ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಮೇ-20 : ವಿಶ್ವ ಮಾಪನಶಾಸ್ತ್ರ ದಿನ May-20 : World Metrology Day 2021

ಮೇ-20 : ವಿಶ್ವ ಮಾಪನಶಾಸ್ತ್ರ ದಿನ

May-20 : World Metrology Day  2021 




ಮೇ 20 ವಿಶ್ವ ಮಾಪನಶಾಸ್ತ್ರ ದಿನ


ಮೇ 20 1825 ರಂದು ಪ್ಯಾರಿಸ್ನಲ್ಲಿ ನಡೆದ ಮೆಟ್ರಿಕ್ ಸಮಾವೇಶದ ಸ್ಮರಣೆಯಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಾಪನ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಸಹಕಾರ ಮತ್ತು ಪರಸ್ಪರ ಕ್ರಿಯೆಗೆ ಪ್ರಸ್ತುತ ಸ್ಥಾಪಿಸಲಾದ ಚೌಕಟ್ಟು ವಾಣಿಜ್ಯ ಚಟುವಟಿಕೆಗಳು, ಉದ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿ ಸ್ವಾಧೀನಪಡಿಸಿಕೊಂಡ ಜ್ಞಾನವನ್ನು ಯಶಸ್ವಿಯಾಗಿ ಅನ್ವಯಿಸಲು ಈ ದಿನಾಚರಣೆಯ ಅನುಕೂಲಮಾಡಿಕೊಡುತ್ತದೆ. ಸಾಂಪ್ರದಾಯಿಕವಾಗಿ, ಭೌತಿಕ ವಿದ್ಯಮಾನಗಳ ನಿಖರ ಅಲಕತೆಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಮಾಪನ ಶಾಸ್ತ್ರಜ್ಞರು ಮಾಪನಶಾಸ್ತ್ರ ದಿನವನ್ನು ಆಚರಿಸುತ್ತಾರೆ.

ಮಾಪನ ಶಾಸ್ತ್ರ ಎಂದರೇನು


ಮಾಪನಶಾಸ್ತ್ರ ಎಂದರೆ ಅಳತೆಗಳ ವಿಜ್ಞಾನ ಎಂದರ್ಥ. ಈ ಶಾಸ್ತ್ರವು ಪ್ರಾಚೀನ ಕಾಲದಿಂದಲೂ ಹಂತಹಂತವಾಗಿ ಬೆಳೆದುಕೊಂಡು ಬಂದಿದೆ ಆಧುನಿಕ ಕಾಲಕ್ಕೆ ಬಂದರೆ ಕ್ರಾಂತಿಯ ಸಂದರ್ಭದ ರಾಜಕೀಯ ಕಾರಣಗಳಲ್ಲಿ ಮಾಪನಗಳ ವೈಜ್ಞಾನಿಕ ಅಧ್ಯಯನ ಹಾಗೂ ದಾಖಲೀಕರಣದ ಮೂಲವನ್ನು ಹುಡುಕಬಹುದಾಗಿದೆ.

'ಲೇ ಗ್ರಾಂಡ್ ಕೆ' ಮಾದರಿ :


  • 1ಕೆಜಿ ಎಂದರೆ ಎಷ್ಟು ಎಂಬುದನ್ನು ಮಾಪನ ಮಾಡುವುದಕ್ಕೆ 18 89 ರಿಂದ ಒಂದೇ ವ್ಯವಸ್ಥೆ ಬಳಸಲಾಗುತ್ತಿದೆ. ಅದನ್ನು 'ಲೇ ಗ್ರ್ಯಾಂಡ್ ಕೆ' ಎಂದು ಕರೆಯಲಾಗುತ್ತದೆ.
  • ಶೇಕಡ 90ರಷ್ಟು ಪ್ಲಾಟಿನಂ ಹಾಗೂ ಶೇಕಡಾ 10ರಷ್ಟು ಇರಿಡಿಯಮ್ ಅನ್ನುವ ಮೂರು ಸುತ್ತಿನ ಗಾಜಿನ ಕವಚದಲ್ಲಿ ಸಂರಕ್ಷಿಸಿ ಅದನ್ನೇ ಮಾಪನವನ್ನಾಗಿ ಪರಿಗಣಿಸಲಾಗುತ್ತಿದೆ.
  • ಇದರ ಪ್ರಮುಖ ಮಾದರಿ ಫ್ರಾನ್ಸ್ನ ಅಂತರಾಷ್ಟ್ರೀಯ ತೂಕ ಮತ್ತು ಅಳತೆ ಸಂಸ್ಥೆ ಯಲ್ಲಿದೆ.

ಮಾಪನ ಶಾಸ್ತ್ರವನ್ನು ಇಂಗ್ಲೀಷಿನಲ್ಲಿ  Metrology ಎನ್ನಲಾಗುತ್ತದೆ‌.

2021 ರ ವಿಶ್ವ ಮಾಪನಶಾಸ್ತ್ರ ದಿನದ ಥೀಮ್ : "Measurement for Health" (ಆರೋಗ್ಯಕ್ಕಾಗಿ ಅಳತೆ)

ಪ್ರಮುಖ ಅಂತಾರಾಷ್ಟ್ರೀಯ ಏಕಮಾನಗಳು


1) ವಿದ್ಯುತ್ ಪ್ರವಾಹ (I) = ಅಂಪಿಯರ್
2) ವಿದ್ಯತ್ ರೋಧ (R) = ಒಮ್
3) ವಿದ್ಯುತ್ ಸಾಮರ್ಥ್ಯ = ವ್ಯಾಟ್ (W)
4) ವಿದ್ಯುಚ್ಛಕ್ತಿ (E) = ಜೂಲ್ (J)
5) ವಿದ್ಯುದ್ದಾವೇಶ (Q) = ಕೋಲಮ್
6) ವಿಭವಾಂತರ = ವೋಲ್ಟ್ (V)
7) ಬಲ = ನ್ಯೂಟನ್ (N)
8) ಶಾಖಶಕ್ತಿ = ಜೂಲ್ (J)
9) ಕೆಲಸ (Work) = ಜೂಲ್ (J)
10) ಉಷ್ಣ = ಜೂಲ್


ಪ್ರಮುಖ ಅಳತೆಯ ಸಾಧನಗಳು ಮತ್ತು ಅವುಗಳ ಉಪಯೋಗ


  1. ದಿಕ್ಸೂಚಿ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ. 
  2.  ರೇಡಾರ :- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
  3. ಮೈಕ್ರೊಫೋನ್:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
  4. ಮೆಘಾಪೋನ್-:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
  5. ಟೆಲಿಫೋನ್:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ. 
  6. ಲ್ಯಾಕ್ಟೋಮೀಟರ್:-ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ. 
  7. ಓಡೋಮೀಟರ್:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ. 
  8. ಹೈಗ್ರೋಮೀಟರ್:-ತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
  9.   ಹೈಡ್ರೋಮೀಟರ್:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ. 
  10. ಹೈಡ್ರೋಫೋನ್:-ನಿರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
  11.  ಹೈಡ್ರೋಸ್ಕೋಪ್ :-ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ 
  12.  ಥಮೋ೯ಮೀಟರ್ :-ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.
  13.  ಅಲ್ಟಿಮೀಟರ್ :- ಎತ್ತರ ಅಳೆಯಲು ಬಳಸುತ್ತಾರೆ. 
  14.  ಎಲೆಕ್ಟ್ರೋಮೀಟರ್ :-ವಿದ್ಯುತ್ ಅಳೆಯಲು ಬಳಸುತ್ತಾರೆ.
  15. ಪ್ಯಾದೋಮೀಟರ್ :- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
  16. ಗ್ಯಾಲ್ವನೋಮೀಟರ್ :-ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
  17.  ವೋಲ್ಟ್ ಮೀಟರ್ :- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು  ಬಳಸುತ್ತಾರೆ.
  18. ಥಮೋ೯ ಸ್ಟ್ಯಾಟ್ :-ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು 
  19. ಮ್ಯಾನೋಮೀಟರ್ :- ಅನಿಲ ಒತ್ತಡ ಅಳೆಯಲು 
  20. ರಿಫ್ರ್ಯಾಕ್ಟೋಮೀಟರ್ :- ವಕ್ರೀಭವನ ಸುಚಾಂಕ ಅಳೆಯಲು
  21. ಸಿಸ್ಮೋಗ್ರಾಫ್ :- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು 
  22. ಫೋಟೋಮೀಟರ್ :- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು 
  23. ಪೈರೋಮೀಟರ್ :- ಅತೀ ಹೆಚ್ಚಿನ ಉಷ್ಣತೆ ಅಳೆಯಲು 
  24. ರೈನಗೆಜ್ :- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .
  25. ಸ್ಪೀಡೋಮೀಟರ್ :- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು 
  26. ಇಲೆಕ್ಟ್ರೋಎನಸೆಫಲೋಗ್ರಾಫಿ :- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
  27.  ಸ್ಪಿಗ್ಮೋಮ್ಯಾನೋಮೀಟರ್ :- ರಕ್ತದೊತ್ತಡ ಅಳೆಯಲು ಬಳಸುತ್ತಾರೆ. 
  28. ಸ್ಪೆಕ್ಟ್ರೋಮೀಟರ್ - ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
  29. ಅಮ್ಮೀಟರ್ :- ವಿದ್ಯುತ್ ಅಳೆಯಲು ಬಳಸುತ್ತಾರೆ. . ಆಡಿಯೋಮೀಟರ್ :- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ. 
  30. ಅನಿಯೋಮೀಟರ್ :- ಗಾಳಿಯ ವೇಗವನ್ನು ಅಳೆಯಲು 
  31.  ಸ್ಪೇಥೋಸ್ಕೋಪ್ :- ಹೃದಯ ಬಡಿತ ಆಲಿಸಲು 
  32. ಬ್ಯಾರೋಮೀಟರ್ :- ವಾತಾವರಣದ ಒತ್ತಡ ಅಳೆಯಲು 
  33. ಡೈನಮೋ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
  34.   ಎಲೆಕ್ಟ್ರೋಕಾಡಿ೯ಯೋಗ್ರಾಫಿ :- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು 
  35. ಬೈನಾಕ್ಯೂಲರ್ :- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
  36.  ಕಲರಿ ಮೀಟರ್ :- ಬಣ್ಣದ ತೀವ್ರತೆ ತಿಳಿಯಲು ಬಳಸುವರು.
  37.  ಸಿನೆಮ್ಯಾಟೋಗ್ರಾಫ್ :- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
  38. ಕಾಡಿ೯ಯೋಗ್ರಫಿ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು
  39. ಕ್ರೋನೋಮೀಟರ್ :- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು  
  40. ಕ್ಯಾಲಿಪರ್ :- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
  41. ಸೋನರ್ :- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು 
  42. ಉಷ್ಣಯಂತ್ರ :- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು 
  43.  ರೋಹಿತದಶ೯ಕ :- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ 
  44. ಲೇಸರ್ :- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ 
  45. ದ್ಯುತಿಕೋಶ :- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ 
  46. ಸೌರಕೋಶ :- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ 
  47. ಶುಷ್ಕಕೋಶ :- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ 
  48. ಸೆಂಟ್ರಿಪ್ಯೂಜ್ :- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ 
  49. ಅಸಿಲೇಟರ್ :- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
  50. ಎ.ಸಿ.ಡೈನಮೋ :- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  51. ಡಿ.ಸಿ. ಡೈನಮೋ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  52. ಪೆರಿಸ್ಕೋಪ್ :- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು 




Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area