ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಭಾರತೀಯ ಸೇನೆಯಲ್ಲಿವೆ 191 ಆಫೀಸರ್ ಹುದ್ದೆಗಳು Indian Army Recruitment for 191 SSC Officers

  ಭಾರತೀಯ ಸೇನೆಯಲ್ಲಿವೆ 191 ಆಫೀಸರ್ ಹುದ್ದೆಗಳು


ಭಾರತೀಯ ಸೇನೆಯಲ್ಲಿವೆ 191 ಆಫೀಸರ್ ಹುದ್ದೆಗಳು Indian Army Recruitment for 191 SSC Officers



ಉದ್ಯೋಗ ಹುಡುಕಾಟದಲ್ಲಿರುವ ಅದರಲ್ಲೂ ವಿಶೇಷವಾಗಿ ಭಾರತೀಯ ಸೇನೆಗೆ ಸೇರಬೇಕೆಂಬ ಬಯಕೆ ಇರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ... ಹೌದು ಭಾರತೀಯ ಸೇನೆಯಲ್ಲಿ ಖಾಲಿಯಿರುವ 191 ಶಾರ್ಟ್‌ ಸರ್ವೀಸ್ ಕಮಿಷನ್‌ ಪುರುಷ ಮತ್ತು ಮಹಿಳಾ ಆಫೀಸರ್ ಪೋಸ್ಟ್‌ಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.


ಅರ್ಹ ಮತ್ತು ಆಸಕ್ತ, ಅವಿವಾಹಿತ ಇಂಜಿನಿಯರಿಂಗ್ ಪದವೀಧರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಅಊಚನೆಯಲ್ಲಿ ತಿಳಿಸಲಾಗಿದೆ.


ಭಾರತೀಯ ಸೇನೆಯ ಅಫೀಶಿಯಲ್‌ ವೆಬ್‌ಸೈಟ್‌ joinindianarmy.nic.in ಗೆ ಭೇಟಿ ನೀಡುವ ಮೂಲಕ ಜೂನ್‌ 23, 2021 ರವರೆಗೆ ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಬಹುದು.



ಪ್ರಮುಖ ದಿನಾಂಕಗಳು


  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-05-2021
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 23-06-2021


ಅರ್ಹತೆಗಳು


  • ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಥವಾ ಪ್ರಸ್ತುತ ಅಂತಿಮ ಸೆಮಿಸ್ಟರ್‌ ಇಂಜಿನಿಯರಿಂಗ್ ಅನ್ನು ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಅಕ್ಟೋಬರ್ 01, 2021 ರಂದು ಬಿಇ ಪದವಿ ಪಾಸ್‌ ಮಾಡಿದ ದಾಖಲೆ ಸಲ್ಲಿಸಬೇಕು.


ವಯೋಮಿತಿ :

  • ಅರ್ಜಿ ಸಲ್ಲಿಸಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 20 ರಿಂದ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
  • ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಎಸ್‌ಎಸ್‌ಸಿ ಆಫೀಸರ್ ಪೋಸ್ಟ್‌ನಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಬಹುದು. 
  • ಒಟ್ಟು 191 ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳನ್ನು ಭಾರತೀಯ ಸೇನೆ ಪ್ರಕಟಿಸಿದ ಅಧಿಸೂಚನೆಯನ್ನು ಗಮನಿಸಿ.


ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್‌ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area