ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

19 May 2021 Current Affairs || Daily Current Affairs 2021 || 19-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

  

19-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು










ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ 19 ಮೇ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣಾತ್ಮಕ ವಿವರಣೆ ಇಲ್ಲಿದೆ.




19 ಮೇ 2021 ರ ವಿಸ್ತೃತ ಹಾಗೂ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು

19 ಮೇ‌ 2021 ಸಂಪೂರ್ಣ, ಸಮಗ್ರ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು ಕನ್ನಡದಲ್ಲಿ.


19 ಮೇ‌ 2021 ಸಂಪೂರ್ಣ, ಸಮಗ್ರ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು 


ಮೈಕ್ರೋಸಾಫ್ಟ್ ನೊಂದಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಒಪ್ಪಂದ

ಮೈಕ್ರೋಸಾಫ್ಟ್ ನೊಂದಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಒಪ್ಪಂದ


  • ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಬುಡಕಟ್ಟು ಶಾಲೆಗಳ ಡಿಜಿಟಲೀಕರಣಕ್ಕಾಗಿ ಮೈಕ್ರೋಸಾಫ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
  • ಈ ಒಪ್ಪಂದದ ಪ್ರಕಾರ ಮೈಕ್ರೋಸಾಫ್ಟ್ ಸಂಸ್ಥೆಯು ಬುಡಕಟ್ಟು ಶಾಲೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪಠ್ಯಕ್ರಮವನ್ನು ಅಳವಡಿಸಲಿದೆ.
  • ಈ ಪಠ್ಯಕ್ರಮವು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರಲಿದೆ.
  • ಒಪ್ಪಂದದ ಮೊದಲ ಹಂತಕ್ಕೆ 250 EMRS (Ekalavya Model Residential School) ಶಾಲೆಗಳನ್ನು ಮೈಕ್ರೋಸಾಫ್ಟ್ ಆಯ್ದುಕೊಂಡಿದೆ.


ಒಪ್ಪಂದದ ಉದ್ದೇಶ ಏನು


ಬುಡಕಟ್ಟು ದರಗಳ ಸಚಿವಾಲಯ ಮತ್ತು ಮೈಕ್ರೋಸಾಫ್ಟ್ ನೊಂದಿಗೆ ಆದ ಈ ಒಪ್ಪಂದದ ಪ್ರಮುಖ ಉದ್ದೇಶ ಏನೆಂದರೆ "ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹ ತಂತ್ರಜ್ಞಾನಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೌಶಲ್ಯ ಸಾಧಿಸುವಂತೆ ಮಾಡುವುದೇ" ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕುರಿತಾದ ಮಾಹಿತಿ ಇಲ್ಲಿದೆ


  • ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ : ಅರ್ಜುನ್ ಮುಂದ
  • ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ : ರೇಣುಕಾ ಸಿಂಗ್ ಸಾರುಟಾ


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮೈಕ್ರೋಸಾಫ್ಟ್ ಸಂಸ್ಥೆಯ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ


  • ಪ್ರಸ್ತುತ ಸಿಇಒ : ಸತ್ಯ ನಾಡೆಲ್ಲಾ
  • ಪ್ರಧಾನ ಕಚೇರಿ : ರೆಡ್ಮಂಡ್, ವಾಷಿಂಗ್ಟನ್, ಅಮೇರಿಕ.



ವಿಶ್ವದ ಮೊದಲ ಖಾಸಗಿ ಡಿಜಿಟಲ್ ಕೋರ್ಟ್ ಅಭಿವೃದ್ಧಿಪಡಿಸಿದ ಜುಪಿಟಿಸ್ 


ವಿಶ್ವದ ಮೊದಲ ಖಾಸಗಿ ಡಿಜಿಟಲ್ ಕೋರ್ಟ್ ಅಭಿವೃದ್ಧಿಪಡಿಸಿದ ಜುಪಿಟಿಸ್



  • ಚಂಡಿಗಡ ಮೂಲದ ಸ್ಟಾರ್ಟಪ್ ಸಂಸ್ಥೆಯಾದ "ಜುಪಿಟಿಸ್ ಜಸ್ಟೀಸ್ ಟೆಕ್ನಾಲಜಿ" ಯು ಖಾಸಗಿ ನ್ಯಾಯ ವ್ಯವಸ್ಥೆಯಲ್ಲಿನ ವಿವಾದಗಳನ್ನು ಬಗೆಹರಿಸಲು 'ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನ' (ADR - Alternative Dispute Resolution Mechanism) ವನ್ನು ಅಭಿವೃದ್ಧಿಪಡಿಸಿದೆ.
  • ಇದನ್ನು ಖಾಸಗಿ ವ್ಯಾಜ್ಯಗಳ ಮಧ್ಯಸ್ಥಿಕೆ, ರಾಜಿ ಮತ್ತು ಸಮಾಲೋಚನೆಗಾಗಿ ವಿನ್ಯಾಸಗೊಳಿಸಲಾಗಿದೆ.
  • ನ್ಯಾಯಾಂಗ ಸಂಸ್ಥೆಯ ಯಾವುದೇ ಹಸ್ತಕ್ಷೇಪ ವಿಚಾರಣೆ ಇಲ್ಲದೆ, ಎರಡು ಪಕ್ಷಗಳ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸುವ ಅಥವಾ ಸೌಹಾರ್ದಯುತ ಫಲಿತಾಂಶಕ್ಕೆ ತರುವ ಪ್ರಕ್ರಿಯೆಯನ್ನೇ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನ ಎನ್ನುವರು.


ADR ನೊಂದಿಗೆ ವ್ಯವಹರಿಸುವ ಭಾರತೀಯ ಕಾಯ್ದೆಗಳು

1) Legal Services Authorities Act - 1987

2) Conciliation Act 1996


Jupitice Justice Technology ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ :

  • ಸಿಇಒ ಮತ್ತು ಸ್ಥಾಪಕ : ರಾಮನ್ ಅಗರವಾಲ್
  • ಸ್ಥಳ : ಚಂಡೀಗಢ


ಬಲ್ಜೀತ್ ಕೌರ್ & ಗುನ್ಬಾಲಾ ಶರ್ಮಾ : ಮೌಂಟ್ ಪುಮೋರಿ ಶಿಖರ ಏರಿದ ಮೊದಲ ಭಾರತೀಯ ಮಹಿಳೆಯರು

ಬಲ್ಜೀತ್ ಕೌರ್ & ಗುನ್ಬಾಲಾ ಶರ್ಮಾ : ಮೌಂಟ್ ಪುಮೋರಿ ಶಿಖರ ಏರಿದ ಮೊದಲ ಭಾರತೀಯ ಮಹಿಳೆಯರು


  • ಹಿಮಾಚಲ ಪ್ರದೇಶದ ಬಲ್ಜಿತ್ ಕೌರ್ ಹಾಗೂ ರಾಜಸ್ಥಾನದ ಗುನ್ಬಾಲಾ ಶರ್ಮಾ ನೇಪಾಳದ ಪುಮೋರಿ ಪರ್ವತವನ್ನು ಏರಿದ ಮೊದಲ ಮಹಿಳೆಯರು ಎಂಬ ಖ್ಯಾತಿಗೆ ಪಾತ್ರರಾದರು.
  • ಅಲ್ಲದೇ ಎವರೆಸ್ಟ್‌ ಮಾಸಿಫ್ ನ ಪರ್ವತದ ಭಾಗವೊಂದನ್ನು ಅಳತೆ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.


ಹಾಗಾದರೆ ಎವರೆಸ್ಟ್ ಮಾಸಿಫ್ ಎಂದರೇನು?


ಎವರೆಸ್ಟ್ ಮಾಸಿಫ್ ಎನ್ನುವುದು ನೇಪಾಳದ ಪ್ರಮುಖ ನಾಲ್ಕು ಎತ್ತರದ ಪರ್ವತಗಳನ್ನು ಒಳಗೊಂಡ ಪರ್ವತ ಭಾಗವಾಗಿದೆ.


ಎವರೆಸ್ಟ್‌ ಮಾಸಿಫ್ ನ ನಾಲ್ಕು ಪ್ರಮುಖ ಪರ್ವತಗಳು ಹೀಗಿವೆ :

1) ಮೌಂಟ್ ಪುಮೋರಿ :  7,161 ಮೀ ಎತ್ತರ

2) ಮೌಂಟ್ ನುಪ್ಟ್ಸೆ : 8,862 ಮೀ ಎತ್ತರ

3) ಮೌಂಟ್ ಲೋಟ್ಸೆ : 8516 ಮೀ ಎತ್ತರ

4) ಮೌಂಟ್ ಎವರೆಸ್ಟ್ : 8,848.86 ಮೀ ಎತ್ತರ


ನೇಪಾಳದ ಕುರಿತು


  • ಅಧ್ಯಕ್ಷ : ವಿದ್ಯಾದೇವಿ ಭಂಡಾರಿ
  • ರಾಜಧಾನಿ : ಕಠ್ಮಂಡು
  • ಕರೆನ್ಸಿ : ನೇಪಾಳಿ ರೂಪಾಯಿ



ವಂದಿತಾ ಕೌಲ್ : ಬ್ಯಾಂಕ್ ಆಫ್ ಇಂಡಿಯಾದ ನಾಮಿನಿ ನಿರ್ದೇಶಕರಾಗಿ ನೇಮಕ


ವಂದಿತಾ ಕೌಲ್ : ಬ್ಯಾಂಕ್ ಆಫ್ ಇಂಡಿಯಾದ ನಾಮಿನಿ ನಿರ್ದೇಶಕರಾಗಿ ನೇಮಕ



  • ಇತ್ತೀಚೆಗೆ ಭಾರತ ಸರ್ಕಾರವು ವಂದಿತಾ ಕೌಲ್ ಅವರನ್ನು ಬ್ಯಾಂಕ್ ಆಫ್ ಇಂಡಿಯಾದ ಸರ್ಕಾರಿ ನಾಮಿನಿ ನಿರ್ದೇಶಕರನ್ನಾಗಿ ನೇಮಿಸಿದೆ.
  • ಸದ್ಯ ವಂದಿತಾ ಕೌಲ್ ವರು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ


ಬ್ಯಾಂಕ್ ಆಫ್ ಇಂಡಿಯಾ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

  • ಸ್ಥಾಪನೆ : 07 ಸೆಪ್ಟೆಂಬರ್ 1906
  • ಕೇಂದ್ರ ಕಛೇರಿ : ಮುಂಬೈ
  • ವ್ಯವಸ್ಥಾಪಕ ನಿರ್ದೇಶಕ & ಸಿಇಒ : ಅಟನು ಕುಮಾರ್ ದಾಸ್
  • ಟ್ಯಾಗ್ ಲೈನ್ : Relationship Beyond Banking



IMA ಅಧ್ಯಕ್ಷ & ಪದ್ಮಶ್ರಿ ಪುರಸ್ಕೃತ ಡಾ. ಕೆ. ಕೆ. ಅಗರವಾಲ್ ಇನ್ನಿಲ್ಲ

IMA ಅಧ್ಯಕ್ಷ & ಪದ್ಮಶ್ರಿ ಪುರಸ್ಕೃತ ಡಾ. ಕೆ. ಕೆ. ಅಗರವಾಲ್ ಇನ್ನಿಲ್ಲ


  • IMA ಅಧ್ಯಕ್ಷ & ಪದ್ಮಶ್ರಿ ಪುರಸ್ಕೃತ ಡಾ. ಕೆ. ಕೆ. ಅಗರವಾಲ್ ಇತ್ತೀಚೆಗೆ ಕೋವಿಡ್ ನಿಂದಾಗಿ‌ ನಿಧನರಾಗಿದ್ದಾರೆ.
  • ಇವರು 05 ಸೆಪ್ಟೆಂಬರ್ 1958 ರಲ್ಲಿ ಜನಿಸಿದ್ದರು.
  • 2005 ರಲ್ಲಿ ಮೆಡಿಕಲ್ ವಿಭಾಗದಲ್ಲಿನ ವಿಶೇಷ ಸೇವೆಗಾಗಿ ಡಾ. ಬಿ. ಸಿ. ರಾಯ್ ಪ್ರಶಸ್ತಿಯನ್ನು ಪಡೆದಿದ್ದಾರೆ.
  • 2010 ರಲ್ಲಿ ಭಾರತದ ನಾಲ್ಕನೆಯ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯೂ ಇವರಿಗೆ ಲಭಿಸಿದೆ.


ಇವುಗಳನ್ನೂ ಓದಿ


ಪ್ರಚಲಿತ ವಿದ್ಯಮಾನಗಳು : 18 ಮೇ 2021 



18 ಮೇ‌ 2021 ಸಂಪೂರ್ಣ, ಸಮಗ್ರ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು ಕನ್ನಡದಲ್ಲಿ.


ಮೇ 18. ಇಂದು ವಿಶ್ವ ಏಡ್ಸ್ ಲಸಿಕೆ ದಿನ

ಮೇ 18. ಇಂದು ವಿಶ್ವ ಏಡ್ಸ್ ಲಸಿಕೆ ದಿನ



  • ಹೆಚ್ಐವಿ ವ್ಯಾಕ್ಸಿನ್ ಜಾಗೃತಿ ದಿನ ಎಂದು ಕರೆಯಲ್ಪಡುವ ವಿಶ್ವ ಏಡ್ಸ್ ಲಸಿಕೆ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.
  • ಎಚ್ಐವಿ ಸೋಂಕು ಮತ್ತು ಏಡ್ಸ್ ರೋಗವನ್ನು ತಡೆಗಟ್ಟಲು ಲಸಿಕೆಯ ಸಂಶೋಧನೆಯ ತುರ್ತು ಅಗತ್ಯವನ್ನು ಪ್ರಚಾರ ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

ಹಿನ್ನೆಲೆ ಏನು :

ವಿಶ್ವ ಏಡ್ಸ್ ಲಸಿಕೆ ದಿನದ ಪರಿಕಲ್ಪನೆಯು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಮಾಡಿದ ಮೇ 18, 1997 ಪ್ರಾರಂಭದ ಭಾಷಣದಲ್ಲಿ ಇದೆ. ಏಡ್ಸ ಲಸಿಕೆ ಅಭಿವೃದ್ಧಿಪಡಿಸುವುದು ಮಾತ್ರ ಏಡ್ಸ್ ರೋಗವನ್ನು ತಡೆಗಟ್ಟುವ ಮತ್ತು ಏಡ್ಸ್ ಹೆಚ್ಚಳವಾಗುವ ಅಪಾಯವನ್ನು ಸೀಮಿತಗೊಳಿಸುತ್ತದೆ ಮತ್ತು ಕೊನೆಗೊಳಿಸುತ್ತದೆ ಎಂದು ಬಿಲ್ ಕ್ಲಿಂಟನ್ ಭಾಷಣದಲ್ಲಿ ಹೇಳಿದರು. 1998 ರ ಮೇ 18 ರಂದು ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ.

HIV ಎಂದರೇನು :

ಎಚ್ಐವಿ ಎನ್ನುವುದು ಒಂದು ವೈರಸ್. HIV ಎನ್ನುವ ವೈರಸ್ ಮಾನವ ದೇಹದ ರೊಇಗ ನಿರೋಧಕ ಅಂದರೆ ಪ್ರತಿರೋಧಕ ವ್ಯವಸ್ಥೆಯನ್ನು ದ್ವಂಸ ಮಾಡಿಬಿಡುತ್ತದೆ. ಎಚ್ಐವಿ ಎಂದರೆ ಹ್ಯೂಮನ್ ಇಮ್ಯುನೋಡಿಫಿಸಿಯನ್ಸಿ ವೈರಸ್ ಎಂದರ್ಥ. ಹೆಸರೇ ಹೇಳುವಂತೆ ಈ ವೈರಸ್ ಕೇವಲ ಮನುಷ್ಯರ ಮೇಲೆ ಮಾತ್ರ ಪರಿಣಾಮವನ್ನು ಬೀರುತ್ತದೆ.

  • HIV ಪೂರ್ಣ ರೂಪ : Human Immunodeficiency Virus
  • AIDS ಪೂರ್ಣ ರೂಪ : Acquired Immunodeficiency Syndrome
  • ವಿಶ್ವದ ಮೊದಲ ಏಡ್ಸ್ ಪತ್ತೆಯಾದ ದೇಶ : ಕಾಂಗೋ
  • ಭಾರತದಲ್ಲಿ ಮೊದಲು ಏಡ್ಸ್ ಪತ್ತೆಯಾದದ್ದು : 1986 ರಲ್ಲಿ ಚೆನ್ನೈ ನಲ್ಲಿ

2020 ನೇ ಸಾಲಿನ ವಿಶ್ವ ಸುಂದರಿಯಾಗಿ ಆಂಡ್ರಿಯಾ ಮೆಜಾ

2020 ನೇ ಸಾಲಿನ ವಿಶ್ವ ಸುಂದರಿಯಾಗಿ ಆಂಡ್ರಿಯಾ ಮೆಜಾ



  • 2020 ನೇ ಸಾಲಿನ 69 ನೇ ವಿಶ್ವಸುಂದರಿ ಕಾರ್ಯಕ್ರಮಕ್ಕೆ ಸೋಮವಾರ ತೆರೆಬಿದ್ದಿದೆ.
  • ಮೆಕ್ಸಿಕೊದ ಆಂಡ್ರಿಯಾ ಮೆಜಾ 69 ನೇ ಮಿಸ್ ಯೂನಿವರ್ಸ್ ಪಟ್ಟ ಪಡೆದಿದ್ದಾರೆ.
  • ಈ ಸ್ಪರ್ಧೆ ಮೇ 16, 2021 ರಂದು ನಡೆಯಿತು.

2020 ನೇ ಸಾಲಿನ ವಿಶ್ವ ಸುಂದರಿ ರನ್ನರ್ ಅಪ್ ಪಟ್ಟಿ ಇಲ್ಲಿದೆ

1) ಬ್ರೆಜಿಲ್ನ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್
2)  ಪೆರುವಿನ ಜೆನಿಕ್ ಮಸಿಟಾ ಎರಡನೆಯ ರನ್ನರ್ ಅಪ್.
3) ಡೊಮಿನಿಕನ್ ರಿಪಬ್ಲಿಕ್ ನ ಕಿಂಬರ್ಲಿ ಪರೆಝ್ ಮೂರನೇ ರನ್ನರ್ ಅಪ್.
4) ಭಾರತದ ಆ್ಯಡ್ಲೆನ್ ಕ್ಯಾಸ್ಟೆಲಿನೋ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ಉಡುಪಿ ಮೂಲದ ಆ್ಯಡ್ಲೆನ್ ಕ್ಯಾಸ್ಟೆಲಿನೋ ನಾಲ್ಕನೇ ರನ್ನರ್ ಅಪ್ :

ಉಡುಪಿ ಮೂಲದ ಆ್ಯಡ್ಲೆನ್ ಕ್ಯಾಸ್ಟೆಲಿನೋ ನಾಲ್ಕನೇ ರನ್ನರ್ ಅಪ್ :



ಮಾಡೆಲಿಂಗ್ ಕ್ಷೇತ್ರದಲ್ಲಿ ಕರ್ನಾಟಕದ ಸ್ಪರ್ಧಿಗಳೂ ಕೂಡ ಮಿಂಚಿದ್ದಾರೆ. ಈಗಾಗಲೇ ಹಲವಾರು ಕನ್ನಡತಿಯರು ಹೊರದೇಶಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸಿದ್ದಾರೆ ಉದಾಹರಣೆಗೆ ಐಶ್ವರ್ಯ ರೈ ಶ್ರೀನಿಧಿ ಶೆಟ್ಟಿ ಹೀಗೆ ಅನೇಕರು ವಿಶ್ವಸುಂದರಿ ಸ್ಪರ್ಧೆಗೆ ಸ್ಪರ್ಧಿಸಿ, ಭಾರತದ ಹಿರಿಮೆಯನ್ನು ಎತ್ತರಿಸಿದವರಿದ್ದಾರೆ.

2020 ರ 69 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕರ್ನಾಟಕದ ಅದರಲ್ಲೂ ಉಡುಪಿ‌ಮೂಲದ ಸುಂದರಿಯೊಬ್ಬರು ಭಾಗವಹಿಸಿ ನಾಲ್ಕನೆಯ ಸ್ಥಾನ ಪಡೆದಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯ. 2020 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಾಲ್ಕನೆಯ ಸ್ಥಾನ ಪಡೆದ ಭಾರತದ ಸ್ಪರ್ಧಿ ಉಡುಪಿ ಮೂಲದ ಆ್ಯಡ್ಲೆನ್ ಕ್ಯಾಸ್ಟೆಲಿನೋ. ಇವರು ಹುಟ್ಟಿದ್ದು ಕುವೈತ್ ನಲ್ಲಿ. ಬೆಳೆದಿದ್ದು ಮುಂಬೈನಲ್ಲಾದರೂ ಇವರ ಪೋಷಕರು ಮೂಲತಃ ಉಡುಪಿಯ ಉದ್ಯಾವರ. ಇದ್ಯ ಆ್ಯಡ್ಲೆನ್ ಕುಟುಂಬ ಮುಂಬೈನಲ್ಲಿ ನೆಲೆಸಿದೆ.

ವಿಶ್ವದ ನಾನಾ ದೇಶಗಳಿಂದ ಸುಮಾರು 74 ಕ್ಕೂ ಅಧಿಕ ರೂಪದರ್ಶಿಯರು ಭಾಗವಹಿಸಿದ ಈ ಸಲದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ, ಆ್ಯಡ್ಲೆನ್ ನಾಲ್ಕನೇ ಸ್ಥಾನ ಪಡೆದಿದ್ದು ಭಾರತಕ್ಕೆ ಸಂತಸದ ವಿಚಾರ ಎಂದೇ ಹೇಳಬಹುದು.

ಆ್ಯಂಡ್ರಿಯಾ ಮೆಝಾ ಕುರಿತು :

  • ಆ್ಯಂಡ್ರಿಯಾ ಮೆಕ್ಸಿಕೋ‌ ಮೂಲದ ರೂಪದರ್ಶಿ.
  • 26 ವಯಸ್ಸಿನ ಆ್ಯಂಡ್ರಿಯಾ 2020 ನೇ ಸಾಲಿನ ವಿಶ್ವ ಸುಂದರಿ ಪಟ್ಟ ಪಡೆದಿದ್ದಾರೆ.
  • ವಿಶ್ವ ಸುಂದರಿ ಪಟ್ಟ ಪಡೆದ 3 ನೇ ಮೆಕ್ಸಿಕನ್ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಆ್ಯಂಡ್ರಿಯಾ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.
  • ಇದು 69 ನೇ ವಿಶ್ವ ಸುಂದರಿ ಸ್ಪರ್ಧೆ.
  • 2019 ನೇ ಸಾಲಿನ ವಿಶ್ವ ಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು ವಿಶ್ವ ಸುಂದರಿ‌ ಕಿರೀಟವನ್ನು ಆ್ಯಂಡ್ರಿಯಾ ವರಿಗೆ ತೊಡಿಸಿದರು.
  • 2019 ನೇ ಸಾಲಿನ ವಿಶ್ವ ಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು ವಿಶ್ವ ಸುಂದರಿ ಪಟ್ಟ ಪಡೆದ ಮೊದಲ ಕಪ್ಪು ಮಹಿಳೆ ಎಂಬ ಕೀರ್ತಿಗೆ ಭಾಜರಾಗಿದ್ದರು.

ನಿಮಗೆ ನೆನಪಿರಲಿ :

ಕೋವಿಡ್ ಹಿನ್ನೆಲೆಯಲ್ಲಿ 2020 ನೇ ಸಾಲಿನ ಸ್ಪರ್ಧೆಯನ್ನು 2021ರ ಮೇ ಗೆ ಮುಂದೂಡಲಾಗಿತ್ತು.


ನಿಮಗೆ ಗೊತ್ತೇ :-

ವಿಶ್ವ ಸುಂದರಿ ಸ್ಪರ್ಧೆಯನ್ನು ನಡೆಸುವವರು ಯಾರು:-

  • ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಅಮೇರಿಕ ಮೂಲದ ಮಿಸ್ ಯೂನಿವರ್ಸ್ ಸಂಸ್ಥೆ ಪ್ರತಿ ವರ್ಷ ನಡೆಸುತ್ತದೆ.
  • ಮಿಸ್ ಯೂನಿವರ್ಸ್ ಸಂಸ್ಥೆ ಸ್ಥಾಪನೆಯಾಗಿದ್ದು : 1952 ರಲ್ಲಿ
  • ಪ್ರಧಾನ ಕಚೇರಿ : ಅಮೇರಿಕದ ನ್ಯೂಯಾರ್ಕ್.
  • ಇದು ಮಿಸ್ ವರ್ಲ್ಡ್, ಮಿಸ್ ಇಂಟರ್ನ್ಯಾಷನಲ್ ಹಾಗೂ ಮಿಸ್ ಅರ್ಥ್ ಸೇರಿದಂತೆ ವಿಶ್ವದ ಬಹುದೊಡ್ಡ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ.

ವಿಶ್ವ ಸುಂದರಿ ಸ್ಪರ್ಧೆಯ ಕುರಿತಾಗಿ ಎಲ್ಲರೂ ತಿಳಿದಿರಲೇ ಬೇಕಾದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುವ ಅಂಶಗಳು ಇವು :

  • ವಿಶ್ವದ ಮೊದಲ ವಿಶ್ವ ಸುಂದರಿ : ಫಿನ್ಲೆಂಡ್‌ನ ಅರ್ಮಿ ಹೆಲೆನಾ ಕೂಸೆಲಾ (1952)
  • ವಿಶ್ವ ಸುಂದರಿ ಪಟ್ಟ ಪಡೆದ ಮೊದಲ ಭಾರತೀಯ ಮಹಿಳೆ : ಸುಶ್ಮಿತಾ ಸೇನ್ (1994)


Post a Comment

1 Comments
* Please Don't Spam Here. All the Comments are Reviewed by Admin.

If you have any doubts please let me know

Buy Products

Important PDF Notes

Top Post Ad

Below Post Ad

Ads Area