ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಭೂಗೋಳಶಾಸ್ತ್ರ ಪರಿಚಯ Introduction to Geography Edutube Kannada Special Notes

  ಭೂಗೋಳಶಾಸ್ತ್ರ ಪರಿಚಯ Introduction to Geography


ಭೂಗೋಳಶಾಸ್ತ್ರ ಪರಿಚಯ Introduction to Geography Edutube Kannada Special Notes


ಭೂಗೋಳ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಮಾತ್ರ...!! ಭೂಗೋಳಶಾಸ್ತ್ರದ ಪರಿಚಯದ ವಿಚಾರವು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿ ಆಗಿದೆ ಆದ್ದರಿಂದ ಪ್ರಮುಖ ಅಂಶಗಳನ್ನು ಎಲ್ಲರೂ ನೋಟ್ ಮಾಡಿಕೊಳ್ಳಿ...

ಸೌರವ್ಯೂಹ ಮತ್ತು ಭೂಮಿ: -

ಭೂಗೋಳಶಾಸ್ತ್ರದ ಕುರಿತು ತಿಳಿದುಕೊಳ್ಳಲೇಬೇಕಾದ ಸಾಮಾನ್ಯ ಅಂಶಗಳು

ಭೂಗೋಳಶಾಸ್ತ್ರ

ಮಾನವನ ವಾಸ ಸ್ಥಾನವಾದ ಭೂ ಮೇಲ್ಮೆ, ಅದರ ಭಿನ್ನತೆ ಹಾಗೂ ಭೂಮಿಯ ಮೇಲ್ಮೆ ಮತ್ತು ಭಿನ್ನತೆಗಳ ನಡುವಿನ ಪರಸ್ಪರ ಸಂಬAಧದ ಕುರಿತಾದ ಅಧ್ಯಯನವೇ ಭೂಗೋಳ ಶಾಸ್ತ್ರ.

ಭೂಗೋಳ ಶಾಸ್ತ್ರವನ್ನು ಎಲ್ಲ ವಿಜ್ಞಾನಗಳ ತಾಯಿ ಎನ್ನಲಾಗುತ್ತದೆ.

ಭೂಗೋಳಶಾಸ್ತ್ರದ ಪಿತಾಮಹ :

ಎರಟೋಸ್ತಾನೀಸ್: ಕ್ರಿ. ಪೂ 276-194

  • ಮೊಟ್ಟ ಮೊದಲು Geography ಶಬ್ದವನ್ನು ಬಳಸಿದ ಭೂಗೋಳ ಶಾಸ್ತ್ರಜ್ಞ ಎಂದರೆ ಎರಟೋಸ್ತಾನೀಸ್.
  • ಎರಟೋಸ್ತಾನೀಸ್ ಗ್ರೀಕ್‌ನ ಬಹುಮುಖ ಪ್ರತಿಭೆಯ ಗಣಿತಶಾಸ್ತ್ರಜ್ಞ ಖಗೋಳಶಾಸ್ತ್ರಜ್ಞ ಕವಿ, ಸಂಗೀತಗಾರ ಜ್ಯೋತಿಷಿಯೂ ಹೌದು.
  • ಅಲೆಕ್ಸಾಂಡ್ರಿಯಾದ ಗ್ರಂಥಾಲಯದಲ್ಲಿನ ಗ್ರಂಥಪಾಲಕರಾಗಿದ್ದ ಎರಟೋಸ್ತಾನಿಸ್ ಈಜಿಪ್ಟ್ನಲ್ಲಿ ಕುಳಿತುಕೊಂಡೇ ಭೂಮಿಯ ಅಳತೆಯನ್ನು ಲೆಕ್ಕ ಮಾಡಿದ ಮಹಾನ್ ಭೂಗೋಳ ಶಾಸ್ತ್ರಜ್ಞ. ಹೀಗಾಗಿಯೇ ಅವರನ್ನು ಭೂಗೋಳ ಶಾಸ್ತ್ರದ  ಪಿತಾಮಹ ಎನ್ನಲಾಗುತ್ತದೆ.
  • ಭೂಮಿಯ ಸುತ್ತಳತೆ, ಅಕ್ಷಾಂಶ ಮತ್ತು ರೇಖಾಂಶಗಳನ್ನು ಮೊದಲು ಗುರುತಿಸಿದ ಕೀರ್ತಿ ಎರಟೋಸ್ತಾನಿಸ್‌ಗೆ ಸಲ್ಲುತ್ತದೆ.
  • ಸಿಸ್ಟಮ್ಯಾಟಿಕ್ ಜಿಯೋಗ್ರಫಿಯ ಪಿತಾಮಹ ಎಂದೂ ಇವರನ್ನು ಕರೆಯಲಾಗುತ್ತದೆ.


ಭೂಗೋಳಶಾಸ್ತçದ ಪಿತಾಮಹರುಗಳು

  • ಪ್ರಾಚೀನ ಭೂಗೋಳಶಾಸ್ತ್ರದ ಪಿತಾಮಹ : ಎರಟೋಸ್ತಾನಿಸ್
  • ಆಧುನಿಕ ಭೂಗೋಳಶಾಸ್ತ್ರದ ಪಿತಾಮಹ : ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಮತ್ತು ಕಾರ್ಲ್ ರಿಟ್ಟರ್
  • ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಓರ್ವ ಪ್ರಷ್ಯನ್ ಭೂಗೋಳ ಶಾಸ್ತ್ರಜ್ಞ ತಮ್ಮ ಸಸ್ಯಶಾಸ್ತ್ರೀಯ ಭೂಗೋಳಶಾಸ್ತ್ರ ದಿಂದಾಗಿ ಅತಿ ಹೆಚ್ಚು ಖ್ಯಾತಿಯನ್ನು ಹೊಂದಿದ್ದಾರೆ. ಇವರೊಂದಿಗೆ ಜರ್ಮನ್ ಭೂಗೋಳ ಶಾಸ್ತ್ರಜ್ಞರಾದ ಕಾರ್ಲ್ ರಿಟ್ಟರ್ ಅವರು ಕೂಡ, ಆಧುನಿಕ ಭೂಗೋಳ ಶಾಸ್ತçಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭೂ ವಿಜ್ಞಾನದ ಕುರಿತು ರಿಟ್ಟರ್ 19 ಸಂಪುಟಗಳ ಕೃತಿ ರಚಿಸಿ, ಆಧುನಿಕ ಭೂಗೋಳ ಶಾಸ್ತ್ರಕ್ಕೆ ತಮ್ಮದೇ ಆದ ಗಮನಾರ್ಹ ಕೊಡುಗೆ ನೀಡಿದ್ದಾರೆ.
  • ಭಾರತೀಯ ಭೂಗೋಳಶಾಸ್ತ್ರದ ಪಿತಾಮಹ : ಜೇಮ್ಸ್ ರೆನ್ನೆಲ್


ಜೇಮ್ಸ್ ರೆನ್ನೆಲ್ :

ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸರ್ವೇಯರ್ ಆಗಿದ್ದ ಜೇಮ್ಸ್ ರೆನ್ನೆಲ್ ಅವರನ್ನು ಭಾರತೀಯ ಭೂಗೋಳಶಾಸ್ತ್ರದ ಪಿತಾಮಹ ಎನ್ನಲಾಗುತ್ತದೆ. ಕಲ್ಕತ್ತದಿಂದ ಗಂಗಾನದಿಯ ಮೂಲಕ ದೇಶದ ವಿವಿಧ ಭಾಗಗಳಿಗೆ ಸಂಚರಿಸಲು ಅನುಕೂಲವಾಗುವಂತಹ ಜಲಮಾರ್ಗಗಳ ಸಂಶೋಧನೆ, 1764 ರಲ್ಲಿ ಗಂಗಾನದಿ, 1766 ರಲ್ಲಿ ಹಿಮಾಲಯದ ಸಮೀಕ್ಷೆ (ಸರ್ವೇ) ಮಾಡಿದರು. 1767 ರಲ್ಲಿ ಭಾರತದ ಸರ್ವೇಯರ್ ಜನರಲ್ ಆಗಿ ನೇಮಕವಾದರು. 1783 ರಲ್ಲಿ ಭಾರತದ ವಿಸ್ತೃತವಾದ ನಕ್ಷೆಯನ್ನು ನೀಡಿದರು. ಹೀಗಾಗಿ ಇವರನ್ನು ಭಾರತೀಯ ಭೂಗೋಳಶಾಸ್ತತ್ರದ ಪಿತಾಮಹ ಎನ್ನಲಾಗುತ್ತದೆ.



ಪ್ರಾಕೃತಿಕ ಭೂಗೋಳಶಾಸ್ತ್ರ : Physical Geography

ಮಾನವನ ಪರಿಸರದ ಬಗ್ಗೆ ಸಾಮಾನ್ಯ ಅರಿವು ಮೂಡಿಸುವಂತಹ ಭೂಮಿಯ ಕುರಿತಾದ ವಿವಿಧ ಅಂಶಗಳ ವಿವರಣಾತ್ಮಕ ಅಧ್ಯಯನವೇ ಪ್ರಾಕೃತಿಕ ಭೂಗೋಳಶಾಸ್ತ್ರ.


ಪ್ರಾಕೃತಿಕ ಭೂಗೋಳ ಶಾಸ್ತ್ರದ ಅಧ್ಯಯನ ಕ್ಷೇತ್ರಗಳು: 04

1. ಶಿಲಾಗೋಳ – Lithosphere 

2. ಜಲಗೋಳ - Hydrosphere

3. ವಾಯುಗೋಳ - Atmosphere

4. ಜೀವಗೋಳ – Biosphere


1. ಶಿಲಾಗೋಳ: ಶಿಲೆ ಮತ್ತು ಗಟ್ಟಿಯಾದ ಭೂಮಿಯ ಮೇಲಿನ ಚಿಪ್ಪಿಗೆ ಶಿಲಾಗೋಳ ಎನ್ನಲಾಗುತ್ತದೆ.

2. ಜಲಗೋಳ: ಭೂಮಿಯ ಮೇಲ್ಮೈ ಶೇ.71 ಭಾಗ ನೀರಿನಿಂದ ಆವೃತವಾಗಿದೆ. ಹೀಗಾಗಿ ಭೂಖಂಡಗಳನ್ನು ಎಲ್ಲೆಡೆಯೂ ಆವರಿಸಿರುವ ಉದಕ ಸಾಮ್ರಾಜ್ಯವನ್ನು ಜಲಗೋಳ ಎನ್ನಲಾಗುತ್ತದೆ.

3. ವಾಯುಗೋಳ: ಶಿಲಾಗೋಳ ಮತ್ತು ಜಲಗೋಳವನ್ನು ಆವರಿಸಿರುವ ಅನಿಲಗಳ ಹೊರ ಹೊದಿಕೆಯನ್ನೇ ವಾಯುಗೋಳ ಎನ್ನಲಾಗುತ್ತದೆ.

4. ಜೀವಗೋಳ: ಭೂಮಿಯ ಮೇಲಿನ ಜೀವಿಗಳಿಗೆ ವಾಸಸ್ಥಾನವೂ, ಪೋಷಕವೂ ಆದ ಭೂಮಿಯ ಮೇಲ್ಭಾಗ ಮತ್ತು ಅದಕ್ಕೆ ಹೊಂದಿಕೊಂಡಿರುವ ವಲಯವನ್ನೇ ಜೀವಗೋಳ ಎನ್ನಲಾಗುತ್ತದೆ.

ಜೀವಿಗಳು ಜೀವಿಸಲು ಯೋಗ್ಯವಾದ ಭೂಮಿಯ ಮೇಲ್ಭಾಗವನ್ನೇ ಜೀವಗೋಳ ಎನ್ನಬಹುದು.



ಪ್ರಾಕೃತಿಕ ಭೂಗೋಳ ಶಾಸ್ತ್ರದ ಶಾಖೆಗಳು

1. ಖಗೋಳಶಾಸ್ತ್ರ –  Astronomy : ಕೂಪರ್‌ನಿಕಸ್ : ಗೆಲಿಲಿಯೋ ಗೆಲಿಲಿ 

2. ಗಣಿತ ಭೂಗೋಳಶಾಸ್ತ್ರ – Mathematical Geography: ಅನಾಕ್ಸಿಮೆಂಡರ್ & ಥಾಲೆ

3. ಹವಾಮಾನ ಶಾಸ್ತ್ರ – Meteorology: ಲ್ಯೂಕ್ ಹೋವಾರ್ಡ್

4. ವಾಯುಗುಣ ಶಾಸ್ತ್ರ – Climatology: ಟ್ರೆವರ್ಥ್

5. ಭೂಸ್ವರೂಪ ರಚನಾ ಶಾಸ್ತ್ರ – Geomorphology: ಡಬ್ಲ್ಯೂ. ಎಮ್. ಡೇವೀಸ್

6. ಶಿಲಾಶಾಸ್ತ್ರ – Petrology: ಜೇಮ್ಸ್ ಹಟನ್

7. ಮಣ್ಣಿನ ಶಾಸ್ತ್ರ – Pedology: ವಿ. ವಿ. ಡೊಕಾಚೇವ್

8. ಜಲಶಾಸ್ತ್ರ – Hydrology: ರಾಬರ್ಟ್ ಎಲ್ಮರ್ ಹಾರ್ಟನ್

9. ಜೀವ ಭೂಗೋಳಶಾಸ್ತ್ರ – Biogeography: ಎ. ಆರ್. ವ್ಯಾಲೆಸ್


ಪ್ರಾಕೃತಿಕ/ ಭೂಗೋಳಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರುಗಳು

  • ಪ್ರಾಕೃತಿಕ ಭೂಗೋಳಶಾಸ್ತ್ರದ ಪಿತಾಮಹ : ಅಲೆಕ್ಸಾಂಡರ್ ವಾನ್ ಹಂಬೋಲ್ಟ್
  • ಭೂ ಸ್ವರೂಪ ರಚನಾ ಶಾಸ್ತ್ರ (Geomorphology) ಪಿತಾಮಹ : ಡಬ್ಲ್ಯೂ. ಎಮ್. ಡೇವೀಸ್
  • ವಾಯುಗುಣ ಶಾಸ್ತ್ರ (Climatology) ಪಿತಾಮಹ : ಟ್ರೆವರ್ಥ್
  • ಮಾನವ ಭೂಗೋಳಶಾಸ್ತ್ರದ ಪಿತಾಮಹ : ಕಾರ್ಲ್ ರಿಟ್ಟರ್.
  • ಹ್ಯೂಮನಿಸ್ಟಿಕ್ ಜಿಯೋಗ್ರಾಫಿಯ ಪಿತಾಮಹ : ಯಿ-ಫು ತಾವುನ್
  • ಜನಸಂಖ್ಯಾ ಭೂಗೋಳಶಾಸ್ತ್ರದ ಪಿತಾಮಹ : ಟ್ರೆವರ್ಥ್
  • ಸಾಂಸ್ಕೃತಿಕ ಭೂಗೋಳಶಾಸ್ತ್ರದ ಪಿತಾಮಹ : ಕಾರ್ಲ್ ಓ ಸಾವುರ್
  • ರಾಜಕೀಯ ಭೂಗೋಳಶಾಸ್ತ್ರದ ಪಿತಾಮಹ : ಪ್ರೆಡರಿಕ್ ರಾಟ್ಜೆಲ್
  • ಜಿಯೋ ಪಾಲಿಟಿಕ್ಸ್ನ ಪಿತಾಮಹ : ಕಾರ್ಲ್ ಹೌಸ್‌ಹೋಫರ್
  • ಪ್ರಾದೇಶಿಕ ಭೂಗೋಳಶಾಸ್ತ್ರದ ಪಿತಾಮಹ : ರಿಚರ್ಡ್ ಹಾರ್ಟ್ಶೋರ್ನ್
  • ಬಯೋ ಜಿಯೋಗ್ರಫಿಯ ಪಿತಾಮಹ : ಎ. ಆರ್. ವ್ಯಾಲೆಸ್
  • ಮಣ್ಣಿನ ಭೂಗೋಳಶಾಸ್ತ್ರದ ಪಿತಾಮಹ : ವಿ. ವಿ. ಡೊಕಾಚೇವ್
  • ಗಣಿತ ಭೂಗೋಳಶಾಸ್ತ್ರದ ಪಿತಾಮಹ : ಅನಾಕಸಿಮೆಂಡರ್ ಮತ್ತು ಥಾಲೆ



Tags

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area