ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಶಾಕಿಂಗ್ ಸುದ್ದಿ 😳 ನಾಳೆಯಿಂದ ಭಾರತದಲ್ಲಿ ಫೇಸ್​ಬುಕ್​, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಓಪನ್ ಆಗಲ್ಲ 😳 Facebook, Instagram and Twitter Not Opened from Tomorrow

 


ಶಾಕಿಂಗ್ ಸುದ್ದಿ 😳 ನಾಳೆಯಿಂದ ಭಾರತದಲ್ಲಿ ಫೇಸ್​ಬುಕ್​, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಓಪನ್ ಆಗಲ್ಲ 😳

ಶಾಕಿಂಗ್ ಸುದ್ದಿ 😳 ನಾಳೆಯಿಂದ ಭಾರತದಲ್ಲಿ ಫೇಸ್​ಬುಕ್​, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಓಪನ್ ಆಗಲ್ಲ 😳 Facebook, Instagram and Twitter Not Opened from Tomorrow



ಈಗ ಏನೆ ಸುದ್ದಿಗಳಿದ್ದರೂ ಮೊದಲು ವೈರಲ್ ಆಗೋದು ಸೋಶಿಯಲ್ ಮೀಡಿಯಾ ಗಳಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿಯೇ. ಆದರೆ ನಾಳೆಯಿಂದ ಜಗತ್ತಿನ ಪ್ರಸಿದ್ಧ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಾದ ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಾಗ್ರಾಮ್, ಓಪನ್ ಆಗೋದು ಡೌಟ್ ಎಂಬ ಸುದ್ದಯಿಯೊಂದು ಹರಿದಾಡುತ್ತಿದೆ.

 

ಭಾರತದಲ್ಲಿ ಸೊಶೀಯಲ್ ಮೀಡಿಯಾ ಬಳಸುವವರ ಸಂಖ್ಯೆ ಅಧಿಕ ಎಂದೇ ಹೇಳಬಹುದು. ಅದರಲ್ಲೂ ಸೋಶಿಯಲ್ ಮೀಡಿಯಾ ದೈತ್ಯ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಪ್ಲಾಟ್ ಫಾರ್ಮ್ ಗಳಲ್ಲಿ ಭಾರತೀಯರ ಖಾತೆ ಇತರೆ ದೇಶಕ್ಕೆ ಹೋಲಿಸಿದರೆ ಅತಿ ಹೆಚ್ಚು ಎನ್ನಲಾಗಿದೆ. ಆದರೆ ಇದೀಗ ಫೇಸ್ಬುಕ್, ಇನ್ಸ್ಟಾಗ್ರಾಮ್ , ಟ್ವಿಟರ್ ಭಾರತದಲ್ಲಿ ಬ್ಲಾಕ್ ಆಗಲಿದೆ ಎಂದು ಹೇಳಲಾಗುತ್ತಿದೆ. ಅದುಕೂಡ ನಾಳೆಯಿಂದಲೇ ಎಂಬುದು ಆಘಾತಕಾರಿ ಸುದ್ದಿ.


ಹೌದು, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿದ್ದಾರೆಯೇ ಎಂದು ಪರಿಶೀಲಿಸಲು ವರದಿಗಳನ್ನು ಪಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.


ಕಾರಣ ಏನು


2021 ರ ಆರಂಭದಲ್ಲೇ ಅಂದರೆ ಫೆಬ್ರವರಿ 25 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿ) ಎಲ್ಲಾ ಸೋಶಿಯಲ್ ಮೀಡಿಯಾ ಮಾಧ್ಯಮಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಗಡುವನ್ನು ನೀಡಿತ್ತು.


ಆದರೆ  ಭಾರತೀಯ ಸಂಸ್ಥೆ 'ಕೂ' ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಅದರಲ್ಲೂ ವಿಶೇಷವಾಗಿ (50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಮಾಧ್ಯಮಗಳು ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲವೆಂದು ಮೂಲಗಳು ತಿಳಿಸಿದೆ.



ಇನ್ನು ಈ ನಿಯಮಗಳು ಇದೇ ಮೇ 26 ಅಂದರೆ ನಾಳೆಯಿಂದ ಜಾರಿಗೆ ಬರುತ್ತವೆ. ಆದ್ದರಿಂದ ಸಾಮಾಜಿಕ ಮಾಧ್ಯಮ ಕಂಪನಿಗಳು ಇದನ್ನು ಪಾಲಿಸದಿದ್ದರೆ, ಅವರು ಮಧ್ಯವರ್ತಿಗಳಂತೆ ತಮ್ಮ ಸ್ಥಾನಮಾನ ಮತ್ತು ರಕ್ಷಣೆಯನ್ನು ಕಳೆದುಕೊಳ್ಳಬಹುದು. ಅಲ್ಲದೆ ಭಾರತದ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರಾಗಬಹುದು ಎಂದೂ ಸಹ ಹೇಳಲಾಗಿದೆ.



ಹೊಸ ಕಾನೂನು ಪ್ರಕಾರ, ಮೇಲುಸ್ತುವಾರಿ ಸಮಿತಿಯಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದಸ್ಯರಿರುತ್ತಾರೆ. ಯಾವುದಾದರೂ ಕಂಪನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ, ವಿಚಾರಣೆಯನ್ನೂ ನಡೆಸುವ ಅಧಿಕಾರವನ್ನು ಹೊಂದಿದೆ.


ಈ ಸಮಿತಿಗೆ ಸರ್ಕಾರದಿಂದ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ನೇಮಕ ಮಾಡುತ್ತದೆ. ಅವರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ. ಮೇಲ್ಮನವಿ ಸಮಿತಿಗೆ ಯಾವುದೇ ಸೋಷಿಯಲ್ ಮೀಡಿಯಾ ಕಂಪೆನಿಯು ಮಾಹಿತಿ ವಿಚಾರದಲ್ಲಿ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಸರ್ಕಾರದ ನಿಯಂತ್ರಣದಲ್ಲಿರುವ ಸಮಿತಿಗೆ ಕೇಳಬಹುದು.


ಸದ್ಯ ‘ಕೂ’ ಹೊರತು ಪಡಿಸಿ ಯಾವೊಂದು ಸೊಶೀಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಕೂಡ ನಿಯಮ ಪಾಲನೆ ಮಾಡದೇ ಇರುವುದರಿಂದ ನಾಳೆಯಿಂದ ಫೇಸ್ಬುಕ್ ಸೇರಿದಂತೆ ಹಲವು ಸೊಶೀಯಲ್ ಮೀಡಿಯಾಗಳು ಭಾರತದಲ್ಲಿ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ಒಂದು ವೇಳೆ ಈ ನಿಯಮಗಳನ್ನು ಸರಕಾರ ಕಟ್ಡು ನಿಟ್ಟಾಗಿ ಜಾರಿಗೆ ತಂದಿದ್ದೇ ಆದಲ್ಲಿ, ನಾಳೆಯಿಂದ ಜನಪ್ರಿಯ ಸೋಶಿಯಲ್ ಮೀಡಿಯಾ ದೈತ್ಯ ರಾದ ಫೇಸ್​ಬುಕ್​, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ನಾಳೆಯಿಂದ ಭಾರತದಲ್ಲಿ ಓಪನ್ ಆಗಲ್ಲ.

Tags

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area