ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

5 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಪೇದೆಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ PSI Promotion for 5years Service Completed Police Constable

5 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಪೇದೆಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ

5 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಪೇದೆಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ PSI Promotion for 5years Service Completed Police Constable



ಹೌದು. ನೀವು ಕೇಳ್ತಿರೋದು ನಿಜ.  ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ವರ್ಷ ಮೇಲ್ಪಟ್ಟು ಪೊಲೀಸ್‌ ಕಾನ್ಸ್‌ಟೇಬಲ್‌ ಸೇವೆ ಸಲ್ಲಿಸಿರುವ ಪದವೀಧರರಿಗೆ ನೇರವಾಗಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ನೀಡಲಾಗುವುದು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ರಾಘವೇಂದ್ರ ಔರಾದಕರ ಹೇಳಿದ್ದಾರೆ.


ಧಾರವಾಡದಲ್ಲಿ ಇತ್ತೀಚೆಗೆ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್‌ ಗಳ ತರಬೇತಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮೇಲಿನಂತೆ ತಿಳಿಸಿದ್ದಾರೆ.


'ಕನಿಷ್ಠ ಐದು ವರ್ಷ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಪದವೀಧರರು ಹಾಗೂ 40 ವರ್ಷ ಮೀರದ ಪೇದೆಗಳು ಮಾತ್ರ ಪಿಎಸ್‌ಐ ಪ್ರಮೋಷನ್‌ಗೆ ಅರ್ಹರಾಗಿರುತ್ತಾರೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.


ಅಲ್ಲದೇ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ವಿಶೇಷ ತರಬೇತಿ ನೀಡುವುದರ ಜತೆಗೆ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಹೊಸ ತಂತ್ರಾಂಶ ಪರಿಚಯಿಸಲಾಗುತ್ತಿದೆ. ಇದಲ್ಲದೇ, ಪೊಲೀಸರಿಗೆ ಏಕರೂಪದ ಪಠ್ಯಕ್ರಮ ಬೋಧನೆ ಮಾಡಲು ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.


ಒಟ್ಟಾರೆ ಈ ಬಡ್ತಿ ಪ್ರಕ್ರಿಯೆ ನಡೆದರೆ ಇಲಾಖೆಯಲ್ಲಿರುವ 85% ರಷ್ಟು ಪೊಲೀಸ್ ಸಿಬ್ಬಂದಿಗಳು ಪಿಎಸ್ಐ ಆಗಬಲ್ಲರು. ಅಲ್ಲದೇ ಈ ಬಡ್ತಿ ವಿಧಾನ ಅದೆಷ್ಟು ಸರಿ ಎಂಬ ಚರ್ಚೆಯೂ ನಡೆಯಬಹುದು. ಈ ಕುರಿತಾದ ಸ್ಪಷ್ಟ ಮಾಹಿತಿ ಇಲಾಖೆಯಿಂದ ಅಧಿಸೂಚನೆ ಬಂದ ನಂತರವೇ ತಿಳಿಯಬೇಕು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area