ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

16 May 2021 Current Affairs || Daily Current Affairs 2021 || 16-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

16-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ 16 ಮೇ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣಾತ್ಮಕ ವಿವರಣೆ ಇಲ್ಲಿದೆ.

16 May 2021 Current Affairs || Daily Current Affairs 2021 || 16-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು







 


ಮೇ 16. ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನ


ಮೇ 16. ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನ



  • ರಾಷ್ಟ್ರೀಯತೆ ಲಿಂಗ ಭಾಷೆ ಅಥವಾ ಧರ್ಮವನ್ನು ಲೆಕ್ಕಿಸದೆ ಸಾಮರಸ್ಯದ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
  • 2017ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಧಿಕೃತವಾಗಿ ಈ ದಿನವನ್ನು 2018 ರಿಂದ ಆಚರಿಸಲಾಗುತ್ತದೆ.
  • ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನದ ಆಚರಣೆ ಎಲ್ಲ ಜನಾಂಗ ಧರ್ಮ ಹಾಗೂ ಪ್ರಾಂತೀಯ ಜನರು ಶಾಂತಿಯನ್ನು ಬಯಸುವುದನ್ನು ಪ್ರತಿನಿಧಿಸುತ್ತದೆ.



ಮೇ. 16 ರಾಷ್ಟ್ರೀಯ ಡೆಂಗಿ‌ ಜಾಗೃತಿ ದಿನ


ಮೇ. 16 ರಾಷ್ಟ್ರೀಯ ಡೆಂಗಿ‌ ಜಾಗೃತಿ ದಿನ



  • ಭಾರತವು ಸದ್ಯ ಕೋವಿಡ್ ನಿಂದ ತತ್ತರಿಸಿದೆ. ದೇಶದ ವೈದ್ಯ ಸಮೂಹ ಮತ್ತು ನಾಗರಿಕರೆಲ್ಲರೂ ಕೊರೋನ ರೋಗದ ಬಗ್ಗೆಯೇ ಚಿಂತಿಸುವುದನ್ನು ಕಾಣುತ್ತಿದ್ದೇವೆ.
  • ಕೋವಿಡ್ ಬರುವುದಕ್ಕೂ ಮೊದಲು ಹಾಗೂ ಇನ್ನೂ ದೇಶದಲ್ಲಿ ಉಳಿದಿರುವ  ಕೆಲವು ಮಾರಕ‌ ಕಾಯಿಲೆಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
  • ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲ ಕಡೆಯೂ ಡೆಂಗಿ ಜ್ವರದ ಹಾವಳಿ ಸಾಮಾನ್ಯವಾಗಿಯೇ ಇರುತ್ತದೆ. 
  • ಡೆಂಗು ಜ್ವರದ ಸಾಮಾನ್ಯ ಲಕ್ಷಣಗಳು : ತಲೆನೋವು, ಮೈಕೈ ನೋವು, ಸುಸ್ತು ಸಾಮಾನ್ಯವಾಗಿ ಕಂಡು ಬರುತ್ತವೆ.
  • ಡೆಂಗಿ ಎಂಬ ವೈರಸ್ ಸೋಂಕಿನಿಂದ ಬರುವ ಈ ಜ್ವರವು 'ಏಡಿಸ್' ಎಂಬ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ.
  • ಡೆಂಗಿ ಜ್ವರಕ್ಕೂ ಲಾಇಕೆ ಲಭ್ಯವಿಲ್ಲದ ಕಾರಣ, ಈ ರೋಗವನ್ನು ತಡೆಯಲು ಪ್ರಯತ್ನಿಸಬೇಕು ಹಾಗೂ ಏಡಿಸ್ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸಬೇಕು.
  • ಪ್ರತಿ ವರ್ಷ ಮೇ. 16 ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರ್ಕಾರ ಇದರ ಆದೇಶದಂತೆ ಭಾರತದಾದ್ಯಂತ 'ರಾಷ್ಟ್ರೀಯ ಡೆಂಗಿ ಜಾಗೃತಿ ದಿನ' ಎಂದು ಆಚರಿಸಿ, ಡೆಂಗಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
  • ಡೆಂಗಿ ಜ್ವರಕ್ಕೆ ಸ್ವಯಂ ಮದ್ದು ಮಾಡದೇ, ವೈದ್ಯರ ಸಲಹೆಯಂತೆ ಔಷಧೋಪಚಾರ ತೆಗೆದುಕೊಳ್ಳಬೇಕು.



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ

ಸೊಳ್ಳೆಗಳಿಂದ ಬರುವ ಪ್ರಮುಖ ರೋಗಗಳು :-

1) ಏಷ್ಯಾದ ಟೈಗರ್ ಸೊಳ್ಳೆ : ಏಡಿಸ್ ಅಲ್ಬೋಪಿಕ್ಟಸ್ (Aedes albopictus) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಿಕಾ ವೈರಸ್ (Zika virus) ಬರುತ್ತದೆ.

2)  ಏಡಿಸ್ ಈಜಿಪ್ತಿ ಸೊಳ್ಳೆ : ಏಡಿಸ್ ಈಜಿಪ್ತಿ (Aedes aegypti) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಡೆಂಘಿ ಜ್ವರ, ಚಿಕನ್ ಗುನ್ಯ, ಹಳದಿ ಜ್ವರಕ್ಕೆ ಕಾರಣವಾಗುತ್ತದೆ.

3) ಅನಾಫಿಲಿಸ್ ಸೊಳ್ಳೆ : ಈ ಸೊಳ್ಳೆಯ ಕಡಿತವು ಮಲೇರಿಯ ರೋಗವನ್ನು ಉಂಟುಮಾಡುತ್ತದೆ‌.

4) ಕ್ಯೂಲೆಕ್ಸ್ ಸೊಳ್ಳೆ : ಕ್ಯೂಲೆಕ್ಸ್ ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಪಾನೀಸ್ ಎನ್ಸೆಫಾಲಿಟಿಸ್ ಎಂಬ ರೋಗ ಬರುತ್ತದೆ.



ಮಂಗಳನ ನೆಲದ ಮೇಲೆ ಚೀನಾದ ನೌಕೆ ಝರೋಂಗ್

ಮಂಗಳನ ನೆಲದ ಮೇಲೆ ಚೀನಾದ ನೌಕೆ ಝರೋಂಗ್




  • ಝರೋಂಗ್ ಚೀನಾದ ಮೊದಲ ಮಂಗಳ‌ಗ್ರಹ ಶೋಧಕ ನೌಕೆಯಾಗಿದೆ.
  • ಮಂಗಳ ಗ್ರಹಕ್ಕೆ ಚೀನಾ ಕಳಿಸಿರುವ ಶೋಧಕ‌ ನೌಕೆ ಶನಿವಾರ ಮಂಗಳ ಗ್ರಹದ ಮೇಲೆ ಇಳಿಯಿತು.
  • ಅಲ್ಲದೇ ಈ ನೌಕೆ ಝರೋಂಗ್ ರೋವರ್ ನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ.
  • ಝರೋಂಗ್ ಎಂದರೆ ಚೀನಾದ ಅಗ್ನಿದೇವತೆ.
  • ಮಂಗಳ ಗ್ರಹದ ಉಟೋಪಿಯನ್ ಪ್ಲಾನಿಟಿಯಾ ಎಂಬ ಉತ್ತರ ಭಾಗದ ಜ್ವಾಲಾಮುಖಿ ಪ್ರದೇಶದಲ್ಲಿ ರೋವರ್ ಇಳಿದಿದೆ.
  • ಅಮೇರಿಕ, ರಷ್ಯಾದ ನಂತರ ಮಂಗಳ ಗ್ರಹದ ಮೇಲೆ ರೋವರ್ ಇಳಿಸಿದ ದೇಶ ಎಂಬ ಕೀರ್ತಿಗೆ ಚೀನಾ ಭಾಜನವಾಗಿದೆ.
  • ಮಂಗಳ ಗ್ರಹದ ಅನ್ವೇಷಣೆಯಲ್ಲಿರುವ 3 ನೇ‌ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.
  • ಅಮೇರಿಕ ಈಗಾಗಲೇ ಮಂಗಳಗ್ರಹದಲ್ಲಿ ಪರ್ಸಿವರೆನ್ಸ್ ರೋವರ್ ನ್ನು ಕಳಿಸಿದ್ದು, ಅದು ಇನ್ನೂ ಮಂಗಳ ಗ್ರಹದಲ್ಲಿ ಚಲಿಸುತ್ತಲಿದೆ.
  • ಚೀನಾದ ಝರೋಂಗ್ ರೋವರ್ 6 ಚಕ್ರಗಳನ್ನು ಹೊಂದಿದ್ದು, 240 ಕಿಲೋ ತೂಕ ಹೊಂದಿರುವ ಸೌರ ಶಕ್ತಿಚಾಲಿತ ರೋವರ್ ಆಗಿದೆ‌. 
  • ಝರೋಂಗ್ ರೋವರ್ ಮಂಗಳನ ಅಂಗಳದ ಮಾದರಿ ಸಂಗ್ರಹಿಸಿ ವಿಶ್ಲೇಷಿಸಿ ದತ್ತಾಂಶವನ್ನು ಚೀನಾಕ್ಕೆ ರವಾನಿಸಲಿದೆ.
ಝರೋಂಗ್ ರೋವರ್



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಚೀನಾದ ಕುರಿತು

  • ಚೀನಾದ ರಾಜಧಾನಿ - ಬೀಜಿಂಗ್
  • ಜನಸಂಖ್ಯೆ : 139.77 ಕೋಟಿ (2019 ಅಂಕಿ ಅಂಶ)
  • ಅಧ್ಯಕ್ಷ - ಕ್ಸಿ ಜಿನ್ ಪಿಂಗ್


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಮಂಗಳ ಗ್ರಹದ ಕುರಿತು





  • ಮಂಗಳ ಗ್ರಹ ಸೌರವ್ಯೂಹದ ನಾಲ್ಕನೆಯ ಗ್ರಹ ಹಾಗೂ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ.
  • ಇದು ಭೂಮಿಯ ಅರ್ಧದಷ್ಟು ಗಾತ್ರವನ್ನು ಹೊಂದಿದ ಗ್ರಹವಾಗಿದೆ.
  • ಮಂಗಳಗ್ರಹದ ಭ್ರಮಣ ಅವಧಿ - 24 ಗಂಟೆ 37 ನಿಮಿಷ, 23 ಸೆಕೆಂಡ್ ಗಳು
  • ಮಂಗಳ ಗ್ರಹವು ಕಂದು, ಮಿಶ್ರಿತ ಕೆಂಪು ಬಣ್ಣದ್ದಾಗಿದ್ದರಿಂದ ಇದನ್ನು ಕೆಂಪುಗ್ರಹ ಎನ್ನುತ್ತಾರೆ.


          ನಮ್ಮ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹವಾಗಿರುವ ಮಂಗಳ ಗ್ರಹದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಇದ್ದವೆಂದು ತಿಳಿದುಬಂದಿದೆ. ಸೂರ್ಯನಿಂದ 227.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಇಂದು ಯಾವುದೇ ಜೀವಿಗಳಿಗೆ ಆಶ್ರಯ ನೀಡುತ್ತಿಲ್ಲ. ಆದರೆ ಈ ಗ್ರಹದ ಮೇಲೆ ಬೃಹತ್ ಮಂಜು ಗಡ್ಡೆಗಳು ಇದ್ದು ಅದನ್ನು ಕರಗಿಸುವುದರಿಂದ ಸಾಕಷ್ಟು ಪ್ರಮಾಣದ ನೀರು ಪಡೆಯಬಹುದಾಗಿದೆ. ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಸಂಪೂರ್ಣ ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತ ಇದಾಗಿದೆ. ಸೂರ್ಯನ ಸುತ್ತ ಸುತ್ತಲು 687 ದಿನಗಳನ್ನು ತೆಗೆದುಕೊಳ್ಳುವ ಈ ಗ್ರಹದ ಮೇಲೆ ಶೇಕಡ 95 ರಷ್ಟು ಇಂಗಾಲದ ಡೈ ಆಕ್ಸೈಡ್ ಹಾಗು ಶೇಕಡ 5 ರಷ್ಟು ನೈಟ್ರೋಜೆನ್ ಇದೆ. ಆಗಾಗ್ಗೆ ಬೀಸುವ ದೊಡ್ಡ ದೊಡ್ಡ ಬಿರುಗಾಳಿಯು ಈ ಗ್ರಹದ ವಾತಾವರಣದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.


: ನೆನಪಿನಲ್ಲಿಡಬೇಕಾದ ಅಂಶಗಳು :


* ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.

* ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.

* ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ್ ಮುಖ್ಯವಾಗಿದೆ.

* ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.

* ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.

* ಮಂಗಳ ಗ್ರಹವು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 687 ದಿನಗಳನ್ನು ತೆಗೆದುಕೊಳ್ಳುತ್ತದೆ.

* ಮಂಗಳನ ಭ್ರಮಣಾ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.

* ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಈ ಹಿಂದಿನ ಪ್ರಮುಖ ಮಂಗಳಯಾನ ಯೋಜನೆಗಳು ಹೀಗಿವೆ


1) ಮಂಗಳಯಾನ ಕೈಗೊಂಡ ಜಗತ್ತಿನ ಮೊದಲ ರಾಷ್ಟ್ರ :- ಸೋವಿಯತ್ ರಷ್ಯಾ 1971 ರಲ್ಲಿ ಮೊಟ್ಟ ಮೊದಲು 'Mars-3' ಹೆಸರಿನ ಮಂಗಳಯಾನ ಕೈಗೊಂಡಿದೆ. ಹೀಗಾಗಿ ಮಂಗಳಯಾನ ಕೈಗೊಂಡ ಮೊದಲ ದೇಶ ಎಂಬ ಹೆಗ್ಗೆಳಿಕೆಗೆ ರಷ್ಯಾ ಪಾತ್ರವಾಗಿದೆ‌.


2) ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ :- ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ ಎಂಬ ಖ್ಯಾತಿ ಅಮೇರಿಕ ಹೊಂದಿದೆ. ಅಮೇರಿಕ 1976 ರಿಂದ ಇಲ್ಲಿಯವರೆಗೆ 8 ಮಂಗಳಯಾನಗಳನ್ನು ಯಶಸ್ವಿಯಾಗಿ ಪೂರೈಸಿದೆ‌. Mars Express Mission ಯೋಜನೆಯ ಅಡಿಯಲ್ಲಿ ಯೂರೋಪಿನ್ ಸ್ಪೇಸ್ ಏಜನ್ಸಿ ಈ ನೌಕೆಗಳನ್ನು ಮಂಗಳನ ಅಂಗಳಕ್ಕೆ ಸೇರಿಸಿತ್ತು‌. ಇತ್ತೀಚೆಗೆ ಅಮೇರಿಕದ ಪರ್ಸಿವರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಚಲಿಸಿದ್ದನ್ನು ಗಮನಿಸಬಹುದು. 


ಭಾರತದ ಮಂಗಳಯಾನ ಯೋಜನೆ :-

ಭಾರತದ Mars Orbiter Mission (MOM) ಅಥವಾ ಮಂಗಳಯಾನ ವನ್ನು ಇಸ್ರೋ 05 ನವೆಂಬರ್ 2013 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-25 ರಾಕೆಟ್ ನ ಮೂಲಕ ಉಡಾವಣೆ ಮಾಡಿತ್ತು.


ಅಮೇರಿಕ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್ ನೇಮಕ


ಅಮೇರಿಕ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್ ನೇಮಕ



  • ಭಾರತೀಯ ಮೂಲದ ನೀರಾ ಟಂಡನ್ ಈ ಹಿಂದೆ ಶ್ವೇತಭವನದ ಆಫೀಸ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಬಜೆಟ್ (OMB) ನ ಮುಖ್ಯಸ್ಥೆಯಾಗಿದ್ದರು.
  • ಆದರೆ ಸೆನೆಟ್ ನ ವ್ಯಾಪಕ ಟೀಕೆಯಿಂದ ಕಳೆದ ಮಾರ್ಚ್ ನಲ್ಲಿ ಆ ಹುದ್ದಯಿಂದ ಕೆಳಗಿಳಿದಿದ್ದರು ನೀರಾ ಟಂಡನ್.
  • ಟಂಡನ್ ಅವರು ಪ್ರಸ್ತುತ ಸಿಎಪಿಯ ಅಧ್ಯಕ್ಷೆ ಮತ್ತು ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
  • ಇದೀಗ ಅವರು ಅಮೇರಿಕ ಅಧ್ಯಕ ಜೋ ಬಿಡೆನ್ ಅವರ ಹಿರಿಯ ಸಲಹೆಗಾರರಾಗಿ ಶ್ವೇತಭವನವನ್ನು ಪ್ರವೇಶಿಸುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ನೀರಾ ಟಂಡನ್ :

  • ಭಾರತೀಯ ಮೂಲದ ಅಮೆರಿಕ‌ ನಿವಾಸಿ ದಂಪತಿಗಳ ಪುತ್ರಿ.
  • ಜನನ : 10 ಸೆಪ್ಟೆಂಬರ್ 1970
  • ಶಿಕ್ಷಣ : ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಯಾಲೆ ಲಾ ಶಾಲೆಯಿಂದ ಬಿಎ ಪದವಿ.
  • ಪತಿ : ಬೆಂಜಮಿನ್ ಎಡ್ವರ್ಡ್



ಪಂಜಾಬ್ ನ 23 ನೇ ಜಿಲ್ಲೆಯಾಗಿ ಮಾಲೆರ್ ಕೋಟ್ಲಾ 

ಪಂಜಾಬ್ ನ 23 ನೇ ಜಿಲ್ಲೆಯಾಗಿ ಮಾಲೆರ್ ಕೋಟ್ಲಾ


  • ಪಂಜಾಬ್ ನ ಮಾಲೆರ್ ಕೋಟ್ಲಾ ವನ್ನು 23 ನೇ ಜಿಲ್ಲೆ ಎಂದು ಪಂಜಾಬ್ ಸಿಎಂ ಘೋಷಿಸಿದ್ದಾರೆ.
  • ಅಲ್ಲದೇ ಈ ಜಿಲ್ಲೆಗೆ 500 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಮಹಿಳಾ ಕಾಲೇಜು ಮಹಿಳಾ ಪೊಲೀಸ್ ಠಾಣೆ ನೂತನ ಬಸ್ ನಿಲ್ದಾಣವನ್ನು ಸಹ ಸಿಎಂ ಅವರು ಘೋಷಿಸಿದ್ದಾರೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಪಂಜಾಬ್ ಕುರಿತು

  • ಪಂಜಾಬ್ ನ ರಾಜಧಾನಿ : ಚಂಡೀಗಡ
  • ರಾಜ್ಯ ವೃಕ್ಷ : ಶೀಶಾಮ್
  • ರಾಜ್ಯ ಪಕ್ಷಿ : ಬಾಜ್ (ನಾರ್ಥನ್ ಗೋಶಾಕ್)
  • ರಾಜ್ಯ ಪುಷ್ಪ : ಗ್ಲಾಡಿಯೋಲಸ್
  • ಪಂಜಾಬ್‌ನ ಮುಖ್ಯಮಂತ್ರಿ : ಕ್ಯಾಪ್ಟೇನ್ ಅಮರಿಂದರ್ ಸಿಂಗ್
  • ಪಂಜಾಬ್‌ನ ರಾಜ್ಯಪಾಲ : ವಿ. ಪಿ. ಸಿಂಗ್ ಬದ್ನೋರ್




Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area