ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಗ್ರಾಮ ಪಂಚಾಯತಿಯಲ್ಲಿವೆ ಗ್ರಾಮ ಕಾಯಕಮಿತ್ರ ಹುದ್ದೆಗಳು Grama Kayakamitra Recruitment 2021 Vacancies in Gram Panchayats Apply Now

 


ಗ್ರಾಮ ಪಂಚಾಯತಿಯಲ್ಲಿವೆ ಗ್ರಾಮ ಕಾಯಕಮಿತ್ರ ಹುದ್ದೆಗಳು





ಲಾಕ್ಡೌನ್ ನಡುವೆ ಅನೇಕರು ಉದ್ಯೋಗವಿಲ್ಲದೇ ತಿರುಗುವಂತಾಗಿದೆ, ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿದೆ. ಅದಕ್ಕೆಂದೆ ಎಜ್ಯುಟ್ಯೂಬ್ ಕನ್ನಡ ತಂಡವು ಹಲವಾರು ಉದ್ಯೋಗ ಮಾಹಿತಿಗಳನ್ನು ನಿಮಗಾಗಿ ನೀಡುತ್ತಿದೆ.


ಸ್ನೇಹಿತರೇ ನಾಳೆಯಿಂದ ಅಂದರೆ ದಿನಾಂಕ: 25-05-2021 ರಿಂದ 3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..!!


ಇನ್ನು  ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯ್ಕೆ ಮಾಡಲಾದ 9 ಗ್ರಾಮ ಪಂಚಾಯತಿಗಳಿಗೆ ಗ್ರಾಮ ಕಾಯಕಮಿತ್ರ ಹುದ್ದೆ ಭರ್ತಿಗೆ ಯೋಜನೆ ರೂಪಿಅಲಾಗಿದೆ.


ಪ್ರಮುಖ ಅಂಶಗಳು :


ಎಲ್ಲಿ ಉದ್ಯೋಗ : ಕರ್ನಾಟಕ ರಾಣೆಬೆನ್ನೂರು ತಾಲ್ಲೂಕು

ಯಾವ ಹುದ್ದೆ : ಗ್ರಾಮ ಕಾಯಕಮಿತ್ರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06-2021


ರಾಣೆಬೆನ್ನೂರಿನ ಯಾವ ಗ್ರಾಮಗಳಲ್ಲಿ ಉದ್ಯೋಗ


ರಾಣೇಬೆನ್ನೂರು ತಾಲೂಕಿನ

  • ಕಜ್ಜರಿ,
  • ಚಿಕ್ಕಕುರವತ್ತಿ,
  • ಗುಡಗೂರು, 
  • ಹರನಗಿರಿ, 
  • ಹನುಮಾಪುರ, 
  • ಅರೇಮಲ್ಲಾಪುರ, 
  • ಇಟಗಿ, 
  • ವೈಟಿ ಹೊನ್ನತ್ತಿ ಹಾಗೂ 

ಹೊನ್ನತ್ತಿ ಗ್ರಾಮ ಪಂಚಾಯತಿಗಳಿಗೆ ಗ್ರಾಮ ಕಾಯಕಮಿತ್ರ ನಿಯೋಜನೆಗೆ ಅವಕಾಶ ನೀಡಲಾಗಿದೆ.



ಅರ್ಜಿ ಸಲ್ಲಿಸಲು ಅರ್ಹತೆಗಳು ಏನಿರಬೇಕು?


  • ಗ್ರಾಮ ಕಾಯಕಮಿತ್ರ ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
  • ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು.
  • 45 ವರ್ಷ ವಯೋಮಿತಿ ಮೀರಿರಬಾರದು.
  • ಅಭ್ಯರ್ಥಿಗಳು ದಿನಾಂಕ 1-1-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರೀಯಾಶೀಲ ಜಾಬ್‌ ಕಾರ್ಡ್ ಹೊಂದಿರಬೇಕು.
  • ಕಳೆದ ಮೂರು ವರ್ಷಗಳಲ್ಲಿ (2018-19, 2019-20, 2020-21) ಕನಿಷ್ಠ ಎರಡು ವರ್ಷ ಯೋಜನೆಯಡಿ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
  • ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.
  • ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
  • ಗ್ರಾಮ ರೋಜ್‌ಗಾರ ಮಿತ್ರರು ಸಮುದಾಯದ ಕಾರ್ಯನಿರ್ವಹಣೆ ಮಾಡಲು ನಿರ್ಧಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ಕಾಯಕ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.

ಗೌರವ ಧನ ಎಷ್ಟು .?

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.6000/- ಗೌರವಧನ ಹಾಗೂ ಕಾರ್ಯನಿರ್ವಹಣೆ ಆಧರಿಸಿ ರೂ.5000 ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.



ಆಸಕ್ತ ಮಹಿಳಾ ಅಭ್ಯರ್ಥಿಗಳು ದಿನಾಂಕ 05-06-2021ರೊಳಗಾಗಿ ಅಧಿಕೃತ ವೆಬ್‌ಸೈಟ್ https://haveri.nic.in/ ನಲ್ಲಿ ಅರ್ಜಿ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 8373-266425 ಗೆ ಸಂಪರ್ಕಿಸಬಹುದು ಎಂದು ರಾಣೇಬೆನ್ನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..!!!


ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area