ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ದ್ವಿತೀಯ ಪಿಯು ಪರೀಕ್ಷೆ ರದ್ದು, ಅಂಕ ಹೇಗೆ ಕೊಡ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್..!! PU Exams Cancelled How Students Get Marks

  ದ್ವಿತೀಯ ಪಿಯು ಪರೀಕ್ಷೆ ರದ್ದು,  ಅಂಕ ಹೇಗೆ ಕೊಡ್ತಾರೆ? ಇಲ್ಲದೆ ಕಂಪ್ಲೀಟ್ ಡಿಟೈಲ್ಸ್..!!

ದ್ವಿತೀಯ ಪಿಯು ಪರೀಕ್ಷೆ ರದ್ದು,  ಅಂಕ ಹೇಗೆ ಕೊಡ್ತಾರೆ? ಇಲ್ಲದೆ ಕಂಪ್ಲೀಟ್ ಡಿಟೈಲ್ಸ್..!! PU Exams Cancelled How Students Get Marks



ಕೊರೋನಾ ಮಹಾಮಾರಿಯ ಆತಂಕದ ನಡುವೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕರ್ನಾಟಕ ಸರಕಾರ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಸರಳವಾಗಿ, ಕಡಿಮೆ ಅಂಕಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷೆಗೂ 20 ದಿನಗಳ ಮುಂಚೆ ಪರೀಕ್ಷಾ ವೇಳಾಪಟ್ಟಿ ಘೋಷಿಸುವುದಾಗಿ ಶಿಕ್ಷಣ ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.


ಈಗ ದ್ವಿತೀಯ ಪಿಯುಸಿ ಪರೀಕ್ಷೆ ಮಾತ್ರ ರದ್ಗಾಗಿದ್ದು, ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಗ್ರೇಡ್ ನೀಡಲು ಸರಕಾರ ಮುಂದಾಗಿದೆ. ಜೆಇಇ, ನೀಟ್, ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಹೇಗೂ ವಿದ್ಯಾರ್ಥಿಗಳ ಅರ್ಹತಾ ಮಾನದಂಡವನ್ನು ಓರೆ ಹಚ್ಚುವ ಅವಕಾಶ ಇರುವುದರಿಂದ, ಶಿಕ್ಷಣ ತಜ್ಞರ ಸಲಹೆ ಮೇರೆಗೆ ಕರ್ನಾಟಕ ಸರಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಬಂದಿದೆ.


ಹಾಗಾದರೆ ಅಂಕ ನೀಡೋದು ಹೇಗೆ?


  • ಈ ವರ್ಷದ ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಗಳು ಕಳೆದ ವರ್ಷದ ಮೊದಲ ಪಿಯುಸಿ ಪರೀಕ್ಷೆ ಎದುರಿಸಿದ್ದರು.
  • ಜಿಲ್ಲಾ ಮಟ್ಟದ ಪರೀಕ್ಷೆ ನಡೆದಿತ್ತು.
  • ಆ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಕೊಡಲಾಗುತ್ತದೆ
  • ಕೆಲವು ಮಾನದಂಡಗಳ ಆಧಾರದ ಪಿಯುಸಿ ವಿದ್ಯಾರ್ಥಿಗಳಿಗೆ A, B, C ಗ್ರೇಡ್ ಕೊಡಲಾಗುತ್ತದೆ.
  • ಯಾವುದೇ ಮಗು ನನಗೆ ಕೊಟ್ಟಿರುವ ಅಂಕ ಸರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಅ ಮಕ್ಕಳಿಗೆ ಪರೀಕ್ಷೆ ನಡೆಸಲು ಚಿಂತಿಸುತ್ತೇವೆ, ಎಂದು ಸರಕಾರ ಸ್ಪಷ್ಟ ಪಡಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area