ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಚಾಮರಾಜ ನಗರ ಜಿಲ್ಲೆಯಲ್ಲಿ ಮಹಿಳೆಯರಿಗೆ ಇವೆ 223 ಹುದ್ದೆಗಳು Chamrajnagar 223 vacancies for womens Apply Now

  ಚಾಮರಾಜನಗರ ಜಿಲ್ಲೆಯಲ್ಲಿದೆ ವಿವಿಧ ಹುದ್ದೆಗಳಿಗೆ ಉದ್ಯೋಗ


ಚಾಮರಾಜ ನಗರ ಜಿಲ್ಲೆಯಲ್ಲಿ ಮಹಿಳೆಯರಿಗೆ ಇವೆ 223 ಹುದ್ದೆಗಳು Chamrajnagar 223 vacancies for womens Apply Now



ಉದ್ಯೋಗದ ಹುಡುಕಾಟದಲ್ಲಿರುವ ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಮಹಿಳೆಯರಿಗೆ ಸಂತಸದ ಸುದ್ದಿ...!! ಹೌದು ಚಾನರಾಜನಗರದ ಐದು ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ 70 ಅಂಗನವಾಡಿ ಕಾರ್ಯಕರ್ತೆ ಹಾಗೂ 153 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.


ವಿಶೇಷ ಸೂಚನೆ : ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಂಗವಿಕಲರು ಅರ್ಜಿಸಲ್ಲಿಸಲು ಅರ್ಹರಾಗಿರುವುದಿಲ್ಲ.


ಯಾವ ಯಾವ ದಾಖಲಾತಿಗಳು ಇರಬೇಕು

  • ಮಹಿಳಾ ಅಭ್ಯರ್ಥಿಗಳ ಜನನ ಪ್ರಮಾಣ ಪತ್ರ
  • ವಿದ್ಯಾರ್ಹತೆಯ ಪ್ರಮಾಣ ಪತ್ರ
  • ತಹಸೀಲ್ದಾರ್ ಕಚೇರಿಯಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ
  • ಜಾತಿ ಪ್ರಮಾಣ ಪತ್ರ

ಸೇರಿದಂತೆ ಇನ್ನಿತರ ಎಲ್ಲಾ ಪ್ರಮುಖ ದಾಖಲಾತಿಗಳು ಇರಬೇಕು.


ಅರ್ಜಿಯನ್ನು ಆನ್ಲೈನ್ನಲ್ಲಿ ಮಾತ್ರ ಸಲ್ಲಿಸಬೇಕು ಹಾಗೂ ಅಸ್ಪಷ್ಟ ದಾಖಲೆಗಳನ್ನು ಹೊಂದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.


ಚಾಮರಾಜನಗರದ ಯಾವ ಯಾವ ತಾಲೂಕಿನಲ್ಲಿ ಖಾಲಿ ಹುದ್ದೆಗಳಿವೆ


  • ಸಂತೆಮಾರನಹಳ್ಳಿ
  • ಕೊಳ್ಳೇಗಾಲ
  • ಗುಂಡ್ಲುಪೇಟೆ
  • ಯಳಂದೂರು 


ವಿಶೇಷ ಸೂಚನೆಗಳು


  • ಅಭ್ಯರ್ಥಿಗಳು ವಿಧವೆ ವಿಚ್ಛೇದಿತೆ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದ ಉಪವಿಭಾಗಾಧಿಕಾರಿಗಳು ನೀಡಿದ ಪತ್ರವನ್ನು ಸಲ್ಲಿಸಬೇಕು.
  • ದೇವದಾಸಿಯರ ಮಕ್ಕಳು ಅಂಗವಿಕಲರಾಗಿ ದ್ದಲ್ಲಿ ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ ಎಂದು ಗ್ರಾಮ ಪಂಚಾಯಿತಿಯಿಂದ ನೀಡಿದ ಪತ್ರ ಸಲ್ಲಿಸಬೇಕು.
  • ಯೋಜನಾ ನಿರಾಶ್ರಿತರ ಆಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬಹುದು.


ಈ ಎಲ್ಲಾ ಪ್ರಮಾಣಪತ್ರಗಳನ್ನು ಆಯಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ.


ವಯೋಮಿತಿ ಎಷ್ಟಿರಬೇಕು


  • ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಕನಿಷ್ಠ ಎಸೆಸೆಲ್ಸಿ ಪರೀಕ್ಷೆಯನ್ನು ಪಾಸು ಮಾಡಿರಬೇಕು.
  • ಅಂಗನವಾಡಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ನಾಲ್ಕನೇ ತರಗತಿ ಪಾಸು ಮಾಡಿರಬೇಕು ಗರಿಷ್ಠ 9ನೇ ತರಗತಿ ಯನ್ ಕಲಿತಿರಬೇಕು.
  • ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಮಹಿಳಾ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಅವಶ್ಯವಾಗಿ ಇರಬೇಕು.


ವಯೋಮಿತಿ ಎಷ್ಟು


ಸದರಿ ಚಾಮರಾಜನಗರ ಜಿಲ್ಲೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಮಹಿಳಾ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯೋಮಿತಿಯಲ್ಲಿರಬೇಕು ಅಂಗವಿಕಲರಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ಯನ್ನು ನೀಡಲಾಗಿದೆ.


ವೇತನ ಎಷ್ಟು


ಸ್ನೇಹಿತರೆ ಸದರಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ನೇಮಕಾತಿಗಳು ಗೌರವಧನ ಆಧಾರಿತವಾಗಿರುತ್ತವೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಮಾಸಿಕ 10 ಸಾವಿರ ರೂಪಾಯಿ ಗೌರವಧನ ನಿಗದಿಪಡಿಸಲಾಗಿದೆ, ಇನ್ನು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಮಾಸಿಕ 5 ಸಾವಿರ ರೂಪಾಯಿ ಗೌರವಧನವನ್ನು ವೇತನವನ್ನು ನೀಡಲಾಗುತ್ತದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021


ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 


ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area