ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

SSLC Social Science Chapter wise 02 Chapter : Expansion of British rule Question Answers Super 40 Question Answers

ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೋತ್ತರಗಳು 

SSLC Social Science Chapter wise 02 Chapter :  Expansion of British rule Question Answers Super 40 Question Answers








10 ನೇ ತರಗತಿ   ವಿಷಯ: ಸಮಾಜ ವಿಜ್ಞಾನ           ಇತಿಹಾಸ

UPSC, IAS, IPS, KPSC, KAS, FDA, SDA, Group-C, PDO, PSI, TET, CET, Police Constable ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ ಆಯ್ದ ಪ್ರಮುಖ ಪ್ರಶ್ನೋತ್ತರಗಳು ನಿಮಗಾಗಿ.

SSLC Social Science Chapter wise Question Answers : 02 Chapter :  Expansion of British rule

Karnataka SSLC Social Science Chapter Wise Question Answers, 

 

ಅಧ್ಯಾಯ-2.

ಬ್ರಿಟೀಷ್ ಆಳ್ವಿಕೆಯ ವಿಸ್ತರಣೆ 

I) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.  

1) ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯೆ______ಒಪ್ಪಂದ      ಆಯಿತು. (ಸಾಲಬಾಯ್) 

2) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ____________ (ಲಾರ್ಡ್ ವೆಲ್ಲೆಸ್ಲಿ)  

3) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ______________ ರಲ್ಲಿ ಜಾರಿಗೆ ತರಲಾಯಿತು (1848)

4) ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಜಾರಿಗೆ ತಂದವನು ________.

(ಲಾರ್ಡ ಡಾಲ್‌ಹೌಸಿ)


II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ಬ್ರಿಟಷರು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ಯಾವ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು? 

  ಬ್ರಿಟಷರು ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಮೂಲಕ ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು. 

2) ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊದಿಗೆ ಕೊನೆಗೊಡಿತು?

ಮೊದಲ ಆಂಗ್ಲೋ-ಮರಾಠ ಯುದ್ಧ ಸಾಲ್‌ಬಾಯ್ ಒಪ್ಪಂದದೊಂದಿಗೆ ಕೊನೆಗೊಡಿತು.  

3) ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವೆ ಆಗಿ ನೇಮಕಗೊಂಡವನು ಯಾರು? 

ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವೆ ಆಗಿ ನೇಮಕಗೊಂಡವನು ಮಾಧವರಾವ್. 

4) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಯಾರು? 

 ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸ್ಲಿ. 

5) ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಏಕೆ ಜಾರಿಗೆ ತಂದನು? 

 ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದನು. 

6) ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದನು? 

 ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು 1798ರಲ್ಲಿ ಜಾರಿಗೆ ತಂದನು. 

7) ಬ್ರಿಟಿಷ್ ಈಸ್ಟ ಇಂಡಿಯಾ ಕಂಪೆನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ ಯಾವುದು? 

ಬ್ರಿಟಿಷ್ ಈಸ್ಟ ಇಂಡಿಯಾ ಕಂಪೆನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದ ಸಹಾಯಕ ಸೈನ್ಯ ಪದ್ಧತಿ. 

8) ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಯಾವುದು? 

 ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ. 

9) ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ರಾಜ್ಯಗಳು ಯಾವುವು? 

 ಹೈದರಾಬಾದ್‌ ಸಂಸ್ಥಾನ, ಮೈಸೂರು, ಔದ್, ತಂಜಾವೂರು, ಮರಾಠ, ಆರ್ಕಾಟ್, ಪೂನಾ, ಬಿರಾರ್, ಗ್ವಾಲಿಯರ್. 

10) ಎರಡನೇ ಆಂಗ್ಲೋ-ಮರಾಠ ಯುದ್ಧಕ್ಕೆ ಮುಖ್ಯ ಕಾರಣವೇನು? 

 ಎರಡನೇ ಆಂಗ್ಲೋ-ಮರಾಠ ಯುದ್ಧಕ್ಕೆ ಮುಖ್ಯ ಕಾರಣ ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ. 


11) ಎರಡನೇ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? 

 ಎರಡನೇ ಆಂಗ್ಲೋ-ಮರಾಠ ಯುದ್ಧ ಬೆಸ್ಸಿನ್ ಒಪ್ಪಂದದೊಂದಿಗೆ ಕೊನೆಗೊಂಡಿತು.  

12) ಹೋಳ್ಕರ್, ಭೋಂಸ್ಲೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಲು ಕಾರಣವೇನು? 

 ಪೇಶ್ವೆಯು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಭೋಂಸ್ಲೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು. 

13) ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು? 

 ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಲಾಹೋರ್ ಒಪ್ಪಂದ. 

14) ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಯಾರು? 

 ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಚಟ್ಟಾರ್ ಸಿಂಗ್ ಅಟ್ಟಾರಿವಾಲ ಮತ್ತು ಮೂಲರಾಜ್. 

15) ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು ಯಾರು? 

 ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು ಲಾರ್ಡ ಡಾಲ್‌ಹೌಸಿ. 

16) ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣವೇನು? 

ಅವನ ಯುದ್ಧಪ್ರಿಯ ನೀತಿಯಿಂದ ಕಂಪೆನಿಗೆ ಸಾಲದ ಹೊರೆ ಹೆಚ್ಚಿತು.ಇದರಿಂದ ತೀವ್ರ ಟೀಕೆಗೆ ಒಳಗಾದ ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಿದನು. 

17) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಲಾರ್ಡ ಡಾಲ್‌ಹೌಸಿ. 

18) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದರೇನು? 

 ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ,ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ. ಇದನ್ನು ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವರು. 

19) “ದತ್ತು ಮಕ್ಕಳಿಗೆ ಹಕ್ಕಿಲ್ಲ “ಎಂಬ ನೀತಿಗೆ ಒಳಪಟ್ಟ ರಾಜ್ಯಗಳು ಯಾವುವು? 

ಸತಾರ, ಜೈಪುರ, ಸಂಬಲ್‌ಪುರ, ಉದಯ್‌ಪುರ್, ಝಾನ್ಸಿ, ನಾಗಪುರ.

20) ದತ್ತು ಮಕ್ಕಳಿಗೆ ಹಕ್ಕಿಲ ಎಂಬ ನೀತಿ ಯಾವಾಗ ಜಾರಿಗೆ ಬಂದಿತು? 

ದತ್ತು ಮಕ್ಕಳಿಗೆ ಹಕ್ಕಿಲ ಎಂಬ ನೀತಿ 1848ರಲ್ಲಿ ಜಾರಿಗೆ ಬಂದಿತು. 


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area