ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಐಬಿಪಿಎಸ್ 10447 ಹುದ್ದೆಗಳಿಗೆ ಅರ್ಜಿ ಆಹ್ವಾನ IBPS Recruitment 2021 : 10447 Various Vacancies in Rural Banks

ಐಬಿಪಿಎಸ್ 10447 ಹುದ್ದೆಗಳಿಗೆ ಅರ್ಜಿ ಆಹ್ವಾನ  IBPS Recruitment 2021 : 10447 Various Vacancies in Rural Banks


ಐಬಿಪಿಎಸ್ 10447 ಹುದ್ದೆಗಳಿಗೆ ಅರ್ಜಿ ಆಹ್ವಾನ  IBPS Recruitment 2021 : 10447 Various Vacancies in Rural Banks



ಐಬಿಪಿಎಸ್ 10447 ಹುದ್ದೆಗಳಿಗೆ ಅರ್ಜಿ ಆಹ್ವಾನ


ಉದ್ಯೋಗ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಐಬಿಪಿಎಸ್ ನಿಂದ ಶುಭ ಸುದ್ದಿಯೊಂದು ಬಂದಿದೆ. ಹೌದು ಐಬಿಪಿಎಸ್ ಈಗ ದೇಶಾದ್ಯಂತ ಇರುವ ಗ್ರಾಮೀಣ ಬ್ಯಾಂಕ್ ಗಳಲ್ಲಿನ ಆಫೀಸರ್ ಮತ್ತು ಆಫಿಸರ್ ಅಸಿಸ್ಟೆಂಟ್ ಗಳ ಒಟ್ಟು 10447 ಬೃಹತ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅಲ್ಲದೇ ಈ ಕುರಿತು ಐಬಿಪಿಎಸ್ ನ ಅಧಿಕೃತ ಜಾಲತಾಣದಲ್ಲಿ ನೋಟಿಫಿಕೇಶನ್ ಕೂಡ ಹೊರಡಿಸಿದೆ.


ಬನ್ನಿ ಹಾಗಾದರೆ, ಯಾವ ಯಾವ ಹುದ್ದೆಗಳಿಗೆ ನೇಮಕಾತಿ‌ ನಡೆಯಲಿದೆ. ಅರ್ಜಿ ಸಲ್ಲಿಸೋದು ಹೇಗೆ ಎಂಬೆಲ್ಲ ಮಾಹಿತಿಯನ್ನು ನಿಮ್ಮ Edutube Kannada ತಂಡ ನಿಮಗೆ ನೀಡಲಿದೆ‌.


ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಬೃಹತ್‌ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಈ ಆಯ್ಕೆ ಪ್ರಕ್ರಿಯೆಗೆ ಜೂನ್ 8 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಜೂನ್ 28 ರವರೆಗೆ ಅರ್ಜಿ ಸಲ್ಲಿಸಬಹುದು.


ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಂತರ, ಐಬಿಪಿಎಸ್ ಅಧಿಕೃತ ಜಾಲತಾಣ https://www.ibps.in/ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.



ಹುದ್ದೆಗಳ ವಿವರ ಹೀಗಿದೆ :


  • ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್ ) - 5096
  • ಆಫೀಸರ್ ಸ್ಕೇಲ್‌-1 - 4119
  • ಆಫೀಸರ್ ಸ್ಕೇಲ್‌-2 (ಅಗ್ರಿಕಲ್ಚರ್ ಆಫೀಸರ್) - 25
  • ಆಫೀಸರ್ ಸ್ಕೇಲ್‌-2 (ಮಾರ್ಕೆಟಿಂಗ್ ಮ್ಯಾನೇಜರ್) - 43
  • ಆಫೀಸರ್ ಸ್ಕೇಲ್‌-2(ಟ್ರೆಸರಿ ಮ್ಯಾನೇಜರ್)- 10
  • ಆಫೀಸರ್ ಸ್ಕೇಲ್‌-2 (Law) - 27
  • ಆಫೀಸರ್ ಸ್ಕೇಲ್‌-2 (CA) - 32
  • ಆಫೀಸರ್ ಸ್ಕೇಲ್‌-2 (IT)- 59
  • ಆಫೀಸರ್ ಸ್ಕೇಲ್‌-2 (ಜೆನರಲ್ ಬ್ಯಾಂಕಿಂಗ್ ಆಫೀಸರ್) - 905
  • ಆಫೀಸರ್ ಸ್ಕೇಲ್‌-3 - 151


ಒಟ್ಟು ಹುದ್ದೆಗಳು : 10447



ಅರ್ಹತೆಗಳು ಏನಿರಬೇಕು :


ಮೇಲ್ಕಾಣಿಸಿದ ಆಫೀಸರ್ ಮತ್ತು ಆಫೀಸರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಡಿಗ್ರಿ ಪಾಸ್ ಮಾಡಿರಬೇಕು. ಜತೆಗೆ ಕೆಲವೊಂದು ಹುದ್ದೆಗೆ ಎಂಬಿಎ, ಸಿಎ ಪಾಸ್‌ ಮಾಡಿರಬೇಕು.


ವಿದ್ಯಾರಹತೆಯ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ.


ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?


ಐಬಿಪಿಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ನೇಮಕಾತಿ ಈ ಕೆಳಕಾಣಿಸಿದ ರೀತಿ ನಡೆಯುತ್ತದೆ. ಮೊದಲು

ಆನ್‌ಲೈನ್‌ ಪರೀಕ್ಷೆ ಪ್ರಿಲಿಮಿನರಿ ಅಂದರೆ ಪೂರ್ವಾಭಾವಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪೂರ್ವಭಾವಿ‌ ಮತ್ತು ಮುಖ್ಯ ಪರೀಕ್ಷೆಯನ್ನು ಅತಿ ಹೆಚ್ಚಿನ ಅಂಕಗಳೊಂದಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ಅಂತಿಮ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.



ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌ ಮೂಲಕ‌ ಮಾತ್ರ.


ಪ್ರಮುಖ ದಿನಾಂಕಗಳು


ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08-06-2021

ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 28-06-2021



ಅರ್ಜಿ ಶುಲ್ಕ  ಎಷ್ಟಿದೆ:


ಮೇಲಿನ ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು.

➡ ಎಸ್‌ಸಿ, ಎಸ್‌ಟಿ , PWD ಅಭ್ಯರ್ಥಿಗಳಿಗೆ ರೂ.175,

➡ ಇತರೆ ಅಭ್ಯರ್ಥಿಗಳಿಗೆ ರೂ.850 ಶುಲ್ಕ ಪಾವತಿಸಬೇಕು.



ಪೂರ್ವಭಾವಿ ಪರೀಕ್ಷೆ ದಿನಾಂಕ : 2021 ರ ಆಗಸ್ಟ್‌


ಮುಖ್ಯ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ / ಅಕ್ಟೋಬರ್ 2021


ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ : https://ibpsonline.ibps.in/rrbsoaxmay21/


ನೋಟಿಫಿಕೇಶನ್‌ಗಾಗಿ ಕ್ಲಿಕ್ ಮಾಡಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area