ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

SSLC Social Science Chapter wise Question Answers Super 70 Question Answers


ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೋತ್ತರಗಳು 

SSLC Social Science Chapter wise Question Answers : CHAPTER-1. ADVENT OF EUROPEANS TO INDIA






10 ನೇ ತರಗತಿ   ವಿಷಯ: ಸಮಾಜ ವಿಜ್ಞಾನ           ಇತಿಹಾಸ

UPSC, IAS, IPS, KPSC, KAS, FDA, SDA, Group-C, PDO, PSI, TET, CET, Police Constable ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ ಆಯ್ದ ಪ್ರಮುಖ ಪ್ರಶ್ನೋತ್ತರಗಳು ನಿಮಗಾಗಿ.

SSLC Social Science Chapter wise Question Answers : CHAPTER-1. ADVENT OF EUROPEANS TO INDIA

Karnataka SSLC Social Science Chapter Wise Question Answers, 


ಭಾರತಕ್ಕೆ ಯುರೋಪಿಯನ್ನರ ಆಗಮನ 

1) 1453 ರಲ್ಲಿ ಆಟೋಮಾನ್ ಟರ್ಕರು ________ ನಗರವನ್ನು ವಶಪಡಿಸಿಕೊಂಡರು. (ಕಾನ್‌ಸ್ಟಾಂಟಿನೋಪಲ್)

2) ಭಾರತ ಹಾಗೂ ಯುರೋಪ್  ನಡುವೆ ಹೊಸ ಜಲಮಾರ್ಗವನ್ನು _________ ಕಂಡುಹಿಡಿದನು. (ವಾಸ್ಕೋಡಗಾಮನು)

3) ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ______ (ಪಾಂಡಿಚೇರಿ ಅಥವಾ ಪುದುಚೇರಿ)

4) ರಾಬರ್ಟ್ ಕ್ಲೈವ್ ನು 1757 ರಲ್ಲಿ  ಸಿರಾಜ್-ಉದ್-ದೌಲನ ಮೇಲೆ ________ ಕದನ ಸಾರಿದನು.  (ಪ್ಲಾಸಿ)

5) ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು __________ ನೀಡಿದನು. 

(ಎರಡನೇ ಷಾ ಅಲಂ)

6) ಬಂಗಾಳದಲ್ಲಿ ದ್ವಿ ಪ್ರಭುತ್ವ' ವನ್ನು ಜಾರಿಗೆ ತಂದವನು__________ .

(ರಾಬರ್ಟ್ ಕ್ಲೈವ್) 


II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1) ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಯಾವುವು?

ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ  ಶುಂಠಿ 

2) ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಕಾನ್‌ಸ್ಟಾಂಟಿನೋಪಲ್ 

3) ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರೇನು?

ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು- ಬೈಜಾಂಟೀನ್ 

4) ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು?

ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಕಾನ್‌ಸ್ಟಾಂಟಿನೋಪಲ್

5) ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು? ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಅರಬರು

6) ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?

ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಇಟಲಿಯ ವರ್ತಕರು

7) ಏಷ್ಯಾ  ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯತ್ತಿತ್ತು?

ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಕಾನ್‌ಸ್ಟಾಂಟಿನೋಪಲ್ ನಗರದ ಮೂಲಕ  

ನಡೆಯತ್ತಿತ್ತು

8) ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?

ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು

9) ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಕೊಂಡರು?

ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು 1453 ರಲ್ಲಿ ವಶಪಡಿಕೊಂಡರು.

10) ವರ್ತಕರಿಗೆ ಕಾನ್‌ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.ಏಕೆ? ವರ್ತಕರಿಗೆ ಕಾನ್‌ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆಂದರೆ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು.

11) ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲು  ಕಾರಣವೇನು?

    ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ       ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು. 

12) ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ಯಾವುವು? 

  ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ದಿಕ್ಸೂಚಿ, ಆಸ್ಟ್ರೋಲೋಬ್ (ನಕ್ಷತ್ರ ಉನ್ನತಿ ಮಾಪನ),ಸಿಡಿಮದ್ದು 

13) ಆಸ್ಟ್ರೋಲೋಬ್ ಎಂದರೇನು? 

   ಆಸ್ಟ್ರೋಲೋಬ್ ಎಂದರೆ ನಕ್ಷತ್ರ ಉನ್ನತಿ ಮಾಪನ 

14) ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳಲು ಕಾರಣವೇನು? 

ಏಷ್ಯಾ ಮತ್ತು ಯುರೋಪಿನ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್‌ಸ್ಟಾಂಟಿನೋಪಲ್ ನಗರದ ಮೂಲಕ       ನಡೆಯುತ್ತಿದ್ದರಿಂದ ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. 

15)  ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಉಂಟಾದ      ಪರಿಣಾಮವೇನು? 

  ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಆ ನಗರವನ್ನು ಸಂಧಿಸುವ  ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು. 


16)  ವಾಸ್ಕೋಡಗಾಮನು ಯಾವ ದೇಶದ ನಾವಿಕ?    ವಾಸ್ಕೋಡಗಾಮನು ಪೋರ್ಚುಗಲ್ ದೇಶದ ನಾವಿಕ 

17)  ವಾಸ್ಕೋಡಗಾಮನು ಯಾವ ನಗರದಿಂದ ಹೊರಟನು?   ವಾಸ್ಕೋಡಗಾಮನು ಲಿಸ್ಬನ್ ನಗರದಿಂದ ಹೊರಟನು  

18)  ವಾಸ್ಕೋಡಗಾಮನು ಯಾವ ನಗರಕ್ಕೆ ಬಂದು ತಲುಪಿದನು? 

  ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಬಂದು ತಲುಪಿದನು 

19) ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಯಾವಾಗ      ಬಂದು ತಲುಪಿದನು? 

   ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ 1453ರಲ್ಲಿ ಬಂದು ತಲುಪಿದನು. 

20) ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ಯಾರು? 

 ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ವಾಸ್ಕೋಡಗಾಮ. 

21) ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ  ಮೊದಲಿಗರು ಯಾರು? 

 ಪೋರ್ಚುಗೀಸರು 

22) ಯುರೋಪಿನ ವ್ಯಾಪಾರಿ ಕಂಪೆನಿಗಳನ್ನು ಹೆಸರಿಸಿ. 

  ಪೋರ್ಚುಗೀಸ್,ಡಚ್ಚ್, ಇಂಗ್ಲಿಷ್,ಫ್ರೆಂಚ್ 

23) ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಯಾರು?   ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನು ಪೋರ್ಚುಗೀಸರು 

24)  ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?   ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಪೋರ್ಚುಗೀಸರು 

25)  ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಯಾರು?   ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಫ್ರಾನ್ಸಿಸ್ಕೋ ಡಿ ಆಲ್ಮೆಡ 

26) ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು? 

 ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಫ್ರಾನ್ಸಿಸ್ಕೋ ಡಿ ಆಲ್ಮೆಡ 

27) “ನೀಲಿ ನೀರಿನ ನೀತಿ” ಎಂದರೇನು? 

 ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿಯನ್ನು ನೀಲಿ ನೀರಿನ ನೀತಿ ಎನ್ನುವರು. 

28) ಫ್ರಾನ್ಸಿಸ್ಕೋ ಡಿ ಆಲ್ಮೆಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಯಾರು? 

  ಫ್ರಾನ್ಸಿಸ್ಕೋ ಡಿ ಆಲ್ಮೆಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಆಲ್ಫೋನ್ಸೋ ಆಲ್ಬುಕರ್ಕ

29)  ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು? 

  ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಆಲ್ಫೋನ್ಸೋ ಆಲ್ಬುಕರ್ಕ 

30) 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಯಾರು? 

  1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಆಲ್ಫೋನ್ಸೋ ಆಲ್ಬುಕರ್ಕ 

31) ಪೋರ್ಚುಗೀಸರ ಆಡಳಿತ ಕೇಂದ್ರ ಯಾವುದು? 

    ಪೋರ್ಚುಗೀಸರ ಆಡಳಿತ ಕೇಂದ್ರ ಗೋವಾ 

32) ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಲು ಕಾರಣವೇನು?  ಡಚ್ ಮತ್ತು ಇಂಗ್ಲಿಷರ ಆಗಮನದಿಂದ ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಿದರು. 

33) ಡಚ್ಚರು ಯಾವ ದೇಶದವರು? 

  ಡಚ್ಚರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು. 

34) ಡಚ್ಚರ ಕಂಪೆನಿಯ ಹೆಸರೇನು?   ಡಚ್ಚರ ಕಂಪೆನಿಯ ಹೆಸರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ 


35) ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು? 

  ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ 1602ರಲ್ಲಿ ಸ್ಥಾಪನೆಯಾಯಿತು. 

36) ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಏಕೆ ಸ್ಥಾಪನೆ ಮಾಡಿದರು? 

 ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯನ್ನು ಸ್ಥಾಪನೆ ಮಾಡಿದರು. 

37) ಭಾರತದಲ್ಲಿ ಡಚ್ಚರ ವ್ಯಾಪಾರ ಕೋಠಿಗಳು ಯಾವುವು? 

  ಸೂರತ್,ಬ್ರೋಚ್,ಕ್ಯಾಂಬೆ,ಕೊಚ್ಚಿನ್,ನಾಗಪಟ್ಟಣ,ಮಚಲಿಪಟ್ಟಣ,ಚಿನ್ಸೂರ್ 

38)  ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಯಾರು? 

 ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಡಚ್ಚರು 

39) ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಹೇಗೆ ಮುರಿದರು? 

 ಸೂರತ್,ಬ್ರೋಚ್,ಕ್ಯಾಂಬೆ,ಕೊಚ್ಚಿನ್,ನಾಗಪಟ್ಟಣ,ಮಚಲಿಪಟ್ಟಣ,ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ  ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಮುರಿದರು. 

40) ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಳ್ಳಲು ಕಾರಣವೇನು? 

ಭಾರತಕ್ಕೆ ಬಂದ ಇಂಗ್ಲಿಷರು ಮತ್ತು ಫ್ರೇಂಚರ ಪೈಪೋಟಿಯನ್ನು ಎದುರಿಸಲಾರದೆ ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು. 

41) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು? 

  ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ 1600ರಲ್ಲಿ ಸ್ಥಾಪನೆಯಾಯಿತು. 

42) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಯಾರು? 

  ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಇಂಗ್ಲೆಂಡಿನ ರಾಣಿ ಎಲಿಜಬೆತ್ 

43) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಯಾರು? 

 ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಜಹಾಂಗೀರ್. 

44) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಎಲ್ಲಿ ಆರಂಭ ವಾಯಿತು? 

ಸೂರತ್‌ನಲ್ಲಿ ಆರಂಭವಾಯಿತು. 

45) . ಜಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಯಾರು?  ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಸರ್ ಥಾಮಸ್ ರೋ 

46) ಸರ್ ಥಾಮಸ್ ರೋ ಯಾರು? 

ಸರ್ ಥಾಮಸ್ ರೋ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ನ ರಾಯಭಾರಿ 

47) ಇಂಗ್ಲಿಷರು ಸೆಂಟ್ ಜಾರ್ಜ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಹೇಗೆ ಕಟ್ಟಿದರು? 

 ಇಂಗ್ಲಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು. 

48) ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಯಾರು? 

 ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಇಂಗ್ಲೆಂಡಿನ ರಾಜ ಎರಡನೇ 

ಚಾರ್ಲ್ಸ 

49) ಇಂಗ್ಲಿಷರು ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಹೇಗೆ ಕಟ್ಟಿದರು? 

 ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನತಿ,ಕ್ಯಾಲಿಕಟ್ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಇಂಗ್ಲಿಷರು ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು. 

50) ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಯಾವುವು? 

 ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಮದ್ರಾಸ್,ಬಾಂಬೆ,ಕಲ್ಕತ್ತ 

51) ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಯಾವುದು? ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಕಲ್ಕತ್ತ 

52) ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತ ಅಪರಾಧ ಕಾನೂನುಗಳನ್ನು ಜಾರಿಗೆ  ತಂದವರು ಯಾರು?    ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ  ತಂದವರು ಇಂಗ್ಲಿಷರು 

53) ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು ಯಾವಾಗ ಸ್ಥಾಪನೆಯಾಯಿತು? 

  ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು 1664ರಲ್ಲಿ ಸ್ಥಾಪನೆಯಾಯಿತು. 

54) ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಯಾವುದು?   ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಸೂರತ್ 

55) ಫ್ರೆಂಚರ ವ್ಯಾಪಾರ ಕೇಂದ್ರಗಳು ಯಾವುವು? 

 ಸೂರತ್,ಮಚಲೀಪಟ್ಟಣ,ಚಂದ್ರನಗರ,ಮಾಹೆ,ಕಾರೈಕಲ್ಲು,ಕಾಸಿಂಬಜಾರ್,ಬಾಲಸೂರ್ 

56) ಫ್ರೆಂಚರು ವಾಲಿಕೊಂಡಪುರAನ್ನು (ಪಾಂಡಿಚೇರಿ) ಹೇಗೆ ರಾಜಧಾನಿಯನ್ನಾಗಿ ಮಾಡಿಕೊಂಡರು?   ಫ್ರೆಂಚರು ವಾಲಿಕೊಂಡಪುರAನ ಸ್ಥಳಿಯ ಮುಸ್ಲಿಂ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದು ಅದನ್ನು    ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ, ರಾಜಧಾನಿಯನ್ನಾಗಿ ಮಾಡಿಕೊಂಡರು. 

57) ವಾಲಿಕೊಂಡಪುರಂನ ಮತ್ತೊಂದು ಹೆಸರೇನು? 

 ವಾಲಿಕೊಂಡಪುರಂನ ಮತ್ತೊಂದು ಹೆಸರು ಪಾಂಡಿಚೇರಿ ಅಥವಾ ಪುದುಚೇರಿ 

58)  ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಯಾವುದಾಗಿತ್ತು? 

ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಪಾಂಡಿಚೇರಿ ಆಗಿತ್ತು. 

59) ಫ್ರೆಂಚರ ಗವರ್ನರ್ ಯಾರು? ಫ್ರೆಂಚರ ಗವರ್ನರ್ ಡೂಪ್ಲೆ 

60) ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿಯಲು ಕಾರಣವೇನು?   ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು. 


61) ತಮಿಳುನಾಡಿನ ಪೂರ್ವ ಭಾಗವನ್ನು ಏನೆಂದು ಕರೆಯುವರು? 

ತಮಿಳುನಾಡಿನ ಪೂರ್ವ ಭಾಗವನ್ನು ಕಾರ್ನಾಟಿಕ್ ಎಂದು ಕರೆಯುವರು. 

62)  ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಯಾರು?  

ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಲಾಬೋರ್ಡಿನಾ 

63) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರವನ್ನು ನಡೆಸಲು ದಸ್ತಕ್‌ಗಳನ್ನು  ನೀಡಿದವರು ಯಾರು?----ಫಾರೂಕ್ ಶಿಯಾರ್ 

64) ದಸ್ತಕ್ ಎಂದರೇನು?  

ವ್ಯಾಪಾರ ನಡೆಸಲು ಪರವಾನಗಿ ಪತ್ರವನ್ನು ದಸ್ತಕ್ ಎನ್ನುವರು. 

65) ಅಲಿವರ್ದಿ ಖಾನನ ಮೊಮ್ಮಗನನ ಹೆಸರೇನು?----ಸಿರಾಜ್-ಉದ್-ದೌಲ್ 

66) ಬಕ್ಸಾರ್ ಕದನ ಯಾವಾಗ ನಡೆಯಿತು?--- ಬಕ್ಸಾರ್ ಕದನ 1764ರಲ್ಲಿ ನಡೆಯಿತು. 

67) ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಯಾವುವು? 

 ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಮೀರ್ ಖಾಸಿಂ,ಎರಡನೇ ಷಾ ಆಲಂ,  ಷುಜ್-ಉದ್-ದೌಲ 

68) ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಯಾರು? 

 ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಹೆಕ್ಟರ್ ಮನ್ರೋ 

69) ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಯಾರು? 

 ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಷಾ ಆಲಂ 

70)  ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು? 

 ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ರಾಬರ್ಟ ಕ್ಲೈವ್. 


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area