ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಹಾವೇರಿಯಲ್ಲಿವೆ ಗ್ರಾಮ ಕಾಯಕ ಮಿತ್ರ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ Haveri Grama Kayakamitra Recruitment

 



ಹಾವೇರಿಯಲ್ಲಿವೆ ಗ್ರಾಮ ಕಾಯಕ ಮಿತ್ರ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ Haveri Grama Kayakamitra Recruitment


ಹಾವೇರಿಯಲ್ಲಿವೆ ಗ್ರಾಮ ಕಾಯಕ ಮಿತ್ರ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ Haveri Grama Kayakamitra Recruitment



ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಅಇಹಿ ಸುದ್ದಿ..!!! ಹೌದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಗಳಿಗೆ 'ಗ್ರಾಮ ಕಾಯಕಮಿತ್ರ' ಹುದ್ದೆಗಳ ನಿಯೋಜನೆಗೆ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ರಟ್ಟಿಹಳ್ಳಿ ತಾಲ್ಲೂಕಿನಲ್ಲಿರುವ ಆಯ್ದ 9 ಗ್ರಾಮಪಂಚಾಯ್ತಿಗಳಿಗೆ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.



ರಟ್ಟಿಹಳ್ಳಿ ತಾಲೂಕಿನಲ್ಲಿ ಬರುವ

  • ಹುಲ್ಲತ್ತಿ,
  • ಹಳ್ಳೂರು,
  • ಕುಂಚೂರು,
  • ನೇಶ್ವಿ,
  • ಶಿರಗಂಬಿ,
  • ಮಕರಿ,
  • ಇಂಗಳಗೊಂದಿ, 
  • ಚಿಕ್ಕಯಡಚಿ, 
  • ಹಿರೇಕಬ್ಬಾರ 

ಗ್ರಾಮ ಪಂಚಾಯತಿಗಳಿಗೆ 'ಗ್ರಾಮ ಕಾಯಕಮಿತ್ರ' ನಿಯೋಜನೆ ಅವಕಾಶ ನೀಡಲಾಗಿದೆ.



ಅರ್ಹತೆಗಳು ಏನಿರಬೇಕು?


  • ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. 
  • 45 ವರ್ಷ ವಯಸ್ಸು ಮೀರಿರಬಾರದು.
  • ದಿನಾಂಕ 01-01-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರೀಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು.
  • ಕಳೆದ ಮೂರು ವರ್ಷಗಳಲ್ಲಿ (2018-19, 2019-20, 2020-21) ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
  • ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.
  • ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. 
  • ಗ್ರಾಮ ರೋಜಗಾರ ಮಿತ್ರರು ಸಮುದಾಯದ ಕಾರ್ಯನಿರ್ವಹಣೆ ಮಾಡಲು ನಿರ್ಧಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ಕಾಯಕ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.6000/- ಗೌರವಧನ ಹಾಗೂ ಕಾರ್ಯನಿರ್ವಹಣೆ ಆಧರಿಸಿ ರೂ.5000/- ಪ್ರೋತ್ಸಾಹಧನ ನೀಡಲಾಗುವುದು.


ಅರ್ಜಿ ಸಲ್ಲಿಸಲು & ಹೆಚ್ಚಿನ ಮಾಹಿತಿಗಾಗಿ


ಆಸಕ್ತ ಅಭ್ಯರ್ಥಿಗಳು ದಿನಾಂಕ 15-06-2021ರೊಳಗಾಗಿ ವೆಬ್‌ಸೈಟ್‌ www.haveri.nic.in ನಲ್ಲಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:8376-283604 ಗೆ ಸಂಪರ್ಕಿಸಬುದೆಂದು ರಟ್ಟಿಹಳ್ಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area