ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

SSLC ಮತ್ತು PU ವಿದ್ಯಾರ್ಥಿಗಳಿಗೆ ಉಪಯುಕ್ತವಾದ ದೀಕ್ಷಾ ಆ್ಯಪ್ ಲೋಕಾರ್ಪಣೆ DIKSHA An App For SSLC and PU Students Download Now

  SSLC ಮತ್ತು PU ವಿದ್ಯಾರ್ಥಿಗಳಿಗೆ ಉಪಯುಕ್ತವಾದ ದೀಕ್ಷಾ ಆ್ಯಪ್ ಲೋಕಾರ್ಪಣೆ


SSLC ಮತ್ತು PU ವಿದ್ಯಾರ್ಥಿಗಳಿಗೆ ಉಪಯುಕ್ತವಾದ ದೀಕ್ಷಾ ಆ್ಯಪ್ ಲೋಕಾರ್ಪಣೆ DIKSHA An App For SSLC and PU Students Download Now



ಹೌದು, ದೇಶಾದ್ಯಂತ ಈಗ ಕೆಲವು ರಾಜ್ಯಗಳು ಲಾಕ್ಡೌನ್ ಘೋಷಿಸಿರುವುದರಿಂದ ನಿಗದಿತ ಶಾಲಾ ತರಗತಿಗಳು ನಡೆಯದೆ ಮಕ್ಕಳು ಮನೆಯಲ್ಲಿಯೇ ಆನ್ಲೈನ್ ಪಾಠದ ಮೂಲಕ ವಿದ್ಯಾಭ್ಯಾಸವನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ.



ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ 'ದೀಕ್ಷಾ' ಆಪ್​ಗೆ (DIKSHA-app) ಇತ್ತೀಚೆಗೆ ರಸಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.



1 ರಿಂದ 12 ನೇ ತರಗತಿ ಎಲ್ಲ ಬಗೆಯ ಪಠ್ಯಕ್ರಮ ದೀಕ್ಷಾ ಆ್ಯಪ್​ನಲ್ಲಿ ಲಭ್ಯವಿದೆ. ಅಲ್ಲದೇ SSLC ವಿದ್ಯಾರ್ಥಿಗಳಿಗೆ ಫೋಕಸ್ ಎಂಬ ಪುನರ್‌ಮನನ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ 'ಪರೀಕ್ಷಾ ಅಭ್ಯಾಸ' ಎಂಬ ಕಾರ್ಯಕ್ರಮಗಳು ಆ್ಯಪ್​ನಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸಹಾಯ ಮಾಡಲಿವೆ.


ದೀಕ್ಷಾ ಆ್ಯಪ್ ಲೋಕಾರ್ಪಣೆ ಮಾಡಿದ ನಂತರ ಸಚಿವ ಸುರೇಶ್ ಕುಮಾರ್ ಮಾತನಾಡಿ, ದೀಕ್ಷಾ ಆ್ಯಪ್ ಪಿಯುಸಿ ವಿದ್ಯಾರ್ಥಿಗಳಿಗೆ ಮುಂಬರಲಿರುವ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.


ಬನ್ನಿ ಹಾಗಾದರೆ ದೀಕ್ಷಾ ಆ್ಯಪ್ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳೋಣ


ಏನಿದು ದೀಕ್ಷಾ-ಆಪ್ ಪ್ರೋಗ್ರಾಂ ? ಹೇಗೆ ನೋಡೋದು.,?


DIKSHA ಪೋರ್ಟಲ್ ಅನ್ನು https://diksha.gov.in/ ಇಲ್ಲಿ ನೋಡಬಹುದಾಗಿದೆ. ಅಲ್ಲದೇ ಗೂಗಲ್ ಪ್ಲೇ ಸ್ಟೋರ್ ನಿಂದಲೂ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ DIKSHA ಆಪ್​ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು  


DIKSHA ಆ್ಯಪ್​ ಅಥವಾ ಪೋರ್ಟಲ್ ನಲ್ಲಿ ನಿಮಗೆ ಬೇಕಿರುವ ಬೋರ್ಡ್, ಮಾಧ್ಯಮ, ಭಾಷೆ ಹಾಗೂ ತರಗತಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬಗೆಯ ಪಠ್ಯಾಂಶಗಳನ್ನು ಪಡೆದುಕೊಳ್ಳಬಹುದು.


ದೀಕ್ಷಾ-ಆ್ಯಪ್ ನ ಉದ್ದೇಶವೇನು?


ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ, ಅವರ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರೋಗ್ರಾಂ ನ್ನು ರೂಪಿಸಲಾಗಿದೆ. ಕೋವಿಡ್ ಮಹಾಮಾರಿಯಿಂದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ನಮ್ಮ ರಾಜ್ಯ ಸರಕಾರವು ಈಗಾಗಲೇ ಚಂದನ ಟಿವಿಯ ಮೂಲಕ ಆನಲೈನ್ ಪಾಠಗಳನ್ನು ನಡೆಸುತ್ತಿದೆ. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ಇದಕ್ಕೆಲ ಪರಿಹಾರವಾಗಿ ದೀಕ್ಷಾ ಆ್ಯಪ್ ಬಳಸಬಹುದು. ಅಲ್ಲದೇ ದೀಕ್ಷಾ ಪೋರ್ಟಲ್​ನಲ್ಲಿ ಅಳವಡಿಸಲಾಗಿರುವ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಅಗತ್ಯವಿದ್ದಾಗ ಬಳಸಬಹುದಾಗಿದೆ. ಆದ್ದರಿಂದ ದೀಕ್ಷಾ ವಿದ್ಯಾರ್ಥಿ ಸ್ನೇಹಿ ಆ್ಯಪ್ ಆಗಿದೆ ಎನ್ನಬಹುದು.



ದೀಕ್ಷಾ ಆ್ಯಪ್ ನಲ್ಲಿ ಏನಿದೆ?


ದ್ವಿತೀಯ ಪಿಯುಸಿ ಪರೀಕ್ಷೆಗೆ ಉಪಯುಕ್ತವಸದ ಹಲವಾರು ಅಂಶಗಳು ಈ ದೀಕ್ಷಾ ಆ್ಯಪ್ ನಲ್ಲಿವೆ. ಅದರಲ್ಲೂ ವಿಶೇಷವಾಗಿ 'ಫೋಕಸ್ ಪುನರ್ಮನನ' ಎಂಬ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಲಾಗಿದೆ. ಫೋಕಸ್ ಪುನರ್ಮನನ ಕಾರ್ಯಕ್ರಮದಲ್ಲಿ ಪ್ರತಿಯೊಂದು ವಿಷಯಕ್ಕೆ ಇ- ಪಠ್ಯಪುಸ್ತಕ, ಕನಿಷ್ಠ 2 ಮಾದರಿ ಪ್ರಶ್ನೆಪತ್ರಿಕೆಗಳು, ವಿವರಣಾತ್ಮಕ ವಿಡಿಯೋಗಳು, ಹಾಗೂ ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಇದರಲ್ಲಿ ದೊರೆಯಲಿವೆ.


ಅಲ್ಲದೇ ಈ ಆ್ಯಪ್ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ (PCMB) ವಿಷಯಕ್ಕೆ ಸುಮಾರು 9,000 ಬಹು ಆಯ್ಕೆ ಪ್ರಶ್ನೆಗಳನ್ನು ಅಧ್ಯಾಯವಾರು ಒದಗಿಸಲಾಗಿದೆ.


ಸ್ನೇಹಿತರೇ ಇದು ದೇಶದಲ್ಲಿಯೇ ಅತ್ಯಂತ ನವೀನ ಪ್ರಯೋಗವಾಗಿದ್ದು, ನಮ್ಮ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದನ್ನು ಪ್ರಪ್ರಥಮವಾಗಿ ಜಾರಿಗೊಳಿಸುತ್ತಿದೆ.


ಈ ಎಲ್ಲ ಪಠ್ಯಾಂಶಗಳನ್ನು 'DIKSHA-app' ನಲ್ಲಿ ಪಡೆದುಕೊಳ್ಳಬಹುದಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.


ದೀಕ್ಷಾ ಆ್ಯಪ್ ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..!!

http://bit.ly/KA-diksha

Tags

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area