ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಏರ್ಫೋರ್ಸ್ ಸಾಮಾನ್ಯ ಪರೀಕ್ಷೆ-2 2021 (AFCAT-2 2021) : ಜೂನ್ 01 ರಿಂದ ಅರ್ಜಿ ಸಲ್ಲಿಕೆ ಆರಂಭ Airforce Common Admission Test 2021

 


ಏರ್ಫೋರ್ಸ್ ಸಾಮಾನ್ಯ ಪರೀಕ್ಷೆ-2 2021 (AFCAT-2 2021) : ಜೂನ್ 01 ರಿಂದ ಅರ್ಜಿ ಸಲ್ಲಿಕೆ ಆರಂಭ

ಏರ್ಫೋರ್ಸ್ ಸಾಮಾನ್ಯ ಪರೀಕ್ಷೆ-2 2021 (AFCAT-2 2021) : ಜೂನ್ 01 ರಿಂದ ಅರ್ಜಿ ಸಲ್ಲಿಕೆ ಆರಂಭ Airforce Common Admission Test 2021



    ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ಸ್ನೇಹಿತರೆ ಭಾರತೀಯ ಸೇನೆಯಂತೆ, ಭಾರತೀಯ ವಾಯುಪಡೆಯೂ ಕೂಡ ಕೇಂದ್ರ ಸರಕಾರ ಬಹು ಮೆಚ್ಚುಗೆಯ ಉದ್ಯೋಗ. ಸೇನೆಗೆ ಸೇರಬೇಕೆಂಬ ಹಂಬಲ ಇರುವ ಪ್ರತಿಯೊಬ್ಬ ಅಭ್ಯರ್ಥಿಗಳೂ ಕೂಡ ಈ ಸದವಕಾಶವನ್ನು ಬಳಸಿಕೊಳ್ಳಬಹುದು.

   2021 ನೇ ಸಾಲಿನ ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌ AFCAT-2 2021 ನ ಅಧಿಸೂಚನೆಯನ್ನು ಅತೀ ಶೀಘ್ರದಲ್ಲೇ ಐಎಎಫ್‌ ಕಮಿಷನ್ಡ್‌ ಆಫೀಸರ್ ಹುದ್ದೆಗಳಿಗಾಗಿ ಬಿಡುಗಡೆ ಮಾಡಲಾಗುತ್ತದೆ.

      ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌, AFCAT-2 2021 ಅಧಿಸೂಚನೆಯನ್ನು ಶೀಘ್ರದಲ್ಲೇ ಐಎಎಫ್‌ ಕಮಿಷನ್ಡ್‌ ಆಫೀಸರ್ ಫೋಸ್ಟ್‌ಗಳಿಗಾಗಿ ಬಿಡುಗಡೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ : 01-06-2021
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌-2 ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ‌.

ಆಸಕ್ತರು AFCAT-2, 2021 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೊದಲು ಈ ಮಾಹಿಯಿಗಳನ್ನು ತಿಳಿಯಿರಿ..!!

ನಿಮಗೆ ತಿಳಿದಿರಲಿ :

ಭಾರತೀಯ ವಾಯುಪಡೆಯು AFCAT ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ ನಡೆಸುತ್ತದೆ. ಸಾಮಾನ್ಯವಾಗಿ ಈ ಪತೀಕ್ಷೆಗಳು ಪ್ರತಿವರ್ಷದ ಫೆಬ್ರವರಿ ಮತ್ತು ಆಗಸ್ಟ್‌ ತಿಂಗಳಲ್ಲಿ ನಡೆಯುತ್ತವೆ.

ಈ ವರ್ಷ ಒಟ್ಟು 334 ಹುದ್ದೆಗಳನ್ನು AFCAT, ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಮತ್ತು ಮೆಟಿರಿಯೋಲಜಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.

AFCAT-2, 2021 ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಗಳು ಏನಿರಬೇಕು?

  • AFCAT ಪರೀಕ್ಷೆ ತೆಗೆದುಕೊಳ್ಳಲು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಶೇಕಡ.50 ಅಂಕಗಳೊಂದಿಗೆ ಪಿಯುಸಿ ಪಾಸ್‌ ಮಾಡಿರಬೇಕು.
  • ಶೇಕಡ.60 ಅಂಕಗಳೊಂದಿಗೆ ಬಿಇ ಅಥವಾ ಬಿ.ಟೆಕ್ ಉತ್ತೀರ್ಣರಾಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ಮೀರಿರಬಾರದು.
  • ಅಭ್ಯರ್ಥಿಗಳನ್ನು ಏರ್‌ ಫೋರ್ಸ್‌ ಕಾಮನ್‌ ಅಡ್ಮಿಷನ್ ಟೆಸ್ಟ್‌ನಲ್ಲಿ ಗಳಿಸಿದ ಅಂಕಗಳು, ಆಫೀಸರ್ ಇಂಟೆಲಿಜೆನ್ಸ್‌ ರೇಟಿಂಗ್ ಟೆಸ್ಟ್‌ ಮತ್ತು ಪಿಕ್ಚರ್ ಪರ್ಸೆಪ್ಷನ್, ಚರ್ಚೆ, ಸೈಕಾಲಜಿಕಲ್ ಟೆಸ್ಟ್‌, ಗ್ರೂಪ್‌ ಟೆಸ್ಟ್, ಸಂದರ್ಶನಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು ?

ಅಪ್ಲಿಕೇಶನ್‌ ಶುಲ್ಕವಾಗಿ ರೂ.250 ಪಾವತಿಸಬೇಕಾಗುತ್ತದೆ.

ಸದರಿ ಹುದ್ದೆಗಳಿಗೆ ಭಾರತೀಯ ವಾಯುಪಡೆ ಶೀಘ್ರದಲ್ಲೇ AFCAT-2 ಅಧಿಸೂಚನೆ ಬಿಡುಗಡೆ ಮಾಡಲಿದ್ದು, ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್‌ https://afcat.cdac.in/AFCAT/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆಧಾರ್‌ ಕಾರ್ಡ್‌ ಅಗತ್ಯವಾಗಿರುತ್ತದೆ.

 ಅಭ್ಯರ್ಥಿಗಳು ಆಗಾಗ ಏರ್‌ಪೋರ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ಲೇಟೆಸ್ಟ್‌ ಮಾಹಿತಿಗಳನ್ನು ಚೆಕ್‌ ಮಾಡುತ್ತಿರಬೇಕು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area