ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಶ್ನೋತ್ತರಗಳು 03 Police Constable Exam Useful Question Answers

  ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಶ್ನೋತ್ತರಗಳು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಶ್ನೋತ್ತರಗಳು 03 Police Constable Exam Useful Question Answers



ಮುಂಬರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿಎಆರ್ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು...!!


01. ಅವಧಿ ಮುಗಿಯುವ ಮೊದಲೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಯಾರು ಅಧಿಕಾರ ಹೊಂದಿದ್ದಾರೆ?

A) ರಾಷ್ಟ್ರಪತಿ

B) ಸಂಸತ್ತು

C) ಪ್ರಧಾನಮಂತ್ರಿ

D) ರಾಜ್ಯಪಾಲರು


ಸರಿಯಾದ ಉತ್ತರ : D) ರಾಜ್ಯಪಾಲರು


ವಿವರಣೆ


ಅವಧಿ ಮುಗಿಯುವ ಮೊದಲೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರಿಗೆ ಇದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ರಾಜ್ಯಪಾಲರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


  • ಭಾರತ ಸಂವಿಧಾನದ 152ನೇ ವಿಧಿಯಿಂದ 237ನೇ ವಿಧಿ ವಿಧಿಗಳು ರಾಜ್ಯಪಾಲರಿಗೆ ಸಂಬಂಧಿಸಿವೆ.
  • ರಾಜ್ಯಪಾಲರು ರಾಜ್ಯದ ಮೊದಲ ಪ್ರಜೆಯಾಗಿದ್ದು ಸಂವಿಧಾನಾತ್ಮಕವಾಗಿ ರಾಜ್ಯದ ಮುಖ್ಯಸ್ಥರಾಗಿರುತ್ತಾರೆ.
  • ಕೇಂದ್ರದ ಪ್ರಧಾನಿ ಮತ್ತು ಮಂತ್ರಿಮಂಡಲದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ ಪ್ರತಿ ರಾಜ್ಯಕ್ಕೂ ಒಬ್ಬ ರಾಜ್ಯಪಾಲರು ಇರಬೇಕೆಂಬ ನಿಯಮವಿದೆ ಆದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೂ ಒಬ್ಬೊಬ್ಬ ರಾಜ್ಯಪಾಲರನ್ನು ನೇಮಿಸಬಹುದು.
  • ಭಾರತ ಸಂವಿಧಾನದ ಕಲಂ 155 ರ ಪ್ರಕಾರ ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.
  • ರಾಜ್ಯಪಾಲರಾಗಲು 55 ವರ್ಷ ವಯಸ್ಸಾಗಿರಬೇಕು, ರಾಜ್ಯಪಾಲರ ಅಧಿಕಾರ ಅವಧಿ ಐದು ವರ್ಷ.
  • ಸಂವಿಧಾನದ 153 ವಿಧಿಯು ರಾಜ್ಯಗಳಿಗೆ ರಾಜ್ಯಪಾಲರ‌ ಹುದ್ದೆಗೆ  ಅವಕಾಶ ಕಲ್ಪಿಸಿದೆ.
  • ಸಂವಿಧಾನದ 154 ನೇ ವಿಧಿಯು ರಾಜ್ಯಪಾಲರು ರಾಜ್ಯದ ಕಾರ್ಯಾಂಗೀಯ ಅಧಿಕಾರವನ್ನು ಹೊಂದಿರುತ್ತಾರೆ ಎಂಬ ಬಗ್ಗೆ ತಿಳಿಸುತ್ತದೆ.
  • ಸಂವಿಧಾನದ 155ನೇ ವಿಧಿಯನ್ವಯ ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
  • ಸಂವಿಧಾನದ 156 ನೇ ವಿಧಿ ಅನ್ವಯ ರಾಜ್ಯಪಾಲರ ಅಧಿಕಾರ ಅವಧಿ ಐದು ವರ್ಷಗಳು. ಕೆಲವೊಮ್ಮೆ ಉತ್ತರಾಧಿಕಾರಿ ಬರುವವರೆಗೂ ಅಧಿಕಾರ ವಿಸ್ತರಿಸಬಹುದು ರಾಷ್ಟ್ರಪತಿಗಳ ಇಚ್ಛೆ ಇರುವವರೆಗೂ ರಾಜ್ಯಪಾಲರು ಅಧಿಕಾರದಲ್ಲಿ ಮುಂದುವರೆಯುತ್ತಾರೆ.
  • ಸಂವಿಧಾನದ 157 ನೇ ವಿಧಿ ಅನ್ವಯ ರಾಜ್ಯಪಾಲರ ಹುದ್ದೆಗೆ ಆಯ್ಕೆಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.
  • ಸಂವಿಧಾನದ 158ನೇ ವಿಧಿ ರಾಜ್ಯಪಾಲರ ವೇತನ ಮತ್ತು ಸವಲತ್ತುಗಳ ಕುರಿತು ವಿವರಿಸುತ್ತದೆ.
  • ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನ.
  • ಸಂವಿಧಾನದ 159ನೇ ವಿಧಿ ರಾಜ್ಯಪಾಲರಿಗೆ ಆಯಾ ರಾಜ್ಯದ ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ.
  • ಸಂವಿಧಾನದ 160 ನೇ ವಿಧಿಯ ಅನ್ವಯ ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುತ್ತಾರೆ.

ಸಂವಿಧಾನದ 162 ನೇ ವಿಧಿ ಅನ್ವಯ ರಾಜ್ಯಪಾಲರ ಪ್ರಮುಖ ಅಧಿಕಾರಿಗಳು ಈ ಕೆಳಗಿನಂತಿವೆ


  • ಸಂವಿಧಾನದ 174ನೇ ವಿಧಿಯ ಅನ್ವಯ ರಾಜ್ಯ ಶಾಸಕಾಂಗದ ಅಧಿವೇಶನವನ್ನು ಕರೆಯುವ ಮುಂದೂಡುವ ಮತ್ತು ವಿಸರ್ಜಿಸುವ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ.
  • ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ರಾಜ್ಯಪಾಲರು ಹೊಂದಿರುತ್ತಾರೆ ಅಲ್ಲದೆ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುತ್ತಾರೆ.
  • ರಾಜ್ಯಪಾಲರು ಸಂವಿಧಾನದ ಎರಡು 200ನೇ ವಿಧಿ ಅನ್ವಯ ವಿಟೋ ಅಧಿಕಾರವನ್ನು ಹೊಂದಿರುತ್ತಾರೆ.
  • ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿದ್ದು, ಕಲಂ 213 ರ ಪ್ರಕಾರ 6 ತಿಂಗಳುಗಳ ಕಾಲ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಹೊಂದಿದ್ದಾರೆ.
  • ಸಂವಿಧಾನದ ಕಲಮ್ 161 ರ ಪ್ರಕಾರ ರಾಜ್ಯಪಾಲರಿಗೆ ರಾಜ್ಯದ ಅಧಿಕಾರ ವ್ಯಾಪ್ತಿಗೆ ಬರುವ ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರವಿದೆ.



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕರ್ನಾಟಕದ ಪ್ರಮುಖ ರಾಜ್ಯಪಾಲರುಗಳು ಮಾಹಿತಿ ಇಲ್ಲಿದೆ


  • ಕರ್ನಾಟಕ ರಾಜ್ಯದ ಪ್ರಥಮ ರಾಜ್ಯಪಾಲರು ಜಯಚಾಮರಾಜೇಂದ್ರ ಒಡೆಯರ್.
  • ಇವರು ಮೈಸೂರು ಸಂಸ್ಥಾನದ 25ನೇ ಮತ್ತು ಕೊನೆಯ ಮಹಾರಾಜರು.
  • ಇವರು 1956 ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊಟ್ಟ ಮೊದಲ ರಾಜ್ಯಪಾಲರು.
  • ಕರ್ನಾಟಕದ 16ನೇ ರಾಜ್ಯಪಾಲರಾಗಿ ಹಂಸರಾಜ್ ಭಾರದ್ವಾಜ್ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
  • ವಿ. ವಿ. ಗಿರಿಯವರು ಕರ್ನಾಟಕದ ರಾಜ್ಯಪಾಲರಾಗಿ ನಂತರ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಯಾದರು.
  • ಜಿ. ಎಸ್ ಪಾಠಕ್ ರವರು ಕರ್ನಾಟಕದ ರಾಜ್ಯಪಾಲರಾಗಿ ನಂತರ ಉಪರಾಷ್ಟ್ರಪತಿಯಾದರು.
  • ಭಾರತದ ಪ್ರಥಮ ಮಹಿಳಾ ರಾಜ್ಯಪಾಲ ಸರೋಜಿನಿ ನಾಯ್ಡು.
  • ಕರ್ನಾಟಕದ ಪ್ರಥಮ ಮಹಿಳಾ ರಾಜ್ಯಪಾಲ ವಿ ಎಸ್ ರಮಾದೇವಿ.
  • ಕರ್ನಾಟಕದ ಪ್ರಸ್ತುತ ಅಂದರೆ 18ನೇ ರಾಜ್ಯಪಾಲರು ವಜುಭಾಯಿ ವಾಲಾ, ಇವರು ಸಪ್ಟೆಂಬರ್ 01, 2014 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.


02. ಜಿ ಎಸ್ ಟಿ ಸಭೆಯ ಅಧ್ಯಕ್ಷರು ಯಾರು?

A) ಪ್ರಧಾನಮಂತ್ರಿ

B) ಕೇಂದ್ರ ವಾಣಿಜ್ಯ ಸಚಿವ

C) ಕೇಂದ್ರ ಹಣಕಾಸು ಸಚಿವ

D) ಕೇಂದ್ರ ಕೈಗಾರಿಕಾ ಸಚಿವ


ಸರಿಯಾದ ಉತ್ತರ : C) ಕೇಂದ್ರ ಹಣಕಾಸು ಸಚಿವ


ವಿವರಣೆ :


  • ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಸಾಮಾನ್ಯ ಪರೋಕ್ಷ ತೆರಿಗೆಯೇ ಜಿ ಎಸ್ ಟಿ. ಸರಕುಗಳ ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗಳ ಮೇಲೆ ವಿಧಿಸುವ ವ್ಯಾಪಕ ಮತ್ತು ಸಮಗ್ರ ತೆರಿಗೆ ವ್ಯವಸ್ಥೆಯೇ ಜಿಎಸ್ಟಿ.
  • GST - Goods and Service Tax
  • ಅಧ್ಯಕ್ಷರು : ಕೇಂದ್ರ ಹಣಕಾಸು ಸಚಿವ
  • ಕಾರ್ಯಾಲಯ : ನವದೆಹಲಿ
  • ಮಂಡಳಿಯ ರಚನೆ : 279/1 ನೇ ವಿಧಿ
  • ಜಿ ಎಸ್ ಟಿ ಮಂಡಳಿ ಅನುಮೋದನೆ : 2016 ಸೆಪ್ಟೆಂಬರ್ 12
  • ಮೊದಲ ಮಂಡಳಿ ಸಭೆ ನಡೆದಿದ್ದು : 2016 ಸೆಪ್ಟೆಂಬರ್ 22-23 (ನವದೆಹಲಿ)
  • ಜಿ ಎಸ್ ಟಿ ಜಾರಿ : ಸಂಸತ್ತಿನಲ್ಲಿ 2017 ಮಾರ್ಚ್ 29ರಂದು ಮಂಡನೆ ಮಾಡಿ, ಅಧಿಕಾರ ಪಡೆದು 2017 ಜುಲೈ 1ರಿಂದ ಜಾರಿಗೆ ತರಲಾಯಿತು.
  • ಜಿ ಎಸ್ ಟಿ ದಿನ : ಜಿ ಎಸ್ ಟಿ. ಜಾರಿಗೆ ಬಂದ ದಿನವಾದ 2017 ರ ಜುಲೈ 01 ನ್ನು ಜಿ ಎಸ್ ಟಿ ದಿನ ಎನ್ನಲಾಗುತ್ತದೆ.
  • 2000 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವು , ಪಶ್ಚಿಮ ಬಂಗಾಳದ ರಾಜ್ಯ ಹಣಕಾಸು ಸಚಿವರಾದ ಅಸೀಮ್ ದಾಸ್ ಗುಪ್ತಾ ಅವರ ನೇತೃತ್ವದಲ್ಲಿ ರಾಜ್ಯ ಸಚಿವರ ಸಬಲೀಕರಣ ಸಮಿತಿಯನ್ನು ರಚಿಸಿತ್ತು. ಇವರನ್ನು ಭಾರತದಲ್ಲಿ ಜಿಎಸ್ಟಿ ಪಿತಾಮಹ ಎಂದು ಕರೆಯಲಾಗುತ್ತದೆ.
  • 2016 ರ ಸೆಪ್ಟೆಂಬರ್ 8 ರಂದು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜಿಎಸ್ಟಿ ಮಸೂದೆಗೆ ಅಂಕಿತ ಹಾಕಿದರು. ಈ ಮೂಲಕ ಸಂವಿಧಾನದ 101ನೇ ತಿದ್ದುಪಡಿಯಾಗಿ ಜಿಎಸ್ಟಿ ಮಸೂದೆಯು ಸ್ಥಾನ ಪಡೆಯಿತು.
  • ಸಂವಿಧಾನದ 246 (ಎ) ವಿಧಿಯ ಅನುಸಾರ 2016 ಸಂವಿಧಾನದ 101ನೇ ತಿದ್ದುಪಡಿ ಕಾಯ್ದೆಯು ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಿಗೆ ಜಿಎಸ್ಟಿ ಸಂಬಂಧ ಶಾಸನಾಧಿಕಾರವನ್ನು ನಿಯುಕ್ತಿಗೊಳಿಸಿದೆ.
  • ಅಸ್ಸಾಂ ರಾಜ್ಯ ವಿಧಾನಸಭೆಯು 2016 ಆಗಸ್ಟ್ 12ರಂದು ಜಿಎಸ್ಟಿ ಗೆ ಅಂಗೀಕಾರ ನೀಡಿದ ಮೊದಲ ರಾಜ್ಯ ಎನಿಸಿದೆ.
  • ಕರ್ನಾಟಕ ರಾಜ್ಯ ಸರಕಾರವು 2017 ಜೂನ್ 15ರಂದು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017ಕ್ಕೆ ಒಪ್ಪಿಗೆ ನೀಡಿದೆ.
  • ದೇಶಾದ್ಯಂತ ಪ್ರತಿ ವರ್ಷ ಜುಲೈ 01 ನ್ನು ಜಿಎಸ್ಟಿ ದಿನ ಎಂದು ಆಚರಿಸಲಾಗುತ್ತದೆ.
  • 2017 ಜುಲೈ 9ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು GST Finder ಆ್ಯಪ್ ಉದ್ಘಾಟನೆ ಮಾಡಿದರು.
  • GST Finder ಆ್ಯಪ್ ದೇಶದ ವಿವಿಧ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲು ಪಡುವ ತೆರಿಗೆ ದರವನ್ನು ತಿಳಿಯಲು ಸಹಾಯಕವಾಗಿದೆ.
  • 'ಒಂದು ದೇಶ ಒಂದು ತೆರಿಗೆ ಒಂದು ಮಾರುಕಟ್ಟೆ' (One Country, One Tax, One Market) ಎಂಬ ತತ್ವದಡಿಯಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು 2017 ಜೂನ್ 30 ಅಂದರೆ ಜುಲೈ 1ರ ಮಧ್ಯರಾತ್ರಿ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಯಿತು.

    ಜಿ ಎಸ್ ಟಿ ಮಂಡಳಿ ರಚನೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

  • ರಚನೆ : ಸಂವಿಧಾನದ 279/1 ನೇ ವಿಧಿ ಅನ್ವಯ ರಚನೆ
  • ಅಧ್ಯಕ್ಷರು : ಕೇಂದ್ರ ಸರ್ಕಾರದ ಹಣಕಾಸು ಸಚಿವರು
  • ಕಾರ್ಯದರ್ಶಿ : ಪದನಿಮಿತ್ತ ಕಂದಾಯ ಕಾರ್ಯದರ್ಶಿ
  • ರಾಷ್ಟ್ರಪತಿಯವರು ಪ್ರತಿ ಐದು ವರ್ಷಗಳಿಗೊಮ್ಮೆ ಭಾರತ ಸಂವಿಧಾನದ ಎರಡು 180ನೇ ವಿಧಿಯ ಪ್ರಕಾರ ಹಣಕಾಸು ಆಯೋಗವನ್ನು ರಚಿಸುತ್ತಾರೆ 14ನೇ ಹಣಕಾಸು ಆಯೋಗದ ಅಧ್ಯಕ್ಷರು ಡಾ. ವೈ ವಿ ರೆಡ್ಡಿ (2015-2020).
  • ಪ್ರಸ್ತುತ 15ನೇ ಹಣಕಾಸು ಆಯೋಗದ ಅಧ್ಯಕ್ಷರು ಎನ್. ಕೆ. ಸಿಂಗ್ (2020-2025)


03. ಭಾರತದ ಸಂವಿಧಾನದ ಕೆಳಗಿನ ಯಾವ ವಿಧಿಯು ಅಸ್ಪೃಶ್ಯತೆಯನ್ನು ರದ್ದುಗೊಳಿಸುತ್ತದೆ?

A) ಆರ್ಟಿಕಲ್ 17

B) ಆರ್ಟಿಕಲ್ 16

C) ಆರ್ಟಿಕಲ್ 18

D) ಆರ್ಟಿಕಲ್ 15


ಸರಿಯಾದ ಉತ್ತರ : A) ಆರ್ಟಿಕಲ್ 17


ವಿವರಣೆ :


  • ಸಂವಿಧಾನದ ಕಲಂ 17 ಅಸ್ಪೃಶ್ಯತಾ ಆಚರಣೆಯ ನಿಷೇಧದ ಕುರಿತು ತಿಳಿಸುತ್ತದೆ.
  • ಈ ವಿಧಿಯನ್ನು ಬಲಗೊಳಿಸುವ ಉದ್ದೇಶದಿಂದ 1955 ರಲ್ಲಿ ಅಸ್ಪೃಶ್ಯತೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ.
  • 1976 ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು 1955 ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಎಂದು ಮರುನಾಮಕರಣ ಮಾಡಲಾಯಿತು.
  • ಅಸ್ಪೃಶ್ಯತೆಯ ಆಚರಣೆಯ ನಿಷೇಧದ ಕುರಿತಾದ 17 ನೇ ವಿಧಿಯು, ಭಾರತದ 6 ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುವ ಸಮಾನತೆಯ ಹಕ್ಕಿನಲ್ಲಿ ಇದೆ.

ಮೂಲಭೂತ ಹಕ್ಕುಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

  • ಭಾರತದ ಮೂಲಭೂತ ಹಕ್ಕುಗಳನ್ನು ಅಮೆರಿಕ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
  • ಅಮೆರಿಕದಲ್ಲಿ ಮೂಲಭೂತ ಹಕ್ಕುಗಳನ್ನು ಬಿಲ್ಸ್ ಆಫ್ ರೈಟ್ಸ್ ಎಂದು ಕರೆಯುತ್ತಾರೆ.
  • ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು 'ಭಾರತದ ಮ್ಯಾಗ್ನಕಾರ್ಟ' ಎಂದು ಕರೆಯುತ್ತಾರೆ.
  • 1895 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹಪಡಿಸಿದೆ 1895 ರಲ್ಲಿ ಬಾಲಗಂಗಾಧರ ತಿಲಕ್ ಅವರು ತಮ್ಮ ಸ್ವರಾಜ್ಯ ಬಿಲ್ ನಲ್ಲಿ ಹಕ್ಕುಗಳಿಗಾಗಿ ಒತ್ತಾಯಿಸಿದ್ದರು.
  • 1925 ರಲ್ಲಿ ಶ್ರೀಮತಿ ಅನಿಬೆಸೆಂಟ್ ರವರು ಕಾಮನ್‌ವೆಲ್ತ್ ಆಫ್ ಇಂಡಿಯಾ ಬಿಲ್ ನಲ್ಲಿ ವ್ಯಕ್ತಿಸ್ವಾತಂತ್ರ್ಯ, ಆತ್ಮಸಾಕ್ಷಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹಾಗೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸಿದರು.
  • 1945 ರಲ್ಲಿ ಸಪ್ರೂ ವರದಿ, 1946 ರ ಕ್ಯಾಬಿನೆಟ್ ಮಿಷನ್ ಮೂಲಭೂತ ಹಕ್ಕುಗಳನ್ನು ಬೆಂಬಲಿಸಿದವು.
  • ಭಾರತದ ಮೂಲಭೂತ ಹಕ್ಕುಗಳಿಗೆ ಮೂಲ ಪ್ರೇರಣೆ 19 48ರ ಡಿಸೆಂಬರ್ 10ರಂದು ವಿಶ್ವಸಂಸ್ಥೆಯು ಹೊರಡಿಸಿದ ಮಾನವ ಹಕ್ಕುಗಳ ಘೋಷಣೆಯಾಗಿದೆ.


ಭಾರತದ 6 ಮೂಲಭೂತ ಹಕ್ಕುಗಳು ಹೀಗಿವೆ


1. ಸಮಾನತೆಯ ಹಕ್ಕು (14-18 ನೇ ವಿಧಿ)

2. ಸ್ವಾತಂತ್ರ್ಯದ ಹಕ್ಕು (19-22 ನೇ ವಿಧಿ)

3. ಶೋಷಣೆ ವಿರುದ್ಧದ ಹಕ್ಕು (23-24 ನೇ ವಿಧಿ)

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (25-28 ನೇ ವಿಧಿ)

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು (29-30 ನೇ ವಿಧಿ)

6. ಸಂವಿಧಾನ ಪರಿಹಾರದ ಹಕ್ಕು (32 ನೇ ವಿಧಿ)


  • ಸಂವಿಧಾನದ 31ನೇ ವಿಧಿಯು ಆಸ್ತಿಯನ್ನು ಹೊಂದುವುದನ್ನು ಮೂಲಭೂತ ಹಕ್ಕನ್ನಾಗಿಸಲಾಗಿತ್ತು. ಆದರೆ 1978 ರಲ್ಲಿ ಸಂವಿಧಾನಕ್ಕೆ 44 ನೇ ತಿದ್ದುಪಡಿಯನ್ನು ತಂದು ಆಸ್ತಿಯ ಹಕ್ಕನ್ನು ಮೂಲಭೂತ ತೆಗೆದುಹಾಕಲಾಯಿತು. ಪ್ರಸ್ತುತವಾಗಿ ಆಸ್ತಿಯ ಹಕ್ಕು 300-ಎ ವಿಧಿಯ ಅಡಿಯಲ್ಲಿ ಕಾನೂನಿನ ಹಕ್ಕಾಗಿದೆ.  ಈ ಮೂಲಕ ಮೂಲ ಸಂವಿಧಾನದಲ್ಲಿನ 7 ಮೂಲಭೂತ ಹಕ್ಕುಗಳಲ್ಲಿ, ಆಸ್ತಿ ಹಕ್ಕನ್ನು ತೆಗೆದು ಹಾಕಿರುವುದರಿಂದ ಪ್ರಸ್ತುತ 6 ಮೂಲಭೂತ ಹಕ್ಕುಗಳಿವೆ.

ಸಂವಿಧಾನದ 17 ನೇ ವಿಧಿ : ಅಸ್ಪೃಶ್ಯತಾ ನಿವಾರಣೆ 

  • ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯ ಆಚರಣೆಯನ್ನು ನಿರ್ಮೂಲನೆ ಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ವಿಧಿಯು ಯಾವುದೇ ರೂಪದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಈ ವಿಧಿಯ ಅನ್ವಯ ಅಸ್ಪೃಶ್ಯತೆಯ ಆಚರಣೆಯ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ.
  • ಈ ವಿಧಿಯ ಪ್ರಕಾರ ಸಂಸತ್ತು ಕಾನೂನನ್ನು ರೂಪಿಸುವ ಮೂಲಕ ಅಸ್ಪೃಶ್ಯತೆಯ ಆಚರಣೆಗೆ ಶಿಕ್ಷೆಯನ್ನು ನಿರ್ದಿಷ್ಟ ಪಡಿಸಬಹುದಾಗಿದೆ.
  • ಇದೇ ಉದ್ದೇಶದಿಂದಾಗಿ ಸಂಸತ್ತು, 1955 ರಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ರೂಪಿಸಿದೆ.
  • 1976 ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಅದಕ್ಕೆ '1955 ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ' ಎಂದು ಮರುನಾಮಕರಣ ಮಾಡಲಾಯಿತು.
  • '1955 ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ' ಅಡಿಯಲ್ಲಿ ಅಸ್ಪ್ರಶ್ಯತಾ ಆಚರಣೆಯ ಅಪರಾಧಕ್ಕೆ ಆರು ತಿಂಗಳ ಸೆರೆವಾಸ ಅಥವಾ  500 ರೂಪಾಯಿಗಳ ದಂಡವನ್ನು ಅಥವಾ ಎರಡನ್ನೂ ವಿಧಿಸಲಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area