ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-24

Daily Top-10 General Knowledge Question Answers in Kannada for All Competitive Exams-24


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಜಗತ್ಪ್ರಸಿದ್ಧ ಕೊಹಿನೂರ್‌ ವಜ್ರವನ್ನು ಬ್ರಿಟಿಷ್‌ರು ಯಾವ ರಾಜನಿಂದ ವಶಪಡಿಸಿಕೊಂಡರು?
ಎ) ದುಲೀಪ್ ಸಿಂಗ್
ಬಿ) ತೇಜ್ ಸಿಂಗ್
ಸಿ) ರಣಜಿತ್ ಸಿಂಗ್
ಡಿ)  ಗುಲಾಲ್ ಸಿಂಗ್


ಸರಿಯಾದ ಉತ್ತರ: ಎ) ದುಲೀಪ್ ಸಿಂಗ್ 



2. ನಾಗರಿಕ ಸೇವೆಗೆ ಸೇರಲು ಕನಿಷ್ಠ ವಯಸ್ಸನ್ನು 21 ರಿಂದ 19 ವರ್ಷಕ್ಕೆ ಇಳಿಸಿದವರು ಯಾರು?
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಕಾರ್ನ್‌ವಾಲೀಸ್
ಸಿ) ಲಾರ್ಡ್ ಲಿಟ್ಟನ್
ಡಿ) ಲಾರ್ಡ್ ಮಿಂಟೋ


ಸರಿಯಾದ ಉತ್ತರ: ಸಿ) ಲಾರ್ಡ್ ಲಿಟ್ಟನ್ 




3. ಈ ಕೆಳಗಿನ ಯಾವ ಸ್ಥಳವನ್ನು ಭಾರತದ ಭೌಗೋಳಿಕ ಕೇಂದ್ರ (Geographical Centre of India) ಎಂದು ಕರೆಯುವರು?
ಎ) ಅಲಹಾಬಾದ್
ಬಿ) ಅಹಮದಾಬಾದ್
ಸಿ) ಜಬ್ಬಲ್‌ಪುರ
ಡಿ) ಗುವಾಹಟಿ


ಸರಿಯಾದ ಉತ್ತರ: ಸಿ) ಜಬ್ಬಲ್‌ಪುರ 



4. 23 1/20 ಉತ್ತರ ಅಕ್ಷಾಂಶವು ಭಾರತದ 8 ರಾಜ್ಯಗಳ ಮೂಲಕ ಹಾದುಹೋಗಿದೆ. ಹಾಗಾದರೆ ಈ ರೇಖೆಯು ಯಾವ ರಾಜ್ಯದಲ್ಲಿ ಅತ್ಯಂತ ಹೆಚ್ಚು ದೂರ ಹಾದುಹೋಗಿದೆ?
ಎ) ಗುಜರಾತ್
ಬಿ) ಜಾರ್ಖಂಡ್
ಸಿ) ಪಶ್ಚಿಮ ಬಂಗಾಳ
ಡಿ) ಮಧ್ಯಪ್ರದೇಶ


ಸರಿಯಾದ ಉತ್ತರ: ಡಿ) ಮಧ್ಯಪ್ರದೇಶ 



5. ಭಾರತದಲ್ಲಿಯೇ ಅತ್ಯಂತ ಎತ್ತರವಾದ ಪ್ರಸ್ಥಭೂಮಿ
ಎ) ಮಾಳ್ವಾ ಪ್ರಸ್ಥಭೂಮಿ
ಬಿ) ಲಡಾಕ್ ಪ್ರಸ್ಥಭೂಮಿ
ಸಿ) ದಖನ್ ಪ್ರಸ್ಥಭೂಮಿ
ಡಿ) ಛೋಟಾನಾಗ್ಪುರ ಪ್ರಸ್ಥಭೂಮಿ


ಸರಿಯಾದ ಉತ್ತರ: ಬಿ) ಲಡಾಕ್ ಪ್ರಸ್ಥಭೂಮಿ 



6. ಮಣ್ಣಿನ ಪಿಎಚ್ ಮೌಲ್ಯ ಎಷ್ಟಕ್ಕಿಂತ ಕಡಿಮೆ ಇದ್ದರೆ ಅಂತಹ ಮಣ್ಣನ್ನು ಆಮ್ಲೀಯ ಮಣ್ಣು ಎನ್ನುವರು?
ಎ) 5ಕ್ಕಿಂತ ಕಡಿಮೆ
ಬಿ) 7ಕ್ಕಿಂತ ಕಡಿಮೆ
ಸಿ) 6ಕ್ಕಿಂತ ಕಡಿಮೆ
ಡಿ) 8ಕ್ಕಿಂತ ಕಡಿಮೆ


ಸರಿಯಾದ ಉತ್ತರ: ಬಿ) 7ಕ್ಕಿಂತ ಕಡಿಮೆ 




7. ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ
ಎ) ಮಧ್ಯಪ್ರದೇಶ
ಬಿ) ಹರಿಯಾಣ
ಸಿ) ಕರ್ನಾಟಕ
ಡಿ) ಕೇರಳ


ಸರಿಯಾದ ಉತ್ತರ: ಎ) ಮಧ್ಯಪ್ರದೇಶ  



8. ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಅನುಮೋದನೆಯೊಂದಿಗೆ ಭಾರತದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಎಷ್ಟು ಸಮಯದವರೆಗೆ ವಿಸ್ತರಿಸಬಹುದು?
ಎ) 6 ತಿಂಗಳು
ಬಿ) 1 ವರ್ಷ
ಸಿ) 3 ವರ್ಷಗಳು
ಡಿ) 2 ವರ್ಷಗಳು


ಸರಿಯಾದ ಉತ್ತರ: ಸಿ) 3 ವರ್ಷಗಳು  



9. ಹರಪ್ಪ ನಾಗರಿಕತೆಯ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
ಎ) ಇದನ್ನು ದಯಾರಾಮ್ ಸಾಹ್ನಿಯವರಿಂದ ಉತ್ಖನನ ಮಾಡಲಾಗಿದೆ
ಬಿ) ಇದು ಸಿಂಧೂ ನದಿಯ ಬಲದಂಡೆಯಲ್ಲಿದೆ
ಸಿ) ಇದನ್ನು ಕಣಜಗಳ ನಗರ ಎಂದು ಕರೆಯುತ್ತಾರೆ
ಡಿ) ಹೆಚ್ (H) ಮಾದರಿಯ ಸಮಾಧಿಗಳು ಇಲ್ಲಿ ಕಾಣಬಹುದು


ಸರಿಯಾದ ಉತ್ತರ: ಬಿ) ಇದು ಸಿಂಧೂ ನದಿಯ ಬಲದಂಡೆಯಲ್ಲಿದೆ 



10. ಒಂದು ರಾಜ್ಯದ ವಿಧಾನ ಪರಿಷತ್ತನ್ನು ರಚಿಸುವ ಮತ್ತು ರದ್ದು ಪಡಿಸುವ ಅಧಿಕಾರ ಇವರಿಗಿದೆ.
ಎ) ಸಂಸತ್ತಿನ ಶಿಫಾರಸ್ಸಿನ ಮೇರೆಗೆ ಭಾರತದ ರಾಷ್ಟ್ರಪತಿಯವರಿಗೆ
ಬಿ) ವಿಶೇಷ ಬಹುಮತದ ಮೂಲಕ ಸಂಸತ್ತಿಗೆ
ಸಿ) ವಿಧಾನ ಸಭೆಯ ಶಿಫಾರಸ್ಸಿನ ಮೇರೆಗೆ ರಾಜ್ಯದ ರಾಜ್ಯಪಾಲರಿಗೆ
ಡಿ) ಸಂಬಂಧಪಟ್ಟ ರಾಜ್ಯ ವಿಧಾನ ಸಭೆಗಳ ಶಿಫಾರಸ್ಸಿನ ಮೇರೆಗೆ ಸಂಸತ್ತಿಗೆ

ಸರಿಯಾದ ಉತ್ತರ: ಡಿ) ಸಂಬಂಧಪಟ್ಟ ರಾಜ್ಯ ವಿಧಾನ ಸಭೆಗಳ ಶಿಫಾರಸ್ಸಿನ ಮೇರೆಗೆ ಸಂಸತ್ತಿಗೆ 



11. ಈ ಕೆಳಗಿನ ಜೋಡಣೆಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
ಎ) ದಿವಾನ್-ಇ-ಬಂದಗಾನ್ ಫಿರೋಜ್ ಷಾ ತುಘಲಕ್
ಬಿ) ದಿವಾನ್-ಇ-ಮುಸ್ತಕರಾಜ್ ಬಲ್ಬನ್
ಸಿ) ದಿವಾನ್-ಇ-ಕೋಹಿ ಅಲ್ಲಾವುದ್ದೀನ್ ಖಲ್ಲಿ
ಡಿ) ದಿವಾನ್-ಇ-ಅವ್ವ - ಮಹಮ್ಮದ್ ಬಿನ್ ತುಘಲಕ್


ಸರಿಯಾದ ಉತ್ತರ: ಎ) ದಿವಾನ್-ಇ-ಬಂದಗಾನ್ ಫಿರೋಜ್ ಷಾ ತುಘಲಕ್ 



12. ಹೀಟರ್‌ನಲ್ಲಿರುವ ಕಾಯಿಲ್ (coil) ಅನ್ನು ಇದರಿಂದ ಮಾಡಲಾಗಿದೆ.
ಎ) ಕಬ್ಬಿಣ
ಬಿ) ತಾಮ್ರ
ಸಿ) ನಿಕ್ರೊಮ್
ಡಿ) ಟಂಗಸ್ಟನ್

ಸರಿಯಾದ ಉತ್ತರ : ಸಿ) ನಿಕ್ರೊಮ್ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area