ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

20 May 2021 Current Affairs || Daily Current Affairs 2021 || 20-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

   

20-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು












ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ 20 ಮೇ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣಾತ್ಮಕ ವಿವರಣೆ ಇಲ್ಲಿದೆ.




20 ಮೇ 2021 ರ ವಿಸ್ತೃತ ಹಾಗೂ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು

20 ಮೇ‌ 2021 ಸಂಪೂರ್ಣ, ಸಮಗ್ರ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು ಕನ್ನಡದಲ್ಲಿ.


ಮೇ 20 ವಿಶ್ವ ಜೇನುನೊಣಗಳ ದಿನ

ಮೇ 20 ವಿಶ್ವ ಜೇನುನೊಣಗಳ ದಿನ



  • ವಿಶ್ವ ಜೇನುನೊಣಗಳ ದಿನವನ್ನು ಪ್ರತಿವರ್ಷ ಮೇ 20ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ.
  • ಈ ದಿನದಂದು ಜೇನುಸಾಕಣೆಯ ಪ್ರವರ್ತಕ ಎಂದೇ ಖ್ಯಾತರಾಗಿದ್ದ ಸ್ಲೊವೇನಿಯಾ ದೇಶದ ಆಂಟಾನ್ ಜಾನ್ಸಾ 1734 ರಲ್ಲಿ ಜನಿಸಿದರು.
  • 18ನೇ ಶತಮಾನದಲ್ಲಿ ಸ್ಲೊವೆನಿಯಾದಲ್ಲಿ ಆಧುನಿಕ ಜೇನುಸಾಕಣೆಯ ತಂತ್ರಗಳನ್ನು ಪ್ರವರ್ತಿಸಿದ ಆಂಟನ್ ಜಾನ್ಸಾ ಸ್ಮರಣೆಯಲ್ಲಿ ದಿನದಂದೇ ವಿಶ್ವ ಜೇನುನೊಣ ದಿನದ ಆಚರಣೆಯನ್ನು ಮಾಡಲಾಗುತ್ತದೆ.

ದಿನಾಚರಣೆಯ ಉದ್ದೇಶ :


ಪರಾಗಸ್ಪರ್ಶಕ ಕೀಟಗಳ ಪ್ರಾಮುಖ್ಯತೆಯ ಅರಿವು ಮೂಡಿಸಲು, ಹಾಗೂ ಅವುಗಳು ಎದುರಿಸುತ್ತಿರುವ ಅಪಾಯಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವುಗಳ ಕೊಡುಗೆಯನ್ನು ಸ್ಮರಿಸಲು, ವಿಶ್ವಸಂಸ್ಥೆಯು ವಿಶ್ವ ಜೇನು ನೊಣಗಳ ದಿನವನ್ನು ಆಚರಿಸಲು ಪ್ರಾರಂಭಿಸಿದೆ.

ಇತಿಹಾಸ : 


ಮೇ‌ 20 ರಂದು ವಿಶ್ವ ಜೇನುನೊಣ ದಿನವೆಂದು ಡಿಸೆಂಬರ್ 2017 ರಲ್ಲಿ ಘೋಷಿಸುವ ಸ್ಲೊವೇನಿಯಾದ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಂಗೀಕಾರ ಮಾಡಿದವು. ನಿರ್ದಿಷ್ಟ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಲ್ಲದೆ ಜೇನುನೊಣಗಳ ಸಂರಕ್ಷಣೆಯ ಮಹತ್ವ ಮತ್ತು ಮನುಕುಲಕ್ಕೆ ಅವುಗಳ ಮಹತ್ವವನ್ನು ತಿಳಿಸಿತು.  ಮೊದಲ ವಿಶ್ವ ಜೇನುನೊಣ ದಿನಾಚರಣೆಯನ್ನು 2018ರಲ್ಲಿ ಆಚರಿಸಲಾಯಿತು.

ವಿಶ್ವ ಜೇನುನೊಣ ದಿನಾಚರಣೆ 2021ರ ಥೀಮ್ : "Bee engaged: Build Back Better for Bees".

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ


  • ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾ ನಿರ್ದೇಶಕರು : ಕ್ಯೂ ಯು ಡೊಂಗ್ಯೂ
  • ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿ : ಇಟಲಿಯ ರೋಮ್ ನಲ್ಲಿದೆ
  • ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯಾದ ದಿನಾಂಕ : 16 ಅಕ್ಟೋಬರ್ 1945


ಮೇ-20 : ವಿಶ್ವ ಮಾಪನಶಾಸ್ತ್ರ ದಿನ

May-20 : World Metrology Day  2021 




ಮೇ 20 ವಿಶ್ವ ಮಾಪನಶಾಸ್ತ್ರ ದಿನ


ಮೇ 20 1825 ರಂದು ಪ್ಯಾರಿಸ್ನಲ್ಲಿ ನಡೆದ ಮೆಟ್ರಿಕ್ ಸಮಾವೇಶದ ಸ್ಮರಣೆಯಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಾಪನ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಸಹಕಾರ ಮತ್ತು ಪರಸ್ಪರ ಕ್ರಿಯೆಗೆ ಪ್ರಸ್ತುತ ಸ್ಥಾಪಿಸಲಾದ ಚೌಕಟ್ಟು ವಾಣಿಜ್ಯ ಚಟುವಟಿಕೆಗಳು, ಉದ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿ ಸ್ವಾಧೀನಪಡಿಸಿಕೊಂಡ ಜ್ಞಾನವನ್ನು ಯಶಸ್ವಿಯಾಗಿ ಅನ್ವಯಿಸಲು ಈ ದಿನಾಚರಣೆಯ ಅನುಕೂಲಮಾಡಿಕೊಡುತ್ತದೆ. ಸಾಂಪ್ರದಾಯಿಕವಾಗಿ, ಭೌತಿಕ ವಿದ್ಯಮಾನಗಳ ನಿಖರ ಅಲಕತೆಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಮಾಪನ ಶಾಸ್ತ್ರಜ್ಞರು ಮಾಪನಶಾಸ್ತ್ರ ದಿನವನ್ನು ಆಚರಿಸುತ್ತಾರೆ.

ಮಾಪನ ಶಾಸ್ತ್ರ ಎಂದರೇನು


ಮಾಪನಶಾಸ್ತ್ರ ಎಂದರೆ ಅಳತೆಗಳ ವಿಜ್ಞಾನ ಎಂದರ್ಥ. ಈ ಶಾಸ್ತ್ರವು ಪ್ರಾಚೀನ ಕಾಲದಿಂದಲೂ ಹಂತಹಂತವಾಗಿ ಬೆಳೆದುಕೊಂಡು ಬಂದಿದೆ ಆಧುನಿಕ ಕಾಲಕ್ಕೆ ಬಂದರೆ ಕ್ರಾಂತಿಯ ಸಂದರ್ಭದ ರಾಜಕೀಯ ಕಾರಣಗಳಲ್ಲಿ ಮಾಪನಗಳ ವೈಜ್ಞಾನಿಕ ಅಧ್ಯಯನ ಹಾಗೂ ದಾಖಲೀಕರಣದ ಮೂಲವನ್ನು ಹುಡುಕಬಹುದಾಗಿದೆ.

'ಲೇ ಗ್ರಾಂಡ್ ಕೆ' ಮಾದರಿ :


  • 1ಕೆಜಿ ಎಂದರೆ ಎಷ್ಟು ಎಂಬುದನ್ನು ಮಾಪನ ಮಾಡುವುದಕ್ಕೆ 18 89 ರಿಂದ ಒಂದೇ ವ್ಯವಸ್ಥೆ ಬಳಸಲಾಗುತ್ತಿದೆ. ಅದನ್ನು 'ಲೇ ಗ್ರ್ಯಾಂಡ್ ಕೆ' ಎಂದು ಕರೆಯಲಾಗುತ್ತದೆ.
  • ಶೇಕಡ 90ರಷ್ಟು ಪ್ಲಾಟಿನಂ ಹಾಗೂ ಶೇಕಡಾ 10ರಷ್ಟು ಇರಿಡಿಯಮ್ ಅನ್ನುವ ಮೂರು ಸುತ್ತಿನ ಗಾಜಿನ ಕವಚದಲ್ಲಿ ಸಂರಕ್ಷಿಸಿ ಅದನ್ನೇ ಮಾಪನವನ್ನಾಗಿ ಪರಿಗಣಿಸಲಾಗುತ್ತಿದೆ.
  • ಇದರ ಪ್ರಮುಖ ಮಾದರಿ ಫ್ರಾನ್ಸ್ನ ಅಂತರಾಷ್ಟ್ರೀಯ ತೂಕ ಮತ್ತು ಅಳತೆ ಸಂಸ್ಥೆ ಯಲ್ಲಿದೆ.

ಮಾಪನ ಶಾಸ್ತ್ರವನ್ನು ಇಂಗ್ಲೀಷಿನಲ್ಲಿ  Metrology ಎನ್ನಲಾಗುತ್ತದೆ‌.

2021 ರ ವಿಶ್ವ ಮಾಪನಶಾಸ್ತ್ರ ದಿನದ ಥೀಮ್ : "Measurement for Health" (ಆರೋಗ್ಯಕ್ಕಾಗಿ ಅಳತೆ)

ಪ್ರಮುಖ ಅಂತಾರಾಷ್ಟ್ರೀಯ ಏಕಮಾನಗಳು


1) ವಿದ್ಯುತ್ ಪ್ರವಾಹ (I) = ಅಂಪಿಯರ್
2) ವಿದ್ಯತ್ ರೋಧ (R) = ಒಮ್
3) ವಿದ್ಯುತ್ ಸಾಮರ್ಥ್ಯ = ವ್ಯಾಟ್ (W)
4) ವಿದ್ಯುಚ್ಛಕ್ತಿ (E) = ಜೂಲ್ (J)
5) ವಿದ್ಯುದ್ದಾವೇಶ (Q) = ಕೋಲಮ್
6) ವಿಭವಾಂತರ = ವೋಲ್ಟ್ (V)
7) ಬಲ = ನ್ಯೂಟನ್ (N)
8) ಶಾಖಶಕ್ತಿ = ಜೂಲ್ (J)
9) ಕೆಲಸ (Work) = ಜೂಲ್ (J)
10) ಉಷ್ಣ = ಜೂಲ್


ಪ್ರಮುಖ ಅಳತೆಯ ಸಾಧನಗಳು ಮತ್ತು ಅವುಗಳ ಉಪಯೋಗ


  1. ದಿಕ್ಸೂಚಿ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ. 
  2.  ರೇಡಾರ :- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
  3. ಮೈಕ್ರೊಫೋನ್:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
  4. ಮೆಘಾಪೋನ್-:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
  5. ಟೆಲಿಫೋನ್:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ. 
  6. ಲ್ಯಾಕ್ಟೋಮೀಟರ್:-ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ. 
  7. ಓಡೋಮೀಟರ್:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ. 
  8. ಹೈಗ್ರೋಮೀಟರ್:-ತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
  9.  ಹೈಡ್ರೋಮೀಟರ್:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ. 
  10. ಹೈಡ್ರೋಫೋನ್:-ನಿರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
  11.  ಹೈಡ್ರೋಸ್ಕೋಪ್ :-ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ 
  12.  ಥಮೋ೯ಮೀಟರ್ :-ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.
  13.  ಅಲ್ಟಿಮೀಟರ್ :- ಎತ್ತರ ಅಳೆಯಲು ಬಳಸುತ್ತಾರೆ. 
  14.  ಎಲೆಕ್ಟ್ರೋಮೀಟರ್ :-ವಿದ್ಯುತ್ ಅಳೆಯಲು ಬಳಸುತ್ತಾರೆ.
  15. ಪ್ಯಾದೋಮೀಟರ್ :- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
  16. ಗ್ಯಾಲ್ವನೋಮೀಟರ್ :-ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
  17.  ವೋಲ್ಟ್ ಮೀಟರ್ :- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು  ಬಳಸುತ್ತಾರೆ.
  18. ಥಮೋ೯ ಸ್ಟ್ಯಾಟ್ :-ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು 
  19. ಮ್ಯಾನೋಮೀಟರ್ :- ಅನಿಲ ಒತ್ತಡ ಅಳೆಯಲು 
  20. ರಿಫ್ರ್ಯಾಕ್ಟೋಮೀಟರ್ :- ವಕ್ರೀಭವನ ಸುಚಾಂಕ ಅಳೆಯಲು
  21. ಸಿಸ್ಮೋಗ್ರಾಫ್ :- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು 
  22. ಫೋಟೋಮೀಟರ್ :- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು 
  23. ಪೈರೋಮೀಟರ್ :- ಅತೀ ಹೆಚ್ಚಿನ ಉಷ್ಣತೆ ಅಳೆಯಲು 
  24. ರೈನಗೆಜ್ :- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .
  25. ಸ್ಪೀಡೋಮೀಟರ್ :- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು 
  26. ಇಲೆಕ್ಟ್ರೋಎನಸೆಫಲೋಗ್ರಾಫಿ :- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
  27.  ಸ್ಪಿಗ್ಮೋಮ್ಯಾನೋಮೀಟರ್ :- ರಕ್ತದೊತ್ತಡ ಅಳೆಯಲು ಬಳಸುತ್ತಾರೆ. 
  28. ಸ್ಪೆಕ್ಟ್ರೋಮೀಟರ್ - ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
  29. ಅಮ್ಮೀಟರ್ :- ವಿದ್ಯುತ್ ಅಳೆಯಲು ಬಳಸುತ್ತಾರೆ. . ಆಡಿಯೋಮೀಟರ್ :- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ. 
  30. ಅನಿಯೋಮೀಟರ್ :- ಗಾಳಿಯ ವೇಗವನ್ನು ಅಳೆಯಲು 
  31.  ಸ್ಪೇಥೋಸ್ಕೋಪ್ :- ಹೃದಯ ಬಡಿತ ಆಲಿಸಲು 
  32. ಬ್ಯಾರೋಮೀಟರ್ :- ವಾತಾವರಣದ ಒತ್ತಡ ಅಳೆಯಲು 
  33. ಡೈನಮೋ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
  34.  ಎಲೆಕ್ಟ್ರೋಕಾಡಿ೯ಯೋಗ್ರಾಫಿ :- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು 
  35. ಬೈನಾಕ್ಯೂಲರ್ :- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
  36.  ಕಲರಿ ಮೀಟರ್ :- ಬಣ್ಣದ ತೀವ್ರತೆ ತಿಳಿಯಲು ಬಳಸುವರು.
  37.  ಸಿನೆಮ್ಯಾಟೋಗ್ರಾಫ್ :- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
  38. ಕಾಡಿ೯ಯೋಗ್ರಫಿ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು
  39. ಕ್ರೋನೋಮೀಟರ್ :- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು  
  40. ಕ್ಯಾಲಿಪರ್ :- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
  41. ಸೋನರ್ :- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು 
  42. ಉಷ್ಣಯಂತ್ರ :- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು 
  43.  ರೋಹಿತದಶ೯ಕ :- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ 
  44. ಲೇಸರ್ :- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ 
  45. ದ್ಯುತಿಕೋಶ :- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ 
  46. ಸೌರಕೋಶ :- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ 
  47. ಶುಷ್ಕಕೋಶ :- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ 
  48. ಸೆಂಟ್ರಿಪ್ಯೂಜ್ :- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ 
  49. ಅಸಿಲೇಟರ್ :- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
  50. ಎ.ಸಿ.ಡೈನಮೋ :- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  51. ಡಿ.ಸಿ. ಡೈನಮೋ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  52. ಪೆರಿಸ್ಕೋಪ್ :- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು 

ಇವುಗಳನ್ನೂ ಓದಿ


ಪ್ರಚಲಿತ ವಿದ್ಯಮಾನಗಳು : 18 ಮೇ 2021 

ಪ್ರಚಲಿತ ವಿದ್ಯಮಾನಗಳು : 17 ಮೇ 2021 

ಪ್ರಚಲಿತ ವಿದ್ಯಮಾನಗಳು : 16 ಮೇ 2021 

ಪ್ರಚಲಿತ ವಿದ್ಯಮಾನಗಳು : 15 ಮೇ 2021 





ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ Health & Wellness Center ಸ್ಥಾಪಿಸುವಲ್ಲಿ ಕರ್ನಾಟಕ ನಂ. 01


ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ Health & Wellness Center ಸ್ಥಾಪಿಸುವಲ್ಲಿ ಕರ್ನಾಟಕ ನಂ. 01



  • ವರ್ಷದ ಯೋಜನೆಯ 2020 21 ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ  ರಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅತಿ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
  • ಕೇಂದ್ರ ಸರಕಾರ ಒಟ್ಟು 4,653 HWC ಕೇಂದ್ರಗಳ ನಿರ್ಮಾಣದ ಗುರಿ ಹೊಂದಿದ್ದರೆ ಕರ್ನಾಟಕ ಸರಕಾರವು ರಾಜ್ಯಾದ್ಯಂತ 5,831 ಕೇಂದ್ರಗಳನ್ನು ಸ್ಥಾಪಿಸಿದೆ (ಗುರಿಗಿಂತ 125% ಹೆಚ್ಚಳದ ಸಾಧನೆ).

ಆಯುಷ್ಮಾನ್ ಭಾರತ್ ಯೋಜನೆಯ ಕುರಿತು


  • ಆಯುಷ್ಮಾನ್ ಭಾರತ ಯೋಜನೆ ಯನ್ನು 2018 ರಲ್ಲಿ ಎರಡು ಪ್ರಮುಖ ಆಧಾರಗಳಾದ HWC ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ನೊಂದಿಗೆ ಆರಂಭಿಸಲಾಗಿದೆ.
  • ಕೇಂದ್ರ ಸರಕಾರವು ಡಿಸೆಂಬರ್ 2022 ರ ವೇಳೆಗೆ 1.5 ಲ್ಕಷ ಕಾರ್ಯನಿರ್ವಹಿಸುವ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ರಚಿಸುವ ಗುರಿ ಹೊಂದಿದೆ.
  • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ - ಡಾ. ಹರ್ಷವರ್ಧನ್
  • ಕರ್ನಾಟಕದ ರಾಜ್ಯ ಆರೋಗ್ಯ ಸಚಿವ - ಡಾ. ಕೆ. ಸುಧಾಕರ್

ಕರ್ನಾಟಕದ ಕುರಿತು ಹೆಚ್ಚಿನ ಮಾಹಿತಿ


  • ರಾಜಧಾನಿ - ಬೆಂಗಳೂರು
  • ಮುಖ್ಯಮಂತ್ರಿ - ಬಿ. ಎಸ್. ಯಡಿಯೂರಪ್ಪ
  • ರಾಜ್ಯಪಾಲ - ವಜುಭಾಯ್ ವಾಲಾ
  • ಗೃಹ ಮಂತ್ರಿ - ಬಸವರಾಜ ಬೊಮ್ಮಾಯಿ

ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ಜಾರ್ಖಂಡ್ ಅಗ್ರಸ್ಥಾನ

ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ಜಾರ್ಖಂಡ್ ಅಗ್ರಸ್ಥಾನ


  • ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದ ಪ್ರಗತಿಯ ಆಧಾರದ ಮೇಲೆ ಭಾರತದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರ್ಖಂಡ್ ಮೊದಲ ಸ್ಥಾನದಲ್ಲಿ.
  • ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಆಧಾರದ ಮೇಲೆ ಜಾರ್ಖಂಡ್ ಮೊದಲ ಸ್ಥಾನದಲ್ಲಿದ್ದರೆ ರಾಜಸ್ಥಾನ ಶ್ರೇಯಾಂಕದ ಎರಡನೆಯ ಸ್ಥಾನದಲ್ಲಿದೆ.
  • ರಾಜಸ್ಥಾನವು ಈ ಹಿಂದೆ 29 ಶ್ರೇಯಾಂಕ ಹೊಂದಿದ್ದು ಈಗ 27ನೇ ಶ್ರೇಯಾಂಕವನ್ನು ಹೊಂದಿದೆ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಜಾರಿಗೆ ತಂದಿದ್ದರಿಂದ ಈ ಸ್ಥಾನಕ್ಕೆ ಬಂದಿದೆ.

ಮಿಷನ್ ಸ್ಮಾರ್ಟ್ ಸಿಟಿ :


  • 2015 ರಲ್ಲಿ ಜಾರಿಗೆ ಬಂದಿದೆ. ಒಟ್ಟು ಹೂಡಿಕೆ 48.000 ಕೋಟಿ ರೂ.
  • ಸರಕಾರವು 2019 ಮತ್ತು 2023ರ ನಡುವೆ ಸುಮಾರು 100 ನಗರಗಳನ್ನು ಅಭಿವೃದ್ಧಿಪಡಿಸಲು ಆಯ್ದುಕೊಂಡಿದೆ.
  • ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕುರಿತು ಹೆಚ್ಚಿನ ಮಾಹಿತಿ
  • ರಾಜ್ಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವ  : ಹರ್ದಿಪ್ ಸಿಂಗ್ ಪುರಿ



ಟೆಕ್ನಾಲಜಿ ಅಕಾಡೆಮಿ ಫಿನ್ಲ್ಯಾಂಡ್ ನೀಡುವ "ದಿ ಮಿಲ್ಲೇನಿಯಮ್ ಟೆಕ್ನಾಲಜಿ ಪ್ರೈಜ್ 2020" ಪ್ರಶಸ್ತಿ ಪ್ರಕಟ


ಟೆಕ್ನಾಲಜಿ ಅಕಾಡೆಮಿ ಫಿನ್ಲ್ಯಾಂಡ್ ನೀಡುವ "ದಿ ಮಿಲ್ಲೇನಿಯಮ್ ಟೆಕ್ನಾಲಜಿ ಪ್ರೈಜ್ 2020" ಪ್ರಶಸ್ತಿ ಪ್ರಕಟ



  • ಕೇಂದ್ರಿಯ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರಜ್ಞ ರಾದ ಪ್ರೊಫೆಸರ್ ಶಂಕರ್ ಬಾಲಸುಬ್ರಮಣಿಯನ್ ಮತ್ತು ಪ್ರೊಫೆಸರ್ ಡೇವಿಡ್ ಕ್ಲೆನರ್ಮನ್ ಅವರು "ಡಿಎನ್ಎ ಅನುಕ್ರಮ ತಂತ್ರಗಳ ಅಭಿವೃದ್ಧಿಗಾಗಿ ಅಂದರೆ Next Generation DNA (NGS) ಗಾಗಿ 2020 ನೇ ಸಾಲಿನ ಟೆಕ್ನಾಲಜಿ ಅಕ್ಯಾಡೆಮಿ ಫಿನ್ಲ್ಯಾಂಡ್ ಪ್ರಶಸ್ತಿ ಪಡೆದಿದ್ದಾರೆ.
  • ಶಂಕರ್ ಬಾಲಸುಬ್ರಮಣಿಯನ್ ಮತ್ತು ಡೇವಿಡ್ ಕ್ಲೆನರ್ಮನ್ ಜೊತೆಯಾಗಿ ಸೊಲೆಕ್ಸಾ-ಇಲ್ಯುಮಿನಾ ನೆಕ್ಸ್ಟ್ ಜನರೇಶನ್ ಡಿಎನ್ಎ ಸೀಕ್ವೆನ್ಸಿಂಗ್ (ಎನ್ ಜಿ ಎಸ್) ಸಂಶೋಧನೆಗಾಗಿ ಪ್ರಶಸ್ತಿ ಲಭಿಸಿದೆ.
  • ಫಿನ್ಲ್ಯಾಂಡ್ ನ ಅಧ್ಯಕ್ಷರಾದ ಸೌಲಿ ನಿನಿಸ್ಟೋ ವರ್ಚುವಲ್ ಆಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಟೆಕ್ನಾಲಜಿ ಅಕ್ಯಾಡೆಮಿ ಫಿನ್ಲೆಂಡ್ ಕುರಿತು ಹೆಚ್ಚಿನ ಮಾಹಿತಿ


  • ಸಿಇಒ : ಮಾರ್ಕು ಎಲ್ಲಿಲ್ಲೆ
  • ಪ್ರಧಾನ ಕಚೇರಿ - ಎಸ್ಪೂ, ಫಿನ್ಲೆಂಡ್‌

ವಿಶ್ವದ ನಂ. 01 ಶ್ರೀಮಂತ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್





  • ಬ್ಲೂಮ್ಸ್ ಬರ್ಗ್ ಬಿಲೇನಿಯರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ ಮೊದಲ ಶ್ರೀಮಂತ ಪಟ್ಟ ಬರ್ನಾರ್ಡ್ ಅರ್ನಾಲ್ಟ್ ಪಡೆದು, ಮೊದಲ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿದ್ದಾರೆ.
  • 2.2 ಶೇರ್ ಗಳ ಇಳಿತದಿಂದಾಗಿ ಬ್ಲೂಮ್ಸ್ ಬರ್ಗ್ ಬಿಲೇನಿಯರ್ ಪಟ್ಟಿಯಿಂದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ವಿಶ್ವದ ಎರಡನೆಯ ಶ್ರೀಮಂತ ಪಟ್ಟವನ್ನು ಕಳೆದುಕೊಂಡಿದ್ದಾರೆ.
  • 2020 ರಲ್ಲಿ ಟೆಸ್ಲಾದ ಶೇರುಗಳು 750 ಶೇ. ದಷ್ಟು ಹೆಚ್ಚಾದ ನಂತರ ಎಲಾನ್ ಮಸ್ಕ್ ಜನವರಿ ತಿಂಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಭಾಜರಾಗಿದ್ದರು.




ಅನೇರಿಕದ ರಾಷ್ಟ್ರೀಯ ವಿಜ್ಞಾನ ಅಕ್ಯಾಡೆಮಿಗೆ ಭಾರತೀಯ ಮೂಲದ ರೋಗನಿರೋಧಕ ತಜ್ಞ ಶಂಕರ್ ಘೋಷ್ ಆಯ್ಕೆ





  • ಅಮೇರಿಕದ ರಾಷ್ಟ್ರೀಯ ವಿಜ್ಞಾನ ಅಕ್ಯಾಡೆಮಿಗೆ ಭಾರತೀಯ ಮೂಲದ ಶಂಕರ್ ಘೋಷ್ ಆಯ್ಕೆಯಾಗಿದ್ದಾರೆ.
  • ಮೂಲ ಸಂಶೋಧನೆಯಲ್ಲಿನ ವಿಶಿಷ್ಟ ಹಾಗೂ ನಿರಂತರ ಸಾಧನೆಗಾಗಿ ಅವರನ್ನು ಆಯ್ಕೆ‌ಮಾಡಲಾಗಿದೆ
  • ಹೊಸದಾಗಿ ಆಯ್ಕೆಯಾದ 120 ಸದಸ್ಯರಲ್ಲಿ ಭಾರತ ಮೂಲದ ರೋಗನಿರೋಧಕ ತಜ್ಞರೊಬ್ಬರು ಆಯ್ಕೆಯಾಗಿದ್ದು ಭಾರತದ ಹೆಮ್ಮೆ.
  • NAS (National Science Academy) 1863 ರಲ್ಲಿ ಅಬ್ರಹಾಂ ಲಿಂಕನ್ ರ ಸಹಿಯೊಂದಿಗೆ ಆರಂಭವಾದ ಖಾಸಗಿ, ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ.

NAS ಕುರಿತು ಹೆಚ್ಚಿನ ಮಾಹಿತಿ


  • ಅಧ್ಯಕ್ಷ : ಮಾರ್ಸಿಯಾ ಮೆಕ್ನಟ್
  • ಪ್ರಧಾನ ಕಚೇರಿ : ವಾಷಿಂಗ್ಟನ್ ಡಿಸಿ, ಅಮೇರಿಕ


ನಿಧನ ಸುದ್ದಿಗಳು


ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಚಮನ್ ಲಾಲ್ ಗುಪ್ತಾ ನಿಧನ





ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾದ ಚಮನ್ ಲಾಲ್ ಗುಪ್ತ ಅವರು ಜಮ್ಮು ಕಾಶ್ಮೀರದಲ್ಲಿರುವ ಗಾಂಧಿನಗರದ ತಮ್ಮ ನಿವಾಸದಲ್ಲಿ ನಿಧನರಾದರು.

ಜಮನ್ ಲಾಲ್ ಗುಪ್ತಾ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ


  • ಜನನ : 13 ಏಪ್ರಿಲ್ 1934
  • ಸ್ಥಳ : ಕಲೀತ್, ಜಮ್ಮು ಕಾಶ್ಮೀರ.
  • 1972 ರಿಂದ 2014 ರ ವರೆಗೆ ಜಮ್ಮು ಕಾಶ್ಮೀರದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ.
  • ಉಧಂಪುರ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ.
  • 1999 ರಿಂದ 2001 ರವರೆಗೆ ಕೇಂದ್ರ ವಿಮಾನಯಾನ ಸಚಿವರಾಗಿ ಸೇವೆ.
  • 2002 ರಿಂದ 2004 ರ ವರೆಗೆ ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ.

ಕೃತಿಗಳು :

1) Sansad Mein Jammu Kashmir
2) Sansad mein dedh varsh
3) Mere Prayaas..






ಖ್ಯಾತ ತಮಿಳು ಬರಹಗಾರ, ಜಾನಪದ ಲೇಖಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಿ. ರಾಜನಾರಾಯಣನ್ ನಿಧನ




  • ಮೇ 17, 2021 ರಂದು ಖ್ಯಾತ ತಮಿಳು ಬರಹಗಾರ, ಜಾನಪದ ಲೇಖಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಿ. ರಾಜನಾರಾಯಣನ್ ನಿಧನಾದರು.
  • ಇವರ ಪೂರ್ಣ ಹೆಸರು : ಶ್ರೀ ಕೃಷ್ಣ ರಾಜ ನಾರಾಯಣ ಪೆರುಮಾಳ್ ರಾನಾನುಜಮ್ ನಾಯ್ಕರ್
  • ತಮ್ಮ 98 ವಯಸ್ಸಿನಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನಿಧನರಾದರು.
  • ಜನನ : 16 ಸೆಪ್ಟೆಂಬರ್ 1923, ತಮಿಳುನಾಡಿನ ಕೋವಿಲ್ಪಟ್ಟಿಯಲ್ಲಿ
  • 1991 ರಲ್ಲಿ ತಮ್ಮ ಗೋಪಲ್ಲಾ ಪುರಾತು ಮಕ್ಕಲ್ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು.
  • ಕರಿಸಲ್ ಸಾಹಿತ್ಯದ ಪ್ರವರ್ತಕರೆಂದೇ ಗುರುತಿಸಲ್ಪಟ್ಟ ಇವರನ್ನು ತಮಿಲಕಿನ ಮೊದಲ ಅಕ್ಷರಗಳಾದ "ಕಿರಾ" ಎಂದೇ ಪ್ರಸಿದ್ಧರಾಗಿದ್ದಾರೆ‌.
  • ಪಾಂಡಿಚೇರಿ ವಿವಿಯ ಜಾನಪದ ಕಥಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ‌.




Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area