತ್ತಿದ್ದಳು.

• ಬ್ರಿಟೀಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ನಿರಾಕರಿಸಿ ಕಿತ್ತೂರು ವಶಪಡಿಸಿಕೊಳ್ಳಲು ಯತ್ನಿಸಿದರು.

• ಕಿತ್ತೂರಿನ ಖಜಾನೆ, ಕೋಟೆ, ಕೊತ್ತಲ ವಶಕ್ಕೆ ತೆಗೆದುಕೊಂಡರು.

• ಬ್ರಿಟೀಷರು ತಮ್ಮ ಸೈನ್ಯ ಸಿದ್ಧಮಾಡಲು ಆರಂಭಿಸಿದರು.

• ಬ್ರಿಟೀಷ್ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತ್ತು.

• ರಾಣಿ ಚೆನ್ನಮ್ಮ ಅವರ ಪ್ರಯತ್ನ ವಿಫಲಗೊಳಿಸಲು ಯುದ್ಧ ಅನಿವಾರ್ಯವೆಂದಳು.

ಉತ್ತರ:

• ಸುರಪುರದ ಮೇಲೆ ಹತೋಟಿ ಸಾಧಿಸಿದ.

• ಸುಧಾರಣಾವಾದಿಯಾಗಿದ್ದ.

• ಸುರಪುರವನ್ನು ಅಭಿವೃದ್ಧಿಪಡಿಸಿದನು.

• ಪೆದ್ದನಾಯಕನನ್ನು ದಿವಾನನಾಗಿ ನೇಮಿಸಿದನು.

• ಭೂ ಸಮೀಕ್ಷೆ ಮಾಡಿಸಿದನು.

• ವೆಂಕಟಪ್ಪ ನಾಯಕನಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದನು.

ಉತ್ತರ:

• ಬ್ರಿಟೀಷರನ್ನು ತನ್ನ ಪರಮ ವೈರಿ ಎಂದು ತಿಳಿದಿದ್ದ.

• ಬ್ರಿಟೀಷರನ್ನು ಭಾರತದಿಂದ ಓಡಿಸುವುದು ತನ್ನ ಪರಮ ಕರ್ತವ್ಯ ಎಂದು ತಿಳಿದಿದ್ದ.

• ನಿರಂತರವಾಗಿ ಬ್ರಿಟೀಷರೊಂದಿಗೆ ಹೋರಾಡಿದನು.

• ಬ್ರಿಟೀಷರ ಕುತಂತ್ರ & ಚಾಣಾಕ್ಷನೀತಿ ಅರ್ಥಮಾಡಿಕೊಂಡಿದ್ದನು.

• ಬ್ರಿಟೀಷರನ್ನು ವಿರೋಧಿಸುತ್ತಿದ್ದವರ ನೆರವು ಪಡೆಯಲು ಪ್ರಯತ್ನಿಸಿದನು.

• ಅವರ ವ್ಯಾಪಾರದ ಏಕಸ್ವಾಮ್ಯ ಮುರಿಯುವ ಪ್ರಯತ್ನ ನಡೆಸಿದನು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area