ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಅಪ್ರೆಂಟಿಸ್ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ : Western Railway Recruitment 2021 : 3591 Apprentice Vacancies : Apply Now

  ಭರ್ಜರಿ ಉದ್ಯೋಗ ಸುದ್ದಿ


ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಅಪ್ರೆಂಟಿಸ್ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ : Western Railway Recruitment 2021 : 3591 Apprentice Vacancies : Apply Now

ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಅಪ್ರೆಂಟಿಸ್ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ : Western Railway Recruitment 2021 : 3591 Apprentice Vacancies : Apply Now




ಸ್ನೇಹಿತರೇ ಈಗಾಗಲೇ ಹೇಳಿದಂತೆ ಮಹಾಮಾರಿ ಕೊರೋನಾ ದೇಶಾದ್ಯಂತ ತನ್ನ ಕರಿ ಛಾಯೆ ಬೀರುತ್ತಲೇ ಇದೆ. ಇದರೊಂದಿಗೆ ಈಗ ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಗಳ ಕಾಟವೂ ಅಧಿಕವಾಗಿ ಜನ ತತ್ತರಿಸಿ ಹೋಗಿದ್ದಾರೆ.


ಇಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕದ ಯುವಕರಿಗೆ ಅದರಲ್ಲೂ ವಿಶೇಷವಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಹೆಚ್ಚಾಗಿ ಸರಕಾರಿ ಉದ್ಯೋಗ/ನೌಕರಿ ದೊರೆಯಲಿ ಎಂಬುದು ಎಲ್ಲರ ಹೆಬ್ಬಯಕೆ. ಈ ನಿಟ್ಟಿನಲ್ಲಿ ನಿಮ್ಮ www.edutubekannada.com ವೆಬ್‌ಸೈಟ್ ಹತ್ತು ಹಲವಾರು ಉದ್ಯೋಗ ನೇಮಕಾತಿ ಅಧಿಸೂಚನೆಗಳ ಮಾಹಿತಿಯನ್ನು ಕಳೆದ ಕೆಲವು ವರ್ಷಗಳಿಂದ ಒದಗಿಸುತ್ತಲೇ ಬಂದಿದೆ.


ಸ್ನೇಹಿತರೇ ಇವತ್ತೂ ಕೂಡ ಒಂದು ಉದ್ಯೋಗದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ದಯವಿಟ್ಟು ನಿಮ್ಮೆಲ್ಲ ನಿರುದ್ಯೋಗಿ ಸ್ನೇಹಿತರೊಂದಿಗೆ ಶೇರ್ ಮಾಡಿ..!! ಇದರಿಂದ ಕೆಲವರಾದರೂ ಉದ್ಯೋಗ ಪಡೆದರೆ ನಮ್ಮ ಶ್ರಮ ಸಾರ್ಥಕ. ನಿಮ್ಮ ಸ್ನೇಹಿತರೊಂದಿಗೆ ಮರೆಯದೇ ಶೇರ್ ಮಾಡ್ತೀರಿ ಅಲ್ವಾ.???


ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಅಪ್ರೆಂಟಿಸ್ ಹುದ್ದೆಗಳು


ಹೌದು ಸ್ನೇಹಿತರೇ, ಭಾರತೀಯ ರೈಲ್ವೇ ಇಡೀ ಜಗತ್ತಿನಲ್ಲಿಯೇ ಅತೀ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಏಕಸ್ವಾಮ್ಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಈಗ ಭಾರತೀಯ ರೈಲ್ವೆಯ ಮುಂಬೈ ಪಶ್ಚಿಮ ರೈಲ್ವೆ ನೇಮಕಾತಿ ಮಂಡಳಿಯು, ವಿವಿಧ ಡಿವಿಷನ್‌ಗಳಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕ ಮಾಡಿಕೊಳ್ಳಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಹೆಚ್ಚಿನ ವಿವರಗಳಿಗಾಗಿ‌ ಮುಂದೆ ಓದಿ..


ಹುದ್ದೆಗಳ ವಿವರ ಹೀಗಿದೆ


  1. ಮುಂಬೈ (ಎಂಎಂಸಿಟಿ) ವಿಭಾಗದಲ್ಲಿರು ಹುದ್ದೆಗಳು = 738
  2. ವಡೋದರ (ಬಿಆರ್‌ಸಿ) ವಿಭಾಗದಲ್ಲಿರು ಹುದ್ದೆಗಳು = 489
  3. ಅಹಮೆದಾಬಾದ್ ವಿಭಾಗದಲ್ಲಿರುವ ಹುದ್ದೆಗಳು = 611
  4. ರತ್ಲಾಮ್ (ಆರ್‌ಟಿಎಂ) ವಿಭಾಗ ದಲ್ಲಿರುವ ಹುದ್ದೆಗಳು = 434
  5. ರಾಜ್‌ಕೋಟ್ (ಆರ್‌ಜೆಟಿ) ವಿಭಾಗದಲ್ಲಿರುವ ಹುದ್ದೆಗಳು = 176
  6. ಭಾವ್ನಗರ್ (ಬಿವಿಪಿ) ವಿಭಾಗದಲ್ಲಿರುವ ಹುದ್ದೆಗಳು =210
  7. ಲೋವರ್ ಪರೇಲ್ (ಪಿಎಲ್) ಡಬ್ಲ್ಯೂ/ಶಾಪ್ ನಲ್ಲಿರುವ ಹುದ್ದೆಗಳು = 396
  8. ಮಹಾಲಕ್ಷ್ಮೀ (ಎಂಎಕ್ಸ್‌) ಡಬ್ಲ್ಯೂ/ಶಾಪ್‌ ನಲ್ಲಿರುವ ಹುದ್ದೆಗಳು = 64
  9. ಬಾವ್ನಗರ್( ಬಿವಿಪಿ) ಡಬ್ಲ್ಯೂ ಶಾಪ್ ನಲ್ಲಿರುವ ಹುದ್ದೆಗಳು = 73
  10. ದಾಹೋದ್ (ಡಿಹೆಚ್‌ಡಿ) ಡಬ್ಲ್ಯೂ/ಶಾಪ್‌ ನಲ್ಲಿರುವ ಹುದ್ದೆಗಳು = 187
  11. ಪ್ರತಾಪ್‌ ನಗರ್ (ಪಿಆರ್‌ಟಿಎನ್‌) ಡಬ್ಲ್ಯೂ/ಶಾಪ್‌, ವಡೋದರಾ ದಲ್ಲಿರುವ ಹುದ್ದೆಗಳು = 45
  12. ಸಬರಮತಿ (ಎಸ್‌ಬಿಐ) ಇಂಜಿನಿಯರ್ ಡಬ್ಲ್ಯೂ/ಶಾಪ್, ಅಹಮದಾಬಾದ್ ನಲ್ಲಿರುವ ಹುದ್ದೆಗಳು = 60
  13. ಸಬರಮತಿ (ಎಸ್‌ಬಿಐ) ಸಿಗ್ನಲ್ ಡಬ್ಲ್ಯೂ/ಶಾಪ್, ಅಹಮದಾಬಾದ್ ನಲ್ಲಿರುವ ಹುದ್ದೆಗಳು = 25
  14. ಹೆಡ್‌ ಕ್ವಾರ್ಟರ್ ಆಫೀಸ್ ನಲ್ಲಿರುವ ಹುದ್ದೆಗಳು = 83


ಒಟ್ಟು ಹುದ್ದೆಗಳು = 3591


ವಿದ್ಯಾರ್ಹತೆ ಏನಿರಬೇಕು :


ಸದರಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಜೊತೆಗೆ ಎನ್‌ಸಿವಿಟಿ / ಎಸ್‌ಸಿವಿಟಿ ಐಟಿಐ (ಸಂಬಂಧಿತ ಟ್ರೇಡ್‌ನಲ್ಲಿ) ಪ್ರಮಾಣಪತ್ರವನ್ನು ಹೊಂದಿರಬೇಕು.


ವಯೋಮಿತಿ ಎಷ್ಟಿರಬೇಕು:


ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 15 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ಮೀರಿರಬಾರದು.


ಪ್ರಮುಖ ದಿನಾಂಕಗಳು ಹೀಗಿವೆ 


ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 25-05-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021



ಅರ್ಜಿ ಶುಲ್ಕ ಎಷ್ಟು?


  • ಸಾಮಾನ್ಯ ಒಬಿಸಿ ಅಭ್ಯರ್ಥಿಗಳು ರೂ.100 ಪಾವತಿಸಬೇಕು.
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ‌ಮಾತ್ರ ಪಾವತಿಸಬೇಕು.


ಆನ್‌ಲೈನ್‌ ಅರ್ಜಿ ಸಲ್ಲಿಸುವ ಲಿಂಕ್‌ ಅನ್ನು ಮೇ 25, 2021 ರಂದು ಅಂದರೆ ನಾಳೆ ವೆಬ್‌ಸೈಟ್‌ https://www.rrc-wr.com/ ನಲ್ಲಿ ನೀಡಲಾಗುತ್ತದೆ. ಕೂಡಲೇ ಅರ್ಜಿ ಸಲ್ಲಿಸಿ..😍


ಹೆಚ್ಚಿನ ಮಾಹಿತಿಗಳಿಗಾಗಿ ನೋಟಿಫಿಕೇಶನ್‌ ನ ಪಿಡಿಎಫ್‌ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ



ಉದ್ಯೋಗ ಕುರಿತಾದ ಸಂಕ್ಷಿಪ್ತ ವಿವರ ಇಲ್ಲಿದೆ


  • ಹುದ್ದೆಯ ಹೆಸರು : ಅಪ್ರೆಂಟಿಸ್ ಟ್ರೇನಿ 
  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 25-05-2021
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021
  • ಉದ್ಯೋಗ ಕ್ಷೇತ್ರ : ರೈಲ್ವೆ ಉದ್ಯೋಗ
  • ವೇತನ ವಿವರ : ಮಾಸಿಕ 8000 to 16000
  • ವಿದ್ಯಾರ್ಹತೆ : ಐಟಿಐ
  • ನೇಮಕಾತಿ ಸಂಸ್ಥೆ : ಪಶ್ಚಿಮ ರೈಲ್ವೆ
  • ವೆಬ್‌ಸೈಟ್‌ ವಿಳಾಸ : https://www.rrc-wr.com/

ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಇದರಿಂದ ಕೆಲವರಾದರೂ ಉದ್ಯೋಗ ಪಡೆದರೆ ನಮ್ಮ ಶ್ರಮ ಸಾರ್ಥಕ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area