ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

15 May 2021 Current Affairs Question Answers || Daily Current Affairs 2021 15-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

  15-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು


15 May 2021 Current Affairs Question Answers || Daily Current Affairs 2021 15-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು



ಇಂದು 15 ಮೇ ಅಂತಾರಾಷ್ಟ್ರೀಯ ಕುಟುಂಬ ದಿನ

ಇಂದು 15 ಮೇ ಅಂತಾರಾಷ್ಟ್ರೀಯ ಕುಟುಂಬ ದಿನ
  • ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೇ ಉತ್ತಮ ಸಂಬಂಧಗಳಿದ್ದರೆ ಬದುಕು ಚಂದ ಎಂದು ಹೇಳಲಾಗುತ್ತದೆ.
  • ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1993 ರಲ್ಲಿ (ಎ)ಆರ್‍ಇಎಸ್/47/237 ರ ಅನ್ವಯ ಈ ದಿನಾಚರಣೆಯನ್ನು ಘೋಷಸಿತು.
  • ಮನುಕುಲಕ್ಕೆ ಕುಟುಂಬದ ಪ್ರಾಮುಖ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
  • ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ಕುಟುಂಬದಲ್ಲಿ ಮಗುವುಇಗೆ ದೊರೆತ ಸಂಸ್ಕಾರ ಮತ್ತು ಸಂಸ್ಕøತಿಯು ಆ ಮಗುವಿನ ಭವಿಷ್ಯವನ್ನು ನಿರ್ಧರಿಸಲಬಲ್ಲದು ಆದ್ದರಿಂದ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರವು ಹಿರಿದಾಗಿದೆ.
  • 2021 ರ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯ ಥೀಮ್ : “Families and New Technologies”


ರಷ್ಯಾದ ಕೋವಿಡ್ ವ್ಯಾಕ್ಸಿನ್ ‘ಸ್ಪುಟ್ನಿಕ್-ವಿ’ ಗೆ 995 ರೂ.


ರಷ್ಯಾದ ಕೋವಿಡ್ ವ್ಯಾಕ್ಸಿನ್ ‘ಸ್ಪುಟ್ನಿಕ್-ವಿ’ ಗೆ 995 ರೂ.


  • ಭಾರತದಲ್ಲಿ ಕೋವಿಡ-19 ಅಬ್ಬರ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತವು ಹಲವಾರು ಲಸಿಕೆಗಳ ಮೊರೆ ಹೋಗಿದ್ದು ಅವುಗಳಲ್ಲಿ ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯೂ ಒಂದು.
  • ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಹೊಣೆಯನ್ನು ಹೈದರಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿಸ್ ಸಂಸ್ಥೆ ಹೊತ್ತುಕೊಂಡಿದೆ.
  • ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯು ಜೂನ್ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
  • ದಿನಾಂಕ:14-05-2021 ರಂದು ‘ಸ್ಪುಟ್ನಿಕ್-ವಿ’ ಲಸಿಕೆಯನ್ನು ಹೈದರಾಬಾದ್‍ನಲ್ಲಿ ಫಲಾನುಭವಿಯೊಬ್ಬರಿಗೆ ಯಶಸ್ವಿಯಾಗಿ ನೀಡಲಾಗಿದೆ.
  • ಕೆಲದಿನಗಳ ಹಿಂದೆ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಯನ್ನು ಬಳಸಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
  • ಭಾರತದಲ್ಲಿರುವ ಕೋವಿಡ್-19 ಲಸಿಕೆಗಲಾದ ಕೋವ್ಯಾಕಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಎರಡು ಬಾರಿ ಪಡೆಯಬೇಕಾಗಿತ್ತು. ಆದರೆ ಸ್ಪುಟ್ನಿಕ್-ವಿ ಲಸಿಕೆಯನ್ನು ಒಂದು ಬಾರಿ ಪಡೆದರೆ ಸಾಕು.


ಸ್ಪುಟ್ನಿಕ್-ವಿ ಲಸಿಕೆಯ ಕುರಿತು

  • ಕೋವಿಡ್-19 ವಿರುದ್ಧ ಹೋರಾಡಲು ರಷ್ಯಾ ಅಭಿವೃದ್ಧಿಪಡಿಸಿದ ಕೋವಿಡ್-19ನ ಲಸಿಕೆ ಸ್ಪುಟ್ನಿಕ್-ವಿ ಎಂಬುದಾಗಿದೆ.
  • ಸ್ಪುಟ್ನಿಕ್-ವಿ ಲಸಿಕೆಯನ್ನು ಮುಂದಿನ ವಾರದಿಂದ ದೇಶದ ಮಾರುಕಟ್ಟೆಗೆ ಲಭ್ಯವಾಗುವ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರಸರ್ಕಾರ ತಿಳಿಸಿದೆ.
  • ‘ದಿ ಲ್ಯಾನ್ಸೆಟ್’ ಎಂಬ ವೈಜ್ಞಾನಿಕ ನಿಯತಕಾಲಿಕೆ ಪತ್ರಿಕೆಯ ವರದಿಯ ಪ್ರಕಾರ ರಷ್ಯಾ ಅಭಿವೃದ್ಧಿಪಡಿಸಿರುವ ಈ “ಸ್ಪುಟ್ನಿಕ್-ವಿ” ಲಸಿಕೆಯು ಎರಡು ಡೋಸ್‍ಗಳನ್ನು ಹೊಂದಿರಲಿದ್ದು, ಸದರಿ ಡೋಸ್‍ಗಳು ಕೋವಿಡ್-19 ವಿರುದ್ಧ ಹೋರಾಟ ನಡೆಸುವಲ್ಲಿ ಶೇ. 91.6 ರಷ್ಟು ಶಕ್ತ ಮತ್ತು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
  • ಭಾರತದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಅಲಭ್ಯತೆ ಅಂದರೆ ಕೊರತೆ ಕಂಡು ಬಂದಿದ್ದರಿಂದ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಯನ್ನು ಬಳಸಲು ಅನುಮತಿ ನೀಡಿದೆ.
  • ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸುವ ಜವಾಬ್ದಾರಿಯನ್ನು ಹೈದರಾಬಾದ್ ಮೂಲದ ರೆಡ್ಡೀಸ್ ಲ್ಯಾಬೋರೇಟರೀಸ್ ಕಂಪನಿ ಹೊತ್ತುಕೊಂಡಿದೆ.


ಡಿಸಿಜಿಐ ಬಗ್ಗೆ :


ಡಿಸಿಜಿಐ : ಡ್ರಗ್ಸ್ ಕಂಟ್ರೋಲರ್ ಜನರಲ್ ಆ¥sóï ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಮಂಡಳಿ)


  • ಡಿಸಿಜಿಐ : ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಮಂಡಳಿ)
  • ಡಿಸಿಜಿಐ ಕೇಂದ್ರಸ್ಥಾನ : ನವದೆಹಲಿ
  • ಪ್ರಸ್ತುತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ : ಡಾ.  ವೇಣುಗೋಪಾಲ್.ಜಿ. ಸೋಮಾನಿ
  • ಇದು ಭಾರತದಲ್ಲಿ ಔಷಧಗಳ ಉತ್ಪಾದನೆ, ಆಮದು, ಮಾರಾಟ, ಮತ್ತು ವಿತರಣೆಗೆ ಮಾನದಂಡಗಳನ್ನು ರೂಪಿಸುತ್ತದೆ.


ಭಾರತದಲ್ಲಿರುವ ಕೋವಿಡ್-19 ಲಸಿಕೆಗಳ ಪಟ್ಟಿ ಇಲ್ಲಿದೆ


ಭಾರತದಲ್ಲಿರುವ ಕೋವಿಡ್-19 ಲಸಿಕೆಗಳ ಪಟ್ಟಿ ಇಲ್ಲಿದೆ


1. ಕೋವ್ಯಾಕ್ಸಿನ್: ಇದು 01 ಜನೆವರಿ 2021 ರಿಂದ ಬಳಕೆಯಲ್ಲಿದೆ. ಇದನ್ನು ಭಾರತ್ ಬೈಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಮ್‍ಆರ್) ಸಹಯೋಗದೊಂದಿಗೆ ತಯಾರಿಸಲಾಗಿತ್ತು.

2. ಕೋವಿಶೀಲ್ಡ್Oxford – Astra Zeneca Vaccine  ನ ಅನುರೂಪವೇ ಈ ಕೋವಿಶೀಲ್ಡ್. ಇದು 03 ಜನೆವರಿ 2021 ರಿಂದ ಭಾರತದಲ್ಲಿ ಬಳಕೆಯಲ್ಲಿದೆ.

3. ಸ್ಪುಟ್ನಿಕ್-ವಿ : ಇದಕ್ಕೆ ಇತ್ತೀಚೆಗಷ್ಟೇ ಅಂದರೆ ದಿನಾಂಕ:12 ಏಪ್ರಿಲ್ 2021 ರಂದು ಅನುಮತಿ ದೊರೆತಿದ್ದು, ದಿನಾಂಕ:14-05-2021 ರಂದು ಪ್ರಯೋಗಾರ್ಥ ಹೈದರಾಬಾದ್‍ನ ಫಲಾನುಭವಿಯೊಬ್ಬರಿಗೆ ನೀಡಲಾಗಿದ್ದು, ಜೂನ್ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗಿದೆ.


ಪ್ರಯೋಗಾರ್ಥ ಹಂತದಲ್ಲಿರುವ ಲಸಿಕೆಗಳ ಪಟ್ಟಿ ಹೀಗಿದೆ

  1. ZyCoV-D  : ಇದನ್ನು ಅಹಮದಾಬಾದ್ ಮೂಲದ ಫಾರ್ಮಸಿ ಸಂಸ್ಥೆ Zydus Cadila  ಅಭಿವೃದ್ಧಿಪಡಿಸಿದೆ.
  2. Bio E COVID-19
  3. HGCO19
  4. BBV154
  5. Covovax


ಲಂಡನ್ನಿನಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ


ಲಂಡನ್ನಿನಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ


  • ಲಂಡನ್ ನ ಲ್ಯಾಂಬೆತ್ ನಗರದಲ್ಲಿರುವ ಬಸವೇಶ್ವರ ಫೌಂಡೇಶನ್ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ಗಾಯತ್ರಿ ಇಸಾರ್ ಕುಮಾರ್ ಮತ್ತು ಡೆಪ್ಯೂಟಿ ಹೈಕಮಿಷನರ್ ಚರಣಜೀತ್ ಸಿಂಗ್ ಪುಷ್ಪನಮನ ಸಲ್ಲಿಸಿದರು.
  • 14 ನವೆಂಬರ್ 2015 ರಂದು ಲಂಡನ್‍ನ ಲ್ಯಾಂಬೆತ್ ನಗರದಲ್ಲಿ ಪ್ರಧಾನಿ ಮೋದಿಯವರು ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು.
  • ಈ ಪುತ್ಥಳಿಯು ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್ ಮೆಂಟ್ ಪ್ರದೇಶದಲ್ಲಿದೆ.
  • ಕಲಬುರಗಿ ಮೂಲದ ಕನ್ನಡಿಗ ಹಾಗೂ ಲ್ಯಾಂಬೆತ್ ನಗರದ ಮಾಜಿ ಮೇಯರ್ ಆಗಿದ್ದ ಡಾ. ನೀರಜ್ ಪಾಟೀಲ್ ಅವರ ಪರಿಶ್ರಮದ ಫಲವಾಗಿ ಇದನ್ನು ನಿರ್ಮಿಸಲಾಗಿದೆ.


ಅಕ್ಟೋಬರ್ ನವೆಂಬರ್‍ನಲ್ಲಿ ಟಿ20 ವಿಶ್ವಕಪ್?

ಅಕ್ಟೋಬರ್ ನವೆಂಬರ್‍ನಲ್ಲಿ ಟಿ20 ವಿಶ್ವಕಪ್?


  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 16 ರಿಂದ 20 ಕ್ಕೆ ಏರಿಸಲಿ ಐಸಿಸಿ ಚಿಂತನೆ ನಡೆಸಿದೆ.
  • ಬರುವ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಆಡಲಿವೆ.
  • 2024 ರ ಟಿ20 ಆವೃತ್ತತಿಗೆ 4 ಹೊಸ ತಂಡಗಳನ್ನು ಹೊಸದಾಗಿ ಸೇರಿಸಲು ಐಸಿಸಿ ಚಿಂತನೆ ನಡೆಸಿದೆ.
  • 2028 ಅಥವಾ 2032 ರ ಒಲಿಂಪಿಕ್ಸ್‌ ಗೆ ಕ್ರಿಕೆಟ್ ಆಟವನ್ನು ಸೇರಿಸುವ ನಿಟ್ಟಿನಲ್ಲಿ ಐಸಿಸಿ ಈ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.


3ನೇ ಬಾರಿ ನೇಪಾಳದ ಪ್ರಧಾನಿಯಾದ ಕೆ. ಪಿ. ಶರ್ಮಾ ಒಲಿ


3ನೇ ಬಾರಿ ನೇಪಾಳದ ಪ್ರಧಾನಿಯಾದ ಕೆ. ಪಿ. ಶರ್ಮಾ ಒಲಿ


  • ಕಳೆದ ಕೆಲದಿನಗಳ ಹಿಂದಷ್ಟೇ ನೇಪಾಳ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಾಗದೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದ ಕೆ. ಪಿ. ಶರ್ಮಾ ಒಲಿ ಅವರು ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ, ಮೂರನೇ ಬಾರಿ ಪ್ರಧಾನಿ ಗದ್ದುಗೆಯನ್ನೇರಿದ್ದಾರೆ.
  • ನೇಪಾಳದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಒಲಿ ಅವರಿಗೆ ಪ್ರಮಾನವಚನ ಬೋಧಿಸಿದರು.
  • ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ ಒಲಿ, ದೇಶದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
  • 271 ಸದಸ್ಯ ಬಲದ ಸದನದಲ್ಲಿ 121 ಸದಸ್ಯರಿದ್ದು, ಸರಳ ಬಹುಮತಕ್ಕೆ 136 ಮತಗಳು ಬೇಕು.
  • ನೇಪಾಳದಲ್ಲಿ ಹೊಸ ಸರ್ಕಾರವನ್ನು ರಚಿಸುವ ಸಂಬಂಧ ಬಹುಮತ ಸಾಬೀತುಪಡಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾದ ನಂತರ ಕೆ. ಪಿ. ಶರ್ಮಾ ಒಲಿ ಅವರನ್ನೇ ಮತ್ತೊಮ್ಮೆ ನೇಪಾಳದ ಪ್ರಧಾನಿಯಾಗಿ ಗುರುವಾರ ಅಂದರೆ ದಿನಾಂಕ:13-05-2021 ರಂದು ನೇಮಕ ಮಾಡಲಾಗಿದೆ.
  • ಶುಕ್ರವಾರ ದಿನಾಂಕ:14-05-2021 ರಂದು ಕೆ. ಪಿ. ಶರ್ಮಾ ಒಲಿ ಅವರಿಗೆ ಶೀತಲ್ ನಿವಾಸದಲ್ಲಿ ನೇಪಾಳದ ರಾಷ್ಟ್ರಪತಿಗಳಾದ ವಿದ್ಯಾದೇವಿ ಭಂಡಾರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
  • ನಿಮಗೆ ಗೊತ್ತೆ: ಕೆ. ಪಿ. ಶರ್ಮಾ ಒಲಿ ಅವರ ಸರಕಾರ ಕಳೆದ ಸೋಮವಾರ ಅಂದರೆ ದಿನಾಂಕ:10-05-2021 ರಂದ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಾಗದೇ ಅಧಿಕಾರದಿಂದ ಪದಚ್ಯುತ ಗೊಂಡಿತ್ತು. ಈಗ ಮತ್ತೆ ಅದೇ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ.


ನೇಪಾಳದ ಕುರಿತು :


ನೇಪಾಳದ ಕುರಿತು :


  • ನೇಪಾಳದ ರಾಜಧಾನಿ : ಕಠ್ಮಂಡು
  • ನೇಪಾಳದ ಕರೆನ್ಸಿ: ನೇಪಾಳಿ ರೂಪಾಯಿ
  • ನೇಪಾಳದ ಪ್ರಧಾನಮಂತ್ರಿ : ಕೆ. ಪಿ. ಶರ್ಮಾ ಒಲಿ
  • ನೇಪಾಳದ ರಾಷ್ಟ್ರಪತಿ : ವಿದ್ಯಾದೇವಿ ಭಂಡಾರಿ


2019 & 2020 ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರಕಟ

  • ಚಿತ್ರದುರ್ಗದ ಮುರುಘಾಮಠ ನೀಡುವ ಪ್ರತಿಷ್ಟಿತ ಬಸವಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ.
  • ಈ ಬಾರಿ 2019 ಮತ್ತು 2020 ನೇ ಸಾಲಿನ ಪ್ರಶಸ್ತಿಗಳನ್ನು ಒಟ್ಟಾಗಿ ಪ್ರಕಟಿಸಿದೆ.
  • 2019 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಭಾರತದ ಉತ್ಕøಷ್ಟ ಸರೋದ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರು ಭಾಜನರಾಗಿದ್ದಾರೆ.
  • 2020 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಕಸ್ತೀರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.
  • ಮುರುಘಾಮಠದ ಬಸವಜಯಂತ್ಯುತ್ಸವದ ವೇಳೇ ಡಾ. ಶಿವಮೂರ್ತಿ ಮುರುಘಾ ಶರಣರು ಈ ಇಬ್ಬರ ಹೆಸರನ್ನು ಘೋಷಿಸಿದರು, ಕೊರೋನ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದೆಂದು ತಿಳಿಸಿದ್ದಾರೆ.
  • ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.


ಐರನ್ ಡೋಮ್

ಐರನ್ ಡೋಮ್


  • ಇಸ್ರೇಲ್ ಮತ್ತು ಪ್ಯಾಲೇಸ್ತೀನಿನ ನಡುವಿನ ಬಿಕ್ಕಟ್ಟು ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
  • ಪ್ಯಾಲೆಸ್ಟೇನ್ ಕ್ರೌರ್ಯವನ್ನು ಮಟ್ಟಹಾಕಲು ಇಸ್ರೇಲ್ ಕಂಡುಕೊಂಡ ಅತ್ಯಂತ ಪರಿಣಾಮಕಾರಿ ಅಸ್ತ್ರವೇ ಐರನ್ ಡೋಮ್.
  • ಶತ್ರು ರಾಷ್ಟ್ರದ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವ ಹಾಗೂ ವಿಮಾನ ಮೂಲಕ ನಡೆಸುವ ವೈಮಾನಿಕ ದಾಳಿಗೆ ಪ್ರತಿರೋಧ ವ್ಯವಸ್ಥೆಯೇ ಐರನ್ ಡೋಮ್.
  • ಇಸ್ರೇಲ್ ನ ವಾಯು ರಕ್ಷಣಾ ವ್ಯವಸ್ಥೆಯೇ ಐರನ್ ಡೋಮ್
  • ಇತ್ತೀಚೆಗೆ ಗಾಜಾದಿಂದ ಪ್ಯಾಲೆಸ್ತೀನ್ ಅರಬ್ಬರು ನಡೆಸಿದ ರಾಕೆಟ್ ದಾಳಿಯನ್ನು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯಾದ ಐರನ್ ಡೋಮ್ (ಕಬ್ಬಿಣದ ಕವಚ/ಗೋಪುರ) ಹಿಮ್ಮೆಟ್ಟಿಸಿದೆ.
  • ಪ್ರಸ್ತುತ ಇಸ್ರೇಲ್ ನಲ್ಲಿ 10 ಐರನ್ ಡೋಮ್ ಬ್ಯಾಟರಿಗಳಿವೆ. ಕಳೆದ ಹತ್ತು ವರ್ಷಗಳಲ್ಲಿ 2400 ದಾಳಿಗಳಿಂದ ಇಸ್ರೇಲ್ ನ್ನು ಇವು ರಕ್ಷಿಸಿವೆ.
  • ಪ್ರತಿ ಐರನ್ ಡೋಮ್ ಬ್ಯಾಟರಿ ಗೆ 50000 ಶತಕೋಟಿ ಡಾಲರ್ ವೆಚ್ಚವಾಗುತ್ತದೆ.
  • 4-70 ಕಿ. ಮೀ ವರೆಗಿನ ದಾಳಿಯನ್ನು ಐರನ್ ಡೋಮ್ ಹಿಮ್ಮೆಟ್ಟಿಸುತ್ತದೆ.
  • ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ಇದನ್ನು ಅಭಿವೃದ್ಧಿಗೊಳಿಸಿದೆ.
  • 2011ರಲ್ಲಿ ನಿಯೋಜನೆಗೊಂಡಿದೆ.
  • 2000 ಕ್ಕೂ ಹೆಚ್ಚು ದಾಳಿ ತಡೆಯಬಲ್ಲ ಐರನ ಡೋಮ್ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ.
  • ನಗರ ಪ್ರದೇಶಗಳ ಮೇಲೆ ಯಾವುದೇ ಬಗೆಯ ಹವಾಮಾನದಲ್ಲಿ ನಡೆಯಬಹುದಾದ ವೈಮಾನಿಕ ದಾಳಿಗಳನ್ನು ತಡೆಯುವಲ್ಲಿ ಸಮರ್ಥವಾಗಿದೆ.
  • ಅಮೆರಿಕ ಸೇನೆಗೆ ಸಮನಾದ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ ದೇಶ ಇಸ್ರೇಲ್.
  • ಇಸ್ರೇಲ್ ನ ಈ ಅತ್ಯುತ್ತಮ ವಾಯು ರಕ್ಷಣಾ ವ್ಯವಸ್ಥೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 2000 ಕೋಟಿ ರೂಪಾಯಿ ನೆರವು ನೀಡಿದ್ದರು.





ಕರ್ನಾಟಕದ 55.36  ಲಕ್ಷ ರೈತರ ಖಾತೆಗೆ 985.61 ಕೋಟಿ ರೂ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಕರ್ನಾಟಕದ 55.36  ಲಕ್ಷ ರೈತರ ಖಾತೆಗೆ 985.61 ಕೋಟಿ ರೂ.


  • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎಂಟನೆಯ ಕಂತಿನ ಮೊತ್ತವನ್ನು ಪ್ರಧಾನಿ ಮೋದಿ ಅಕ್ಷಯ ತೃತೀಯ ದಿನದಂದು ಬಿಡುಗಡೆ ಮಾಡಿದ್ದಾರೆ.
  • 2021-22 ನೇ ಸಾಲಿಗೆ ರಾಜ್ಯದ 55.36 ಲಕ್ಷ ರೈತರಿಗೆ 985.61 ಕೋಟಿ ರೂಪಾಯಿಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.
  • 2019 ರಲ್ಲಿ ದೇಶದ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ "ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ" ಯನ್ನು ಆರಂಭಿಸಿದ್ದರು.
  • ದೇಶದ ಎಲ್ಲ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂ.ಗಳನ್ನು 3 ಕಂತುಗಳಲ್ಲಿ ಅಂದರೆ ಪ್ರತಿ ಕಂತಿನಲ್ಲಿ 2000 ರೂ. ನೀಡಲಾಗುತ್ತದೆ.


ತೌಖ್ತೇ ಚಂಡಮಾರುತ

ತೌಖ್ತೇ ಚಂಡಮಾರುತ


  • ತೌಖ್ತೇ Tauktae ಇದು ಮಧ್ಯ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತ.
  • ಶನಿವಾರ ಮತ್ತು ರವಿವಾರ ಭಾರತದ ಪಶ್ಚಿಮ ಕರಾವಳಿಗೆ ಪ್ರಭಾಸ ಗಾಳಿಯೊಂದಿಗೆ ಅಪ್ಪಳಿಸಿ ಮಳೆ ತರುವ ಚಂಡಮಾರುತದ ಹೆಸರು ತೌಖ್ತೇ.
  • ಈ ಚಂಡಮಾರುತಕ್ಕೆ ಮ್ಯಾನ್ಮಾರ್ ದೇಶವು ತೌಖ್ತೇ ಎಂಬ ಹೆಸರು ಸೂಚಿಸಿದೆ.
  • ತೌಖ್ತೇ ಎಂದರೆ ಒಂದು ಜಾತಿಯ ಹಲ್ಲಿ.
  • ಅರಬ್ಬಿ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಅವುಗಳ ಸುತ್ತ ಇರುವಂತಹ 13 ರಾಷ್ಟ್ರಗಳು ಹೆಸರನ್ನು ಸೂಚಿಸುತ್ತದೆ ಈ ಹೆಸರುಗಳನ್ನು ಮೊದಲೇ ಸೂಚಿಸಲಾಗಿರುತ್ತದೆ.
  • ಕಳೆದ ವರ್ಷ ಪ್ರತಿ ರಾಷ್ಟ್ರ ನೀಡಿದ 13 ಹೆಸರುಗಳಲ್ಲಿ ಒಟ್ಟು 169 ಹೊಸ ಹೆಸರುಗಳನ್ನು 'ಇಂಡಿಯನ್ ಮೆಟ್ರೋಲಾಜಿಕಲ್ ವಿಭಾಗ' ಬಿಡುಗಡೆ ಮಾಡಿದೆ.
  • ಈ ಪಟ್ಟಿಯಲ್ಲಿ ಕ್ರಮವಾಗಿ 13 ರಾಷ್ಟ್ರಗಳು ಸೂಚಿಸಿದ ಹೆಸರುಗಳು ಬರುತ್ತವೆ. ಹಾಗೆಯೇ ಚಂಡಮಾರುತ್ತಕ್ಕೆ ಮ್ಯಾನ್ಮಾರ್ ನೀಡಿದ ತೌಖ್ತೇ ಎಂಬ ಹೆಸರು ಇಡಲಾಗಿದೆ.
  • ಈ ಚಂಡಮಾರುತದ ನಂತರ ಬರುವ ಚಂಡಮಾರುತಕ್ಕೆ 'ಯಾಸ್' ಎಂಬ ಹೆಸರು ಇಡಲಾಗಿದೆ. ಇದನ್ನು ಒಮಾನ್ ದೇಶದವರು ಸೂಚಿಸಿದ್ದಾರೆ.
  • ತೌಖ್ತೇ ಚಂಡಮಾರುತ ಭಾರತದ ನೈರುತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಬರುತ್ತದೆ ಅಂದರೆ ನಮ್ಮ ಪಶ್ಚಿಮ ಕರಾವಳಿ ಕಡೆಗೆ ಬರುತ್ತದೆ.
  • ಇದು ಮಧ್ಯ ಅರಬ್ಬೀ ಸಮುದ್ರದಲ್ಲಿ ಮೊದಲು ಹುಟ್ಟುತ್ತದೆ.
  • ಚಂಡಮಾರುತ ಎಂದರೇನು: ಸಮುದ್ರದಲ್ಲಿ ಒಂದು ಕಡೆ ನಿಮ್ನ ಒತ್ತಡ ಸೃಷ್ಟಿಯಾಗಿ ಸುತ್ತಲಿಂದಲೂ ಅಲ್ಲಿದೆ ಗಾಳಿ ನುಗ್ಗುವುದು. ಆ ಗಾಳಿ‌ ನೇರವಾಗಿ ನುಗ್ಗದೇ ಸುರಳಿ ಆಕಾರದಲ್ಲಿ ಸುತ್ತುತ್ತ, ಮೋಡಗಳನ್ನು ಹೊತ್ತುಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿಪಡೆದು, ಧಾರಾಕಾರ ಮಳೆ ಮತ್ತು ಬಿರುಗಾಳಿಯೊಂದಿಗೆ ಸಮುದ್ರ ತೀರಕ್ಕೆ ಅಪ್ಪಳಿಸಿ, ಅವಾಂತರ ಉಂಟು ಮಾಡುತ್ತವೆ.
  • ತೌಖ್ತೇ ಚಂಡಮಾರುತವು 175 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ.
  • ಈ ಚಂಡಮಾರುತದಿಂದಾಗಿ ಕೇರಳ ತಮಿಳುನಾಡು ಕರ್ನಾಟಕ ಗೋವಾ ಗುಜರಾತ್ ರಾಜ್ಯಗಳಿಗೆ ಭೀತಿ ಇದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area