ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ. ಷಾ ಇನ್ನಿಲ್ಲ Sapna Book House Founder Passed Away

  ಸಪ್ನಾ ಬುಕ್ ಹೌಸ್ ಸಂಸ್ಥಾಪಕ

ಸುರೇಶ್ ಸಿ. ಷಾ ಇನ್ನಿಲ್ಲ


ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ. ಷಾ ಇನ್ನಿಲ್ಲ Sapna Book House Founder Passed Away



ಹೌದು ಸಪ್ನ ಪುಸ್ತಕ ಮಳಿಗೆಯ ಸಂಸ್ಥಾಪಕ ಸುರೇಶ್ ಸಿ. ಷಾ ತಮ್ಮ 84 ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಿಸದೇ ನಿಧನರಾದರು.


ಇವರ ಅಂತ್ಯಕ್ರಿಯೆಯು ನಾಳೆ ಅಂದರೆ ಬುಧವಾರ ಬೆಳಿಗ್ಗೆ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ನಡೆಯಲಿದೆ.


ಸಪ್ನ ಬುಕ್ ಹೌಸ್ ಕುರಿತು


1966 ರಲ್ಲಿ ಸಪ್ನ ಬುಕ್ ಹೌಸ್ ಮಳಿಗೆಯನ್ನು ಪುಟ್ಟದಾಗಿ ಆರಂಭಿಸಿದ್ದ ಸುರೇಶ್ ಸಿ. ಷಾ ಅವರು ನಂತರ ದಿನಗಳಲ್ಲಿ ಸಪ್ನ ಬುಕ್ ಹೌಸ್ ಸಂಸ್ಥೆಯನ್ನು ದೇಶದ ಅತ್ಯಂತ ಪ್ರಮುಖ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನಾಗಿ ಬೆಳೆಸಿದರು. ಈಗ ಅದು ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಪ್ರಸಿದ್ಧಿ ಪಡೆದಿದ್ದು, ಆನ್‌ಲೈನ್ ನಲ್ಲಿಯೂ ಪುಸ್ತಕ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.


ಒಟ್ಟು 19 ಶಾಖೆಗಳನ್ನು ಹೊಂದಿರುವ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳನ್ನು ಓದುಗರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸುವ ಕೆಲಸವನ್ನು ಸತತವಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಓದುಗರ ಆಸಕ್ತಿ ಅಭಿರುಚಿಗಳಿಗೆ ತಕ್ಕಂತೆ ಎಲ್ಲಾ ಪುಸ್ತಕಗಳನ್ನೊಳಗೊಂಡ ದೇಶದ ಅತ್ಯುತ್ತಮ ಪುಸ್ತಕ ಮಳಿಗೆಯೆಂದರೆ ಸಪ್ನ ಬುಕ್ ಹೌಸ್.


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area