ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿವೆ ವಿವಿಧ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ Dakshina Kannada Milk Producers Union Ltd. Recruitment 2021

  ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿವೆ ವಿವಿಧ ಹುದ್ದೆಗಳು Dakshina Kannada Milk Producers Union Ltd. Recruitment 2021

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿವೆ ವಿವಿಧ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ Dakshina Kannada Milk Producers Union Ltd. Recruitment 2021



ಉದ್ಯೋಗ ಹುಡುಕಾಟದಲ್ಲಿರುವವರಿಗೆ ಭರ್ಜರಿ ಸುದ್ದಿ..!! ಹೌದು ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 29 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಪ್ರಮುಖ ದಿನಾಂಕಗಳು


  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 28-04-2021
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021
  • ಆನ್‌ಲೈನ್‌ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 30-06-2021 ರ ಸಂಜೆ 5-30 ರವರೆಗೆ.


ಹುದ್ದೆಗಳ ವಿವರ ಹೀಗಿದೆ


  • ಸಹಾಯಕ ವ್ಯವಸ್ಥಾಪಕರು / 7
  • ತಾಂತ್ರಿಕ ಅಧಿಕಾರಿ (ಡಿ.ಟಿ) / 4
  • ತಾಂತ್ರಿಕಾಧಿಕಾರಿ (ಪರಿಸರ) / 1
  • ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್)/ 1
  • ಕೆಮಿಸ್ಟ್‌ ದರ್ಜೆ-2 / 12
  • ಲೆಕ್ಕ ಸಹಾಯಕರು ದರ್ಜೆ-2 / 2
  • ಕಿರಿಯ ತಾಂತ್ರಿಕರು (ಇಲೆಕ್ಟ್ರೀಷಿಯನ್) / 6
  • ಕಿರಿಯ ತಾಂತ್ರಿಕರು (ಎಂ.ಆರ್.ಎ.ಸಿ) / 7
  • ವಿಸ್ತರಣಾಧಿಕಾರಿ ದರ್ಜೆ-3 / 8
  • ಡೈರಿ ಸೂಪರ್‌ವೈಸರ್ ದರ್ಜೆ-2 / 5
  • ಆಡಳಿತ ಸಹಾಯಕರು ದರ್ಜೆ-2 / 5
  • ಮಾರುಕಟ್ಟೆ ಸಹಾಯಕರು ದರ್ಜೆ-2 / 5
  • ಕಿರಿಯ ತಾಂತ್ರಿಕರು (ಇಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್) / 6
  • ಕಿರಿಯ ತಾಂತ್ರಿಕರು (ಫಿಟ್ಟರು) / 6
  • ಕಿರಿಯ ತಾಂತ್ರಿಕರು (ವೆಲ್ಡರ್ ) / 2
  • ಕಿರಿಯ ತಾಂತ್ರಿಕರು (ಬಾಯ್ಲರ್) / 3
  • ಒಟ್ಟು‌: 80 ಹುದ್ದೆಗಳು


ಶೈಕ್ಷಣಿಕ ಅರ್ಹತೆ ಏನಿರಬೇಕು?


ಹುದ್ದೆಗಳ ಅನುದಾರ SSLC, PUC, Degree, ITI ವಿದ್ಯಾರ್ಹತೆ ಹೊಂದಿರಬೇಕು. ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ.


ನಿಮಗಿದು ಗೊತ್ತಿರಲಿ :


ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು.

ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಪ್ರತ್ಯೇಕವಾಗಿ ಶುಲ್ಕ ಮತ್ತು ಅರ್ಜಿಯನ್ನು ಸಲ್ಲಿಸಬೇಕು.

ಇ-ಮೇಲ್ ಅಥವಾ ಕೊರಿಯರ್ / ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


ಅರ್ಜಿ ಶುಲ್ಕ ಎಷ್ಟು?


  • ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.500.
  • ಇತರೆ ಅಭ್ಯರ್ಥಿಗಳಿಗೆ ರೂ.800. ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.


ವಯೋಮಿತಿ ಎಷ್ಟಿರಬೇಕು?


ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಆಗಿರಬೇಕು.


ಗರಿಷ್ಠ ವಯೋಮಿತಿ

  • ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ,
  • ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ,
  • ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
  • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವೇತನ ಶ್ರೇಣಿ 


ಮಾಸಿಕ 16000 ದಿಂದ 97000


ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?


ನೇಮಕಾತಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.

  • ಕನ್ನಡ ಭಾಷೆಗೆ 50 ಅಂಕಗಳು,
  • ಸಾಮಾನ್ಯ ಇಂಗ್ಲಿಷ್‌ಗೆ ಸಂಬಂಧಿಸಿದಂತೆ 50 ಅಂಕಗಳು, ಸಾಮಾನ್ಯ ಜ್ಞಾನ ಕುರಿತು 25 ಅಂಕಗಳು,
  • ಸಹಕಾರ ವಿಷಯಗಳಿಗೆ 50 ಅಂಕಗಳು,
  • ಭಾರತ ಸಂವಿಧಾನ ಕುರಿತು 25 ಅಂಕಗಳು,
  • ಸಂಸ್ಥೆಯ ಕಾರ್ಯಕ್ಷೇತ್ರ / ಉದ್ದೇಶ / ಕಾರ್ಯಚಟುವಟಿಕೆಗಳ ಕುರಿತು 25 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
  • ಒಟ್ಟು 200 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.


ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : www.dkmul.com


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area